ಚೀನದಿಂದ ಕೋವಿಡ್ ಸುಳ್ಳಿನ ಕತೆ? : ಮುಚ್ಚಿಟ್ಟ ವುಹಾನ್‌ ಸಾವಿನ ಸಂಖ್ಯೆ ಮರು ಪ್ರಕಟ

ಅಮೆರಿಕ ಆರೋಪಕ್ಕೆ ಮತ್ತಷ್ಟು ಪುಷ್ಟಿ

Team Udayavani, Apr 18, 2020, 5:43 AM IST

ಚೀನದಿಂದ ಕೋವಿಡ್ ಸುಳ್ಳಿನ ಕತೆ? : ಮುಚ್ಚಿಟ್ಟ ವುಹಾನ್‌ ಸಾವಿನ ಸಂಖ್ಯೆ ಮರು ಪ್ರಕಟ

ಕೋವಿಡ್ ಭೀತಿಯ ನಡುವೆಯೂ ಕಛೇರಿ ಕೆಲಸಗಳಿಗೆ ಧಾವಿಸುತ್ತಿರುವ ಚೀನೀಯರು.

ವಾಷಿಂಗ್ಟನ್‌/ಬೀಜಿಂಗ್‌: ಮನುಕುಲವನ್ನೇ ನಡುಗಿಸಿರುವ ಕೋವಿಡ್ 19 ವೈರಸ್‌ ಎಂಬ ಮಹಾಮಾರಿಯ ರುದ್ರತಾಂಡವವನ್ನು ಮುಚ್ಚಿಡುವ ಮೂಲಕ ಜಗತ್ತಿನ ಕಣ್ಣಿಗೆ ಚೀನ ಮಣ್ಣೆರಚಿತೇ? ತನ್ನ ನಾಗರಿಕರ ಮೃತದೇಹಗಳ ಮೇಲೆಯೇ ಸುಳ್ಳಿನ ಸಾಮ್ರಾಜ್ಯ ಕಟ್ಟಿತೇ?

ವೈರಸ್‌ನ ಕೇಂದ್ರ ಬಿಂದುವಾದ ವುಹಾನ್‌ ನಗರದಲ್ಲಿನ ಸಾವಿನ ಪ್ರಮಾಣದ ಲೆಕ್ಕಾಚಾರವನ್ನು ಏಕಾಏಕಿ ಹೆಚ್ಚಿಸುವ ಮೂಲಕ ಸ್ವತಃ ಚೀನವೇ ಇಂಥದ್ದೊಂದು ಪ್ರಶ್ನೆ ಹುಟ್ಟುಹಾಕಿದೆ. ಸೋಂಕಿನ ಕೇಂದ್ರಸ್ಥಾನ ವುಹಾನ್‌ನಲ್ಲಿ ಸತ್ತವರ ಸಂಖ್ಯೆಯನ್ನು ಶುಕ್ರವಾರ ಶೇ. 50ರಷ್ಟು ಹೆಚ್ಚಿಸಿ ಚೀನ ಸರಕಾರ ಘೋಷಣೆ ಹೊರಡಿಸಿದೆ.

ವುಹಾನ್‌ನ ಸಾವಿನ ಸಂಖ್ಯೆಗೆ ಶುಕ್ರವಾರ ಮತ್ತೆ 1,290 ಪ್ರಕರಣಗಳನ್ನು ಚೀನ ಸೇರಿಸಿದೆ. ಈ ನಗರವೊಂದರಲ್ಲೇ 3,869 ಮಂದಿ ಮೃತ ಪಟ್ಟಂತಾಗಿದೆ. ಈ ಮೂಲಕ ಚೀನದಲ್ಲಿ ಒಟ್ಟಾರೆ ಸಾವಿನ ಪ್ರಮಾಣ ಶೇ.39 ಏರಿಕೆಯಾಗಿ, ಒಟ್ಟು 4,632 ಮಂದಿ ಸಾವಿಗೀಡಾದಂತಾಗಿದೆ. 140 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ 5 ಸಾವಿರಕ್ಕಿಂತ ಕಡಿಮೆ ಮಂದಿ ಮೃತಪಟ್ಟಿದ್ದಾರೆ ಎಂದರೆ ನಂಬಲು ಅಸಾಧ್ಯ. ಏಕೆಂದರೆ, ಅದಕ್ಕಿಂತ ತೀರಾ ಕಡಿಮೆ ಜನಸಂಖ್ಯೆ ಇರುವಂಥ ಇಟಲಿ, ಸ್ಪೇನ್‌ನಂಥ ದೇಶಗಳಲ್ಲೇ ಸಾವಿನ ಸಂಖ್ಯೆ ಅಗಾಧವಾಗಿದ್ದು, ಚೀನ ಸತ್ಯ ಮುಚ್ಚಿಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ.

ಒತ್ತಡಕ್ಕೆ ಮಣಿಯಿತೇ?
ಕೊರೊನಾ ಕುರಿತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸರಿಯಾದ ಮಾಹಿತಿ ಹಂಚಿಕೊಂಡಿಲ್ಲ ಎಂಬ ಬಗ್ಗೆ ಅಮೆರಿಕ ದೊಡ್ಡ ಧ್ವನಿಯಿಂದ ಆರೋಪಿಸುತ್ತಿದೆ. ಅದರ ಬಗ್ಗೆ ಮಾಹಿತಿ ಕೊಡದೆ ಜಗತ್ತಿಗೆ ಚೀನ ಮಣ್ಣೆರಚಿದೆಯೆಂದು ಅಧ್ಯಕ್ಷ ಟ್ರಂಪ್‌ ಪದೇ ಪದೆ ಹೇಳುತ್ತಾ ಬಂದಿದ್ದಾರೆ.

ವೈರಸ್‌ ಅನ್ನು ಲ್ಯಾಬ್‌ನಲ್ಲಿ ಸೃಷ್ಟಿಸಲಾಯಿತು ಎಂದೂ ಅವರು ದೂರಿದ್ದಾರೆ. ಈ ಕುರಿತು ತನಿಖೆಯನ್ನು ಆರಂಭಿಸಿರುವುದಾಗಿಯೂ ಅಧ್ಯಕ್ಷ ಟ್ರಂಪ್‌ ಹೇಳಿದ್ದಾರೆ. ಜತೆಗೆ, ಇತರ ದೇಶಗಳು ಕೂಡ ಚೀನದ ಮೇಲೆ ಒತ್ತಡ ಹಾಕುತ್ತಿವೆ. ಈ ಎಲ್ಲ ಬೆಳವಣಿಗೆಗಳಿಂದ ಸ್ವಲ್ಪಮಟ್ಟಿಗೆ ಬೆದರಿರುವ ಚೀನ, ಈಗ ಸಾವಿನ ಸಂಖ್ಯೆ ಹೆಚ್ಚಳ ಮಾಡಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ.

ಚೀನ ಹಲವು ಬಾರಿ ಮಾನದಂಡ ಬದಲು
ಆರಂಭದ ದಿನದಿಂದ ಈವರೆಗೆ ಸೋಂಕಿತರ ಹಾಗೂ ಮೃತರ ಸಂಖ್ಯೆಯನ್ನು ಬಹಿರಂಗಪಡಿಸುವ ವೇಳೆ ಚೀನ ಹಲವು ಬಾರಿ ಮಾನದಂಡಗಳನ್ನು ಬದಲಿಸುತ್ತಾ ಬಂದಿದೆ. ಆಗಲೇ ಅನೇಕ ದೇಶಗಳಿಂದ ಮಾತ್ರವಲ್ಲ, ಸ್ವತಃ ಚೀನೀಯರೇ ಈ ಕುರಿತು ಅನುಮಾನ ವ್ಯಕ್ತಪಡಿಸಿದ್ದೂ ಇದೆ.

ಫೆಬ್ರವರಿಯ ಮಧ್ಯಭಾಗದಲ್ಲಿ ಚೀನ ಏಕಾಏಕಿ ಸೋಂಕಿತರ ಸಂಖ್ಯೆಗೆ ಹೆಚ್ಚುವರಿ 15 ಸಾವಿರ ಪ್ರಕರಣಗಳನ್ನು ಸೇರ್ಪಡೆ ಮಾಡಿತ್ತು. ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡದೇ ಇದ್ದ ಕೆಲವರ ಶ್ವಾಸಕೋಶದ ಎಕ್ಸ್‌ರೇ ತೆಗೆದಾಗ ಅವರಿಗೂ ಸೋಂಕು ಇರುವುದು ಗೊತ್ತಾಗಿರುವ ಕಾರಣ ಈ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ ಎಂಬ ಸ್ಪಷ್ಟನೆಯನ್ನು ಆಗ ಚೀನ ನೀಡಿತ್ತು.

ಇದಾದ ಕೆಲವೇ ದಿನಗಳ ಬಳಿಕ, ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗವು ಮೃತಪಟ್ಟವರ ಪಟ್ಟಿಯಿಂದ 108 ಮಂದಿಯ ಹೆಸರನ್ನು ತೆಗೆದುಹಾಕಿತು. ಹ್ಯುಬೆ ಪ್ರಾಂತ್ಯದಲ್ಲಿ ಎರಡೆರಡು ಬಾರಿ ಮೃತರನ್ನು ಲೆಕ್ಕ ಹಾಕಿದ ಕಾರಣ, ಲೆಕ್ಕ ತಪ್ಪಾಗಿತ್ತು ಎಂಬ ಕಾರಣವನ್ನು ಆಗ ನೀಡಿತ್ತು.

ಫೆಬ್ರವರಿ ಅಂತ್ಯದಲ್ಲಿ ಮತ್ತೂಮ್ಮೆ ಸೋಂಕಿತರನ್ನು ಲೆಕ್ಕ ಹಾಕುವ ವಿಧಾನವನ್ನು ಬದಲಿಸಿದ ಚೀನ, ಶ್ವಾಸಕೋಶದ ಇಮೇಜಿಂಗ್‌ ಪ್ರಕ್ರಿಯೆಯಲ್ಲಿ ಪಾಸಿಟಿವ್‌ ಬಂದ ಪ್ರಕರಣಗಳನ್ನು ಪಟ್ಟಿಯಿಂದ ಕೈಬಿಡಲಾಗುವುದು ಎಂದು ಘೋಷಿಸಿತು.

ವಾದವೇನು?
– ಸೋಂಕಿನ ಆರಂಭಿಕ ದಿನಗಳಲ್ಲಿ ಹೆಚ್ಚಿನ ಜನರು ರೋಗಲಕ್ಷಣವಿದ್ದರೂ ಹೇಳಲು ಮುಂದೆ ಬರಲಿಲ್ಲ.

– ಸಮರ್ಪಕ ಚಿಕಿತ್ಸಾ ಸೌಲಭ್ಯಗಳು ಇರಲಿಲ್ಲ. ನಾವು ಸಾಕಷ್ಟು ಜನರನ್ನು ಪರೀಕ್ಷೆಗೆ ಒಳಪಡಿಸಿರಲಿಲ್ಲ.

– ಕೆಲವು ರೋಗಿಗಳು ಸೋಂಕು ತಗುಲಿ ಮನೆಗಳಲ್ಲೇ ಮೃತಪಟ್ಟಿದ್ದಾರೆ. ಅವರ ವಿಚಾರ ದಾಖಲೇ ಆಗಿರಲಿಲ್ಲ.

ಚೀನ ಜಿಡಿಪಿ ಕುಸಿತ
ಕೋವಿಡ್ ನಿಂದಾಗಿ 1992ರ ಅನಂತರ ಇದೇ ಮೊದಲ ಬಾರಿಗೆ ಚೀನದ ಜಿಡಿಪಿಯಲ್ಲಿ ಕುಸಿತ ಕಂಡು ಬಂದಿದೆ. ಈ ದು:ಸ್ಥಿಯಿಂದ ಹೊರ ಬಂದು ಪುನಃ ಮೊದಲಿನಂತೆ ಆಗಲು ಕೆಲ ಸಮಯ ಹಿಡಿಯಬಹುದು ಎಂದು ವರದಿ ಹೇಳಿದೆ.

ಜನವರಿ-ಮಾರ್ಚ್‌ ಅವಧಿಯ ಮೂರು ತಿಂಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಆರ್ಥಿಕತೆ (ಜಿಡಿಪಿ) ಶೇ.6.8ರಷ್ಟು ಕುಸಿದಿದೆ ಎಂದು ಸರಕಾರದ ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ. ಇದಕ್ಕೂ ಮೊದಲು ದೇಶದ ಜಿಡಿಪಿ ಶೇ.6.5ರಷ್ಟಿರಬಹುದು ಎಂದು ಅಂದಾಜಿಸಲಾಗಿತ್ತು.

ಇದೇ ವೇಳೆ, ತ್ತೈಮಾಸಿಕ ಅವಧಿಗೆ ಹೋಲಿಸಿದರೆ ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ಜಿಡಿಪಿ ಶೇ. 9.8ರಷ್ಟಿಕ್ಕೆ ಕುಸಿದಿದೆ ಎಂದು ನ್ಯಾಶನಲ್‌ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್‌ ತಿಳಿಸಿದೆ. ಇದು ನಿರೀಕ್ಷೆಯ ಮಟ್ಟಕ್ಕೆ (ಶೇ.9.9)ಸಮಿಪದಲ್ಲಿದ್ದು, ಕಳೆದ ತ್ತೈಮಾಸಿಕಕ್ಕೆ ಹೋಲಿಸಿದರೆ ಶೇ.1.5ರಷ್ಟು ಬೆಳವಣಿಗೆ ಕಂಡಿದೆ ಎಂದು ಅದು ತಿಳಿಸಿದೆ.

ಆರೋಪ ನಿರಾಕರಣೆ
ಕೋವಿಡ್ ಸಾವಿನ ವಿಚಾರವನ್ನು ಮುಚ್ಚಿಟ್ಟಿದೆ ಎಂಬ ಆರೋಪವನ್ನು ಚೀನ ತಳ್ಳಿಹಾಕಿದೆ. ನಾವು ಯಾವುದನ್ನೂ ಮುಚ್ಚಿಟ್ಟಿಲ್ಲ, ಮುಚ್ಚಿಡುವುದೂ ಇಲ್ಲ. ವೈರಸ್‌ನ ವ್ಯಾಪಿಸುವಿಕೆ ತೀವ್ರವಾಗಿದ್ದ ಕಾರಣ ಕೆಲವೆಡೆ ಕೆಲವೊಂದು ದೋಷಗಳು ಕಂಡುಬಂದಿರುವ ಕಾರಣ, ಪ್ರಕರಣಗಳು ವರದಿಯಾಗಿರಲಿಲ್ಲ. ಈಗ ನಾವು ಪ್ರಾಮಾಣಿಕವಾಗಿ ಸಂಖ್ಯೆಯನ್ನು ಹೆಚ್ಚಳ ಮಾಡಿಕೊಂಡಿದ್ದೇವೆ ಎಂದು ಚೀನ ವಿದೇಶಾಂಗ ಇಲಾಖೆ ಹೇಳಿದೆ.

ಮೂಲ ತನಿಖೆಯಾಗಲಿ: ಅಮೆರಿಕ ಸಂಸದರು
ವೈರಸ್‌ ಮೂಲದ ಬಗ್ಗೆ ಮುಕ್ತ ಹಾಗೂ ಪಾರದರ್ಶಕ ತನಿಖೆ ನಡೆಯಬೇಕು ಎಂದು ಅಮೆರಿಕ ಸಂಸದರ ಒಕ್ಕೂಟವೊದು ಆಗ್ರಹಿಸಿದೆ. ಈ ತನಿಖೆಗೆ ಜಪಾನ್‌, ದಕ್ಷಿಣ ಕೊರಿಯಾ ಮತ್ತು ಐರೋಪ್ಯ ರಾಷ್ಟ್ರಗಳ ನೆರವನ್ನೂ ಪಡೆಯಬೇಕು ಎಂದು ಅಧ್ಯಕ್ಷ ಟ್ರಂಪ್‌ಗೆ ಒತ್ತಾಯಿಸಿದೆ.

ಆರೋಗ್ಯ ಬಿಕ್ಕಟ್ಟಿಗೆ ಸಂಬಂಧಿಸಿ ವಿಶ್ವ ಆರೋಗ್ಯ ಸಂಸ್ಥೆ ಕೈಗೊಂಡ ನಿರ್ಧಾರಗಳ ಕುರಿತೂ ತನಿಖೆಯಾಗಬೇಕು ಎಂದೂ ಸಂಸದರು ಕೋರಿದ್ದಾರೆ. ತನಿಖೆಯಲ್ಲಿ ಅಂತಾರಾಷ್ಟ್ರೀಯ ಸಹಭಾಗಿತ್ವ ಇರುವಂತೆ ನೋಡಿಕೊಂಡು, ಅದಕ್ಕೆಂದೇ ಉನ್ನತ ಮಟ್ಟದ ರಾಯಭಾರಿಗಳ ಸಮಿತಿಯನ್ನು ನೇಮಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.

ಆಫ್ರಿಕಕ್ಕೆ ಕಾದಿದೆ ಆಪತ್ತು
ಆಫ್ರಿಕಕ್ಕೆ ಸೋಂಕಿನಿಂದಾಗಿ ಆಪತ್ತು ಉಂಟಾಗಲಿದೆ. ಅದುವೇ ಮುಂದೆ ಹಾಟ್‌ಸ್ಪಾಟ್‌ ಆಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಇದುವರೆಗೆ ಅಲ್ಲಿ 18 ಸಾವಿರ ಮಂದಿಗೆ ಸೋಂಕು ತಗಲಿದ್ದು, 1 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಆಫ್ರಿಕಾ ಖಂಡದ ದೇಶಗಳಲ್ಲಿ ಬಡತನ, ಸೂಕ್ತ ವೈದ್ಯಕೀಯ ವ್ಯವಸ್ಥೆ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಇದೇ ವೇಳೆ ವಿಶ್ವಸಂಸ್ಥೆಯಲ್ಲಿ ಆಫ್ರಿಕಕ್ಕಾಗಿ ಇರುವ ಆರ್ಥಿಕ ಆಯೋಗದ ಮುನ್ನೆಚ್ಚರಿಕೆ ಪ್ರಕಾರ ಮೂರು ಲಕ್ಷ ಮಂದಿ ಅಸುನೀಗಲಿದ್ದಾರೆ. 120 ಕೋಟಿ ಮಂದಿಗೆ ಸೋಂಕು ತಗಲುವ ಸಾಧ್ಯತೆ ಇದೆ ಎಂದಿದೆ. ಮತ್ತೊಂದೆಡೆ, ಸೋಂಕಿನ ಬಗ್ಗೆ ಜಗತ್ತಿಗೆ ಮಾಹಿತಿ ಮುಚ್ಚಿಟ್ಟಿದೆ ಎಂದು ಫ್ರಾನ್ಸ್‌  ಮತ್ತು ಯು.ಕೆ. ಆರೋಪಿಸಿದ್ದು, ಈ ಬಗ್ಗೆ ತನಿಖೆಗೆ ಒತ್ತಾಯಿಸಿವೆ.

ಟಾಪ್ ನ್ಯೂಸ್

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

police USA

USA: ಅಪಘಾತದಲ್ಲಿ ಭಾರತ ಮೂಲದ ಇಬ್ಬರ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.