Udayavni Special

ನವೆಂಬರ್‌ನಲ್ಲೇ ಸೋಂಕು? ; ವೈರಾಣು ಸಂಶೋಧನಾ ನಿರತ ಭಾರತೀಯ ವಿಜ್ಞಾನಿಗಳ ಅಂದಾಜು

ಮೊದಲು ಕೇರಳ ಪ್ರವೇಶಿಸಿ, ರೂಪಾಂತರ ಹೊಂದಿ ನಂತರ ಹರಡಿರಬಹುದೆಂಬ ಶಂಕೆ

Team Udayavani, Jun 5, 2020, 6:20 AM IST

ನವೆಂಬರ್‌ನಲ್ಲೇ ಸೋಂಕು? ; ವೈರಾಣು ಸಂಶೋಧನಾ ನಿರತ ಭಾರತೀಯ ವಿಜ್ಞಾನಿಗಳ ಅಂದಾಜು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೈದರಾಬಾದ್‌/ಹೊಸದಿಲ್ಲಿ: ದೇಶದಲ್ಲಿ ಮೊದಲ ಕೋವಿಡ್ ಸೋಂಕು ಪತ್ತೆಯಾಗಿದ್ದು ಜ. 30ರಂದು.

ಆದರೆ ವೈರಾಣು ವಿಜ್ಞಾನಿಗಳ ಪ್ರಕಾರ 2019ರ ನವೆಂಬರ್‌ನಲ್ಲೇ ದೇಶಕ್ಕೆ ಕಾಲಿಟ್ಟಿದ್ದಿರಬಹುದು ಎಂದು  ಅಂದಾಜಿಸಿದ್ದಾರೆ.

ದೇಶದಲ್ಲಿ ಈಗ ಸುಮಾರು 198 ಕೋವಿಡ್ ತಳಿಗಳಿವೆ. ಆದರೆ, ಅದರ ಮೂಲ ಇಲ್ಲಿನ  ಹವಾಮಾನಕ್ಕೆ ಒಗ್ಗಿಕೊಳ್ಳುವ ನಿಟ್ಟಿನಲ್ಲಿ ಮಾರ್ಪಾಟಾದ ಅವು ಹೊಸ ತಳಿಗಳಾಗಿ ಪರಿವರ್ತನೆ ಹೊಂದಿ ದೇಶಾದ್ಯಂತ ಹರಡಿವೆ.

ಭಾರತಕ್ಕೆ ಪ್ರವೇಶಗೊಂಡ ನಂತರ ಕೆಲ ದಿನಗಳಲ್ಲಿ ಉತ್ಪಾದನೆಯಾದ ಹೊಸ ತಳಿ 2019ರ ಡಿ. 11ರಂದು ಸೃಷ್ಟಿಯಾಗಿ ಮೊದಲಿಗೆ ಕೇರಳ, ಆನಂತರ ತೆಲಂಗಾಣಕ್ಕೆ ಲಗ್ಗೆಯಿಟ್ಟಿದೆ ಎಂಬ  ಸಿದ್ಧಾಂತವನ್ನು ಹೈದರಾಬಾದ್‌ನ ಸೆಂಟರ್‌ ಫಾರ್‌ ಸೆಲ್ಯುಲರ್‌ ಆ್ಯಂಡ್‌ ಮೊಲೆಕ್ಯುಲರ್‌ ಬಯಾಲಜಿ (ಸಿಸಿಎಂಬಿ) ವಿಜ್ಞಾನಿಗಳು ಮಂಡಿಸಿದ್ದಾರೆ.

ಮತ್ತೂಂದು ತಳಿ: ಇದರ ಜತೆಗೆ ಸಿಸಿಎಂಬಿ ವಿಜ್ಞಾನಿಗಳು ಹಾಗೂ ದೇಶದ ಇತರೆಡೆಯಲ್ಲಿರುವ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಕೋವಿಡ್ ವೈರಸ್‌ನ ಬೇರೊಂದು ತಳಿಯನ್ನು ಪತ್ತೆ ಹಚ್ಚಿದ್ದಾರೆ.

ಅದಕ್ಕೆ “ಕ್ಲಾಡ್‌ ಐ/ಎ3ಐ’ ಎಂದು ಹೆಸರಿಡಲಾಗಿದೆ. ‘ಈ ತಳಿಯು ಆಗ್ನೇಯ ಏಷ್ಯಾದಲ್ಲಿ ಹರಡಿದ್ದ ಕೋವಿಡ್ ಮೂಲ ವೈರಸ್‌ನ ಆಧುನಿಕ ರೂಪಾಂತರ. ಇದು ಜ. 17ರಿಂದ ಫೆ. 25ರ ನಡುವೆ ದೇಶವ್ಯಾಪಿ ಹರಡಿದೆ’ ಎಂದು ಸಿಸಿಎಂಬಿಯ ನಿರ್ದೇಶಕ ಡಾ. ರಾಕೇಶ್‌ ಮಿಶ್ರಾ ತಿಳಿಸಿದ್ದಾರೆ.

ನಿಯಮ ಸರಳ: ಕೋವಿಡ್ ಸೋಂಕು ಗಣನೀಯವಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಲಸಿಕೆ ಅಭಿವೃದ್ಧಿಗೆ ವೇಗ ನೀಡುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯವು ಕ್ಲಿನಿಕಲ್‌ ಟ್ರಯಲ್‌ ನಿಯಮಗಳನ್ನು ಸರಳೀಕೃತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ತುರ್ತು ಸ್ಥಿತಿಯ ಈ ಸಂದರ್ಭದಲ್ಲಿ ಸೂಕ್ತ ಲಸಿಕೆ ಲಭ್ಯವಾಗುವಂತೆ ಮಾಡುವ ಸಲುವಾಗಿ 1940ರ ಡ್ರಗ್ಸ್‌ ಆ್ಯಂಡ್‌ ಕಾಸ್ಮೆಟಿಕ್ಸ್‌ ಕಾಯ್ದೆಯ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರಿಂದಾಗಿ ಭಾರತೀಯ ಫಾರ್ಮಾಸ್ಯುಟಿಕಲ್‌ ಕಂಪನಿಗಳು ಬೇಗನೆ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿ, ಅದನ್ನು ಮಾರುಕಟ್ಟೆಗೆ ಬಿಡಲು ಸಾಧ್ಯವಾಗುತ್ತದೆ.

ಈವರೆಗೆ ಇದ್ದ ನಿಯಮದ ಪ್ರಕಾರ, ಫಾರ್ಮಾಸ್ಯುಟಿಕಲ್‌ ಸಂಸ್ಥೆಯೊಂದು ಕೋವಿಡ್ ಗೆ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಲು ಮತ್ತು ಸಂಗ್ರಹಿಸಿಡಲು ಉದ್ದೇಶಿಸಿದರೆ, ಆ ಸಂಸ್ಥೆಯು ಮಾರ್ಕೆಟಿಂಗ್‌ಗೆ ಅನುಮತಿ ಪಡೆಯಲು ಸಂಕೀರ್ಣ ಪ್ರಕ್ರಿಯೆಯನ್ನು ಅನುಸರಿಸಬೇಕಾಗಿತ್ತು.

ಲಸಿಕೆಯ ಪ್ರಯೋಗಕ್ಕೂ ಮುನ್ನ ಹಲವು ಅರ್ಜಿಗಳನ್ನು ಸಲ್ಲಿಸಬೇಕಾಗಿತ್ತು. ಪ್ರಯೋಗ ಪೂರ್ಣಗೊಳ್ಳುವವರೆಗೂ ಅನೇಕ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತಿತ್ತು. ಅಷ್ಟೇ ಅಲ್ಲ, ಹೊಸ ಲಸಿಕೆ ಅಭಿವೃದ್ಧಿಪಡಿಸಬೇಕೆಂದರೆ, ಕಂಪನಿಯು ಕೇಂದ್ರ ಪರವಾನಗಿ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕಾಗಿತ್ತು.

ಆದರೆ, ಈಗ ಸದ್ಯದ ಪರಿಸ್ಥಿತಿಯನ್ನು ಮನಗಂಡು ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲವೊಂದು ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಸರ್ಕಾರವು ದೇಶದಲ್ಲಿ ಕೋವಿಡ್ ಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಕಂಡುಕೊಳ್ಳುವ ನಿಟ್ಟಿನಲ್ಲಿ 30 ಸಮೂಹಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿತ್ತು.

ಮಹಾರಾಷ್ಟ್ರದಲ್ಲಿ 30 ಪೊಲೀಸರ ಸಾವು
ದೇಶದಲ್ಲೇ ಅತೀ ಹೆಚ್ಚು ಕೋವಿಡ್ ಸೋಂಕಿತರಿರುವ ರಾಜ್ಯವಾದ ಮಹಾರಾಷ್ಟ್ರದಲ್ಲಿ ಈವರೆಗೆ 30 ಮಂದಿ ಆರಕ್ಷಕರು ಸೋಂಕಿಗೆ ಬಲಿಯಾಗಿದ್ದಾರೆ. ಮೃತ ಪೊಲೀಸರಲ್ಲಿ ಒಬ್ಬ ಅಧಿಕಾರಿಯೂ ಸೇರಿದ್ದಾರೆ.

ಒಟ್ಟಾರೆ 2,500 ಮಂದಿ ಪೊಲೀಸರಿಗೆ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ. ಮೃತ 30 ಪೊಲೀಸರ ಪೈಕಿ ಸುಮಾರು 18 ಮಂದಿ ಮುಂಬೈ ಪೊಲೀಸ್‌ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವರು ಮತ್ತು ಲಾಕ್‌ ಡೌನ್‌ ನಿಯಮ ಜಾರಿ ಮಾಡುವ ಸಮಯದಲ್ಲಿ ಇವರಿಗೆ ಸೋಂಕು ತಗುಲಿತ್ತು ಎಂದು ಹೇಳಲಾಗಿದೆ.

ದಾಖಲೆಯ 9,304 ಹೊಸ ಪ್ರಕರಣ
ಬುಧವಾರ ಬೆಳಗ್ಗೆ 8ರಿಂದ ಗುರುವಾರ ಬೆಳಗ್ಗೆ 8 ಗಂಟೆಯವರೆಗೆ ದೇಶದಲ್ಲಿ ದಾಖಲೆಯ 9,304 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ 260 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಜತೆಗೆ, ಈವರೆಗೆ 1,04,106 ರೋಗಿಗಳು ಗುಣಮುಖರಾಗಿದ್ದು, ಗುಣಮುಖ ಪ್ರಮಾಣ ಸದ್ಯ ಶೇ.47.99 ಆಗಿದೆ. ಜಗತ್ತಿನ ಪಟ್ಟಿಯಲ್ಲಿ ಭಾರತಕ್ಕೆ 7 ಸ್ಥಾನವಿದೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ ಗುರುವಾರ 2,933 ಹೊಸ ಸೋಂಕು ದೃಢಪಟ್ಟಿವೆ.

123 ಮಂದಿ ಅಸುನೀಗಿದ್ದಾರೆ. ಈ ಪೈಕಿ ಮುಂಬೈ ಒಂದರಲ್ಲಿಯೇ 1,442 ಕೇಸುಗಳು ಖಚಿತಪಟ್ಟಿವೆ. ಒಟ್ಟಾರೆಯಾಗಿ ಮಹಾರಾಷ್ಟ್ರವೊಂದರಲ್ಲಿಯೇ 77 ಸಾವಿರಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿವೆ. ತಮಿಳುನಾಡಿನಲ್ಲಿ 1,384 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 12 ಮಂದಿ ಅಸುನೀಗಿದ್ದಾರೆ.

ಈ ಮೂಲಕ ಅಲ್ಲಿ ಸೋಂಕಿತರ ಸಂಖ್ಯೆ 27 ಸಾವಿರ ದಾಟಿದೆ. ಗುಜರಾತ್‌ನಲ್ಲಿ ಇನ್ನೂ 492 ಕೇಸುಗಳು ಗೊತ್ತಾಗಿವೆ. 33 ಮಂದಿ ಕೊನೆಯುಸಿರೆಳೆದಿದ್ದಾರೆ. ರಾಜಸ್ಥಾನದಲ್ಲಿ 210 ಹೊಸ ಪ್ರಕರಣಗಳು ದೃಢಪಟ್ಟು, ಒಟ್ಟು ಸೋಂಕಿತರ ಸಂಖ್ಯೆ 9,800ಕ್ಕಿಂತ ಹೆಚ್ಚಾಗಿದೆ.

ರೆಮ್‌ಡಿಸಿವಿರ್‌ನ 5 ಡೋಸ್‌ಗೆ 42 ಸಾವಿರ ರೂ.!?
ಭಾರತದಲ್ಲಿ ಕೋವಿಡ್ ಸೋಂಕಿಗೆ ಔಷಧವಾಗಿ ಪರವಾನಗಿ ಪಡೆದಿರುವ ರೆಮ್‌ಡೆಸಿವಿರ್‌ನ ಬೆಲೆ ಎಷ್ಟು ಗೊತ್ತೇ? 100 ಮಿ.ಗ್ರಾಂ.ಗೆ ಬರೋಬ್ಬರಿ 7 ಸಾವಿರ ರೂ.ಗೂ ಅಧಿಕ! ಒಬ್ಬ ಸೋಂಕಿತ ಐದು ದಿನಗಳ ಡೋಸೇಜ್‌ ಪಡೆಯುವುದಾದರೆ ಆತ 35,000- 42,000 ರೂ. ವೆಚ್ಚ  ಭರಿಸಬೇಕಾಗುತ್ತದೆ.

ಅಮೆರಿಕದ ಗಿಲ್ಯಾಡ್‌ ಸೈನ್ಸಸ್‌ನಿಂದ ಪರವಾನಗಿ ಪಡೆದು, ಭಾರತದಲ್ಲಿ ರೆಮ್‌ಡೆಸಿವಿರ್‌ ತಯಾರಿಸುತ್ತಿರುವ ಹೆಟೆರೊ ಫಾರ್ಮಾ ಇಷ್ಟು ದುಬಾರಿ ಬೆಲೆ ನಿಗದಿಪಡಿಸಿದೆ ಎಂದು ಮುಂಬೈನ ವೈದ್ಯರೊಬ್ಬರು ಹೇಳಿದ್ದಾರೆ.

ಇನ್ನೊಂದೆಡೆ ಗಿಲ್ಯಾಡ್‌ ಸೈನ್ಸಸ್‌, “ಭಾರತದಲ್ಲಿ ಔಷಧ ತಯಾರಿಗೆ ಲೈಸೆನ್ಸ್‌ ಪಡೆದವರೇ ಅದರ ದರ ನಿರ್ಧರಿಸುತ್ತಾರೆ’ ಎಂದು ಕೈತೊಳೆದುಕೊಂಡಿದೆ.

ಆದರೆ, ಹೆಟೆರೊ ಫಾರ್ಮಾ ಮಾತ್ರ ರೆಮ್‌ಡೆಸಿವಿರ್‌ನ ಅಧಿಕೃತ ದರದ ಬಗ್ಗೆ ಇನ್ನೂ ತುಟಿಬಿಚ್ಚಿಲ್ಲ. ಪ್ರಸ್ತುತ ಭಾರತದಲ್ಲಿ ಹೆಟೆರೊ ಜತೆಗೆ ಸಿಪ್ಲಾ, ಮೈಲಾನ್‌, ಜುಬಿಲಾನಿ- ಒಟ್ಟು 4 ಕಂಪನಿಗಳು ರೆಮ್‌ಡೆಸಿವಿರ್‌ ಉತ್ಪಾದನೆಗೆ ಪರವಾನಗಿ ಪಡೆದಿವೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಆಕಾಶ ಮಾರ್ಗದಲ್ಲಿ ಢಿಕ್ಕಿಯಾಗಿ ಸರೋವರಕ್ಕೆ ಬಿದ್ದ ವಿಮಾನಗಳು: ಎಂಟು ಪ್ರಯಾಣಿಕರು ಸಾವು

ಆಕಾಶ ಮಾರ್ಗದಲ್ಲಿ ಢಿಕ್ಕಿಯಾಗಿ ಸರೋವರಕ್ಕೆ ಬಿದ್ದ ವಿಮಾನಗಳು: ಎಂಟು ಪ್ರಯಾಣಿಕರು ಸಾವು

ಕೋವಿಡ್ 19 ಬೆನ್ನಲ್ಲೇ ಚೀನಾದಲ್ಲಿ ಬಬೂನಿಕ್ ಪ್ಲೇಗ್ ಆತಂಕ; ಮುಂಗುಸಿ ಮಾಂಸ ಸೇವನೆ ನಿಷೇಧ

ಕೋವಿಡ್ 19 ಬೆನ್ನಲ್ಲೇ ಚೀನಾದಲ್ಲಿ ಬಬೂನಿಕ್ ಪ್ಲೇಗ್ ಆತಂಕ; ಮುಂಗುಸಿ ಮಾಂಸ ಸೇವನೆ ನಿಷೇಧ

sudhakar

ಕೋವಿಡ್ ಯೋಧರಿಗೆ ಮಸಿ ಬಳಿಯುವ ದುಷ್ಕೃತ್ಯವನ್ನು ಜನ ಕ್ಷಮಿಸುವುದಿಲ್ಲ: ಸುಧಾಕರ್

ಡೆಡ್ಲಿ ಕೋವಿಡ್ ಸೋಂಕು ಗಾಳಿಯಲ್ಲಿಯೂ ಹರಡ್ತಿದೆ…32 ದೇಶಗಳ ವಿಜ್ಞಾನಿಗಳ ಪತ್ರದಲ್ಲೇನಿದೆ?

ಡೆಡ್ಲಿ ಕೋವಿಡ್ ಸೋಂಕು ಗಾಳಿಯಲ್ಲಿಯೂ ಹರಡ್ತಿದೆ…32 ದೇಶಗಳ ವಿಜ್ಞಾನಿಗಳ ಪತ್ರದಲ್ಲೇನಿದೆ?

ಧಾರವಾಡ: ಕೊಲೆ ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಧಾರವಾಡ: ಕೊಲೆ ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸರು

ದ.ಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮತ್ತೊಂದು ಬಲಿ: ಒಂದೇ ದಿನ ಇಬ್ಬರು ಸಾವು

ದ.ಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮತ್ತೊಂದು ಬಲಿ: ಒಂದೇ ದಿನ ಇಬ್ಬರು ಸಾವು

ಹಲೋ…ಪೊಲೀಸ್ ಕಂಟ್ರೋಲ್ ರೂಂ; ಸ್ಟಾರ್ ನಟ ವಿಜಯ್ ಮನೆಗೆ ಬಾಂಬ್ ಇಟ್ಟಿದ್ದೇವೆ

ಹಲೋ…ಪೊಲೀಸ್ ಕಂಟ್ರೋಲ್ ರೂಂ; ಸ್ಟಾರ್ ನಟ ವಿಜಯ್ ಮನೆಗೆ ಬಾಂಬ್ ಇಟ್ಟಿದ್ದೇವೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತರಿಂದ ಭರ್ಜರಿ ಪ್ರಮಾಣದಲ್ಲಿ ರಸಗೊಬ್ಬರ ಖರೀದಿ: ಕೇಂದ್ರ

ರೈತರಿಂದ ಭರ್ಜರಿ ಪ್ರಮಾಣದಲ್ಲಿ ರಸಗೊಬ್ಬರ ಖರೀದಿ: ಕೇಂದ್ರ

ಒಂದೇ ದಿನ 24,912 ಪ್ರಕರಣಗಳು: ವಿಶ್ವದ ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ಭಾರತ

ಒಂದೇ ದಿನ 24,912 ಪ್ರಕರಣಗಳು: ವಿಶ್ವದ ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ಭಾರತ

ಕೇರಳ: ಮಾಸ್ಕ್ ಧರಿಸದಿದ್ದರೆ 10 ಸಾವಿರ ರೂ.ದಂಡ

ಕೇರಳ: ಮಾಸ್ಕ್ ಧರಿಸದಿದ್ದರೆ 10 ಸಾವಿರ ರೂ.ದಂಡ

ಹತ್ತು ಹೆಜ್ಜೆ ಹಾಕುವಷ್ಟರಲ್ಲೇ ಬೆವರಿಳಿಸುತ್ತದೆ ಲೇಹ್‌ ವಾಯುನೆಲೆ!

ಹತ್ತು ಹೆಜ್ಜೆ ಹಾಕುವಷ್ಟರಲ್ಲೇ ಬೆವರಿಳಿಸುತ್ತದೆ ಲೇಹ್‌ ವಾಯುನೆಲೆ!

24 ಕಿ.ಮೀ. ಸೈಕಲ್‌ ತುಳಿದಾಕೆಗೆ ಶೇ. 98.75 ಅಂಕ! ; 10ನೇ ತರಗತಿ ಫ‌ಲಿತಾಂಶದಲ್ಲಿ ಮೇಲುಗೈ

24 ಕಿ.ಮೀ. ಸೈಕಲ್‌ ತುಳಿದಾಕೆಗೆ ಶೇ. 98.75 ಅಂಕ! ; 10ನೇ ತರಗತಿ ಫ‌ಲಿತಾಂಶದಲ್ಲಿ ಮೇಲುಗೈ

MUST WATCH

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya


ಹೊಸ ಸೇರ್ಪಡೆ

06-July-06

ಸಂಡೇ ಸಂಪೂರ್ಣ ಲಾಕ್‌

06-July-05

ವೀಕೆಂಡ್‌ ಲಾಕ್‌ಡೌನ್‌ ಸಂಪೂರ್ಣ ಯಶಸ್ವಿ

ಆಕಾಶ ಮಾರ್ಗದಲ್ಲಿ ಢಿಕ್ಕಿಯಾಗಿ ಸರೋವರಕ್ಕೆ ಬಿದ್ದ ವಿಮಾನಗಳು: ಎಂಟು ಪ್ರಯಾಣಿಕರು ಸಾವು

ಆಕಾಶ ಮಾರ್ಗದಲ್ಲಿ ಢಿಕ್ಕಿಯಾಗಿ ಸರೋವರಕ್ಕೆ ಬಿದ್ದ ವಿಮಾನಗಳು: ಎಂಟು ಪ್ರಯಾಣಿಕರು ಸಾವು

ಕೋವಿಡ್ 19 ಬೆನ್ನಲ್ಲೇ ಚೀನಾದಲ್ಲಿ ಬಬೂನಿಕ್ ಪ್ಲೇಗ್ ಆತಂಕ; ಮುಂಗುಸಿ ಮಾಂಸ ಸೇವನೆ ನಿಷೇಧ

ಕೋವಿಡ್ 19 ಬೆನ್ನಲ್ಲೇ ಚೀನಾದಲ್ಲಿ ಬಬೂನಿಕ್ ಪ್ಲೇಗ್ ಆತಂಕ; ಮುಂಗುಸಿ ಮಾಂಸ ಸೇವನೆ ನಿಷೇಧ

06-July-04

ಕಂಪ್ಲೀಟ್‌ ಲಾಕ್‌ಡೌನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.