ಕಳ್ಳನಿಗೆ ಕೋವಿಡ್ ಸೋಂಕು: ಪೊಲೀಸರು, ಜಡ್ಜ್ ಕ್ವಾರಂಟೈನ್
Team Udayavani, Apr 11, 2020, 7:22 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲುಧಿಯಾನ: ವಾಹನ ಕಳ್ಳನಿಗೆ ಕೋವಿಡ್ 19 ವೈರಸ್ ಪಾಸಿಟಿವ್ ಎಂದು ತಿಳಿದ ಅನಂತರ ಲುಧಿಯಾನದ 17 ಪೊಲೀಸರು ಹಾಗೂ ನ್ಯಾಯಾಧೀಶರನ್ನು ಕ್ವಾರಂಟೈನ್ನಲ್ಲಿಡಲಾಗಿದೆ.
ಕಳೆದ ಗುರುವಾರ ವರದಿಯಾದ ಎರಡು ಕೋವಿಡ್ ಪ್ರಕರಣಗಳಲ್ಲಿ ವಾಹನ ಕಳ್ಳತನ ಮಾಡುವ 24 ವರ್ಷದ ವ್ಯಕ್ತಿಯೂ ಸೇರಿದ್ದಾನೆ. ಪೊಲೀಸರು ಗಸ್ತು ಸಮಯದಲ್ಲಿ ಈ ವ್ಯಕ್ತಿಯನ್ನು ಕದ್ದ ಬೈಕ್ನೊಂದಿಗೆ ಹಿಡಿದು, ಅನಂತರ ಜೈಲಿಗೆ ಕಳಿಸಿದ್ದರು. ಆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆತನಿಗೆ ಕೆಮ್ಮು ಹಾಗೂ ಶೀತ ಇದ್ದುದರಿಂದ ಅವರನ್ನು ಸಿವಿಲ್ ಆಸ್ಪತ್ರೆಗೆ ಪರೀಕ್ಷೆಗೆಂದು ಕಳುಹಿಸಲಾಗಿದೆ. ಅಲ್ಲಿನ ಆಸ್ಪತ್ರೆ ವೈದ್ಯರು ಕೋವಿಡ್ ಪ್ರಕರಣದ ಬಗ್ಗೆ ಪೊಲೀಸರಿಗೆ ಎಚ್ಚರಿಸಿದ್ದಾರೆ.
ಬಂಧಿತ ವ್ಯಕ್ತಿ ಜೈಪುರಕ್ಕೆ ಪ್ರಯಾಣಿಸಿದ್ದು, ಅಲ್ಲಿ ಆತ ಸೋಂಕಿಗೆ ಒಳಗಾಗಿದ್ದಾನೆ ಎಂದು ಶಂಕಿಸಲಾಗಿದೆ. ಈ ಪರೀಕ್ಷೆ ಫಲಿತಾಂಶ ಬಂದ ಬಳಿಕ ಆತನ ಬಂಧನ ಸಮಯದಲ್ಲಿ 17 ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದು, ಅವರೆಲ್ಲರನ್ನೂ ಕ್ವಾರಂಟೈನ್ನಲ್ಲಿಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!