ಕೊರೊನಾ ಹರಡಲು 5 ಜಿ ಕಾರಣ ?

ಹೀಗೊಂದು ಏನಕೇನ ಪ್ರಕಾರೇಣ

Team Udayavani, Apr 6, 2020, 3:42 PM IST

ಕೊರೊನಾ ಹರಡಲು 5 ಜಿ ಕಾರಣ ?

ಕೋಲ್ಕತ್ತಾ: ಜೆಎನ್‌ರೇ ಆಸ್ಪತ್ರೆಯ ದಾದಿಯರು ಕೊರೊನಾ ವೈರೆಸ್‌ ಸಾಂಕ್ರಾಮಿಕ ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ಒಗ್ಗಟ್ಟನ್ನು ತ್ರಿವರ್ಣ ಧ್ವಜ ಹಾರಿಸುವ ಮೂಲಕ ವ್ಯಕ್ತಪಡಿಸಿದರು.

ಮಣಿಪಾಲ: ಕೋವಿಡ್-19 ವೈರಸ್‌ ಗೆ ಏನು ಕಾರಣ? ಹೇಗೆ ಹರಡಿತು ? ಎಂದು ನಾವು ಅಂತರ್ಜಾಲದಲ್ಲಿ ಜಾಲಾಡಿದರೆ 5ಜಿ ಕಾರಣ ಎಂಬ ಉತ್ತರ ಬರುತ್ತದೆ. ಹೊಸ 5 ಜಿ ನೆಟ್‌ವರ್ಕ್‌ಗಳು ರೋಗಕ್ಕೆ ಕಾರಣವಾಗಿವೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದೆ. ಇಂತಹ ಊಹಾಪೋಹಗಳನ್ನು ಅಮೆರಿಕ ಸೇರಿದಂತೆ ಇತರ ದೇಶಗಳ ಜನರು ಹಬ್ಬಿಸಿದ್ದಾರೆ. ವಿಪರ್ಯಾಸ ಎಂದರೆ ಕೆಲವು ದೇಶಗಳಲ್ಲಿ ಸೆಲೆಬ್ರಿಟಿಗಳೇ ಇಂತಹ ಹೇಳಿಕೆಗಳ‌ನ್ನು ನೀಡುತ್ತಿದ್ದಾರೆ. ಟ್ವಿಟರ್‌ಗಳಲ್ಲಿ 3 ಲಕ್ಷ ಫಾಲೋವರ್‌ಗಳನ್ನು ಹೊಂದಿರುವ ನಟರೊಬ್ಬರು ಇಂತಹ ಅನುಮಾನವನ್ನು ವ್ಯಕ್ತಪಡಿಸಿದ್ದು, ಅವರನ್ನು ಬೆಂಬಲಿಸಿ ಲಕ್ಷಾಂತರ ಪ್ರತಿಕ್ರಿಯೆಗಳು ಬಂದಿವೆ. ಆದರೆ ವಿಜ್ಞಾನಿಗಳ ಪ್ರಕಾರ 5ಜಿ ಮತ್ತು ಕೊರೊನಾ ವೈರಸ್‌ ಗೆ ಯಾವುದೇ ಸಂಬಂಧ ಇಲ್ಲ. ಈ ಕುರಿತಂತಹ ಚರ್ಚೆಗಳೇ ಹಾಸ್ಯಾಸ್ಪದ.

5 ಜಿಯನ್ನು ವಿರೋಧಿಸುತ್ತಿರುವ ಗುಂಪು ಇಂತಹ ಸುಳ್ಳು ಸುದ್ದಿಯನ್ನು ಹರಡಿಸುತ್ತಿವೆ. ಫೇಸ್‌ಬುಕ್‌ ಗುಂಪು ಸೇರಿದಂತೆ ಯೂಟ್ಯೂಬ್‌ ನಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಮಾರ್ಚ್‌ ತಿಂಗಳಿನಲ್ಲಿ ಬೆನ್‌ ಮ್ಯಾಕಿ ಎಂಬವರು ಫೇಸ್ಬುಕ್‌ ನಲ್ಲಿ 5ಜಿಯನ್ನು ಕೊರೊನಾ ವೈರಸ್‌ ಗೆ ಲಿಂಕ್‌ ಮಾಡಿದ್ದರು. “ಪ್ರಪಂಚದಾದ್ಯಂತ 5 ಜಿ ಗೋಪುರಗಳನ್ನು ನಿರ್ಮಿಸುತ್ತಿರುವುದರಿಂದ ಈ ವೈರಸ್‌ಗಳು ಹಬ್ಬುತ್ತಿವೆ. ಇದಕ್ಕೆ 5ಜಿ ತಂತ್ರಜ್ಞಾನ ಕಾರಣ ಎಂದಿದ್ದರು. ಇದು ಜಗತ್ತಿನ ಜನ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನ. ಕೊರೊನಾ ವೈರಸ್‌ ನಿಗ್ರಹಿಸಲು ಅಭಿವೃದ್ಧಿಪಡಿಸುವ ಲಸಿಕೆಗಳು ನಿಜವಾಗಿಯೂ ಲಸಿಕೆಗಳಲ್ಲ; ವಾಸ್ತವವಾಗಿ ಜನರಲ್ಲಿ ಅಳವಡಿಸಲಾಗುವ ಚಿಪ್‌ಗ್ಳಾಗಿವೆ ಎಂದು ಮ್ಯಾಕಿ ಹೇಳಿದರು.

COVID-19 ರೇಡಿಯೊ ತರಂಗಗಳಿಂದೆ‌ಲ್ಲ ಹರಡುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ವೈರಸ್‌ನಿಂದ ಹರಡುತ್ತದೆ ಎಂದು ಎಫ್‌ಸಿಸಿ, ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ ಮತ್ತು ಪರಿಸರ ಸಂರಕ್ಷಣಾ ಸಂಸ್ಥೆ ಮಾಹಿತಿ ನೀಡಿದೆ. ಇವೆಲ್ಲರೂ 5 ಜಿ ಸುರಕ್ಷಿತವೆಂದು ಹೇಳಿದ್ದಾರೆ.

5 ಜಿ ಎಂಬುದು ಹೊಸ ಸೂಪರ್‌-ಫಾಸ್ಟ್‌ ವೈರ್‌ಲೆಸ್‌ ತಂತ್ರಜ್ಞಾನವಾಗಿದೆ. ಅಮೆರಿಕದಲ್ಲಿ ಪ್ರಮುಖ ನಗರಗಳು ಲೈವ್‌ 5 ಜಿ ಸಂಪರ್ಕ ಹೊಂದಿವೆ. ಚೀನ, ದಕ್ಷಿಣ ಕೊರಿಯಾ, ಜರ್ಮನಿ ಮತ್ತು ಯುಕೆ ಮುಂತಾದ ಹಲವು ದೇಶಗಳಲ್ಲಿ 5 ಜಿ ಸೇವೆಗಳಿವೆ. ಇದು ತಂತ್ರಜ್ಞಾನ ಕ್ಷೇತ್ರಗಳಿಗೆ ತುಂಬಾ ನೆರವಾಗಲಿದೆ. ನಾವು ವಾಸಿಸುವ ವಿಧಾನವನ್ನು ಬದಲಾಯಿಸಲು ಈ ತಂತ್ರಜ್ಞಾನವು ಸಜ್ಜಾಗಿದೆ. ಸ್ವಯಂ ಚಾಲನಾ ಕಾರುಗಳಿಂದ ಹಿಡಿದು ಸುಧಾರಿತ ತಂತ್ರಜ್ಞಾನಗಳು ಈ ಸೇವೆ ಆರಂಭಗೊಂಡ ಬಳಿಕ ಜೀವ ಪಡೆಯಲಿವೆೆ. 5ಜಿ ಸೇವೆಗಳನನು ಹೊಂದಿರುವ ದೇಶಗಳು ಈ ದಶಕವನ್ನು ಆಳಲಿವೆ ಎಂದು ಹೇಳಲಾಗುತ್ತಿದೆ.

5 ಜಿ ಆರೋಗ್ಯ ಕಾಳಜಿ?
ಕಂಪನಿಗಳು 5 ಜಿ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗಿನಿಂದ, ಆರೋಗ್ಯದ ಮೇಲೆ ತಂತ್ರಜ್ಞಾನದ ಪ್ರಭಾವದ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. 5 ಜಿ ಯ ಒಂದು ಆವೃತ್ತಿಯನ್ನು ಮಿಲಿ ಮೀಟರ್‌ ತರಂಗ ಎಂದು ಕರೆಯಲಾಗುತ್ತದೆ. ಇದು ಹೆಚ್ಚಿನ ಆವರ್ತನದ ರೇಡಿಯೊ ತರಂಗಗಳಲ್ಲಿ ಚಲಿಸುತ್ತದೆ. ಆ ಸಂಕೇತಗಳು ಹೆಚ್ಚು ದೂರ ಪ್ರಯಾಣಿಸಲು ಸಾಧ್ಯವಿಲ್ಲ, ಇದಕ್ಕೆ ಗೋಪುರಗಳನ್ನು ಹೆಚ್ಚಿನ ಸ್ಥಳಗಳಲ್ಲಿ ಸ್ಥಾಪಿಸಬೇಕು. ರೇಡಿಯೊ ತರಂಗಗಳು ಮಿದುಳಿನ ಕ್ಯಾನ್ಸರ್‌, ತಲೆನೋವು ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುವ ಹಾನಿಕಾರಕ ವಿಕಿರಣ ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಈ ಕುರಿತು ಇನ್ನಷ್ಟು ಸಂಶೋಧನೆ ನಡೆಯಬೇಕಿದೆ.

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.