ಬಾನಂಗಳದಿಂದ ಬಂತು ಗೌರವ ಸಂದೇಶ ; ವಿವಿಧೆಡೆ ಪುಷ್ಪವೃಷ್ಟಿ, ವಾದ್ಯಗೋಷ್ಠಿ

ದೇಶದ ಆರೋಗ್ಯ ವೀರರಿಗೆ ಸಶಸ್ತ್ರ ಪಡೆಗಳಿಂದ ಕೃತಜ್ಞತೆ

Team Udayavani, May 4, 2020, 6:10 AM IST

ಬಾನಂಗಳದಿಂದ ಬಂತು ಗೌರವ ಸಂದೇಶ ; ವಿವಿಧೆಡೆ ಪುಷ್ಪವೃಷ್ಟಿ, ವಾದ್ಯಗೋಷ್ಠಿ

ಹೊಸದಿಲ್ಲಿ: ರವಿವಾರ ಬಾನಂಗಳದಲ್ಲಿ ವಾಯುಪಡೆಯ ಸುಖೋಯ್‌, ಮಿಗ್‌, ಜಾಗ್ವಾರ್‌ ಸಮರ ವಿಮಾನಗಳ ಸ್ವಚ್ಛಂದ ಗೌರವ ಹಾರಾಟ, ಸೇನೆಯ ಹೆಲಿಕಾಪ್ಟರ್‌ಗಳಿಂದ ಆಸ್ಪತ್ರೆಗಳ ಮೇಲೆ ಹೂ ಮಳೆ, ಆಸ್ಪತ್ರೆ ಆವರಣಗಳಲ್ಲಿ ಮಿಲಿಟರಿ ಬ್ಯಾಂಡ್‌ನಿಂದ ದೇಶಭಕ್ತಿ ಗೀತೆಗಳ ರಾಗಾಲಾಪ, ಸಂಜೆ ಬಳಿಕ ದೇಶದ ಕರಾವಳಿಯುದ್ದಕ್ಕೂ ನಿಂತ ಹಡಗುಗಳಲ್ಲಿ ಪ್ರಜ್ವಲಿಸಿದ ದೀಪಗಳ ಬೆಳಕು, ಬಂಗಾಲ ಕೊಲ್ಲಿಯಲ್ಲಿ ‘ಥ್ಯಾಂಕ್‌ ಯು’ ಎಂದ ಐಎನ್‌ಎಸ್‌ ಜಲಾಶ್ವ…

ಕೋವಿಡ್ 19 ವೈರಸ್ ಸೋಂಕಿನ ವಿರುದ್ಧ ಮುನ್ನೆಲೆಯಲ್ಲಿ ನಿಂತು ಹಗಲಿರುಳೆನ್ನದೆ ಹೋರಾಡುತ್ತಿರುವ ವೈದ್ಯರು, ನರ್ಸ್‌ಗಳು, ಸ್ವತ್ಛತಾ ಕಾರ್ಯಕರ್ತರು, ಪೊಲೀಸರು, ಗೃಹರಕ್ಷಕರು ಸೇರಿ ಎಲ್ಲ ಆರೋಗ್ಯ ವೀರರಿಗೆ ಭಾರತದ ಭೂಸೇನೆ, ವಾಯುಸೇನೆ ಮತ್ತು ನೌಕಾ ಪಡೆಗಳು (ಸಶಸ್ತ್ರ ಪಡೆಗಳು) ಸಲ್ಲಿಸಿದ ಕೃತಜ್ಞತಾ ಗೌರವದ ಪರಿಯಿದು.


ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಮೇಲೆ ಹಾರಿದ ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್‌, ಆಸ್ಪತ್ರೆ ಆವರಣದಲ್ಲಿ ನಿಂತಿದ್ದ ವೈದ್ಯರು ಮತ್ತು ಆರೋಗ್ಯ ಸಿಬಂದಿ ಮೇಲೆ ಹೂ ಮಳೆ ಸುರಿಸಿದ್ದು ವಿಶೇಷವಾಗಿತ್ತು.
ಜತೆಗೆ ನವಮಂಗಳೂರು ಹಾಗೂ ಕಾರವಾರ ಬಂದರುಗಳಲ್ಲಿ ನಿಂತ ಹಡಗುಗಳಲ್ಲಿ ಸಂಜೆ ಬಳಿಕ ದೀಪಗಳು ಪ್ರಜ್ವಲಿಸಿದವು. ಈ ಮೂಲಕ ಕರ್ನಾಟಕದ ಕೋವಿಡ್ ವಾರಿಯರ್‌ಗಳಿಗೂ ಸಶಸ್ತ್ರ ಪಡೆಗಳು ಗೌರವ ಸಲ್ಲಿಸಿದವು.


ನೌಕಾ ಪಡೆಯ ವಿಶೇಷ ಸೆಲ್ಯೂಟ್‌

ಅರಬಿ ಸಮುದ್ರದಲ್ಲಿ ತೇಲಿದ ಭಾರತೀಯ ನೌಕಾ ಪಡೆಯ ಎರಡು ಹಡಗುಗಳಲ್ಲಿ ನಿಂತಿದ್ದ ನೂರಾರು ಸಿಬಂದಿ ಶಿಸ್ತಿನಿಂದ ಸೆಲ್ಯೂಟ್‌ ಹೊಡೆಯುವ ಮೂಲಕ ಆರೋಗ್ಯ ವೀರರಿಗೆ ಗೌರವ ಸಲ್ಲಿಸಿದರು.

ಹಡುಗುಗಳು ಮುಂದೆ ಸಾಗುತ್ತಿದ್ದರೆ ಹಿನ್ನೆಲೆಯಲ್ಲಿ ಬ್ಯಾಂಡ್‌ ಸಂಗೀತ ಮೊಳಗುತ್ತಿತ್ತು. ಹಾಗೇ ಒಂದು ಹಡಗಿನಲ್ಲಿ ‘ಇಂಡಿಯಾ ಸೆಲ್ಯೂಟ್‌’ ಮತ್ತೂಂದು ಹಡಗಿನಲ್ಲಿ ‘ಕೋವಿಡ್ ವಾರಿಯರ್ಸ್‌’ ಎಂದು ಬರೆಯಲಾಗಿತ್ತು.
ಇನ್ನು ಏರ್‌ಕ್ರಾಫ್ಟ್‌ ಕ್ಯಾರಿಯರ್‌ ಐಎನ್‌ಎಸ್‌ ವಿಕ್ರಮಾದಿತ್ಯದಲ್ಲಿ ಸಿಬಂದಿ ಮಾನವ ಸರಪಳಿ ನಿರ್ಮಿಸಿರುವ ಮೂಲಕ ಆರೋಗ್ಯ ವೀರರಿಗೆ ಧನ್ಯವಾದ ಹೇಳಿದರು.

ಇದರೊಂದಿಗೆ ಬಂಗಾಲಕೊಲ್ಲಿಯಲ್ಲಿ ಐಎನ್‌ಎಸ್‌ ಜಲಾಶ್ವ ಹಡಗಿನ ಸಿಬಂದಿ ‘ಥ್ಯಾಂಕ್‌ ಯು’ ಎಂದು ಬರೆದಂತೆ ನಿಂತು ಕೋವಿಡ್ ವಾರಿಯರ್‌ಗಳ ಸೇವೆಗೆ ಗೌರವ ಸಲ್ಲಿಸಿದರು. ಸಂಜೆ ಬಳಿಕ ಕರ್ನಾಟಕದ ಮಂಗಳೂರು, ಕಾರವಾರ ಸೇರಿ ದೇಶದ ಕರಾವಳಿ ತೀರದುದ್ದಕ್ಕೂ ನಿಂತ ಹಡಗುಗಳಲ್ಲಿ ದೀಪಗಳ ಬೆಳಕು ಪ್ರಜ್ವಲಿಸಿತು.


ಹೆಲಿಕಾಪ್ಟರ್‌ಗಳಿಂದ ಪುಷ್ಪನಮನ

ಬೆಂಗಳೂರಿನ ಯಲಹಂಕ ಸೇರಿ ದೇಶಾದ್ಯಂತ ಇರುವ ಭಾರತೀಯ ವಾಯುಪಡೆಯ ನೆಲೆಗಳಲ್ಲಿನ ಹೆಲಿಕಾಪ್ಟರ್‌ಗಳು ದೇಶದ ಹಲವು ಪ್ರಮುಖ ನಗರ ಹಾಗೂ ಪಟ್ಟಣಗಳ ಮೇಲೆ ಹಾರಾಟ ನಡೆಸಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಮೇಲೆ ಹೂಮಳೆ ಸುರಿಸಿದವು.

ಸುಖೋಯ್‌, ಮಿಗ್‌ ಸಂಚಲನ
ರವಿವಾರ ಬೆಳಗ್ಗೆ 11 ಗಂಟೆಗೆ ದಿಲ್ಲಿಯ ರಾಜಪಥದ ಮೇಲೆ ಹಾರಿದ ಸುಖೋಯ್‌-30 ಎಂಕೆಐ, ಮಿಗ್‌-29 ಮತ್ತು ಜಾಗ್ವಾರ್‌ ಮಿಲಿಟರಿ ವಿಮಾನಗಳು, ಬಳಿಕ ಸುಮಾರು 30 ನಿಮಿಷಗಳ ಕಾಲ ರಾಜಧಾನಿಯ ಬಾನಂಗಳದಲ್ಲಿ ಸುತ್ತಾಡಿ ದಿಲ್ಲಿಯ ಆರೋಗ್ಯ ವೀರರಿಗೆ ಕೃತಜ್ಞತಾ ಗೌರವ ಅರ್ಪಿಸಿದವು.

ಇದರೊಂದಿಗೆ ಪ್ರಮುಖ ಸೇನಾ ವಿಮಾನ ಸಿ-130 ಕೇವಲ 500ರಿಂದ 1000 ಮೀಟರ್‌ ಎತ್ತರದಲ್ಲಿ ಹಾರಾಟ ನಡೆಸಿತು. ಲಾಕ್‌ಡೌನ್‌ ವೇಳೆ ಭದ್ರತಾ ಕಾರ್ಯಕ್ಕೆ ನಿಯೋಜನೆ ಗೊಂಡಿರುವ ದೇಶದ ಎಲ್ಲ ಪೊಲೀಸರಿಗೆ ಗೌರವ ಧನ್ಯವಾದ ಅರ್ಪಿಸುವ ಉದ್ದೇಶದಿಂದ ದಿಲ್ಲಿಯ ಪೊಲೀಸ್‌ ಸ್ಮಾರಕಕ್ಕೆ ಹೂಮಾಲೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

3ನೇ ಬಾರಿ ನಮನ
ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ಮನವಿ ಮೇರೆಗೆ ಇಡೀ ಭಾರತವೇ ಮಾ.22ರಂದು ಮನೆಯ ಬಾಲ್ಕನಿ, ಕಿಟಿಕಿಗಳ ಬಳಿ ನಿಂತು ಚಪ್ಪಾಳೆ ತಟ್ಟುವ ಮೂಲಕ ವೈದ್ಯರು, ಆರೋಗ್ಯ ಸಿಬಂದಿಗೆ ಗೌರವ ಸಲ್ಲಿಸಿತ್ತು.

ಬಳಿಕ ಎ.5ರಂದು ರಾತ್ರಿ 9 ಗಂಟೆಗೆ ಮನೆಯ ಎಲ್ಲ ವಿದ್ಯುತ್‌ ದೀಪಗಳನ್ನು ಆರಿಸಿ ಮನೆ ಬಾಗಿಲು, ಟೆರೇಸ್‌ ಮೇಲೆ ನಿಂತು 9 ನಿಮಿಷಗಳ ಕಾಲ ದೀಪ, ಕ್ಯಾಂಡಲ್‌ ಬೆಳಗಿದ ಭಾರತ, ಸಂಘಟಿತ ಶಕ್ತಿ ಪ್ರದರ್ಶಿಸುವ ಮೂಲಕ ಆರೋಗ್ಯವೀರರಿಗೆ ತನ್ನ ಧನ್ಯವಾದ ತಿಳಿಸಿತ್ತು. ಪ್ರಸ್ತುತ ಭಾರತದ ಸಶಸ್ತ್ರ ಪಡೆಗಳು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಕೃತಜ್ಞತಾ ಗೌರವ ಸಲ್ಲಿಸಿವೆ.

ಅಮೆರಿಕದಲ್ಲೂ ಗೌರವ
ಅಮೆರಿಕದ ವಾಯು ಸೇನೆ ಕೂಡ ಕೋವಿಡ್ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸಿಬಂದಿಗೆ ಶನಿವಾರ ಗೌರವ ಸಲ್ಲಿಸಿದೆ. ಬ್ಲೂ ಏಂಜೆಲ್ಸ್‌ ಮತ್ತು ಥಂಡರ್‌ಬರ್ಡ್‌ ಯುದ್ಧ ವಿಮಾನಗಳು ವಾಷಿಂಗ್ಟನ್‌, ಬಾಲ್ಟಿಮೋರ್‌ ಮತ್ತು ಅಟ್ಲಾಂಟ ನಗರಗಳ ಮೇಲೆ ಹಾರಾಟ ನಡೆಸಿ, ಕೋವಿಡ್ ವಿರುದ್ಧ ಮುನ್ನೆಲೆಯಲ್ಲಿ ನಿಂತು ಹೋರಾಡಿ ಪ್ರಾಣ ತ್ಯಾಗ ಮಾಡಿದವರಿಗೂ ಗೌರವ ಸಮರ್ಪಿಸಿವೆ.




ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.