Udayavni Special

ಕೋವಿಡ್-19 ನಿಯಂತ್ರಣಕ್ಕೆ ಸೆಣಸಿದವರಿಗೇ ಜೀವ ಬೆದರಿಕೆ!

ಸಾವು ನೋವು ಹೆಚ್ಚುತ್ತಿದೆ ಅಮೆರಿಕದಲ್ಲಿ

Team Udayavani, Apr 5, 2020, 11:15 AM IST

ಕೋವಿಡ್-19 ನಿಯಂತ್ರಣಕ್ಕೆ ಸೆಣಸಿದವರಿಗೇ ಜೀವ ಬೆದರಿಕೆ!

ನ್ಯೂಯಾರ್ಕ್‌: ಮಾರಣಾಂತಿಕ ಕೋವಿಡ್-19 ವೈರಸ್‌ ನಿಂದಾಗಿ ತತ್ತರಿಸುತ್ತಿರುವ ಅಮೆರಿಕವನ್ನು ನಿಯಂತ್ರಣಕ್ಕೆ ತರುವ ತಲೆಬಿಸಿಯೊಂದೇ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರನ್ನು ಹಿಂಡಿ ಹಿಪ್ಪೆ ಮಾಡುತ್ತಿರುವಾಗ ಈಗ ಮತ್ತೂಂದು ತಲೆಬಿಸಿ ಆರಂಭವಾಗಿದೆ. ಅದೆಂದರೆ, ಟ್ರಂಪ್‌ ಅವರ ಆರೋಗ್ಯ ಚಿಂತಕರ ಚಾವಡಿ ಟಾಸ್ಕ್ ಫೋರ್ಸ್‌ನ ಪ್ರಮುಖ ಸಲಹೆಗಾರರಾದ ಉನ್ನತ ವೈದ್ಯಕೀಯ ತಜ್ಞ, ಡಾ| ಆಂಥೋನಿ ಫೌಸಿಗೆ ಪ್ರಾಣ ಬೆದರಿಕೆ ಕರೆಗಳು ಬಂದಿವೆ.

ಈ ಬೆದರಿಕೆ ಕರೆಗಳು ಯಾರಿಂದ ಮತ್ತು ಎಲ್ಲಿಂದ ಬಂದಿವೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಈ ನಡುವೆ ಡಾ.ಆಂಥೋನಿ ಫೌಸಿ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅವರ ಮನೆಗೂ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ದಿ ವಾಷಿಂಗ್ಟನ್‌ ಪೋಸ್ಟ್‌ ಹೇಳಿದೆ.

79 ವರ್ಷದ ಡಾ. ಫೌಸಿಯ ಭದ್ರತೆಯ ಹೊಣೆಯನ್ನು ಎಚ್‌.ಎಸ್‌.ಎಸ್‌ ಅಧಿಕಾರಿಗಳಿಗೆ ವಹಿಸುವಂತೆ ಯು.ಎಸ್‌ ಮಾರ್ಷಲ್‌ ಸರ್ವೀಸ್‌ ಗೆ ಆರೋಗ್ಯ ಮತ್ತು ನಾಗರಿಕ ಸೇವೆಯ ಇಲಾಖೆ ಮತ್ತು ಕಾನೂನು ಜಾರಿ ವಿಭಾಗ ಕೇಳಿಕೊಂಡಿದೆ. ಅವರ ಮನೆಯ ಸುತ್ತ ವಾಷಿಂಗ್ಟನ್‌, ಡಿಸಿ ಮೆಟ್ರೋಪಾಲಿಟನ್‌ ಪೊಲೀಸ್‌ ಇಲಾಖೆಯವರ ಭದ್ರತೆ ಒದಗಿಸಲಾಗಿದೆ.

ಟ್ರಂಪ್‌ ಸಲಹೆಗಾರ
ಈ ಕುರಿತು ಮಾತನಾಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ದೇಶದ ಕೋವಿಡ್-19 ವೈರಸ್‌ ಎಕ್ಸ್‌ಪರ್ಟ್‌ ಡಾ| ಆಂಥೋನಿ ಫೌಸಿ ಗೆ ಭದ್ರತೆಯ ಆವಶ್ಯಕತೆ ಇಲ್ಲ. ಅವರನ್ನು ಎಲ್ಲರೂ ಪ್ರೀತಿಸುತ್ತಾರೆ ಎಂದಿದ್ದಾರೆ. ಕೋವಿಡ್-19 ವೈರಸ್‌ ಸೋಂಕು ಅನ್ನು ತಡೆಯಲು ಹಲವು ನಿರ್ಬಂಧಗಳನ್ನು ಹೇರಲು ಟ್ರಂಪ್‌ ಗೆ ಇವರೇ ಸೂಚಿಸಿದ್ದರು. ಆರಂಭದಿಂದಲೇ ಅಮೆರಿಕ ಮುಂಜಾಗ್ರತೆ ವಹಿಸಿತ್ತು. ಇದನ್ನು ಕಡೆಗಣಿಸಿದರೆ ಸುಮಾರು 1-2 ಲಕ್ಷ ಜನ ಸಾವನ್ನಪ್ಪಬಹುದು ಎಂದು ಡಾ.ಆಂಥೋನಿ ಫೌಸಿ ಎಚ್ಚರಿಸಿದ್ದರು. ಇಂತಹ ಭೀಕರ ಸಂದರ್ಭದಲ್ಲಿ ಪೌಸಿ ಅವರ ಮೇಲೆ ದಾಳಿಯಾದರೆ ಕೋವಿಡ್-19 ವಿರುದ್ಧದ ಸಮರದಲ್ಲಿ ಹಿನ್ನಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಟ್ರಂಪ್‌ ಅವರೇ ಡಾ.ಆಂಥೋನಿ ಫೌಸಿ ಅವರ ಭದ್ರ ತೆಯ ಮೇಲೆ ವಿಶೇಷ ನಿಗಾ ಇರಿಸಿದ್ದಾರೆ. ಇತ್ತೀಚೆಗಷ್ಟೇ ಡಾ. ಫೌಸಿ, ಲಾಕ್‌ಡೌನ್‌ ನಿಯಮ ಪಾಲಿಸಿ ಮನೆಯೊಳಗಿರದಿದ್ದರೆ ಭಾರೀ ಬೆಲೆ ತೆರಬೇಕಾದೀತು. ಕೋವಿಡ್-19 ಎದುರಿಸಲು ಸಾಮಾಜಿಕ ಅಂತರ ಪಾಲನೆಯೇ ದೊಡ್ಡ ಅಸ್ತ್ರ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಕರೆ ನೀಡಿದ್ದರು. ಜತೆಗೆ ಇದನ್ನು ಮೀರಿದರೆ 2 ಲಕ್ಷಕ್ಕೂ ಹೆಚ್ಚು ಸಾವು ಸಂಭವಿಸಬಹುದು ಎಂದಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಡಿಯೋ ಮತ್ತು ಪಲ್ಸರ್ ಬೈಕ್ ಢಿಕ್ಕಿ: ಇಬ್ಬರು ಸಾವು, ಇಬ್ಬರಿಗೆ ಗಾಯ

ಡಿಯೋ ಮತ್ತು ಪಲ್ಸರ್ ಬೈಕ್ ಢಿಕ್ಕಿ: ಇಬ್ಬರು ಸಾವು, ಇಬ್ಬರಿಗೆ ಗಾಯ

Unemployment-1

ಅಭಿಮತ: ಸಿಂಗಾಪೂರ್‌ ನಿರುದ್ಯೋಗ ಸಮಸ್ಯೆ ಭಾರತೀಯರ ಮೇಲೆ ಜನರ ಮುನಿಸು!

ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶಗಳು

ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶಗಳು

ವರಿಷ್ಠರ ಅಂಗಳದಲ್ಲಿ ಸಂಪುಟ ಸರ್ಕಸ್‌: ಐವರಿಗೆ ಸಚಿವ ಸ್ಥಾನ ?

ವರಿಷ್ಠರ ಅಂಗಳದಲ್ಲಿ ಸಂಪುಟ ಸರ್ಕಸ್‌: ಐವರಿಗೆ ಸಚಿವ ಸ್ಥಾನ ?

ಕಷ್ಟ, ಪರಿಶ್ರಮ, ಸವಾಲು, ಹೋರಾಟಗಳೇ ಬದುಕು

ಕಷ್ಟ, ಪರಿಶ್ರಮ, ಸವಾಲು, ಹೋರಾಟಗಳೇ ಬದುಕು

ಶಾಲೆ ತೆರೆದರೂ ತರಗತಿ ನಡೆಯದು: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ಶಾಲೆ ತೆರೆದರೂ ತರಗತಿ ನಡೆಯದು: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಆರ್ಥಿಕ ನೆರವು ಯಾಚನೆ; ಪೊಲೀಸರ ಹೆಸರಲ್ಲಿ ವಂಚನೆ

ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಆರ್ಥಿಕ ನೆರವು ಯಾಚನೆ; ಪೊಲೀಸರ ಹೆಸರಲ್ಲಿ ವಂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tiktok

ಸೆ.20ರಿಂದ ಅಮೆರಿಕದಲ್ಲಿ ಟಿಕ್ ಟಾಕ್, ವಿ-ಚಾಟ್ ಅಧಿಕೃತವಾಗಿ ಬ್ಯಾನ್

ಪಾರ್ಲಿಮೆಂಟ್ ನೊಳಗೆ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಥಾಯ್ ಸಂಸದ!

ಪಾರ್ಲಿಮೆಂಟ್ ನೊಳಗೆ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಥಾಯ್ ಸಂಸದ!

ಅತ್ಯಾಧುನಿಕ ಜೆಟ್‌ ತಯಾರಿಸಿದ ಅಮೆರಿಕ

ಅತ್ಯಾಧುನಿಕ ಜೆಟ್‌ ತಯಾರಿಸಿದ ಅಮೆರಿಕ

Mask

ಸಾಧ್ಯವಾದರೆ ಮಾಸ್ಕ್ ಧರಿಸಿ; ತಪ್ಪಿದರೆ ಸ್ಮಶಾನದಲ್ಲಿ ಸಮಾಧಿ ಗುಂಡಿ ತೋಡಿ!

ಉಗ್ರತೆಯ ಉಗಮ ಕೇಂದ್ರ ಪಾಕಿಸ್ತಾನ

ಉಗ್ರತೆಯ ಉಗಮ ಕೇಂದ್ರ ಪಾಕಿಸ್ತಾನ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ಡಿಯೋ ಮತ್ತು ಪಲ್ಸರ್ ಬೈಕ್ ಢಿಕ್ಕಿ: ಇಬ್ಬರು ಸಾವು, ಇಬ್ಬರಿಗೆ ಗಾಯ

ಡಿಯೋ ಮತ್ತು ಪಲ್ಸರ್ ಬೈಕ್ ಢಿಕ್ಕಿ: ಇಬ್ಬರು ಸಾವು, ಇಬ್ಬರಿಗೆ ಗಾಯ

Unemployment-1

ಅಭಿಮತ: ಸಿಂಗಾಪೂರ್‌ ನಿರುದ್ಯೋಗ ಸಮಸ್ಯೆ ಭಾರತೀಯರ ಮೇಲೆ ಜನರ ಮುನಿಸು!

ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶಗಳು

ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶಗಳು

ವರಿಷ್ಠರ ಅಂಗಳದಲ್ಲಿ ಸಂಪುಟ ಸರ್ಕಸ್‌: ಐವರಿಗೆ ಸಚಿವ ಸ್ಥಾನ ?

ವರಿಷ್ಠರ ಅಂಗಳದಲ್ಲಿ ಸಂಪುಟ ಸರ್ಕಸ್‌: ಐವರಿಗೆ ಸಚಿವ ಸ್ಥಾನ ?

ಕಷ್ಟ, ಪರಿಶ್ರಮ, ಸವಾಲು, ಹೋರಾಟಗಳೇ ಬದುಕು

ಕಷ್ಟ, ಪರಿಶ್ರಮ, ಸವಾಲು, ಹೋರಾಟಗಳೇ ಬದುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.