Covid ಎಫೆಕ್ಟ್; ಹುಷಾರ್…ಮಾಸ್ಕ್ ಧರಿಸದೇ ಹೊರಬಂದರೆ ದಂಡ ಕಟ್ಟಬೇಕಾಗುತ್ತೆ; ಒಡಿಶಾ ಸರ್ಕಾರ
4ನೇ ಬಾರಿಗೆ ದಂಡದ ಮೊತ್ತ 500 ರೂಪಾಯಿಗೆ ಏರಿಕೆಯಾಗಲಿದೆ
Team Udayavani, Apr 10, 2020, 7:06 PM IST
Representative Image
ಭುವನೇಶ್ವರ್: ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರ ಬರುವ ವೇಳೆ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಒಡಿಶಾ ಸರ್ಕಾರ ಆದೇಶಿಸಿದ್ದು, ಒಂದು ವೇಳೆ ಮಾಸ್ಕ್ ಧರಿಸದೇ ಹೊರಬಂದರೆ ಮೊದಲ ಬಾರಿಗೆ 200 ರೂಪಾಯಿ ದಂಡ ವಿಧಿಸಲು ನಿರ್ಧರಿಸಿದೆ.
ಮಾಸ್ಕ್ ಧರಿಸದೇ ಮೂರು ಬಾರಿ ಸಿಕ್ಕಿ ಬಿದ್ದರೆ 200 ರೂಪಾಯಿಯಂತೆ ದಂಡ ವಸೂಲಿ ಮಾಡಲಿದ್ದು, 4ನೇ ಬಾರಿಗೆ ದಂಡದ ಮೊತ್ತ 500 ರೂಪಾಯಿಗೆ ಏರಿಕೆಯಾಗಲಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಅಸಿತ್ ತ್ರಿಪಾಠಿ ತಿಳಿಸಿದ್ದಾರೆ.
ಒಡಿಶಾ ಕೋವಿಡ್ 19 (ತಿದ್ದುಪಡಿ) ನಿಯಮಾವಳಿ 2020 ಗೆ ತಿದ್ದುಪಡಿ ತಂದ ನಂತರ ರಾಜ್ಯ ಸರ್ಕಾರ ಈ ಘೋಷಣೆ ಹೊರಡಿಸಿದೆ ಎಂದು ವರದಿ ಹೇಳಿದೆ. ಜನರು ಮಾಸ್ಕ್ ಧರಿಸುವುದು ಕಡ್ಡಾಯ. ಈ ಸೂಚನೆ ನಂತರ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹುತೇಕರು ಗೃಹ ತಯಾರಿಕೆಯ ಮಾಸ್ಕ್, ಇನ್ನು ಕೆಲವರು ಖರ್ಚಿಫ್ ಅನ್ನು ಮುಖಕ್ಕೆ ಸುತ್ತಿಕೊಂಡು ಮನೆಯಿಂದ ಹೊರಬರುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಕೋವಿಡ್ 19 ಬಗ್ಗೆ ಜನರಿಗೆ ಇನ್ನಷ್ಟು ಅರಿವು ಮೂಡಬೇಕಾಗಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮುಖ್ಯ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಟಿವಿಎಸ್ ನಿಂದ ಹೊಸ ಮಾದರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಿಡುಗಡೆ
ತೈಲ ಸೋರಿಕೆಯಿಂದ ಕಪ್ಪಾದ ಸುಂದರ ಗೋವಾ ಬೀಚ್ : ಓಡಾಡುವುದೇ ಕಷ್ಟಕರ
ಜಾರಿಗೆಬೈಲು ಕಳ್ಳರ ಕೈಚಳಕ : 95 ಸಾವಿರ ಮೌಲ್ಯದ ನಗದು, ಸೊತ್ತು ಕಳವು
ಎಸ್ ಎಸ್ ಎಲ್ ಸಿ ಫಲಿತಾಂಶ; ಏನೇ ಬರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ: ಸಚಿವ ಸುಧಾಕರ್ ಮನವಿ
ಕಣ್ಣು ಆಪರೇಷನ್ ಮಾಡಿದರೆ ಹಣ ನೀಡುತ್ತೇವೆಂದು ನಂಬಿಸಿ ಮಹಿಳೆಯ 5 ಲಕ್ಷದ ಚಿನ್ನ ದೋಚಿದ ಆಸಾಮಿ