ಕೋವಿಡ್ ‌19ನಿಂದ ಪ್ಲಾಸ್ಟಿಕ್‌ ಬಳಕೆಗೆ ಮರು ಜೀವ

ಕೋವಿಡ್ದಿಂದ ಜಗತ್ತಾಗಿದೆ ಪ್ಲಾಸ್ಟಿಕ್‌ ತೊಟ್ಟಿ

Team Udayavani, May 8, 2020, 3:45 PM IST

ಕೋವಿಡ್ ‌19ನಿಂದ ಪ್ಲಾಸ್ಟಿಕ್‌ ಬಳಕೆಗೆ ಮರು ಜೀವ

ವಲಸೆ ಕಾರ್ಮಿಕರನ್ನು ಪರೀಕ್ಷಿಸುತ್ತಿರುವುದು.

ಮಣಿಪಾಲ: ಕೋವಿಡ್ ವೈರಸ್‌ ಅನ್ನು ಜಗತ್ತಿನಿಂದ ಸರ್ವನಾಶ ಮಾಡಲು ಅಂತಾರಾಷ್ಟ್ರೀಯ ಶಕ್ತಿಗಳು ಒಗ್ಗೂಡಿವೆ. ಕೋವಿಡ್ ವೈರಸ್‌ ಸೋಂಕದಂತೆ ಆಸ್ಪತ್ರೆಗಳು ಪಿಪಿಇ ಕಿಟ್‌ಗಳ ಮೊರೆ ಹೋಗಿವೆ. ಸಾರ್ವಜನಿಕರು ಮಾಸ್ಕ್ಗಳು ಮತ್ತು ಗ್ಲೌಸ್‌ಗಳನ್ನು ಬಳಸುತ್ತಿದ್ದಾರೆ. ಕೋವಿಡ್ ವನ್ನು ನಿರ್ನಾಮ ಮಾಡುವ ಸಂಕಲ್ಪಗಳ ನಡುವೆ ಜಗತ್ತಿನಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗುತ್ತಿದೆ. ಕೊರೊನಾ ವಿರುದ್ಧ ಬಳಸಲಾದ ಪಿಪಿಇಗಳು ಮತ್ತು ಗ್ಲೌಸ್‌ಗಳು ತ್ಯಾಜ್ಯವಾಗಿ ಪರಿವರ್ತಿತವಾಗುತ್ತಿವೆ.

ಕೋವಿಡ್ ವೈರಸ್‌ ಬಂದ ಬಳಿಕ ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿ ಹೆಚ್ಚಾಗಿದೆ. ಶಸ್ತ್ರಚಿಕಿತ್ಸೆಯ ಮಾಸ್ಕ್ಗಳು, ಕೈಗವಸುಗಳು, ರಕ್ಷಣಾತ್ಮಕ ಉಪಕರಣಗಳು, ಬ್ಯಾಗ್‌ಗಳು ಪ್ಲಾಸ್ಟಿಕ್‌ ಉತ್ಪನ್ನಗಳ ಹೆಚ್ಚಳಕ್ಕೆ ನಾಂದಿ ಹಾಡಿದೆ. ಹಲವು ದೇಶಗಳು ಇಂಥವುಗಳನ್ನು ಹೆಚ್ಚು ಉತ್ಪಾದಿಸಿ ಭವಿಷ್ಯದ ಸುರಕ್ಷೆಯ ಕಾರಣಕ್ಕೆ ದಾಸ್ತಾನು ಇರಿಸಿಕೊಂಡಿವೆೆ. ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆಗೊಳಿಸಲು ಇಡೀ ವಿಶ್ವವೇ ಪರ್ಯಾಯ ಕ್ರಮದ ಮೊರೆ ಹೋಗಿದ್ದರೆ ಅತ್ತ ಕೋವಿಡ್ ವೈರಸ್‌ ಜಗತ್ತಿನ ಈ ಕ್ರಮವನ್ನು ಬುಡಮೇಲಾಗಿಸಿದೆ. ಪ್ಲಾಸ್ಟಿಕ್‌ ಮಾಲಿನ್ಯವನ್ನು ಕಡಿಮೆ ಮಾಡುವ ಪ್ರಯತ್ನಗಳಿಗೆ ಈ ಸಾಂಕ್ರಾಮಿಕ ಹಲವು ಗಂಭೀರ ಸವಾಲುಗಳನ್ನು ಉಂಟುಮಾಡುತ್ತಿದೆ.

ಮಾಸ್ಕ್ಗಳನ್ನು ಎಸೆಯಲಾಗುತ್ತಿದೆ. ಕೋವಿಡ್ ದಿಂದ ರಕ್ಷಿಸಿಕೊಳ್ಳಲು ಬಳಸ ಲಾದ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಅಲ್ಲಲ್ಲಿ ಎಸೆಯಲಾಗುತ್ತಿದೆ. ಕೆಲವು ದೇಶಗಳಲ್ಲಿ ಬಳಸಲಾದ ಮಾಸ್ಕ್ಗಳನ್ನು ಮನೆಯ ಹೊರಗಡೆ ಎಸೆಯಲಾಗುತ್ತಿದೆಯಂತೆ. ಬಹುತೇಕ ದೇಶಗಳು ಸುರಕ್ಷೆಯ ಹಿತದೃಷ್ಟಿಯಿಂದ ಮಾಸ್ಕ್ ಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಿವೆ. ಸಾರ್ವಜನಿಕ ಆರೋಗ್ಯ ದೃಷ್ಟಿಕೋನದಿಂದ ಈ ಕ್ರಮಗಳು ಮುಖ್ಯವಾಗಿದ್ದರೂ ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡದಿರುವುದು ಈಗ ಸಮಸ್ಯೆಯಾಗಿ ಬದಲಾಗಿದೆ.

ವಾರ್ಷಿಕ 80 ಲಕ್ಷ ಪ್ಲಾಸ್ಟಿಕ್‌ ಸಮುದ್ರಕ್ಕೆ
ಕೆಲವು ಐರೋಪ್ಯ ರಾಷ್ಟ್ರಗಳಲ್ಲಿ 2 ದಿನಗಳಿಂದ ಮಳೆಯಾಗುತ್ತಿದ್ದು, ಅಲ್ಲಲ್ಲಿ ಬಿಸಾಡಿದ ಈ ತ್ಯಾಜ್ಯಗಳು ಒಳಚರಂಡಿ ಸೇರುತ್ತಿವೆ ಎಂದು ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇವು ಅಲ್ಲಿಂದ ಬಳಿಕ ಸಮುದ್ರಕ್ಕೆ ಸೇರಲಿದ್ದು, ಜಾಗತಿಕ ಸಮಸ್ಯೆಯಾಗಿ ಬದಲಾಗಲಿದೆ. ನಾಲ್ಕು ದಶಕಗಳಲ್ಲಿ ಜಾಗತಿಕ ಪ್ಲಾಸ್ಟಿಕ್‌ ಉತ್ಪಾದನೆಯು ನಾಲ್ಕು ಪಟ್ಟು ಹೆಚ್ಚಾಗಿದೆ.
2019ರ ಅಧ್ಯಯನವೊಂದರ ಪ್ರಕಾರ ಇದೇ ಪ್ರವೃತ್ತಿ ಮುಂದುವರಿದರೆ ಪ್ಲಾಸ್ಟಿಕ್‌ಗಳ ತಯಾರಿಕೆಯು 2050ರ ವೇಳೆಗೆ ಶೇ. 15ರಷ್ಟು ಗ್ರೀನ್‌ಹೌಸ್‌ ಗ್ಯಾಸ್‌ ಎಮಿಷನ್‌ಗೆ ಕಾರಣವಾಗಬಹುದು ಎಂದಿದೆ. ಈಗ ಸಾರಿಗೆ ಮೂಲಕ ಉಂಟಾಗುವ ಮಾಲಿನ್ಯದ ಪ್ರಮಾಣವೂ ಅಷ್ಟೇ ಇದೆ. ವಾರ್ಷಿಕವಾಗಿ ಸುಮಾರು 8 ಮಿಲಿಯನ್‌ (80 ಲಕ್ಷ)ಟನ್‌ ಪ್ಲಾಸ್ಟಿಕ್‌ ಪ್ರತಿವರ್ಷ ಸಾಗರ ಸೇರುತ್ತಿವೆ.

ಜಲಚರಗಳಿಗೆ ವಿಷ
ಇದೀಗ ಅವುಗಳ ಸಾಲಿಗೆ ಪಿಪಿಇ ಸೇರಿದ್ದು, ಇದು ಬೇರೆಯದೇ ಆದ ಸಮಸ್ಯೆಗೆ ಕಾರಣವಾಗುವ ಆತಂಕ ಸೃಷ್ಟಿಸಿದೆ. ಪಿಪಿಇಯನ್ನು ತಯಾರಿಸಲು ಬಳಸಲಾದ ವಿಧಾನ ಮತ್ತು ರಚನೆಯು ಸಮುದ್ರದಲ್ಲಿನ ಜೀವಸಂಕುಲಗಳಿಗೆ ಅಪಾಯಕಾರಿಯಾಗಿದೆ. ಪ್ಲಾಸ್ಟಿಕ್‌ ಚೀಲಗಳಂತೆ ಕೈಗವಸುಗಳು ಸಮುದ್ರ ಆಮೆಗಳಿಗೆ ಜೆಲ್ಲಿ ಮೀನು ಅಥವಾ ಇತರ ಆಹಾರಗಳಾಗಿ ಕಾಣಿಸಬಹುದು. ಮಾಸ್ಕ್ಗಳಲ್ಲಿನ ಪಟ್ಟಿಗಳು ಅವುಗಳಿಗೆ ಕಂಟಕವಾಗುವ ಸಾಧ್ಯತೆ ಇದೆ.

ರಾಸಾಯನಿಕಯುಕ್ತ ಪ್ಲಾಸ್ಟಿಕ್‌
ವಿಪರ್ಯಾಸವೆಂದರೆ, ಒಂದು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಹೋರಾಡಲು ನಾವು ಬಳಸುವ ಪ್ಲಾಸ್ಟಿಕ್‌ ದೀರ್ಘಾವಧಿಯ ಮತ್ತೂಂದು ಸಮಸ್ಯೆಗೆ ಕಾರಣವಾಗುತ್ತಿದೆ. ಇಂತಹ ಪ್ಲಾಸ್ಟಿಕ್‌ಗಳು ಮೈಕ್ರೋಪ್ಲಾಸ್ಟಿಕ್‌ನಂತಾಗಿ ನಮ್ಮ ಆಹಾರದ ಜತೆ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತದೆ ಪರಿಣಿತರು. ಈ ಪಿಪಿಇ ಅಥವಾ ಗ್ಲೌಸ್‌ಗಳನ್ನು ತಯಾರಿಸುವ ಹಂತದಲ್ಲಿ ಹಲವು ರಾಸಾಯನಿಕಗಳನ್ನು ಬಳಸ‌ಲಾಗುತ್ತದೆ. ಪಿಪಿಇಗಳನ್ನು ಬಳಸಿ ಬಿಸಾಡುವ ಬದಲು ಅವುಗಳಿಗೆ ಸೋಂಕು ನಿವಾರಕಗಳನ್ನು ಸಿಂಪಡಿಸಿ ಕೆಲವು ದೇಶಗಳಲ್ಲಿ ಬಳಸಲಾಗುತ್ತಿದೆ. ಆದರೆ ಅಪಾಯದ ಸಂಗತಿ ಎಂದರೆ ಕೋವಿಡ್‌ -19 ಇತರ ಮೇಲ್ಮೆ„ಗಳಿಗಿಂತ ಪ್ಲಾಸ್ಟಿಕ್‌ನಲ್ಲಿ ಹೆಚ್ಚು ಕಾಲ ಬದುಕುತ್ತದೆ. ಏಕ-ಬಳಕೆಯ ಪ್ಲಾಸ್ಟಿಕ್‌ಗಳನ್ನು ಕೆಲವು ದೇಶಗಳಲ್ಲಿ ನಿಷೇಧಿಸಲಾಗಿದೆ. ಆದರೆ ಆ ರಾಷ್ಟ್ರಗಳಿಗೆ ಈಗ ಕೊರೊನಾ ವಿರುದ್ಧ ಬಳಸಲಾದ ತ್ಯಾಜ್ಯಗಳು ಹೆಚ್ಚಾಗಿವೆ.

ಟಾಪ್ ನ್ಯೂಸ್

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.