ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಇದು 1918ರ ಮಾಸ್ಕ್ ನ ಕತೆ

Team Udayavani, Apr 8, 2020, 3:30 PM IST

ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಮಣಿಪಾಲ: ಕೋವಿಡ್-19 ವೈರಸ್‌ ಸಾಂಕ್ರಾಮಿಕ ರೋಗ ಏಷ್ಯಾವನ್ನು ಅಪ್ಪಳಿಸಿದಾಗ ಈ ಭಾಗದ ಜನರು ಮುಖವಾಡಗಳನ್ನು ಧರಿಸಿ ಓಡಾಡಲು ಪ್ರಾರಂಭಿಸಿದರು. ತೈವಾನ್‌ ಮತ್ತು ಫಿಲಿಪೈನ್ಸ್‌ನಂತಹ ಕೆಲವು ರಾಷ್ಟ್ರಗಳು ಅವುಗಳನ್ನು ಕಡ್ಡಾಯಗೊಳಿಸಿದವು. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಮುಖವಾಡ ಅಳವಡಿಕೆ ತುಂಬಾ ನಿಧಾನವಾಗಿದೆ.

ಉದಾಹರಣೆಗೆ, ಇಂಗ್ಲೆಂಡ್‌ನ‌ ಮುಖ್ಯ ವೈದ್ಯಾಧಿಕಾರಿ ಕ್ರಿಸ್‌ ವಿಟ್ಟಿ ಅವರು ಮುಖವಾಡ ಧರಿಸುವುದು ಅನಗತ್ಯ ಎಂಬ ಹೇಳಿಕೆ ನೀಡಿದ್ದು, ಅಲ್ಲಿನ ಜನರು ಈ ಕುರಿತು ನಿರ್ಲಕ್ಷ್ಯ ತಾಳಲು ಕಾರಣವಾದರು. ಬಳಿಕ ಬ್ರಿಟನ್‌ ಜನರೂ ಎಚ್ಚೆತ್ತುಕೊಂಡಿತು. ಈಗ ಎಲ್ಲೆಡೆ ಮುಖವಾಡಗಳು ರಾರಾಜಿಸುತ್ತಿವೆ.

1918ರಲ್ಲಿ ಅಪ್ಪಳಿಸಿದ ಪ್ಲ್ಯೂ ಸಮಯದಲ್ಲಿ ಮಾಸ್ಕ್ ಪರಿಕಲ್ಪನೆ ಆರಂಭದಲ್ಲಿ ಇರಲಿಲ್ಲ. ಜಗತ್ತಿನ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಎಂದರೆ ಸುಮಾರು 500 ಮಿಲಿಯನ್‌ ಜನರಿಗೆ ಸೋಂಕು ತಗಲಿತ್ತು. ಸುಮಾರು 50 ಮಿಲಿಯನ್‌ ಸಾವುಗಳಿಗೆ ಕಾರಣವಾಗಿತ್ತು. ಸುಮಾರು ಅರ್ಧ ಮಿಲಿಯನ್‌ ಸೋಂಕು ಅಮೆರಿಕದಲ್ಲೇ ಘಟಿಸಿತ್ತು.ಈಗ ಜಗತ್ತನ್ನು ನಿಬ್ಬೆರಗಾಗಿಸುವ ಕೋವಿಡ್‌ 19 ಬಂದಿದೆ. ಈ ಎರಡು ಸಾಂಕ್ರಾಮಿಕ ರೋಗಗಳ ನಡುವೆ ತುಂಬಾ ಸಾಮ್ಯತೆ ಇದೆ.

1918ರಲ್ಲಿ ಜಗತ್ತನ್ನು ವ್ಯಾಪಿಸಿ ಅಪಾರ ಪ್ರಮಾಣದ ಸಾವಿಗೆ ಕಾರಣವಾದದ್ದು ಸ್ಪಾನೀಶ್‌ ಪ್ಲ್ಯೂ ಎಂದು ಹೆಸರಿಡಲಾಗಿದೆ. ಆದರೆ ಇದರ ವಿರುದ್ಧ ಹೋರಾಡಲು ಹಲವು ಕಾರಣಕ್ಕೆ ಜಗತ್ತಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಸಾವಿನ ಸಂಖ್ಯೆಯೂ ಹೆಚ್ಚಿತ್ತು.. “ಸ್ಪಾನೀಶ್‌ ಫ್ಲೂ’ ಎಂದು ಒಂದು ದೇಶದ ವೈರಸ್‌ನ ಹೆಸರನ್ನು ಇದಕ್ಕೆ ಇಡಲಾಗಿತ್ತು. ಮೊದಲನೆಯ ಮಹಾಯುದ್ಧದ ಸಂದರ್ಭವಾದ ಕಾರಣ ಸುಲಭವಾಗಿ ಪಸರಿಸಿತು ಎನ್ನಲಾಗುತ್ತಿದೆ. ಸೈನಿಕರಲ್ಲಿ ಈ ಜ್ವರವನ್ನು ಕಂಡು ಬಂದಿತ್ತು. ಗೋದಾಮುಗಳನ್ನು ಕ್ವಾರಂಟೈನ್‌ ಆಸ್ಪತ್ರೆಗಳಾಗಿಸಲಾಯಿತು. ಈಗಿನಂತೆ ಪ್ರತ್ಯೇಕ ವ್ಯವಸ್ಥೆ ಅಂದು ಇರಲಿಲ್ಲ. ಯಾಕೆಂದರೆ ಅಂದು ಸುರಕ್ಷೆ ಎಂಬುದು ಸವಾಲಾಗಿತ್ತು. ಇಂದಿನಂತೆ ಸುಧಾರಿತ ವಿಜ್ಞಾನವೂ ಇರಲಿಲ್ಲ.

4,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವುದರೊಂದಿಗೆ ಕಠಿನ ಕ್ರಮ ಕೈಗೊ ಳ್ಳ ಬೇಕಿದೆ ಎಂಬುದನ್ನು ಅರಿತ ನಗರಾಡಳಿತವು, 1918ರ ಅಕ್ಟೋಬರ್‌ 24ರಂದು ಇನ್‌ಪ್ಲ್ಯೂಯೆಂಜಾ ಮಾಸ್ಕ್ ಆರ್ಡಿನೆನ್ಸ್‌ (ಸುಗ್ರೀವಾಜ್ಞೆ) ಅನ್ನು ಜಾರಿ ಗೊಳಿಸಿತು. ಅದಾದ ಬಳಿಕ ಸಾರ್ವಜನಿಕವಾಗಿ ಫೇಸ್‌ ಮಾಸ್ಕ್ ಧರಿ ಸುವುದು ಅಮೆರಿಕದಲ್ಲಿ ಮೊದಲ ಬಾರಿಗೆ ಕಡ್ಡಾಯವಾಯಿತು.

ಅಭಿಯಾನ
ಸ್ಯಾನ್‌ ಫ್ರಾನ್ಸಿಸ್ಕೊ ​​ಸಾರ್ವಜನಿಕವಾಗಿ ಮುಖ ವಾಡಗಳನ್ನು ಕಡ್ಡಾಯಗೊಳಿಸಿದ ಅನಂತರ, ಜಾಗೃತಿ ಅಭಿಯಾನ ಪ್ರಾರಂಭವಾಯಿತು. ನಗರದ ಮೇಯರ್‌, ಆರೋಗ್ಯ ಮಂಡಳಿಯ ಸದಸ್ಯ ರೊಂದಿಗೆ, ರೆಡ್‌ ಕ್ರಾಸ್‌ ಪ್ರಚಾರ ಮಾಡಿತು. “ಮುಖ ವಾಡ ಧರಿಸಿ ಮತ್ತು ನಿಮ್ಮ ಜೀವನವನ್ನು ಉಳಿಸಿಕೊಳ್ಳಿ! ಮುಖವಾಡವು ಇನ್‌ಪ್ಲ್ಯೂಯೆಂಜಾ ವಿರುದ್ಧ ಶೇ. 99ರಷ್ಟು ಕೆಲಸ ಮಾಡುತ್ತದೆ. (Wear a Mask and Save Your Life! A Mask is 99% Proof Against Influenza.) ಎಂಬ ಅಭಿಯಾನ ಯಶಸ್ವಿಯಾಯಿತು. ಮುಖವಾಡವಿಲ್ಲದೆ ಹೊರಗೆ ತಿರುಗುವುದು ಯಾರಿಗಾದರೂ ಕಂಡು ಬಂದರೆ ಜೈಲು ಶಿಕ್ಷೆ ವಿಧಿಸಬಹುದು ಎಂಬ ಕಾನೂನು ಜಾರಿಯಲ್ಲಿತ್ತು. ಕ್ಯಾಲಿಫೋರ್ನಿಯಾ, ಸಾಂತಾ ಕ್ರೂಜ್‌ ಮತ್ತು ಲಾಸ್‌ ಏಂಜಲೀಸ್‌ ಸೇರಿದಂತೆ ಹಲವು ನಗರಗಳು ಇದನ್ನು ಬೆಂಬಲಿಸಿದವು.

ಕೇವಲ ಅಮೆರಿಕವಲ್ಲ
ಇನ್ನೊಂದು ಬದಿಯಲ್ಲಿ ಅಟ್ಲಾಂಟಿಕ್‌ನಲ್ಲಿಯೂ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಪ್ಯಾರಸ್‌ ನ ಅಕಾಡೆಮಿ ಡಿ ಮೆಡಿಸಿನ್‌ ಸಮಿತಿಯು 1918 ರ ನವೆಂಬರ್‌ಆರಂಭದಲ್ಲಿ ಫ್ರೆಂಚ್‌ ಕ್ಯಾಪಿಟಲ್‌ನಲ್ಲಿ ಫೇಸ್‌ ಮಾಸ್ಕ್ ಧರಿಸಲು ಶಿಫಾರಸು ಮಾಡಿತು.

ಇತಿಹಾಸವು ಪುನರಾವರ್ತನೆ
ಲಾಸ್‌ ಏಂಜಲೀಸ್‌ನ ಮೇಯರ್‌ ಸಾರ್ವಜನಿಕ ಶಾಪಿಂಗ್‌ ಗೆ ಹೋಗುವಾಗ ಮುಖವಾಡಗಳನ್ನು ಧರಿಸಿ ಎಂದು ಜನರಲ್ಲಿ ಮನವಿ ಮಾಡಿತು. ಯುರೋಪ್‌ ಮತ್ತು ಉತ್ತರ ಅಮೆರಿಕದ ಜನರು ಇದನ್ನು ಶ್ರದ್ಧೆಯಿಂದ ತಮ್ಮಲ್ಲೂ ಪಾಲಿಸಿದರು. ಚಿಕಾಗೋದ ಪ್ರೊಫಿಲ್ಯಾಕ್ಟೊ ಮ್ಯಾನ್ಯೂಫ್ಯಾಕ್ಚರಿಂಗ್‌ ಕಂಪನಿ ಮಾತ್ರ ಆಗ ಮಾಸ್ಕ್ ತಯಾರಿಸುತ್ತಿತ್ತು. ಅದೂ ಅಲ್ಪ ಸಂಖ್ಯೆಯಲ್ಲಿ ಮಾತ್ರ. ಬೇಡಿಕೆ ಹೆಚ್ಚುತ್ತಾ ಹೋದಂತೆ ಅದಕ್ಕೆ ತಕ್ಕಂತೆ ಪೂರೈಸಲು ಸಾಧ್ಯವಾಗಲಿಲ್ಲ. ಬಳಿಕ ಮನೆಗಳಲ್ಲಿ ಜನರು ಉತ್ಪಾದಿಸ ತೊಡಗಿದರು.

ಅಮೆರಿಕದ ಕೆಲವು ಭಾಗಗಳಲ್ಲಿ, ಚರ್ಚುಗಳು, ಸಮುದಾಯ ಗುಂಪುಗಳು ಮತ್ತು ರೆಡ್‌ಕ್ರಾಸ್‌ ಸಂಸ್ಥೆ ಗಳು ಒಗ್ಗೂಡಿ, ಬೇಡಿಕೆಯನ್ನು ತಕ್ಕಮಟ್ಟಿಗೆ ನೀಗಿ ಸು ವಷ್ಟು ಮಾಸ್ಕ್ ಗಳು ಉತ್ಪಾದನೆಯಾದವು. ಪತ್ರಿಕೆ ಗಳಲ್ಲಿ ಅಂದು ಅದೇ ಸುದ್ದಿಯಾಗಿತ್ತು. ಸೆಪ್ಟಂಬರ್‌26, ವಾಷಿಂಗ್ಟನ್‌ ಟೈಮ್ಸ… ಪತ್ರಿಕೆ “ಸ್ಪ್ಯಾನಿಷ್‌ ಜ್ವರ” ತಡೆಯಲು ಯುಎಸ್‌ ಸೈನಿಕರಿಗೆ 45,000 ಮುಖ ವಾಡ  ಒದಗಿಸಲಾಗಿದೆ ಎಂದು ವರದಿ ಮಾಡಿತ್ತು.

ಪೊಲೀಸ್‌ ಮಾಸ್ಕ್
ಮಾಸ್ಕ್ ಧರಿಸುವ ಕಾನೂನುಗಳಿಗಿಂತ ಜಾಗೃತಿ ಹಾಗೂ ಸ್ವ ಅರಿವು ಹೆಚ್ಚಾಗಿ ಕೆಲಸ ಮಾಡಿತು. ಅಂದಿನ ಕಾಲದಲ್ಲಿ ಜನರು ಈ ಕುರಿತು ಸಾಕ್ಷರರಾಗಿದ್ದರು. ಸಾರ್ವಜನಿಕರೇ ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸಿ ಬೆಂಬಲಿಸಿದ್ದರು.

ಟಾಪ್ ನ್ಯೂಸ್

Jacqueline Fernandez

ವಂಚನೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್ ಗೆ ದೇಶ ತೊರೆಯದಂತೆ ತಡೆದ ಅಧಿಕಾರಿಗಳು!

rwytju11111111111

ಸೋಮವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

ವರ್ಗಕ್ಕೆ ಶಿಫಾರಸು ತಂದರೆ ಎಚ್ಚರಿಕೆ! ಕೇಂದ್ರ ಸರಕಾರದಿಂದ ಸುತ್ತೋಲೆ ಜಾರಿ

ವರ್ಗಕ್ಕೆ ಶಿಫಾರಸು ತಂದರೆ ಎಚ್ಚರಿಕೆ! ಕೇಂದ್ರ ಸರಕಾರದಿಂದ ಸುತ್ತೋಲೆ ಜಾರಿ

ಎಚ್ಚರ ತಪ್ಪದಿರಿ; ಹೆಚ್ಚುತ್ತಿವೆ ಕೋವಿಡ್‌ ಸೋಂಕು ಪ್ರಕರಣಗಳು

ಎಚ್ಚರ ತಪ್ಪದಿರಿ; ಹೆಚ್ಚುತ್ತಿವೆ ಕೋವಿಡ್‌ ಸೋಂಕು ಪ್ರಕರಣಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ವರ್ಗಕ್ಕೆ ಶಿಫಾರಸು ತಂದರೆ ಎಚ್ಚರಿಕೆ! ಕೇಂದ್ರ ಸರಕಾರದಿಂದ ಸುತ್ತೋಲೆ ಜಾರಿ

ವರ್ಗಕ್ಕೆ ಶಿಫಾರಸು ತಂದರೆ ಎಚ್ಚರಿಕೆ! ಕೇಂದ್ರ ಸರಕಾರದಿಂದ ಸುತ್ತೋಲೆ ಜಾರಿ

ಅರ್ಧ ಜನಸಂಖ್ಯೆಗೆ ಲಸಿಕೆ; 127.61 ಕೋಟಿ ಡೋಸ್‌ ಲಸಿಕೆ; ಕೇಂದ್ರ ಸರಕಾರ ಘೋಷಣೆ

ಅರ್ಧ ಜನಸಂಖ್ಯೆಗೆ ಲಸಿಕೆ; 127.61 ಕೋಟಿ ಡೋಸ್‌ ಲಸಿಕೆ; ಕೇಂದ್ರ ಸರಕಾರ ಘೋಷಣೆ

ಹೆದ್ದಾರಿ ಪ್ರಾಧಿಕಾರಕ್ಕೆ ಹಿರಿಯ ಐಎಎಸ್‌ ಅಧಿಕಾರಿ ಅಲಕಾ ಉಪಾಧ್ಯಾಯ ಅಧ್ಯಕ್ಷೆ

ಹೆದ್ದಾರಿ ಪ್ರಾಧಿಕಾರಕ್ಕೆ ಹಿರಿಯ ಐಎಎಸ್‌ ಅಧಿಕಾರಿ ಅಲಕಾ ಉಪಾಧ್ಯಾಯ ಅಧ್ಯಕ್ಷೆ

ಇಂದು ಭಾರತಕ್ಕೆ ರಷ್ಯಾ ಅಧ್ಯಕ್ಷ  ಪುತಿನ್‌ ಭೇಟಿ; ಒಂದೇ ದಿನದಲ್ಲಿ ಹಲವು ಒಪ್ಪಂದ ಸಾಧ್ಯತೆ

ಇಂದು ಭಾರತಕ್ಕೆ ರಷ್ಯಾ ಅಧ್ಯಕ್ಷ  ಪುತಿನ್‌ ಭೇಟಿ; ಒಂದೇ ದಿನದಲ್ಲಿ ಹಲವು ಒಪ್ಪಂದ ಸಾಧ್ಯತೆ

MUST WATCH

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಹೊಸ ಸೇರ್ಪಡೆ

Jacqueline Fernandez

ವಂಚನೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್ ಗೆ ದೇಶ ತೊರೆಯದಂತೆ ತಡೆದ ಅಧಿಕಾರಿಗಳು!

rwytju11111111111

ಸೋಮವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.