
ಉಡುಪಿ ಜಿಲ್ಲೆ: 53 ವರದಿಗಳು ನೆಗೆಟಿವ್
6 ಮಂದಿ ಐಸೊಲೇಶನ್ ವಾರ್ಡ್‌ಗೆ ; ಮೊದಲ ಸೋಂಕು ಪೀಡಿತ ಚೇತರಿಕೆ
Team Udayavani, Apr 9, 2020, 12:02 PM IST

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬುಧವಾರ ಆರು ಮಂದಿ ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಈ ಪೈಕಿ ಓರ್ವ ಪುರುಷ ಹಾಗೂ ಮೂವರು ಮಹಿಳೆಯರಿಗೆ ತೀವ್ರ ಉಸಿರಾಟದ ಸಮಸ್ಯೆ ಇದೆ. ಇಬ್ಬರು ಪುರುಷರು ಕೋವಿಡ್ 19 ಶಂಕಿತರಾಗಿದ್ದಾರೆ. ಈ ಹಿಂದೆ ಕಳುಹಿಸಲಾದ 274 ವರದಿಗಳಲ್ಲಿ 53 ವರದಿಗಳು ನೆಗೆಟಿವ್ ಬಂದಿವೆ. 14 ಮಂದಿಯ ವರದಿ ಬರಲು ಬಾಕಿಯಿದೆ.
ಜಿಲ್ಲೆಯ ಐಸೊಲೇಶನ್ ವಾರ್ಡ್‌ನಲ್ಲಿ 16 ಮಂದಿ ಇದ್ದಾರೆ. ಬುಧವಾರ ಆರು ಮಂದಿ ವಾರ್ಡ್‌ನಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ 151 ಮಂದಿ ಮಂದಿ ಬಿಡುಗಡೆಗೊಂಡಿದ್ದಾರೆ.
ಬುಧವಾರ 28 ಮಂದಿ ನೋಂದಣಿ ಮಾಡಿಕೊಂಡಿದ್ದು, ಇದುವರೆಗೆ ಒಟ್ಟು ನೋಂದಣಿ ಮಾಡಿಕೊಂಡವರು 2,058 ಮಂದಿ. ಬುಧವಾರ 67 ಮಂದಿ 28 ದಿನಗಳ ನಿಗಾ ಹಾಗೂ 19 ಮಂದಿ 14 ದಿನಗಳ ನಿಗಾ ಪೂರೈಸಿದ್ದಾರೆ. ಒಟ್ಟು 152 ಮಂದಿ ಹೋಂ ಕ್ವಾರಂಟೈನ್‌ನಲ್ಲಿ, 13 ಮಂದಿ ಹಾಸ್ಟಿಟಲ್ ಕ್ವಾರಂಟೈನ್‌ನಲ್ಲಿದ್ದಾರೆ. ಬುಧವಾರ 6 ಮಂದಿ ಐಸೊಲೇಶನ್ ವಾರ್ಡ್‌ನಿಂದ ಬಿಡುಗಡೆ ಹೊಂದಿದ್ದಾರೆ.
ಬುಧವಾರ ತೀವ್ರ ಉಸಿರಾಟದ ಸಮಸ್ಯೆ ಇರುವ ಒಬ್ಬರು, ಕೋವಿಡ್ 19 ಶಂಕಿತ ಇಬ್ಬರು ಸಹಿತ ಒಟ್ಟು 3 ಮಂದಿಯ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಮೊದಲ ವರದಿ ನೆಗೆಟಿವ್
ಜಿಲ್ಲೆಯಲ್ಲಿ ಮೊದಲ ಪಾಸಿಟಿವ್ ಪ್ರಕರಣ ಕಂಡುಬಂದ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾರೆ. ಚಿಕಿತ್ಸೆಯ ಬಳಿಕ ಎ. 6ರಂದು ಕಳುಹಿಸಿದ ಆತನ ಗಂಟಲ ದ್ರವದ ಮಾದರಿಯ ಫಲಿತಾಂಶ ಬುಧವಾರ ತಲುಪಿದ್ದು ಮೊದಲ ವರದಿ ಬಂದಿದ್ದು ನೆಗೆಟಿವ್ ಆಗಿದೆ. ಬುಧವಾರ ಮತ್ತೆ ಮಾದರಿಯನ್ನು ಕಳುಹಿಸಲಾಗಿದ್ದು ಗುರುವಾರ ಬರುವ ಸಾಧ್ಯತೆಗಳಿವೆ. ಎರಡನೇ ವರದಿಯೂ ನೆಗೆಟಿವ್ ಕಂಡುಬಂದರೆ 14 ದಿನಗಳ ಅನಂತರ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Karnataka Bandh; ‘ನೀರು ನಿಲ್ಲಿಸದಿದ್ದರೆ ಡ್ಯಾಂ ಒಡೆಯುತ್ತೇವೆ’; ರಾಮನಗರದಲ್ಲಿ ಪ್ರತಿಭಟನೆ

Karnataka Bandh; ಚಿಕ್ಕಮಗಳೂರಿನಲ್ಲಿ ವ್ಯಾಪಕ ಬೆಂಬಲ; ಪ್ರತಿಕೃತಿ ದಹಿಸಿ ಪ್ರತಿಭಟನೆ

Canada; ಭಾರತದೊಂದಿಗೆ ಸ್ನೇಹಕ್ಕೆ ಸದಾ ಬದ್ಧ: ಬಿಕ್ಕಟ್ಟಿನ ನಡುವೆ ಟ್ರುಡೊ

Baana Daariyalli movie review; ಗಣೇಶ್- ಗುಬ್ಬಿ ಚಿತ್ರ ಹೇಗಿದೆ?

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ