ಅಮೆರಿಕ: ಮೇ ನಂತರ ಇದೇ ಮೊದಲ ಬಾರಿಗೆ ಕೋವಿಡ್ ಗೆ 1,200 ಬಲಿ, ಒಟ್ಟು 43 ಲಕ್ಷ ಜನರಿಗೆ ಸೋಂಕು
Team Udayavani, Jul 29, 2020, 8:43 AM IST
ವಾಷಿಂಗ್ಟನ್: ಮೇ ತಿಂಗಳ ನಂತರ ಅಮೆರಿಕಾದಲ್ಲಿ ಕಳೆದ ಒಂದೇ ದಿನ 1,200 ಕ್ಕಿಂತ ಹೆಚ್ಚು ಜನರು ಕೋವಿಡ್ ವೈರಸ್ ಗೆ ಸಾವನ್ನಪ್ಪುವ ಮೂಲಕ ದಾಖಲೆ ಸೃಷ್ಟಿಯಾಗಿದೆ.
ಜುಲೈ 28ರ ಮಂಗಳವಾರದಂದು ಕ್ಯಾಲಿಫೋರ್ನಿಯಾ, ಫ್ಲೋರಿಡಾ ಸೇರಿದಂತೆ ಒಟ್ಟಾರೆಯಾಗಿ ಹಲವಾರು ರಾಜ್ಯಗಳಲ್ಲಿ 1,227 ಜನರು ಮೃತರಾಗಿದ್ದಾರೆ. ಆರ್ಕಾನ್ಸಸ್ ಮೊಂಟೇನಾ, ಓರಿಜನ್ ಮುಂತಾದ ಕಡೆ ಕೂಡ ಸಾವು ನೋವುಗಳ ಪ್ರಮಾಣ ದಾಖಲೆಯಲ್ಲಿ ಏರಿಕೆಯಾಗಿದೆ.
ಜುಲೈ ತಿಂಗಳಿನಲ್ಲಿ ಆರಿಜೋನಾ, ಕ್ಯಾಲಿಫೋರ್ನಿಯಾ, ಫ್ಲೋರಿಡಾ ಮತ್ತು ಟೆಕ್ಸಾಸ್ನಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗಿದೆ. ಇದೀಗ ವೈರಸ್ ಹರಡುವುದನ್ನು ನಿಧಾನಗೊಳಿಸಲು ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಲಾಕ್ಡೌನ್ ಗಳಿಂದ ನಿರ್ಬಂಧಿಸಲ್ಪಟ್ಟ ಆರ್ಥಿಕತೆಗಳನ್ನು ಪುನಃ ತೆರೆಯಲು ರಾಜ್ಯಗಳು ಒತ್ತಾಯಿಸಿದೆ.
ಅಮೆರಿಕಾದಲ್ಲಿ ಪ್ರತಿನಿತ್ಯ 60 ಸಾವಿರಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು ಈವರೆಗೂ ಸುಮಾರು 1.50 ಲಕ್ಷ ಮಂದಿ ವೈರಸ್ ಕಾರಣದಿಂದ ಸಾವನ್ನಪ್ಪಿದ್ದಾರೆ. ಮಾತ್ರವಲ್ಲದೆ 4.38 ಮಿಲಿಯನ್ ಜನರು ಸೊಂಕಿಗೆ ತುತ್ತಾಗಿದ್ದಾರೆ. ಮಾತ್ರವಲ್ಲದೆ ಸೋಂಕಿನಿಂದ 13,55,363 ಜನರು ವೈರಾಣುವಿನಿಂದ ಗುಣಮುಖರಾಗಿದ್ದಾರೆ ಎಂದು ಜಾನ್ ಹಾಫ್ ಕಿನ್ಸ್ ವಿಶ್ವವಿದ್ಯಾನಿಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು