ಅಮೆರಿಕದಲ್ಲಿ ಮುಂದುವರಿದ ಕೋವಿಡ್-19 ಆರ್ಭಟ: ಒಂದೇ ದಿನ 1,997 ಜನ ಬಲಿ
Team Udayavani, Apr 20, 2020, 8:50 AM IST
ವಾಷಿಂಗ್ಟನ್: ಅಮೆರಿಕಾದಲ್ಲಿ ಕೋವಿಡ್ -19 ಮರಣ ಮೃದಂಗ ಮುಂದುವರೆದಿದ್ದು, ಭಾನುವಾರ 1,997 ಜನರು ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಆ ಮೂಲಕ ಒಟ್ಟಾರೆ ಬಲಿಯಾದವರ ಸಂಖ್ಯೆ 40,661ಕ್ಕೆ ಏರಿಕೆಯಾಗಿದೆ.
ವಿಶ್ವದಲ್ಲಿ ಭೀತಿಯನ್ನು ಸೃಷ್ಟಿಸಿರುವ ಈ ಮಾರಣಾಂತಿಕ ವೈರಸ್ ಗೆ ವಿಶ್ವದ ದೊಡ್ಡಣ್ಣ ತತ್ತರಿಸಿ ಹೋಗಿದೆ. ಸೋಂಕಿತರ ಸಂಖ್ಯೆ ಕೂಡ ದುಪ್ಪಟ್ಟಾಗುವ ಲಕ್ಷಣಗಳು ಗೋಚರಿಸುತ್ತಿದ್ದು ಈಗಾಗಲೇ 7,64,265 ಮಂದಿ ವೈರಾಣುವಿನಿಂದ ಬಳಲುತ್ತಿದ್ದಾರೆ. ಈ ಮೂಲಕ ಜಗತ್ತಿನಲ್ಲೇ ಅತೀ ಹೆಚ್ಚು ಕೋವಿಡ್ 19 ಪ್ರಕರಣಗಳನ್ನು ಹೊಂದಿರುವ ದೇಶ ಎಂಬ ಕುಖ್ಯಾತಿಗೆ ಅಮೆರಿಕ ಪಾತ್ರವಾಗಿದೆ.
ಇಟಲಿ ಮತ್ತು ಫ್ರಾನ್ಸ್ನಲ್ಲೂ ಸಹ ಕೋವಿಡ್ 19 ಮರಣ ಮೃದಂಗ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.ಜಗತ್ತಿನಾದ್ಯಂತ ಕೋವಿಡ್ 19 ವೈರಸ್ಗೆ 1,65,069 ಜನರು ಬಲಿಯಾಗಿದ್ದು 24,07,339 ಕ್ಕಿಂತ ಹೆಚ್ಚು ಜನರು ವೈರಾಣುವಿಗೆ ತುತ್ತಾಗಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!