ಮುಂಬೈ: ಧಾರಾವಿ ಕೊಳೆಗೇರಿಯಲ್ಲಿ ಸೋಂಕಿತರ ಸಂಖ್ಯೆ 1000, 40 ಮಂದಿ ಸಾವು
ಮಂಗಳವಾರ ಧಾರಾವಿಯಲ್ಲಿ 46 ಹೊಸ ಪ್ರಕರಣಗಳು ಪತ್ತೆಯಾಗಿತ್ತು, ಒಂದು ಸಾವು ಸಂಭವಿಸಿತ್ತು.
Team Udayavani, May 13, 2020, 8:25 PM IST
Representative Image
ಮುಂಬೈ:ಮುಂಬೈಯ ಧಾರಾವಿಯಲ್ಲಿ ಬುಧವಾರ 66 ಕೋವಿಡ್ 19 ವೈರಸ್ ಪ್ರಕರಣ ಪತ್ತೆಯಾಗುವ ಮೂಲಕ ಏಷ್ಯಾದ ಅತೀ ದೊಡ್ಡ ಕೊಳೆಗೇರಿಯಾದ ಧಾರಾವಿಯಲ್ಲಿ ಕೋವಿಡ್ ಸೋಂಕು ಪೀಡಿತರ ಸಂಖ್ಯೆ ಒಂದು ಸಾವಿರಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.
ಮಹಾರಾಷ್ಟ್ರ ಆರೋಗ್ಯ ಇಲಾಖೆ ಡಾಟಾ ಪ್ರಕಾರ, ಧಾರಾವಿಯಲ್ಲಿ 1,028 ಕೋವಿಡ್ 19 ವೈರಸ್ ಪ್ರಕರಣ ವರದಿಯಾಗಿದ್ದು, ಸಾವಿನ ಸಂಖ್ಯೆ 40ಕ್ಕೆ ತಲುಪಿದೆ ಎಂದು ವರದಿ ವಿವರಿಸಿದೆ.
ಮಂಗಳವಾರ ಧಾರಾವಿಯಲ್ಲಿ 46 ಹೊಸ ಪ್ರಕರಣಗಳು ಪತ್ತೆಯಾಗಿತ್ತು, ಒಂದು ಸಾವು ಸಂಭವಿಸಿತ್ತು. ಇದರೊಂದಿಗೆ ಧಾರಾವಿಯಲ್ಲಿ ಸೋಂಕು ಪೀಡಿತರ ಸಂಖ್ಯೆ 962ಕ್ಕೆ ಏರಿತ್ತು. ಸಾವಿನ ಸಂಖ್ಯೆ 31ಕ್ಕೆ ತಲುಪಿತ್ತು ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮಾಟುಂಗಾ ಕಾರ್ಮಿಕರ ಕ್ಯಾಂಪ್, 90 ಅಡಿ ರಸ್ತೆ, 60 ಅಡಿ ರಸ್ತೆ, ಕುಂಭಾರ್ವಾಡಾ, ಟ್ರಾನ್ಸಿಟ್ ಕ್ಯಾಂಪ್, ಕ್ರಾಸ್ ರೋಡ್, ನಾಯಕ್ ನಗರ ಹಾಗೂ ಧಾರಾವಿಯ ಇತರ ಪ್ರದೇಶಗಳಲ್ಲಿ ಪ್ರಕರಣ ವರದಿಯಾಗಿದೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್