ವೃದ್ಧರು-ಅಂಗವಿಕಲರಿಗೆ ನೇರ ಅವಕಾಶ

ಸಂಜೆ ನಾಲ್ಕರ ನಂತರ ತುರುಸಿನ ಮತದಾನ•ಚುನಾವಣಾ ಸಿಬ್ಬಂದಿಗೆ ಸಕಲ ಸೌಕರ್ಯ

Team Udayavani, Apr 24, 2019, 4:59 PM IST

ಯಲ್ಲಾಪುರ: ತಾಲೂಕಿನ ಚಂದ್ಗುಳಿ ಗ್ರಾಪಂ ವ್ಯಾಪ್ತಿಯ ಹುತ್ಕಂಡ ಮತಗಟ್ಟೆಯಲ್ಲಿ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸಿದರು.

ಯಲ್ಲಾಪುರ: ಲೋಕಸಭಾ ಚುನಾವಣೆ ತಾಲೂಕಿನಲ್ಲಿ ಅತ್ಯಂತ ಶಾಂತಿಯುತವಾಗಿ ಹಾಗೂ ಯಾವುದೇ ಅಡಚಣೆಗಳಲಿಲ್ಲದೇ ನಡೆಯಿತು. ಎಲ್ಲಿಯೂ ಮತಯಂತ್ರ ದೋಷ ಪ್ರಕರಣ ವರದಿಯಾಗಿಲ್ಲ. ಯಾವುದೇ ಅಹಿತಕರ ಘಟನೆಗಳು ನಡೆಯದೇ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯಿತು.

ಮತದಾನ ಬೆಳಗ್ಗೆ ಪ್ರಾರಂಭದಿಂದ ಮಧ್ಯಾಹ್ನ 11ರ ವರೆಗೆ ಸಾಲಿನಲ್ಲಿ ಗಂಟೆಗಟ್ಟಲೆ ಕಾಲ ನಿಂತು ಮತ ಚಲಾಯಿಸಿದರು. 11ರ ಹೊತ್ತಿಗೆ ಕೇವಲ ಶೇ.13.42 ರಷ್ಟು ಮತದಾನವಾಯಿತು. 12ರ ನಂತರದ ಸುಡುಬಿಸಿಲಿನಲ್ಲಿ ಮತದಾರರು ಮತಗಟ್ಟೆಗೆ ತೀರಾ ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರು. ಆದರೆ ಸಾಯಂಕಾಲ ನಾಲ್ಕು ಗಂಟೆಯ ಹೊತ್ತಿಗೆ ಸ್ವಲ್ಪ ತುರುಸಿನ ಮತದಾನ ಕಂಡುಬಂತು.

ಮತಗಟ್ಟೆಗಳಲ್ಲಿ ವೃದ್ಧರಿಗೆ, ಅಂಗವಿಕಲರಿಗೆ ಅಶಕ್ತರಿಗೆ ನೇರವಾಗಿಯೆ ಮತಗಟ್ಟೆಯೊಳಗೆ ಬಿಟ್ಟು ಮತದಾನ ಅವಕಾಶ ಕಲ್ಪಿಸಿದ್ದು ಕಂಡುಬಂತು. ವ್ಹೀಲ್ಚೇರ್‌ನ್ನು ಒದಗಿಸಿದ್ದರಿಂದ ಅಂಗವಿಕಲರಿಗೆ ಅನುಕೂಲವಾಯಿತು.

ಅಬ್ಬರಿಸಿದ ಗುಡುಗು, ಆಲಿಕಲ್ಲು ಸಹಿತ ಮಳೆ: ಮಧ್ಯಾಹ್ನ ಮೂರರ ಹೊತ್ತಿಗೆ ತಾಲೂಕಿನ ಕೆಲ ಮತಗಟ್ಟೆ ವಲಯದಲ್ಲಿ ಒಮ್ಮೆಗೆ ಗುಡುಗು ಸಿಡಿಲು ಅಬ್ಬರಿಸಿ ಆಲಿಕಲ್ಲು ಸಹಿತ ಮಳೆ ಸುರಿಯಿತು. ಮಳಲಗಾಂವ್‌, ಸಂಪಿಗೆಪಾಲ್, ಹುತ್ಕಂಡ, ಹುಣಶೆಟ್ಟಿಕೊಪ್ಪ ಭಾಗದ ಮತಗಟ್ಟೆ ಕೇಂದ್ರದಲ್ಲಿ ಮಳೆ ಅಬ್ಬರಿಸಿತಾದರೂ ಪಟ್ಟಣದಲ್ಲಿ ವರುಣನ ಕೃಪೆಯಾಗಲಿಲ್ಲ. ಈ ಸಮಯಕ್ಕೆ ವಿದ್ಯುತ್‌ ಕೈಕೊಟ್ಟಿತು. ಆದರೂ ಮತದಾನ ಪ್ರಕ್ರಿಯೆಗೆ ಯಾವುದೇ ಅಡಚಣೆಯಾಗಿಲ್ಲ.


ಈ ವಿಭಾಗದಿಂದ ಇನ್ನಷ್ಟು

  • ಭಟ್ಕಳ: ಚುನಾವಣೆ ನಡೆಯಲಿರುವ 23 ವಾರ್ಡ್‌ಗಳಲ್ಲಿ ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದ್ದು, ಕೊನೆಯ ದಿನ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿದೆ. 23 ವಾರ್ಡ್‌ಗಳಿಗೆ...

  • ಹೊನ್ನಾವರ: ಆಳವಾದ ಬಾವಿಯಲ್ಲೂ ಕೊಡ ಕಂತುವಷ್ಟು ನೀರಿಲ್ಲ. ಕೆರೆಯ ಕುರುಹೂ ಉಳಿದಿಲ್ಲ. ಊರ ಮಧ್ಯೆ ಮೇ ತಿಂಗಳಲ್ಲೂ ತುಂಬಿ ಹರಿಯುತ್ತಿದ್ದ ಹೊಳೆ ಈಗ ಹೆದ್ದಾರಿಯಂತಾಗಿದೆ....

  • ಶಿರಸಿ: ಮುಂಚೂಣಿಯ ರೇಸಿಂಗ್‌ ಬೈಕ್‌ಗಳ ಬ್ರಾಂಡ್‌ ಕೆಟಿಎಂ ನಗರದಲ್ಲಿ ರೋಮಾಂಚಕ ಬೈಕ್‌ ಸಾಹಸ ಪ್ರದರ್ಶನ ಆಯೋಜಿಸಿತ್ತು. ಚೆನ್ನೈಯಿಂದ ಆಗಮಿಸಿದ್ದ ವೃತ್ತಿಪರ...

  • ಕಾರವಾರ: ಕೈಗಾದ ಕೇಂದ್ರಿಯ ಶಾಲೆ ಹತ್ತನೇ ತರಗತಿ ವಿದ್ಯಾರ್ಥಿನಿ ಕೀರ್ತಿ ವೈ. ಹುಕ್ಕೇರಿ ಅಂತಾರಾಷ್ಟ್ರೀಯ ಸ್ಕೇಟಿಂಗ್‌ ರೂಲರ್‌ ಹಾಕಿ ಭಾರತ ತಂಡಕ್ಕೆ ಕರ್ನಾಟಕದಿಂದ...

  • ಯಲ್ಲಾಪುರ: ರೋಗಗಳನ್ನು ಪತ್ತೆ ಮಾಡುವ ಮತ್ತು ಉಪಶಮನ ಮಾಡುವ ಆರೋಗ್ಯ ಕೇಂದ್ರಕ್ಕೇ ರೋಗ ಹಿಡಿದರೆ ಜನ ಸಾಮಾನ್ಯರ ಪಾಡೇನು?. ಇಂತಹ ಉತ್ತರವಿಲ್ಲದ ಪ್ರಶ್ನೆಗೆ ಸಾಕ್ಷಿಯಾಗಿ...

ಹೊಸ ಸೇರ್ಪಡೆ