ಶರಣರ ತತ್ವಾದರ್ಶ ಪಾಲನೆ ಅಗತ್ಯ

ಯುವ ಸಮೂಹ ದಾರ್ಶನಿಕರ ವಿಚಾರಧಾರೆ ಅಳವಡಿಸಿಕೊಳ್ಳಲಿ: ವಿನೋತ್‌ ಪ್ರಿಯಾ

Team Udayavani, Apr 11, 2019, 5:31 PM IST

ಚಿತ್ರದುರ್ಗ: ಸಾಧು ಸಂತರಾದ ದೇವರ ದಾಸಿಮಯ್ಯ ಸೇರಿದಂತೆ ನಾಡಿನ ಸಂತರ, ಶರಣರ, ವಚನಕಾರರ, ವಿದ್ವಾಂಸರ ವಿಚಾರಧಾರೆಗಳನ್ನು ಯುವ ಸಮೂಹ ಅರಿತುಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸರಳ ಸಾಹಿತ್ಯದೊಂದಿಗೆ ವಚನಗಳ ಮೂಲಕ ಆಧ್ಯಾತ್ಮಿಕ ಮತ್ತು ಬೌದ್ಧಿಕ ವಿಚಾರಗಳಿಗೆ ಶಕ್ತಿಯನ್ನು ತುಂಬಿದವರು ದೇವರ ದಾಸಿಮಯ್ಯ. ಮನುಕುಲದ ಉದ್ಧಾರಕ್ಕಾಗಿ ಅನೇಕ ವಚನಗಳನ್ನು ರಚಿಸಿ ಸಮಾಜಕ್ಕೆ ಸಂದೇಶ ನೀಡಿದರು ಎಂದರು.

ಪ್ರಸ್ತುತ ಯುವಜನರು ಸಾಮಾಜಿಕ ಜಾಲತಾಣಗಳು, ಹೊಸ ಮಾಧ್ಯಮದ ಪ್ರಭಾವದಿಂದ ನೈತಿಕ ಮೌಲ್ಯಗಳನ್ನು ಮರೆತು ಬದುಕುವ ವಾತಾವರಣ ನಿರ್ಮಾಣವಾಗಿದೆ. ಸಂತರು, ಶರಣರು, ವಚನಕಾರರ ಜೀವನ ಪರಿ, ಅವರು ಅನುಸರಿಸಿದ ತತ್ವ ಸಿದ್ಧಾಂತಗಳೊಂದಿಗೆ ನಡೆಯಬೇಕು. ಮುಂದಿನ ತಲೆಮಾರಿಗೂ ಇಂತಹ ದಾರ್ಶನಿಕರ ಮೌಲ್ಯಗಳನ್ನು ತಿಳಿಸಲು ಜಯಂತಿಗಳನ್ನು ಆಚರಿಸಲಾಗುತ್ತಿದೆ. ಯುವಜನರು ಅವರಂತೆ ನಡೆಯಲು ಪ್ರಾಮಾಣಿಕವಾಗಿ ಯತ್ನಿಸಬೇಕು ಎಂದು ಕರೆ ನೀಡಿದರು.

ನಗರಸಭೆ ಪೌರಾಯುಕ್ತೆ ಎಸ್‌. ಲಕ್ಷ್ಮೀ ಉಪನ್ಯಾಸ ನೀಡಿ, ದೇವರ ದಾಸಿಮಯ್ಯ ದೇವರಲ್ಲಿ ಅಪಾರ ಭಕ್ತಿಯನ್ನು ಹೊಂದಿದ್ದ ಮಹಾಪುರುಷರಾಗಿದ್ದರು. ಬೇರೆಡೆಯಿಂದ ವಲಸೆ ಬಂದು ಇಲ್ಲಿನ ಸಮಾಜದ ಅಸಮಾನತೆ, ಅಂಕು-ಡೊಂಕುಗಳನ್ನು ತಿದ್ದಲು ಮುಂದಾದರು. ನೇಕಾರ ಚೃತ್ತಿಯಲ್ಲಿ ನಿರತರಾಗಿ ಹಲವು ವಚನಗಳನ್ನು ರಚಿಸುತ್ತ ಜನರಿಗೆ ಜೀವನದ ಮೌಲ್ಯಗಳನ್ನು ಬಿತ್ತುತ್ತ ಸಾಗಿದರು. ಮನುಷ್ಯ ಮುಕ್ತಿ ಹೊಂದಲು ದೇವರಲ್ಲಿ ಅಪಾರವಾದ ಭಕ್ತಿಯನ್ನು ಹೊಂದಬೇಕಿಲ್ಲ, ಮಾಡುವ ಕಾಯಕದಲ್ಲಿ ಶ್ರದ್ಧೆ, ನಿಷ್ಠೆ, ವಿನಯದಿಂದಿದ್ದರೆ ಮುಕ್ತಿ ಪಡೆಯಬಹುದು ಎಂಬ ಸಂದೇಶ ಸಾರಿದವರು. ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದಿ ಮೌಡ್ಯ ಮತ್ತು ಜಾತಿ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದರು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಸಂಗಪ್ಪ, ಉಪವಿಭಾಗಾಧಿ ಕಾರಿ ವಿಜಯ್‌ಕುಮಾರ್‌, ತಹಶೀಲ್ದಾರ್‌ ನಹೀದಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಮತ್ತಿತರರು ಭಾಗವಹಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ