ದೇಶಪ್ರೇಮ ಸಾರುವ ಸರ್ಕಾರಿ ನಗರ ಸಾರಿಗೆ ಬಸ್

ಸ್ವಂತ ಹಣ ವೆಚ್ಚ ಮಾಡಿ ದೇಶಪ್ರೇಮ ಸಾರುವ ಮ್ಯೂಸಿಯಂ ರೀತಿ ಸಿಂಗರಿಸಿದ ಚಾಲಕ- ನಿರ್ವಾಹಕ

Team Udayavani, Apr 5, 2019, 11:43 AM IST

5-April-6

ಭದ್ರಾವತಿ: ನಗರ ಸಾರಿಗೆ ಬಸ್ಸಿನ ಒಳಗಡೆ ಹಾಕಲಾಗಿರುವ ಯೋಧರ, ರೈತರ, ದೇಶಪ್ರೇಮಿ ನಾಯಕರ ಚಿತ್ರಗಳು

ಭದ್ರಾವತಿ: ನಿಶ್ಯಸ್ತ್ರರಾಗಿದ್ದ ಭಾರತೀಯ ಯೋಧರ ಬಸ್‌ ಮೇಲೆ ಪಾಪಿ ಪಾಕಿಸ್ಥಾನದ ಕುಮ್ಮಕ್ಕಿನಿಂದ ದಾಳಿ ನಡೆಸಿದ ಉಗ್ರರ ದಾಳಿ ಹಾಗೂ ಅದಕ್ಕೆ ಭಾರತದ ವೀರಯೋಧರು ಉಗ್ರರ ನೆಲೆ ಮೇಲೆ ನಡೆಸಿದ ವಾಯುದಾಳಿ ನಂತರ ದೇಶದ ಎಲ್ಲರ ಬಾಯಲ್ಲಿ ಭಾರತೀಯ ಯೋಧರ ಸಾಧನೆ ಗುಣಗಾನ ದೇಶದ ಜನರ ಒಗ್ಗಟ್ಟಿನ ಸಂಕೇತ ಮತ್ತು ಸಂದೇಶವಾಗಿ ವಿಶ್ವದೆಲ್ಲೆಡೆ ಮೆಚ್ಚುಗೆ ಗಳಿಸಿದೆ. ಆದರೆ ಇದಕ್ಕೂ ಮುನ್ನ 2ವರ್ಷಗಳ ಹಿಂದೆಯೇ ಭಾರತೀಯ ಯೋಧರ ಸೇವಾಕಾರ್ಯ ನಮ್ಮ ವಿದ್ಯಾರ್ಥಿಗಳ ಮೇಲೆ ಪರಿಣಾಮಕಾರಿಯಾಗಿ ಪ್ರೇರಣೆ ನೀಡಲಿ ಎನ್ನುವ ಸದುದ್ದೇಶದಿಂದ ಭದ್ರಾವತಿಯ ಸರ್ಕಾರಿ ನಗರ ಸಾರಿಗೆ ಬಸ್‌ ಕಾರ್ಯ ನಿರ್ವಾಹಕ ಮತ್ತು ವಾಹನ ಚಾಲಕರಿಬ್ಬರು ತಮ್ಮ ಸ್ವಂತ ಗಳಿಕೆ ಹಣವನ್ನು ಖರ್ಚು ಮಾಡಿ ಅವರು ಕಾರ್ಯ ನಿರ್ವಹಿಸುವ ಬಸ್ಸನ್ನು ದೇಶಪ್ರೇಮ ಸಾರುವ ಮ್ಯೂಸಿಯಂ ರೀತಿ ಸಿಂಗರಿಸಿದ್ದಾರೆ.

ಆದರ್ಶ ಸರ್ಕಾರಿ ನಗರ ಸಾರಿಗೆ ವಾಹನ: ಸಾರಿಗೆ ಬಸ್‌ ಎಂದಾಕ್ಷಣ ಸಾಮಾನ್ಯವಾಗಿ ಜನರಿಗೆ ನೆನಪಾಗುವುದು ಆ ಬಸ್‌ನಲ್ಲಿ ಹಾಕುವ ಅಬ್ಬರದ ಚಲನಚಿತ್ರಗೀತೆಗಳು, ಅಕ್ಕಪಕ್ಕದಲ್ಲಿ ಬೀಡಿ ಸಿಗರೇಟು ಸೇದುವ ಮಂದಿ ಬಿಡುವ ಹೊಗೆ ಇತ್ಯಾದಿ. ಆದರೆ ಭದ್ರಾವತಿ ಹೊಸಮನೆಯಿಂದ ಕಾಗದನಗರ, ಉಜ್ಜನಿಪುರಕ್ಕೆ ಪ್ರತಿನಿತ್ಯ ಬೆಳಗ್ಗೆಯಿಂದ ರಾತ್ರಿವರೆಗೆ ಸಂಚರಿಸುವ ಕೆ.ಎ.-17ಎಫ್‌-1836 ಹಸಿರು ಬಣ್ಣದ ಸರ್ಕಾರಿ ನಗರ ಸಾರಿಗೆ ಬಸ್‌ ಈ ರೀತಿಯ ವಾತಾವರಣಕ್ಕೆ ಅಪವಾದವೆನ್ನುವಂತಿದೆ. ಈ ಬಸ್‌ ಒಳಗೆ ಪ್ರವೇಶಿಸುತ್ತಿಂದಂತೆ ದೇಶಪ್ರೇಮ ತನ್ನಿಂದ ತಾನೆ ಮನಸ್ಸಿನಂಗಳದಲ್ಲಿ ಅರಳುತ್ತದೆ. ಅದಕ್ಕೆ ಕಾರಣ
ಆ ಬಸ್‌ನ ಒಳಗಡೆ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳ ಪಕ್ಕದ ಕಿಟಕಿಯ ಮೇಲ್ಭಾಗದಲ್ಲಿ ಸಾಲಾಗಿ ಹಾಕಲಾಗಿರುವ ಆಕರ್ಷಕ ಚಿತ್ರಗಳು ಹಾಗೂ ಆ ಚಿತ್ರಗಳ ಕೆಳಗೆ ಸೈನಿಕರ ಕುರಿತು ಅಭಿಮಾನ ಸಾರುವ ಮತ್ತು ಅವರ ತ್ಯಾಗಮಯ ಕಾರ್ಯಕ್ಕೆ ಒಂದು ಸಲಾಂ ಎನ್ನುವ ಬರಹ ಮನಸ್ಸನ್ನು ಸ್ಪರ್ಶಿಸುತ್ತದೆ. ಈ ಬಸ್‌ನಲ್ಲಿ ಪ್ರತಿನಿತ್ಯ ನಾರಾರು ವಿದ್ಯಾರ್ಥಿಗಳು, ನಾಗರಿಕರು ಸಂಚರಿಸುತ್ತಾರೆ. ಅವರೆಲ್ಲರೂ ಆ ಸರ್ಕಾರಿ ಬಸ್‌ ಚಾಲಕ ಪ್ರಕಾಶ್‌ ಮತ್ತು ಕಾರ್ಯ ನಿರ್ವಾಹಕ ರಮೇಶ್‌ ಅವರ ಕಾರ್ಯವನ್ನು ಮುಕ್ತಕಂಠದಿಂದ ಹೊಗಳುತ್ತಾರೆ.

ರಾಷ್ಟ್ರ ಪ್ರೇಮ ಸಾರುವ ವೈವಿಧ್ಯಮಯ ಚಿತ್ರಗಳು: ಭಾರತೀಯ ಭೂಸೇನೆ, ವಾಯುಸೇನೆ, ಜಲಸೇನೆಯ ಯೋಧರ ಪಥಸಂಚಲನದ ಚಿತ್ರ, ವೈರಿಯೋಧರ ಮೇಲೆ ಭಾರತೀಯ ಯೋಧರು ಹೋರಾಡುತ್ತಿರುವ ದೃಶ್ಯ. ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ವೀರಯೋಧರ ಚಿತ್ರ, ದೇಶದ ಬೆನ್ನೆಲುಬಾಗಿ ಅನ್ನ ನೀಡುವ ನೇಗಿಲ ಯೋಗಿ ರೈತನ ಚಿತ್ರ, ಆಂಗ್ಲರ ವಿರುದ್ಧ ಹೋರಾಡಿದ ಝಾನ್ಸಿರಾಣಿ ಲಕ್ಷ್ಮೀ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ಮಹಾತ್ಮ ಗಾಂಧಿ , ಸುಭಾಷ್‌ ಚಂದ್ರಬೋಸ್‌, ಭಗತ್‌ ಸಿಂಗ್‌, ಮೊಗಲರ ವಿರುದ್ಧ ಹೋರಾಡಿದ ಮಹಾರಾಣಾ ಪ್ರತಾಪ ಸಿಂಹ, ಛತ್ರಪತಿ ಶಿವಾಜಿ, ಕನ್ನಡದ ಕಂಪನ್ನು ವಿಶ್ವಕ್ಕೆ ಸಾರಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವಿ.ಕೃ.ಗೋಕಾಕ್‌, ಕುವೆಂಪು, ದ.ರಾ. ಬೇಂದ್ರೆ, ಡಾ| ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ್‌ ಐಯ್ಯಂಗಾರ್‌, ಗಿರೀಶ್‌ ಕಾರ್ನಾಡ್‌, ಯು.ಆರ್‌. ಅನಂತಮೂರ್ತಿ, ಚಂದ್ರಶೇಖರ ಕಂಬಾರ, ವೀರಸನ್ಯಾಸಿ ವಿವೇಕಾನಂದ, ಭಾರತ ರತ್ನ ಸರ್‌
ಎಂ. ವಿಶ್ವೇಶ್ವರಯ್ಯ, ಮಾಜಿ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್‌ ಕಲಾಂ ಸೇರಿದಂತೆ ಅಸಂಖ್ಯಾತ ಭಾರತೀಯ ಪ್ರಾತಃ ಸ್ಮರಣೀಯರ ವರ್ಣಮಯ ಚಿತ್ರಗಳು ಈ ವಾಹನದೊಳಗೆ ರಾರಾಜಿಸುತ್ತಿವೆ. ಆ ಬಸ್‌ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ಈ ದೇಶ, ಭಾಷೆ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗೆ ಕೊಡುಗೆ ನೀಡಿದ ಮಹನೀಯರಂತೆ‌ ಜೀವನದಲ್ಲಿ ನಾವೂ ಅಥವಾ ನಮ್ಮ ಮಕ್ಕಳೂ ಸಹ ಈ ದೇಶಕ್ಕಾಗಿ ಏನನ್ನಾದರೂ ಸಾಧಿ ಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂಬ ಪ್ರೇರಣೆ ನೀಡುವಂತಿದೆ.

ಈ ರೀತಿ ಸರ್ಕಾರಿ ಬಸ್ಸಿನಲ್ಲಿ ತಮ್ಮ ಸ್ವಂತ ಗಳಿಕೆ ಹಣವನ್ನು ಖರ್ಚು ಮಾಡಿ ದೇಶಪ್ರೇಮ ಸಾರುವ ವಾತಾವರಣ ಸೃಷ್ಟಿಸಿರುವ
ಬಸ್‌ ಚಾಲಕ ಪ್ರಕಾಶ್‌ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ ಮಾತನಾಡಿದ ಅವರು, ದೇಶಕ್ಕೆ ಅನ್ನ ನೀಡುವ ರೈತ, ದೇಶ ಕಾಯುವ ಸೈನಿಕ ಇವರ ನೆನಪಿನಿಂದ ವಿದ್ಯಾರ್ಥಿಗಳು ಸ್ಫೂರ್ತಿ ಗೊಂಡು ದೇಶಕ್ಕಾಗಿ ಅವರೂ ಸಹ ಏನಾದರೂ ಒಳ್ಳೆಯ ಕೊಡುಗೆ ನೀಡುವಂತೆ ಬೆಳೆಯಲಿ ಎಂಬ ಸದುದ್ದೇಶದಿಂದ ಈ ರೀತಿ ಚಿತ್ರಗಳನ್ನು ನಾನು ಹಾಗೂ ನನ್ನ ಸ್ನೇಹಿತ ಬಸ್‌ ನ ಕಾರ್ಯ ನಿರ್ವಾಹಕ ರಮೇಶ್‌ ಅವರು ಇದರಲ್ಲಿ ಅಳವಡಿಸಿದ್ದೇವೆ. ಈ ಬಸ್ಸಿನಲ್ಲಿ ಪ್ರತಿ ನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ನಮ್ಮ ಈ ಕಾರ್ಯದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದು ನಮ್ಮ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹದಾಯಕ ವಾಗಿದ್ದು ಮುಂದಿನ ದಿನಗಳಲ್ಲಿ ಈ ರೀತಿ ದೇಶಪ್ರೇಮ ಸಾರುವ ಕಾರ್ಯಗಳನ್ನು ಹಮ್ಮಿಕೊಳ್ಳುವ ಯೋಚನೆಯಿದೆ ಎಂದರು.

ಒಟ್ಟಿನಲ್ಲಿ ಭಾರತೀಯ ಯೋಧರ ಭಾರತೀಯ ಸಂಸ್ಕೃತಿ , ದೇಶಪ್ರೇಮಿ ನಾಯಕರ, ಸಾಹಿತಿಗಳ ನೆನಪನ್ನು ಸದಾ ಹಸಿರಾಗಿಡುವ ಈ ವಾಹನ ಚಾಲಕ ಮತ್ತು ಕಾರ್ಯ ನಿರ್ವಾಹಕರ ಕಾರ್ಯ ಶ್ಲಾಘನೀಯ.

ತುಕ್ಕು ಹಿಡಿದು ಬದುಕುವುದಕ್ಕಿಂತ ದುಡಿದು ಸವೆಯುವುದು ಮೇಲು. ದೇಶಕ್ಕಾಗಿ ಹೋರಾಡುತ್ತಿರುವ ಭಾರತೀಯ ಸೇನೆಗೊಂದು ಸಲಾಂ. ನಾವಿಲ್ಲಿ ಆರಾಮವಾಗಿದ್ದೇವೆಂದರೆ ಅದಕ್ಕೆ ಕಾರಣ ನಮ್ಮ ಭಾರತೀಯ ಯೋದರ ಸೇವೆ. ಈ ರೀತಿ ಅಲ್ಲಲ್ಲಿ ಬದುಕಿನ ಸಾರ್ಥಕತೆಯನ್ನು ಸಾರುವ ಘೋಷಣಾ ವಾಕ್ಯದ ಬರಹಗಳೂ ಸಹ ಪ್ರಯಾಣಿಕರನ್ನು ಚಿಂತನೆಗೊಳಪಡಿಸುವಷ್ಟರ ಮಟ್ಟಿಗೆ ಪ್ರಖರ ಸಂದೇಶವನ್ನು ಸಾರುವಂತಿವೆ.

„ಕೆ.ಎಸ್‌. ಸುಧೀಂದ್ರ ಭದ್ರಾವತಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.