ಸಂವಿಧಾನ ರಕ್ಷಣೆಗಾಗಿ ಬಿಎಸ್‌ಪಿ ಬೆಂಬಲಿಸಿ

Team Udayavani, Apr 22, 2019, 5:04 PM IST

Udayavani Kannada Newspaper

ಸುರಪುರ: ಕಾಂಗ್ರೆಸ್‌ ಮತು ಬಿಜೆಪಿ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಬಿಜೆಪಿ ಹಿಂದುತ್ವದ ಮೇಲೆ ಅಧಿಕಾರ ನಡೆಸಿದರೆ, ಕಾಂಗ್ರೆಸ್‌ಪಕ್ಷ ಮತ, ಧರ್ಮ ವಿಭಜಸುತ್ತ ಒಡೆದಾಳುವ ನೀತಿ ಅನುಸರಿಸಿದೆ. ಇವೆರೆಡು ಪಕ್ಷಗಳು ಪ್ರಜಾಪ್ರಭುತ್ವದ ನಿಜವಾದ‌ ವಿರೋಧಿಗಳು. ಮತದಾರರ ಪ್ರಭುಗಳು ಪ್ರಜಾಪ್ರಭುತ್ವದ ಉಳುವಿಗೆ, ಸಂವಿಧಾನ ರಕ್ಷಣೆಗಾಗಿ ಬಿಎಸ್‌ಪಿ ಬೆಂಬಲಿಸಬೇಕು ಎಂದು ರಾಯಚೂರು ಲೋಕಸಭೆ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ವೆಂಕನಗೌಡ ನಾಯಕ ಮನವಿ ಮಾಡಿದರು.

ನಗರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ ಅವರು, ಸಂವಿಧಾನವನ್ನೆ ಬದಲಾಯಿಸುತ್ತೇವೆ ಎಂದು ಬಿಜೆಪಿ ಅಬ್ಬರಿಸಿದರೆ. ಇನ್ನೊಂದೆಡೆ ಜಾತಿ ಧರ್ಮಗಳ ಓಲೈಕೆಯಲ್ಲಿ ತೊಡಗಿರುವ ಕಾಂಗ್ರೆಸ್‌ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಇದರಿಂದ ದೇಶದ ಹಿಂದುಳಿದ, ದಲಿತ ಶೋಷಿತ, ತುಳಿತಕ್ಕೊಳಪಟ್ಟ ದಮನಿತರ ಬಹುಸಂಖ್ಯಾತ ಜನಾಂಗ ಆತಂಕದಲ್ಲಿದೆ. ಅಧಿಕಾರದ ಆಸೆಗಾಗಿ ಪ್ರಜಾಪ್ರಭುತ್ವನ್ನೆ ದಿಕ್ಕರಿಸುತ್ತಿರುವ ಇವೆರಡು ಪಕ್ಷಗಳಿಗೆ ಮತದಾರರು ತಕ್ಕ ಪಾಠ ಕಲಿಸುವ ಮೂಲಕ ಬಿಎಸ್‌ಪಿ ಬೆಂಬಲಿಸ ಬೇಕು ಎಂದು ಕರೆ ನೀಡಿದರು.

ಹಾಲಿ ಸಂಸದ ಬಿ.ವಿ. ನಾಯಕ ನಿಷಿ¢ಯ ವ್ಯಕ್ತಿ. ಕ್ಷೇತ್ರದ ಅಭಿವೃದ್ಧಿ, ಬಡವರ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ. ಕ್ಷೇತ್ರಕ್ಕೆ ಯಾವೊಂದು ಯೋಜನೆ ತಂದಿಲ್ಲ. ಐಐಟಿ ಸ್ಥಾಪನೆಗೆ ಪ್ರಯತ್ನಸಲಿಲ್ಲ. ಇಂತವರಿಗೆ ಅಧಿಕಾರ ನೀಡಿದರೆ ಯಾವುದೇ ಲಾಭವಿಲ್ಲ. ಕಾರಣ ಮತದಾರರು ಬಡತನ ನಿರ್ಮಲನೆಗಾಗಿ. ಕ್ಷೇತ್ರದ ಅಭಿವೃದ್ಧಿಗಾಗಿ ನನ್ನನ್ನು ಗೆಲ್ಲಿಸುವ ಮೂಲಕ ಬಹುಜನ ಸಮಾಜ ಪಕ್ಷ ಬಲಪಡಿಸಬೇಕು ಎಂದು ಪ್ರಾರ್ಥಿಸಿದರು.

ನಾನು ಗೆದ್ದರೆ ಪ್ರಜಾಪ್ರಭುತ್ವ ಗೆದ್ದಂತೆ. ಅದು ಮತದಾರನ ಗೆಲುವು. ಆದ್ದರಿಂದ ಮತದಾರರು ಪ್ರಜಾಪ್ರಭುತ್ವದ ಉಳುವಿಗಾಗಿ ಬಿಎಸ್‌ಪಿ ಬೆಂಬಲಿಸಬೇಕು. ಪಕ್ಷದ ಚಿಹ್ನೆಯಾದ ಆನೆ ಗುರುತಿಗೆ ಮತ ನೀಡಬೇಕು ಎಂದು ಕೋರಿದರು.

ಡಾ| ಅಂಬೇಡ್ಕರ್‌ ಕನಸು ನನಸು ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಪ್ರತಿ ಸಮಸ್ಯೆಗೂ ಸಂವಿಧಾನದಲ್ಲಿ ಪರಿಹಾರವಿದೆ. ಸಂಪೂರ್ಣ ಸಂವಿಧಾನ ಜಾರಿಗೆ ಪಕ್ಷ ಬದ್ಧವಾಗಿದೆ. ಬಡತನ ನಿರ್ಮೂಲನೆ, ಪ್ರತಿ ಕುಟುಂಬಕ್ಕೂ ಸೂರು, ಉದ್ಯೋಗ, ಮನೆಗೊಬ್ಬರಿಗೆ ನೌಕರಿ, ರೈತರ ಆದಾಯ ದ್ವಿಗುಣದೊಂದಿಗೆ ಕೃಷಿಗೆ ಆದ್ಯತೆ ನೀಡಲಾಗುವುದು. ಸಂವಿಧಾನ ರಕ್ಷಣೆಯೇ ನಮ್ಮ ಮೂಲ ಧ್ಯೇಯ. ಸರ್ವಜನರ ಕಲ್ಯಾಣಕ್ಕಾಗಿ, ದೇಶದ ಭವಿಷ್ಯಕ್ಕಾಗಿ, ಕ್ಷೇತ್ರದ ಅಭಿವೃದ್ಧಿಗಾಗಿ ಬಿಎಸ್‌ಪಿ ಬೆಂಬಲಿಸಬೇಕು ಎಂದು ಪ್ರಾರ್ಥಿಸಿದರು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.