ತಹಶೀಲ್ದಾರ್‌ ಕಚೇರಿಯೇ ಡಸ್ಟ್‌ ಬಿನ್‌!

ಮೂಲೆಗಳೆಲ್ಲ ಉಗುಳಿನ ಕೆಂಬಣ್ಣ•ಎಲ್ಲೆಂದರಲ್ಲಿ ಬಿದ್ದಿವೆ ದಾಖಲೆಗಳು

Team Udayavani, Jul 10, 2019, 10:03 AM IST

ತಹಶೀಲ್ದಾರ್‌ ಕಚೇರಿ ಮೂಲೆಯಲ್ಲಿ ಉಗುಳಿದ್ದರಿಂದ ಮೂಲೆ ತುಂಬಾ ಕೆಂಬಣ್ಣವಾಗಿದೆ.

ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ:
ಯಾವುದೇ ಸರ್ಕಾರಿ ಇಲಾಖೆ, ಕಚೇರಿಗೆ ನೀತಿ, ನಿಯಮ ಇರುತ್ತದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಆದರೆ ಎಲ್ಲೆಂದರಲ್ಲಿ ಕಸ, ಉಗುಳು, ಬೇಕಾಬಿಟ್ಟಿ ದಾಖಲೆಗಳನ್ನಿಟ್ಟು ಜನಸಾಮಾನ್ಯರನ್ನು ಸತಾಯಿಸುವಂತಹ ಡಸ್ಟಬಿನ್‌ ತರಹದ ಕಚೇರಿ ಯಾವುದಾದರೂ ಇದ್ದರೇ ಅದೇ ಅಫಜಲಪುರ ತಹಶೀಲ್ದಾರ್‌ ಕಚೇರಿ.

ಪಟ್ಟಣದ ವಿಜಯಪುರ ಹೆದ್ದಾರಿಗೆ ಹೊಂದಿಕೊಂಡಿರುವ ತಹಶೀಲ್ದಾರ್‌ ಕಚೇರಿ ಹೊರಗಿನಿಂದ ದೊಡ್ಡ ಬಂಗಲೆಯಂತೆ ಕಾಣುತ್ತದೆ. ಒಳಗೆ ಹೋದರೆ ಮಾತ್ರ ಅಕ್ಷರಶಃ ಕೊಳಕಿನ ದರ್ಶನ ಆಗುತ್ತದೆ. ಎಲ್ಲಿ ನೋಡಿದರೂ ಕೊಳಕು ಕಾಣುತ್ತದೆ.

ಎಲ್ಲೆಂದರಲ್ಲಿ ದಾಖಲೆಗಳು: ತಹಶೀಲ್ದಾರ್‌ ಕಚೇರಿಯಲ್ಲಿ ಎಲ್ಲೆಂದರಲ್ಲಿ ಉಗುಳಿದರೂ ಕೇಳವವರಿಲ್ಲ. ಅದರಲ್ಲೂ ಇಲಾಖೆ ಗೋಡೆಗಳ ಮೂಲೆಗಳು ಉಗುಳಲಿಕ್ಕೆ ಮಾಡಿದಂತೆ ಆಗಿವೆ. ಇಲ್ಲಿಗೆ ಬರುವ ಜನರಿಗೆ ಕುಳಿತುಕೊಳ್ಳಲು ಆಸನಗಳೇ ಇಲ್ಲ. ಹೀಗಾಗಿ ಎಲ್ಲೆಂದರಲ್ಲಿ ಕುಳಿತು ಕೊಳ್ಳುವಂತಾಗಿದೆ. ಕಚೇರಿ ದಾಖಲೆಗಳನ್ನು ಎಲ್ಲಿ ಬೇಕೋ ಅಲ್ಲಿ ಇಡಲಾಗಿದೆ. ಹೀಗಾಗಿ ದಾಖಲೆಗಳನ್ನು ದಿನವಿಡಿ ಹುಡುಕುವುದೇ ಕೆಲಸ ವಾಗಿದೆ. ಅಲ್ಲದೇ ತಾಲೂಕಿನ ಹಳ್ಳಿಗಳಿಂದ ಬರುವ ಜನರಿಗೆ ಕುಡಿಯುವ ನೀರಿನ ಸೌಕರ್ಯವಿಲ್ಲ. ಕುಳಿತುಕೊಳ್ಳಲು ಆಸನಗಳಿಲ್ಲ. ಸಿಕ್ಕಸಿಕ್ಕಲ್ಲಿ ಕುಳಿತು ಕೆಲಸ ಮಾಡಿಕೊಂಡು ಹೋಗುವ ಪರಿಸ್ಥಿತಿ ಇಲ್ಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್‌ ಗಾಂಧಿ ವಸತಿ ನಿಗಮದ ಬದಲು ಮತ್ತೆ...

  • ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಗೆ ಆಟದ ಮೈದಾನವಾಗುತ್ತಿರುವ ವಿದ್ಯಾರ್ಥಿಒಕ್ಕೂಟಗಳನ್ನು ಮುಂದಿನ 10 ವರ್ಷಗಳವರೆಗೆ ನಿಷೇಧಿಸಬೇಕು. ಈ ವಿದ್ಯಾರ್ಥಿ ಒಕ್ಕೂಟಗಳಿಂದಾಗಿ...

  • ನಗದು ರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವರ ಪ್ರಮಾಣ ಹೆಚ್ಚುತ್ತಿದ್ದು,ಹಣ ವರ್ಗಾವಣೆ, ಬಿಲ್‌ ಪಾವತಿ ಗಳನ್ನು ಕಾರ್ಡ್‌ ಅಥವಾ ಆ್ಯಪ್‌ಗ್ಳ ಮೂಲಕ ಮಾಡುತ್ತಿದ್ದಾರೆ....

  • ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್‌ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...

  • ದರ್ಶನ್‌ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...