ಗಬ್ಬೆದ್ದು  ನಾರುತ್ತಿದೆ ಅಫಜಲಪುರ

ಎಲ್ಲೆಂದರಲ್ಲಿ ಕಸದ ರಾಶಿರಸ್ತೆಗಿಂತ ಎತ್ತರದಲ್ಲಿ ಚರಂಡಿ ಮಳೆಗಾಲ ಬಂದರೆ ಕೊಳೆಗೇರಿ

Team Udayavani, Oct 10, 2019, 11:01 AM IST

„ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ಪುರಸಭೆಗೆ ಪ್ರತಿ ವರ್ಷ ಅಭಿವೃದ್ಧಿ ಕೆಲಸಗಳಿಗಾಗಿ ಲಕ್ಷಾಂತರ ರೂ. ಬರುತ್ತದೆ. ಈ ಅನುದಾನ ಖರ್ಚಾದರೂ ಅಭಿವೃದ್ಧಿ ಮಾತ್ರ ಆಗುವುದಿಲ್ಲ. ಪುರಸಭೆ ನಿರ್ಲಕ್ಷ್ಯದಿಂದ ಪಟ್ಟಣವೆಲ್ಲ ಗಬ್ಬೆದ್ದು ನಾರುವಂತಾಗಿದೆ.

ಪಟ್ಟಣದ 23 ವಾರ್ಡ್‌ಗಳ ಪೈಕಿ ಬಹುತೇಕ ವಾರ್ಡ್‌ಗಳಲ್ಲಿ ಸ್ವಚ್ಛತೆ ಸಮಸ್ಯೆ ಇದೆ. ಸರಿಯಾದ ರಸ್ತೆಗಳಿಲ್ಲ, ಚರಂಡಿಗಳಿಲ್ಲ. ಮಳೆ-ಚರಂಡಿ ನೀರು ಒಂದಾಗಿ ರಸ್ತೆಗಳ ಮೇಲೆ ಹರಿದಾಡಿ ಅದರಲ್ಲಿ ಹಂದಿಗಳು ಒದ್ದಾಡಿ ಸಂಕ್ರಾಮಿಕ ರೋಗದ ತಾಣವಾಗಿ ಪಟ್ಟಣ ಮಾರ್ಪಾಡಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಾದ ಪುರಸಭೆ ಕಣ್ಣುಮುಚ್ಚಿ ಕುಳಿತಿದೆ.

ರಸ್ತೆಗಿಂತ ಎತ್ತರದಲ್ಲಿ ಚರಂಡಿ: ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬರುತ್ತಿದೆ. ಪಟ್ಟಣದ ಸಾರ್ವಜನಿಕರು ತಮ್ಮ ಮನೆಯ ಕಸ ಕಡ್ಡಿಯನ್ನು ಚರಂಡಿಗೆ ಇಲ್ಲವೇ, ರಸ್ತೆ ಮೇಲೆ ಚೆಲ್ಲುತ್ತಿದ್ದಾರೆ. ಪಟ್ಟಣದ ಅಂಗಡಿ, ಮುಂಗಟ್ಟುಗಳ ಕಸ ಕೂಡ ರಸ್ತೆ ಮೇಲೆ ಬೀಳುತ್ತಿದೆ.

ಪುರಸಭೆಯವರು ಕಸ ವಿಲೇವಾರಿ ಸರಿಯಾಗಿ ಮಾಡುತ್ತಿಲ್ಲ. ಹೀಗಾಗಿ ಇನ್ನಷ್ಟು ಕಸದ ರಾಶಿ ತುಂಬಿಕೊಳ್ಳುತ್ತಿದೆ. ಇನ್ನು ಪುರಸಭೆಯವರ ಅವೈಜ್ಞಾನಿಕ ಕಾಮಗಾರಿಗಳಿಗೆ ಕೊನೆ ಇಲ್ಲವಾಗಿದೆ. ಪಟ್ಟಣದ ಒಳ ರಸ್ತೆಗಳಿಗೆ ಪುರಸಭೆ ನಿರ್ಮಿಸಿದ ಚರಂಡಿಗಳು ರಸ್ತೆಗಳಿಗಿಂತ ಮೇಲಿವೆ. ಇದರಿಂದ ರಸ್ತೆಗಳ ಮೇಲೆ ನಿಲ್ಲುವ ನೀರು ಚರಂಡಿಗೆ ಸೇರದೆ ರಸ್ತೆ ಮೇಲೆ ಹರಿದಾಡುತ್ತಿವೆ.  ಹೀಗಾಗಿ ಇನ್ನಷ್ಟು ಗಲೀಜು ಆಗುತ್ತಿದೆ.

ಮಳೆಗಾಲ ಬಂದರೆ ಕೊಳಗೇರಿ: ಬೇಸಿಗೆಯಲ್ಲಿ ಧೂಳಿನ ಸಮಸ್ಯೆಯಿಂದ ಕಂಗೆಟ್ಟು ಹೋಗುವ ಜನರಿಗೆ ಮಳೆಗಾಲ ಬಂದರೆ ಮನೆಯಿಂದ ಹೊರ ಬರಲಾಗದ ರೀತಿ ಸಮಸ್ಯೆ ಆಗುತ್ತದೆ. ಮಳೆ ಬಂದರೆ ಕೋಳಗೆರಿಯಂತೆ ಆಗುತ್ತಿದೆ ಅಫಜಲಪುರ. ಈ ಸಮಸ್ಯೆಗೆ ಬಹಳ ವರ್ಷಗಳಿಂದ ಪರಿಹಾರವೇ ಸಿಕ್ಕಿಲ್ಲ.

ಅಭಿವೃದ್ಧಿ ಆಗೋದು ಯಾವಾಗ?: ಅಭಿವೃದ್ಧಿ ಹೆಸರಿನಲ್ಲಿ ಪುರಸಭೆ ವತಿಯಿಂದ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತದೆ. ಕ್ರಿಯಾ ಯೋಜನೆ ಸಿದ್ಧವಾಗುತ್ತಿವೆ, ಕಾಮಗಾರಿಗಳಾಗುತ್ತಿವೆ. ಆದರೆ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ಇದಕ್ಕೆಲ್ಲ ಪುರಸಭೆಯವರೇ ಉತ್ತರ ನೀಡಬೇಕು. ಪಟ್ಟಣಕ್ಕೆ ಮಾಸ್ಟರ್‌ ಪ್ಲ್ಯಾನ್ ಆಗಬೇಕಿತ್ತು. ಪಟ್ಟಣದ ರಸ್ತೆಗಳ ಸುಧಾರಣೆ, ಚರಂಡಿ ಸುಧಾರಣೆ ಆಗಬೇಕಾಗಿತ್ತು. ಪಟ್ಟಣದ ಜನರಿಗೆ ಮೂಲಭೂತ ಸೌಕರ್ಯ ಸಿಗಬೇಕಿತ್ತು. ಆದರೆ ಯಾವುದೂ ಆಗುತ್ತಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ