ಅಭಿವೃದ್ಧಿಯಲ್ಲಿ ಅಭಿಯಂತರ ಪಾತ್ರ ಅನನ್ಯ

ಸರ್‌ ಎಂ.ವಿಶ್ವೇಶ್ವರಯ್ಯ-ಡಾ| ಎಸ್‌.ಜಿ. ಬಾಳೇಕುಂದ್ರಿ ಕೈಗೊಂಡ ಯೋಜನೆಗಳು ಸ್ಮರಣೀಯ

Team Udayavani, Dec 29, 2019, 5:05 PM IST

29-December-32

ಆಲಮಟ್ಟಿ: ದೇಶದ ಅಭಿವೃದ್ಧಿಯಲ್ಲಿ ಅಭಿಯಂತರುಗಳ ಪಾತ್ರ ಮಹತ್ವದ್ದಾಗಿದ್ದು, ಗುಣಮಟ್ಟ ಹಾಗೂ ಮಾಪನದ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಶನಿವಾರ ಆಲಮಟ್ಟಿಯ ಮುಖ್ಯ ಅಭಿಯಂತರರ ಕಚೇರಿ ಬಳಿಯಿರುವ ಪಾರ್ಕಿಂಗ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಎಂಜಿನಿಯರುಗಳ ಸಂಘದ ರಾಜ್ಯಮಟ್ಟದ ಸಮ್ಮೇಳನ, ತಾಂತ್ರಿಕ ಕಾರ್ಯಾಗಾರ, 2020ನೇ ಸಾಲಿನ ಎಂಜಿನಿಯರ್‌ಗಳ ದಿನಚರಿ ಬಿಡುಗಡೆ ಮತ್ತು 2019ನೇ ಸಾಲಿನ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಮೊದಲು ಎಂಜಿನಿಯರುಗಳನ್ನು ನೀಡಿರುವದೇ ಕರ್ನಾಟಕ. ಹಿಂದೆ ನಿರ್ಮಿಸಿರುವ ಗೋಲಗುಂಬಜ್‌, ಇಬ್ರಾಹಿಂ ರೋಜಾ ಸೇರಿದಂತೆ ಸುಮಾರು 500 ವರ್ಷಗಳ ಹಿಂದೆ ಕಟ್ಟಿದ್ದರೂ ನೈಸರ್ಗಿಕ ವಿಕೋಪಗಳ ಮಧ್ಯದಲ್ಲಿಯೂ ಕೂಡ ಇನ್ನೂವರೆಗೆ ಹಾಗೆಯೇ ಉಳಿಯಲು ಅವರು ಕೈಗೊಂಡ ಉತ್ತಮ ತೀರ್ಮಾನಗಳೇ ಕಾರಣವಾಗಿವೆ ಎಂದರು.

ಈ ಹಿಂದೆಯೂ ಕೂಡ ನಮ್ಮಲ್ಲಿರುವ ಹಿರಿಯ ಅಭಿಯಂತರುಗಳು
ತಾವೇ ಸ್ವತಃ ಸ್ಥಳ ಪರಿಶೀಲಿಸಿ ಅಂದಾಜು ಪತ್ರಿಕೆ ತಯಾರಿಸಿ ಕಾರ್ಯೋನ್ಮುಖರಾಗುತ್ತಿದ್ದರಿಂದ ಯಾವ ಕಾಮಗಾರಿಗಳೂ ಕೂಡ ಗುಣಮಟ್ಟದ ಬಗ್ಗೆ ತಕರಾರಿರುತ್ತಿಲಿಲ್ಲ. ಅಂದಾಜು ಪತ್ರಿಕೆ ತಯಾರಿಸಿದ ನಂತರ ಹೆಚ್ಚುವರಿ ಮೊತ್ತದ ಅವಶ್ಯಕತೆಯೂ ಇರುತ್ತಿರಲಿಲ್ಲ. ಇತ್ತೀಚೆಗೆ ಅಭಿಯಂತರುಗಳು ಸ್ಥಳಕ್ಕೆ ಹೋಗದೇ ಖಾಸಗಿ ಕಂಪನಿಗಳಿಗೆ ಡಿಪಿಆರ್‌ ತಯಾರಿಸಲು ಸೂಚಿಸಿ ನಂತರ ಅಂದಾಜು ಪತ್ರಿಕೆ ತಯಾರಿಸುತ್ತಿರುವುದರಿಂದ ಹಾಗೂ ಅಭಿಯಂತರಾದವರು ಗುತ್ತಿಗೆದಾರರಿಂದ ಸಮರ್ಪಕವಾಗಿ ಕೆಲಸ ಪಡೆಯುವಾಗ ಯಾವ ಒತ್ತಡಕ್ಕೂ ಮಣಿಯಬಾರದು ಎಂದು ಕಿವಿಮಾತು ಹೇಳಿದರು.

ಅಭಿಯಂತರಾದವರು ಒತ್ತಡಕ್ಕೆ ಮಣಿಯದಿದ್ದರೆ ಅವರು ಕೈಗೊಂಡ ಕಾಮಗಾರಿಗಳು ಅವರ ಹೆಸರು ಹೇಳುವಂತಿರಬೇಕು. ಭಾರತರತ್ನ ಎಂ.ವಿಶ್ವೇಶ್ವರಯ್ಯನವರು ಹಾಗೂ ಡಾ| ಎಸ್‌.ಜಿ. ಬಾಳೇಕುಂದ್ರಿಯವರು ಕೈಗೊಂಡ ಯೋಜನೆಗಳು ಅವರ ಹೆಸರನ್ನೂ ಇಂದಿಗೂ ಹೇಳುತ್ತವೆ. ಆಧರೆ ಕಟ್ಟಡ ನಿರ್ಮಿಸಿದ ಗುತ್ತಿಗೆದಾರನ ಹೆಸರನ್ನಲ್ಲ, ಆದ್ದರಿಂದ ಅಭಿಯಂತರಾದವರು
ಸೂಕ್ತ ತೀರ್ಮಾನ ಕೈಗೊಂಡು ಯೋಜನೆಗಳನ್ನು ರೂಪಿಸಿ ಅದಕ್ಕೆ
ತಕ್ಕಂತೆ ಸರಿಯಾದ ಅಂದಾಜು ಪತ್ರಿಕೆ ತಯಾರಿಸಿ ಕಾರ್ಯೋನ್ಮುಖರಾದರೆ ಕಾಮಗಾರಿಗಳು ಅವರ ಹೆಸರನ್ನು
ಶಾಶ್ವತವಾಗಿ ಹೇಳುತ್ತವೆ. ಈ ನಿಟ್ಟಿನಲ್ಲಿ ಅಭಿಯಂತರುಗಳು ಕರ್ತವ್ಯನಿರ್ವಹಿಸಬೇಕು ಎಂದರು.

ರಾಜಕಾರಣದಲ್ಲಿ ಯಾವುದೇ ತೀರ್ಮಾನ ಮಾಡಿದರೂ ಕೂಡ ಅದಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆಗಳು ಬರುತ್ತವೆ. ಒಂದು ರೀತಿಯಲ್ಲಿ ರಾಜಕಾರಣವೆಂದರೆ ಗ್ರಾಮೀಣ ಪ್ರದೇಶದಲ್ಲಿರುವ ಅಗಸಿಯಲ್ಲಿನ ಬೋರ್ಗಲ್ಲಿನಂತೆ. ಕೆಲವರು ಬಂದು ನಮಸ್ಕರಿಸಿದರೆ ಶ್ವಾನಗಳು ಬಂದು ಏನೋ ಮಾಡಿದಂತೆ ಹೀಗಾಗುತ್ತದೆ ಇದನ್ನು ನಾವು ಸಹಿಸಿಕೊಂಡು ಉತ್ತಮ ಆಡಳಿತ ನೀಡಲು ಶ್ರಮಿಸುತ್ತೇವೆ ಎಂದರು.

ಅಭಿಯಂತರುಗಳು ಮಾತ್ರ ಯೋಜನೆ ರೂಪಿಸಲು ಸ್ಥಳಕ್ಕೆ ಭೇಟಿ ನೀಡಿ ವಾಸ್ತವಿಕ ಅಂಶಗಳನ್ನು ಅರಿತುಕೊಂಡು ಯೋಜನೆ, ಅಂದಾಜು ಪತ್ರಿಕೆ ತಯಾರಿಸಿ ಗುಣಮಟ್ಟ ಹಾಗೂ ಮಾಪನದಲ್ಲಿ ರಾಜೀ ಮಾಡಿಕೊಳ್ಳಬಾರದು. ಭ್ರಷ್ಟಾಚಾರ ನಿಯಂತ್ರಣಕ್ಕೆ ಸರ್ಕಾರ ವಿಶೇಷ ಕಾಳಜಿವಹಿಸಿದ್ದು ಪ್ರತಿ ಜಿಲ್ಲೆಗೊಂದರಂತೆ ಗುಣನಿಯಂತ್ರಣ ಘಟಕ ಆರಂಭಿಸಲು ಚಿಂತನೆ ನಡೆದಿದೆ ಎಂದು ಪರೋಕ್ಷ ಎಚ್ಚರಿಕೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಂಜಿನಿಯರುಗಳ ಸಂಘದ ರಾಜ್ಯಾಧ್ಯಕ್ಷ ಡಿ.ಎಸ್‌. ದೇವರಾಜ್‌ ಮಾತನಾಡಿ ಸಂಘದ ಕೇಂದ್ರ ಕಚೇರಿಯ ವ್ಯಾಜ್ಯ ಬಗೆಹರಿಸುವಂತೆ ಡಿಸಿಎಂ ಗೋವಿಂದ ಕಾರಜೋಳಗೆ ಕೋರಿದರು. ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ ಮುಖ್ಯ ಅಭಿಯಂತರುಗಳಾದ ಆರ್‌ .ಪಿ.ಕುಲಕರ್ಣಿ, ವಿ.ಕೆ.ಪೋತದಾರ, ಡಿ.ಬಸವರಾಜು, ಪ್ರದೀಪ ಎಂ, ಡಾ|
ರಾಜೇಂದ್ರ ಪೋದ್ದಾರ, ವಾಸಣದ, ಜೆ.ಜಿ. ರಾಠೊಡ ಸೇರಿದಂತೆ ಮೊದಲಾದವರಿದ್ದರು.

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.