ನಿವೇಶನಕ್ಕಾಗಿ 200 ಕುಟುಂಬಗಳ ನಿರಶನ

ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ಮೂರು ದಿನಗಳಿಂದ ನಿರಂತರ ಹೋರಾಟ

Team Udayavani, Oct 5, 2019, 5:24 PM IST

ಆಲ್ದೂರು: ನಿವೇಶನಕ್ಕಾಗಿ ಆಗ್ರಹಿಸಿ ಸತ್ತಿಹಳ್ಳಿ ಗ್ರಾಪಂ ವ್ಯಾಪ್ತಿಯ 200ಕ್ಕೂ ಹೆಚ್ಚು ಕುಟುಂಬಗಳು ಸರ್ಕಾರಿ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ಮೂರು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಸತ್ತಿಹಳ್ಳಿ ಗ್ರಾಪಂ ವ್ಯಾಪ್ತಿಯ ಸರ್ವೆ ನಂ. 167ರಲ್ಲಿ 117 ಎಕರೆ ಜಾಗವಿದ್ದು, ಅದರಲ್ಲಿ ಮಾಚಗೊಂಡನಹಳ್ಳಿ, ಸತ್ತಿಹಳ್ಳಿ, ಎಲೆಗುಡಿಗೆ, ಇಂದಿರಾನಗರ, ಈದ್ಗಾ ಮೊಹಲ್‌,ದೇವಿಗುಡ್ಡ, ಹರವಿನಗಂಡಿ ಪಾಳ್ಯ, ಕಾರೆಹಟ್ಟಿ ಗ್ರಾಮಗಳ ನಿರಾಶ್ರಿತ ಕುಟುಂಬಗಳು ಗುಡಿಸಲುಗಳನ್ನು ನಿರ್ಮಿಸಿಕೊಂಡು ನಿವೇಶನಕ್ಕಾಗಿ ಧರಣಿ ನಡೆಸುತ್ತಿವೆ.

ಸರ್ವೆ ನಂ. 167ರಲ್ಲಿ 117 ಎಕರೆ ಸರ್ಕಾರಿ ಕಂದಾಯ ಜಾಗವಿದ್ದು, ಅದು ಬಹುತೇಕ ಒತ್ತುವರಿಯಾಗಿ ಕಾμ ತೋಟಗಳಾಗಿವೆ. ಈಗ ಕೇವಲ 6 ಎಕರೆ ಜಾಗ ಮಾತ್ರ ಉಳಿದಿದೆ. ಜಿಲ್ಲಾಧಿಕಾರಿಗಳು 2006ರಲ್ಲಿ 10 ಎಕರೆ ಜಾಗವನ್ನು ಆಶ್ರಯ ವಸತಿ ಯೋಜನೆಗೆ ಕಾಯ್ದಿರಿಸಿದ್ದು, ಈ ಜಾಗವನ್ನು ನಿವೇಶನವನ್ನಾಗಿ ಪರಿವರ್ತಿಸಲು ಸಂಬಂಧಪಟ್ಟ ಗ್ರಾಪಂ ವಿಫಲವಾಗಿದೆ ಎಂದು ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವ ಹಾಂದಿ ಗ್ರಾಮದ ವಿನೋದ್‌ ದೂರಿದರು.

ಸರ್ವೆ ನಂಬರ್‌ 167ರಲ್ಲಿರುವ 117 ಎಕರೆ ಜಾಗ ಪ್ರಭಾವಿಗಳಿಂದ ಒತ್ತುವರಿಯಾಗಿದೆ. ಫಾರಂ ನಂಬರ್‌ 57ರಲ್ಲಿ ಇದೇ ಜಾಗಕ್ಕೆ 74 ಜನ ಅರ್ಜಿ ಸಲ್ಲಿಸಿದ್ದಾರೆ. ಫಾರಂ ನಂಬರ್‌ 53 ಹಾಗೂ 94 ಸಿ ನಲ್ಲಿ ಸಾಕಷ್ಟು ಜನ ಜಾಗ ಮಂಜೂರು ಮಾಡಿಸಿಕೊಂಡಿದ್ದು, ಉಳಿದಿರುವ 16 ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳು ನಿವೇಶನಕ್ಕೆ ಕಾಯ್ದರಿಸಿದ್ದಾರೆ. ಈ ಜಾಗದಲ್ಲಿ ಗುಡಿಸಲು ಹಾಕಿಕೊಂಡಿದ್ದೇವೆ.

ನಮ್ಮನ್ನು ತೆರವು ಮಾಡಿಸಲು ಅರಣ್ಯ ಇಲಾಖೆ ಮೇಲೆ ಪ್ರಭಾವಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು. ಇಲ್ಲಿ ಗುಡಿಸಲು ಹಾಕಿಕೊಂಡ ಕುಟುಂಬಗಳು ಬಹುತೇಕ ಕಾರ್ಮಿಕರಾಗಿದ್ದು, ಸೂರಿಗಾಗಿ 20 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಕೂಲಿ ಕೆಲಸವಿಲ್ಲದೇ ಒಂದು ಒತ್ತು ಊಟಕ್ಕೂ ಪರದಾಡುತ್ತಿರುವ ಈ ಕುಟುಂಬಗಳಿಗೆ ವಾಸಿಸಲು ಮನೆಯಿಲ್ಲ. ಬಾಡಿಗೆ ಮನೆಗೆ ಮೂರು ಸಾವಿರ ರೂ.ಬಾಡಿಗೆ ಹಾಗೂ 50 ಸಾವಿರ ರೂ. ಅಡ್ವಾನ್ಸ್‌ ನೀಡಬೇಕು. ಕೂಲಿ ಮಾಡುವವರು ಇಷ್ಟು ಹಣ ಎಲ್ಲಿಂದ ತರಲು ಸಾಧ್ಯ? ಈ ಸಮಸ್ಯೆ ಬಗೆಹರಿಸಬೇಕಾದ ಗ್ರಾಮ ಪಂಚಾಯಿತಿ ಪ್ರಭಾವಿಗಳಿಗೆ ಮಣಿದು ಕೈಕಟ್ಟಿ ಕುಳಿತಿದೆ ಎಂದು ದೂರಿದರು.

ಅರಣ್ಯ ಇಲಾಖೆಯವರು ನಮಗೆ ತೊಂದರೆ ಕೊಡುತ್ತಿದ್ದಾರೆ. ವಲಯ ಅರಣ್ಯಾಧಿಕಾರಿ ಸ್ಥಳಕ್ಕೆ ಬಂದು ಬೆದರಿಕೆ ಹಾಕುತ್ತಿದ್ದಾರೆ. ಜೊತೆಗೆ ಪೊಲೀಸ್‌ ಇಲಾಖೆ ಮುಖಾಂತರ ನಮ್ಮನ್ನು ತೆರವು ಮಾಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೋರಾಟದ ಮುಂಚೂಣಿಯಲ್ಲಿರುವ ರವಿ, ಸುಂದರೇಶ್‌, ವಿನೋದ್‌ರಾಜ್‌ ಅವರು ಅಸಮಧಾನ ವ್ಯಕ್ತಪಡಿಸಿದರು.

ಆಲ್ದೂರು ವಲಯ ಅರಣ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಹಲವು ಬಾರಿ ಪ್ರಯತ್ನಿಸಿದರೂ ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ. ಒಂದು ಬಾರಿ ಕರೆ ಸ್ವೀಕರಿಸಿದರಾದರೂ ಮಾಹಿತಿ ನೀಡದೆ ಸಂಪರ್ಕ ಕಡಿತಗೊಳಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮಲೆನಾಡಿನ ಭೂರಮೆಯ ಸೌಂದರ್ಯವೇ ಬೇರೆ ತೆರನಾದುದು. ಭೂಮಿ ಹುಣ್ಣಿಮೆ ಬರುವಾಗ ಮಲೆನಾಡಿನ ಅಡಕೆ ತೋಟಗಳಲ್ಲಿ ಫ‌ಸಲಿನ ಸಮೃದ್ಧಿ. ಬೆಳೆದು ನಿಂತ ಹಸಿರು ಬಾಳೆಗೊನೆಗಳಿಂದ,...

  • ಧಾನ್ಯಗಳನ್ನು ಸಮರ್ಪಕವಾಗಿ ದಾಸ್ತಾನು ಮಾಡುವುದು ಅತ್ಯಗತ್ಯ. ಇಲ್ಲದಿದ್ದರೆ ಕೀಟಬಾಧೆ ಅಧಿಕವಾಗಿ ಭಾರಿ ನಷ್ಟ ಉಂಟಾಗಬಹುದು. "ಮುಂಜಾಗ್ರತೆ ವಹಿಸಿದ್ದೆವು. ಆದರೂ...

  • ಕೃಷಿ ಮೇಲಿನ ಪ್ರೀತಿಯಿಂದ ಓದನ್ನು ಅರ್ಧಕ್ಕೇ ನಿಲ್ಲಿಸಿದ ಪರಮೇಶ್ವರನ್‌ ಇಂದು ಪೂರ್ಣ ಪ್ರಮಾಣದ ಕೃಷಿಕ. ಅಷ್ಟೇ ಅಲ್ಲ, ಅವರು ಸೀಡ್‌ ಬ್ಯಾಂಕ್‌ ಸ್ಥಾಪನೆ ಮಾಡಿರುವುದಲ್ಲದೆ,...

  • ಗುಡ್ಡಗಾಡು ಪ್ರದೇಶದಲ್ಲಿ ಕೃಷಿ ಮಾಡುವವರು ವಿರಳ. ಕಲ್ಲುಮಣ್ಣುಗಳಿಂದ ಕೂಡಿದ ಜಾಗದಲ್ಲಿ ಬೆಳೆ ತೆಗೆಯುತ್ತೇನೆಂದು ಹೊರಟಾಗ ಅನೇಕರು ಆಡಿಕೊಂಡಿದ್ದರು. ಆದರೆ...

  • ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ...