ಹಂದಿಗನೂರು ಗ್ರಾಮಸ್ಥರಿಂದ ಹೊಳೆಯಲ್ಲಿ ಸಿಲುಕಿದ ತಾಯಿ-ಮಗನ ರಕ್ಷಣೆ

Team Udayavani, Oct 21, 2019, 12:57 PM IST

ಆನಂದಪುರ: ಸಮೀಪದ ಹೊಸೂರು ಗ್ರಾಪಂ ವ್ಯಾಪ್ತಿಯ ಹಂದಿಗನೂರುನ ವಾಸಿ ನಾಗರತ್ನ ಹಾಗೂ ಮಗ ಮನೋಜ್‌ ಹೊಳೆಯನ್ನು ದಾಟುವಾಗ ನೀರಿಗೆ ಸಿಲುಕಿದ್ದು ಗ್ರಾಮಸ್ಥರು ಇವರನ್ನು ರಕ್ಷಣೆ ಮಾಡಿದ ಘಟನೆ ಭಾನುವಾರ ನಡೆದಿದೆ.

ತಮ್ಮ ಮನೆಯ ಎತ್ತುಗಳನ್ನು ಮೇಯಿಸಲು ಹೋಗಿದ್ದು ಮಧ್ಯಾಹ್ನ ಎತ್ತುಗಳೊಂದಿಗೆ ಹೊಳೆ ದಾಟಿ ಮನೆಗೆ ತೆರಳುವಾಗ ಅಡೂರು ಮತ್ತು ಬಳ್ಳಿಬೈಲು ಗ್ರಾಮದಲ್ಲಿ ಸುರಿದ ಭಾರೀ ಮಳೆಯಿಂದ ಹೊಳೆಯಲ್ಲಿ ಒಂದೇ ಸಾರಿ ಭಾರೀ ಪ್ರಮಾಣದ ನೀರು ಹರಿದು ಬಂದಿದೆ. ತಾಯಿ- ಮಗ ಎತ್ತುಗಳನ್ನು ಹೊಳೆ ದಾಟಿಸುತಿದ್ದಂತೆ ಅಪಾರ ನೀರು ಬಂದಿದ್ದು ದಾಟಲಾಗದೆ ಹೊಳೆಯ ಪಕ್ಕದಲ್ಲಿರುವ ಮರದಲ್ಲಿ ಆಶ್ರಯ ಪಡೆದು ತಾಯಿ-ಮಗ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಇದನ್ನು ಕೇಳಿದ ಸ್ಥಳೀಯ ಗ್ರಾಮಸ್ಥರು ಹೊಳೆಯ ಬಳಿ ಧಾವಿಸಿದ್ದಾರೆ.

ಇವರಲ್ಲಿ ಈಶ್ವರ ಹೊಳೆಕೋಪ್ಪ ಎಂಬುವರು ಹೊಳೆ ದಾಟಿ ತಾಯಿ-ಮಗನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಸ್ಥಳೀಯರಾದ ದೇವರಾಜ್‌ ವರದಾಮೂಲ ಹಾಗೂ ಅನೇಕರು ಜೊತೆಗಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ