Udayavni Special

ಬರ; 9.54 ಕೋಟಿ ಅನುದಾನ ಬಳಕೆ

ಪ್ರಾಮಾಣಿಕವಾಗಿ ಕೆಲಸ ಮಾಡಿ •ಬಹುಹಳ್ಳಿ ನೀರು ಪೂರೈಕೆ ಯೋಜನೆ ಸಮರ್ಪಕವಾಗಿ ನಿರ್ವಹಿಸಿ

Team Udayavani, Jul 11, 2019, 12:56 PM IST

11-July-23

ಬಾಗಲಕೋಟೆ: ನಗರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ್‌ ಗಿರಿನಾಥ ಮಾತನಾಡಿದರು.

ಬಾಗಲಕೋಟೆ: ಜಿಲ್ಲೆಯಲ್ಲಿ ಕುಡಿಯುವ ನೀರು ಸೇರಿದಂತೆ ಉದ್ಯೋಗ, ಕೃಷಿ, ಅಭಿವೃದ್ಧಿಗೆ ಅಧಿಕಾರಿಗಳು ದಕ್ಷತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬರ, ಕುಡಿಯುವ ನೀರು, ಕೃಷಿ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಬೇಸಿಗೆಯಲ್ಲಿ ಕೃಷ್ಣಾ ನದಿಯಲ್ಲಿ ನೀರಿಲ್ಲದೇ ಸಮಸ್ಯೆ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಅಧಿಕಾರಿಗಳು ಕುಡಿಯುವ ನೀರು ಸರಬರಾಜಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಲು ಹಾಗೂ ಈ ನಿಟ್ಟಿನಲ್ಲಿ ರೈತ ಸಂಘದವರ ಜೊತೆ ಚರ್ಚಿಸುವಂತೆ ತಿಳಿಸಿದರು.

ತಾಲೂಕಾ ಟಾಸ್ಕ್ಪೋರ್ಸ್‌ ಟಿಟಿ ಎಫ್‌ 1,2, ಸಿ ಆರ್‌ ಎಫ್‌ ಹಾಗೂ 14ನೇ ಹಣಕಾಸು ಸೇರಿದಂತೆ ಜೊತೆಯಲ್ಲಿ ಒಟ್ಟು 9.54 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದ್ದು ಒಟ್ಟು 362 ಕಾಮಗಾರಿ ಕೈಗೊಳಲಾಗಿದೆ. ಉಳಿದ ಬಾಕಿ ಅನುದಾನದಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಡಿ ಸಮಸ್ಯಾತ್ಮಕ ಗ್ರಾಮಗಳಲ್ಲಿ ಕೈಗೊಳ್ಳಬೇಕು. 362 ಕಾಮಗಾರಿಗಳನ್ನು ಗುಣಮಟ್ಟ ಹಾಗೂ ಸ್ಥಿತಿಗತಿಯನ್ನು ಉಪವಿಭಾಗಾಧಿಕಾರಿಗಳು ಪರಿಶೀಲಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಸದ್ಯ ಕೃಷಿ ಚಟುವಟಿಕೆ ತೀವ್ರಗೊಂಡಿದ್ದು ಮತ್ತು ತೃಪ್ತಿದಾಯಕ ಮಳೆಯಾಗಿದ್ದರಿಂದ ಜಾನುವಾರು ಗಳಿಗೆ ಸದ್ಯ ಮೇವಿನ ಅಭಾವ ಇಲ್ಲವೆಂದು ಜಿಲ್ಲಾಧಿಕಾರಿ ಆರ್‌ .ರಾಮಚಂದ್ರನ್‌ ತಿಳಿಸಿದರು.

ಪಶುಸಂಗೋಪನಾ ಇಲಾಖೆಯಲ್ಲಿ ಪ್ರತಿ ಬಾರಿಯು ಹೊರಜಿಲ್ಲೆಗಳಿಂದ ಮೇವು ತರಿಸಿಕೊಳ್ಳಲಾಗುತ್ತಿತ್ತು. ಇನ್ನು ಮುಂದೆ ಈ ಭಾಗದ ರೈತರಲ್ಲೂ ಸಹ ಮೇವು ಖರೀದಿಸುವ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ನೆರೆಯ ಜಿಲ್ಲೆಗಳಾದ ರಾಯಚೂರಿನ ಸಿಂಧನೂರು, ಲಿಂಗಸುಗೂರು, ವಿಜಯಪುರ ಜಿಲ್ಲೆಗಳಿಂದ ಮೇವು ತರಲಾಗುತ್ತಿತ್ತು. ಇಲ್ಲಿಯೂ ಸಹ ರೈತರು ಮೇವು ಬೆಳೆಯುತ್ತಿದ್ದು, ಈ ಭಾಗದ ರೈತರು ಸಹ ಸರಬರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳಬಹುದಾಗಿದೆ ಎಂದು ಹೇಳಿದರು.

ಪ್ರಸಕ್ತ ಸಾಲಿನ ಸೆ‌ಪೆ‌rಂಬರ್‌ ತಿಂಗಳದಲ್ಲಿ ಮೇವು ಸಮೀಕ್ಷೆ ಕೈಗೊಳ್ಳುವಂತೆ ಕಾರ್ಯದರ್ಶಿಗಳು ಸೂಚಿಸಿ ದರು. ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರರು ಕೃಷಿ ಅಧಿಕಾರಿಗಳಿಗೆ ಹೊಬಳಿವಾರು ಮೇವು ಸಮೀಕ್ಷೆಯಲ್ಲಿ ಪಾಲ್ಗೋಳುವಂತೆ ತಿಳಿಸಿದ ಅವರು, ಸಾವಿರಾರು ರೈತರಿಗೆ ಮೇವಿನ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಆಸಕ್ತ ರೈತರಿಂದ ಮೇವು ಖರೀದಿಸಿ ಎಂದರು.

ದನಕರುಗಳಿಗಾಗಿ ನಿರ್ಮಿಸಿದ ನೀರಿನ ತೊಟ್ಟಿಗಳ ಸ್ಥಿತಿಗತಿಯನ್ನು ಆಯಾ ಅಧಿಕಾರಿಗಳು ಪರಿಶೀಲಿಸಿ ರಿಪೇರಿ ಇದ್ದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಸರಿಪಡಿಸುವಂತೆ ಕಾರ್ಯದರ್ಶಿಗಳು ತಿಳಿಸಿದರು.

ಗ್ರಾಮೀಣ ಹಾಗೂ ನಗರ ಕುಡಿಯುವ ನೀರು ಸರಬರಾಜಿಗೆ ಸಾಕಷ್ಟು ಅನುದಾನ ಲಭ್ಯವಿದ್ದು ಬಹು ಹಳ್ಳಿ ಯೋಜನೆ ಯಶಸ್ವಿಗೊಳಿಸಬೇಕು. ನದಿ ಪಾತ್ರದಲ್ಲಿರುವ ಯೋಜನೆಗಳಲ್ಲಿ ಸಮಸ್ಯೆಯಾಗದಂತೆ ಮಳೆಗಾಲದಲ್ಲಿಯೇ ನೀರು ಸಂಗ್ರಹ ಹಾಗೂ ಪಂಪ ಸ್ಥಿತಿಗತಿ ಪರಿಶೀಲಿಸಬೇಕು ಎಂದರು.

ಬಹುಹಳ್ಳಿ ನೀರಿನ ಯೊಜನೆಯನ್ನು ಸರಿಯಾಗಿ ನಿರ್ವಹಿಸಬೇಕು. ಜಿಲ್ಲೆಯಲ್ಲಿ 36 ಬಹುಹಳ್ಳಿ ಯೋಜನೆ ಪೈಕಿ ನಾಗರಾಳ, ಹಾಗೂ ಮೆಟಗುಡ್ಡ ಯೊಜನೆಗಳು ವಿಫಲವಾಗಿವೆ. ಎರಡು ಯೋಜನೆಗಳು ಪ್ರಗತಿಯಲ್ಲಿದ್ದು. 32 ಯೋಜನೆಗಳು ಚಾಲ್ತಿಯಲ್ಲಿದೆ. ವಿಫಲ ಹಾಗೂ ಅಪೂರ್ಣ ಯೋಜನೆ, ಜಲ ಮಟ್ಟದ ಜಾಕ್‌ವೆಲ್ ಹಾಗೂ ಸರಬರಾಜು ಪ್ಲಾನ್‌ಗಳನ್ನು ಸರಿಯಾಗಿ ನಿರ್ವಹಿಸುವಂತೆ ಸೂಚಿಸಿದರು.

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಒಟ್ಟು 79.50 ಕೋಟಿ ರೂ. ಪ್ರಸ್ತಾವನೆ ಸರಕಾರಕ್ಕೆ ಕಳುಹಿಸಲಾಗಿದೆ. ಈ ಪೈಕಿ 30 ಕೋಟಿ ಬಹುಹಳ್ಳಿ ಯೋಜನೆ ಹಾಗೂ 9.90 ಕೋಟಿಯನ್ನು ಸಮಸ್ಯಾತ್ಮಕ ಗ್ರಾಮಗಳಲ್ಲಿ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ್‌ ತಿಳಿಸಿದರು.

ಕುಡಿಯುವ ನೀರಿನ 15 ನಗರ ಸ್ಥಳಿಯ ಸಂಸ್ಥೆಗಳಲ್ಲಿ 5.13 ಕೋಟಿ ರೂ. ವೆಚ್ಚದಲ್ಲಿ 162 ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಅಧಿಕಾರಿ ಸಭೆಗೆ ತಿಳಿಸಿದರು.

ನರೇಗಾ ಯೋಜನೆಯಡಿಯಲ್ಲಿ ಬಾಗಲಕೋಟೆ 5ನೇ ಸ್ಥಾನದಲ್ಲಿದ್ದು ಉದ್ಯೋಗ ಖಾತ್ರಿಯಡಿ ಸುಸ್ಥಿರ ಕಾಮಗಾರಿ ಕೈಗೊಂಡು ಚೆಕ್‌ ಡ್ಯಾಂ ಬಂಡ್‌ ಹಾಗೂ ನೀರು ಸಂಗ್ರಹಣಾ ಕಾಮಗಾರಿಗಳ ಸ್ಥಿತಿಗತಿಯನ್ನು ಅಧಿಕಾರಿಗಳು ಆಗಾಗ ಪರಿಶೀಲಿಸುವಂತೆ ತಿಳಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಂಪುಟ ಸಂಕಷ್ಟ ಮತ್ತೆ ಮುಂದೂಡಿಕೆ: ಶಾ ಭೇಟಿಯಾಗಿ ‘ವಿಶೇಷ ತೀರ್ಮಾನ’ ಮಾಡುತ್ತೇನೆ ಎಂದ BSY

ಸಂಪುಟ ಸಂಕಷ್ಟ ಮತ್ತೆ ಮುಂದುವರಿಕೆ: ಶಾ ಭೇಟಿಯಾಗಿ ‘ವಿಶೇಷ ತೀರ್ಮಾನ’ ಮಾಡುತ್ತೇನೆ ಎಂದ BSY

kiru-lekhana-3-(3)-copy

ನಿಂಬೆ ಹಣ್ಣಿನಿಂದ ಆರೋಗ್ಯ ವೃದ್ಧಿ

ಅರಬ್ಬಿ ಸಮುದ್ರದಲ್ಲಿ ಮಿಗ್ 29 ಕೆ ತರಬೇತಿ ವಿಮಾನ ಪತನ: ಓರ್ವ ಪೈಲಟ್ ರಕ್ಷಣೆ

ಅರಬ್ಬಿ ಸಮುದ್ರದಲ್ಲಿ ಮಿಗ್ 29 ಕೆ ತರಬೇತಿ ವಿಮಾನ ಪತನ: ಓರ್ವ ಪೈಲಟ್ ರಕ್ಷಣೆ

01..

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಪತ್ನಿ ;ಬೆಂಕಿ ಹಚ್ಚಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪತಿ!

ಏಕದಿನ ಸರಣಿಗೆ ನಟರಾಜನ್: ಟೆಸ್ಟ್ ನಿಂದ ಇಶಾಂತ್ ಔಟ್, ರೋಹಿತ್ ಅನಿಶ್ಚಿತತೆ ಮುಂದುವರಿಕೆ

ಏಕದಿನ ಸರಣಿಗೆ ನಟರಾಜನ್: ಟೆಸ್ಟ್ ನಿಂದ ಇಶಾಂತ್ ಔಟ್, ರೋಹಿತ್ ಅನಿಶ್ಚಿತತೆ ಮುಂದುವರಿಕೆ

ಹೊಸ ತಿರುವು ಪಡೆದ ಶ್ವಾನ ಮಾಲೀಕತ್ವ ಪ್ರಕರಣ: ಶ್ವಾನದ ಡಿಎನ್‌ಎ ಟೆಸ್ಟ್‌ಗೆ ನಿರ್ಧಾರ

ಹೊಸ ತಿರುವು ಪಡೆದ ಶ್ವಾನ ಮಾಲೀಕತ್ವ ಪ್ರಕರಣ: ಶ್ವಾನದ ಡಿಎನ್‌ಎ ಟೆಸ್ಟ್‌ಗೆ ನಿರ್ಧಾರ

ಭಾರತ- ಆಸೀಸ್ ಮೊದಲ ಏಕದಿನ ಪಂದ್ಯ: ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ : ಮಯಾಂಕ್ ಓಪನಿಂಗ್

ಭಾರತ- ಆಸೀಸ್ ಮೊದಲ ಏಕದಿನ ಪಂದ್ಯ: ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ : ಮಯಾಂಕ್ ಓಪನಿಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಾಯಿಯ ಸಾವಿಗೆ ಕಾರಣವಾಯ್ತು ಮಗನ ವಿಡಿಯೋ ಕಾಲ್ !

ತಾಯಿಯ ಸಾವಿಗೆ ಕಾರಣವಾಯ್ತು ಮಗನ ವಿಡಿಯೋ ಕಾಲ್ !

denige

ಅಮೀನಗಡ: ಕಾಂಗ್ರೆಸ್ ಭವನಕ್ಕಾಗಿ ಜೋಳಿಗೆ ಹಿಡಿದ ಜಿಲ್ಲಾಧ್ಯಕ್ಷ !

ಬಾರದ ವರದಿ; ಕಾಲೇಜಿಗೆ ಬರ್ತಿಲ್ಲ ವಿದ್ಯಾರ್ಥಿಗಳು

ಬಾರದ ವರದಿ; ಕಾಲೇಜಿಗೆ ಬರ್ತಿಲ್ಲ ವಿದ್ಯಾರ್ಥಿಗಳು

bk-tdy-1

ಪಕ್ಷದ ಕಚೇರಿ ಕಟ್ಟಡಕ್ಕೆ ಜೋಳಿಗೆ ಹಾಕಿದ ಜಿಲ್ಲಾಧ್ಯಕ್ಷ!

ಬಲ ತುಂಬುತ್ತಿದೆ ಕೂಲಿಗಾಗಿ ಕಾಳು ಯೋಜನೆ

ಬಲ ತುಂಬುತ್ತಿದೆ ಕೂಲಿಗಾಗಿ ಕಾಳು ಯೋಜನೆ

MUST WATCH

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

ಹೊಸ ಸೇರ್ಪಡೆ

ಸಂಪುಟ ಸಂಕಷ್ಟ ಮತ್ತೆ ಮುಂದೂಡಿಕೆ: ಶಾ ಭೇಟಿಯಾಗಿ ‘ವಿಶೇಷ ತೀರ್ಮಾನ’ ಮಾಡುತ್ತೇನೆ ಎಂದ BSY

ಸಂಪುಟ ಸಂಕಷ್ಟ ಮತ್ತೆ ಮುಂದುವರಿಕೆ: ಶಾ ಭೇಟಿಯಾಗಿ ‘ವಿಶೇಷ ತೀರ್ಮಾನ’ ಮಾಡುತ್ತೇನೆ ಎಂದ BSY

kiru-lekhana-3-(3)-copy

ನಿಂಬೆ ಹಣ್ಣಿನಿಂದ ಆರೋಗ್ಯ ವೃದ್ಧಿ

ಅರಬ್ಬಿ ಸಮುದ್ರದಲ್ಲಿ ಮಿಗ್ 29 ಕೆ ತರಬೇತಿ ವಿಮಾನ ಪತನ: ಓರ್ವ ಪೈಲಟ್ ರಕ್ಷಣೆ

ಅರಬ್ಬಿ ಸಮುದ್ರದಲ್ಲಿ ಮಿಗ್ 29 ಕೆ ತರಬೇತಿ ವಿಮಾನ ಪತನ: ಓರ್ವ ಪೈಲಟ್ ರಕ್ಷಣೆ

ಎಂಟು ತಿಂಗಳ ಬಳಿಕ ಒಂದೇ ದಿನ ಮೂರು ಸಿನಿಮಾ

ಎಂಟು ತಿಂಗಳ ಬಳಿಕ ಒಂದೇ ದಿನ ಮೂರು ಸಿನಿಮಾ

01..

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಪತ್ನಿ ;ಬೆಂಕಿ ಹಚ್ಚಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.