ಜಮಖಂಡಿಯಲ್ಲಿ 100 ಹಾಸಿಗೆಗಳ ಕೋವಿಡ್ ಸೆಂಟರ್‌


Team Udayavani, May 2, 2021, 7:04 PM IST

yyryr

ಜಮಖಂಡಿ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಜಿಲ್ಲೆಗೊಂದು ಕೊರೊನಾ ಸೆಂಟರ್‌ ನಿರ್ಮಿಸಿದೆ. ಆದರೆ, ತಾಲೂಕಿನಲ್ಲಿ ಸಹಕಾರಿ ತತ್ವದಡಿಯಲ್ಲಿ ಕೊರೊನಾ ಸೆಂಟರ್‌ ಆರಂಭಿಸುವ ಚಿಂತನೆಗಳು ನಡೆದಿವೆ.

ತಾಲೂಕಿನಲ್ಲಿ ಸರಕಾರಿ ಇಲಾಖೆ, ಭಾರತೀಯ ವೈದ್ಯಕೀಯ ಸಂಸ್ಥೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ 100 ಹಾಸಿಗೆಗಳ ಕೊರೊನಾ ಸೆಂಟರ್‌ ಆರಂಭಿಸುವ ಚಿಂತನೆ ನಡೆದಿದ್ದು, ಎರಡು ದಿನಗಳಲ್ಲಿ ರೂಪರೇಷೆ ಪೂರ್ಣಗೊಳ್ಳಲಿವೆ. ಕೊರೊನಾ ಸೋಂಕಿತರಿಗೆ ದಿನದ 24 ಗಂಟೆ ಸೇವೆ ಲಭಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದ್ದು, ಸರಕಾರಿ ಯಂತ್ರ ಮತ್ತು ಖಾಸಗಿ ಸಂಸ್ಥೆಗಳು ಅಂದಾಜು 70:30 ಅನುಪಾತದಲ್ಲಿ ಕೆಲಸ ನಡೆಯಲಿದೆ.

 ಶೇ.70ರ ಅನುಪಾತದಲ್ಲಿ:

100 ಹಾಸಿಗೆ ಕೊರೊನಾ ಸೆಂಟರ್‌ ಆರಂಭಕ್ಕೆ ಚಿಂತನೆಗಳು ನಡೆಯುತ್ತಿದ್ದು, ಆರೋಗ್ಯ, ಕಂದಾಯ ಇಲಾಖೆ, ನಗರಸಭೆ ಮತ್ತು ಪೊಲೀಸ್‌ ಇಲಾಖೆ ಆರಕ್ಷಕರು ಶೇ. 70ರ ಅನುಪಾತದಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಆರೋಗ್ಯ ಇಲಾಖೆ ವಿವಿಧ ವಿಭಾಗಗಳ ವೈದ್ಯರು, ನಸ್‌ ìಗಳು, ಆರೋಗ್ಯ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು ಸೇವೆ ಮಾಡಲಿದ್ದಾರೆ. ಕಂದಾಯ ಇಲಾಖೆ 100 ಹಾಸಿಗೆ ಕೊರೊನಾ ಸೆಂಟರಕ್ಕೆ ಅಗತ್ಯ ಸುಸಜ್ಜಿತ ಕಟ್ಟಡ ನೀಡಲಿದೆ. ಪೊಲೀಸ್‌ ಇಲಾಖೆ ಕೊರೊನಾ ಸೆಂಟರ್‌ ಒಳ-ಹೊರಾಂಗಣ ಭದ್ರತೆ ವಹಿಸಿಕೊಳ್ಳಲಿದೆ. ನಗರಸಭೆ ಕೊರೊನಾ ಸೆಂಟರ್‌ ಒಳಗೆ- ಹೊರಗಡೆ ಸ್ವತ್ಛತೆ ಕಾಪಾಡಲಿದೆ. ಆಶಾ ಕಾರ್ಯಕರ್ತೆಯರು ರೋಗಿಗಳ ಚಲನವಲನ-ಆರೋಗ್ಯ ವಿಚಾರಣೆ ನಡೆಸಲಿದ್ದಾರೆ.

ಶೇ.30ರ ಅನುಪಾತ:

ಸಹಕಾರ ತತ್ವದಡಿಯಲ್ಲಿ ನಿರ್ಮಾಣವಾಗಲಿರುವ ಕೊರೊನಾ ಸೆಂಟರ್‌ದಲ್ಲಿ ಖಾಸಗಿ ವೈದ್ಯರ ಪಾತ್ರ ಬಹುಮುಖ್ಯ. ದಿನದ 24 ಗಂಟೆ ಸೇವೆ ನಿರ್ವಹಿಸುವ ಕೊರೊನಾ ಸೆಂಟರ್‌ ದಲ್ಲಿ 8 ಗಂಟೆ ನಿಗದಿಪಡಿಸಿದ ಅವಧಿ ಯಲ್ಲಿ ಮೂರು ವಿಭಾಗದಲ್ಲಿ ವೈದ್ಯರು, ನರ್ಸ್‌ಗಳ ತಂಡ ಕೆಲಸ ನಿರ್ವಹಿಸುವ ಯೋಜನೆ ಇದಾಗಿದೆ. 24 ಗಂಟೆ ಸೇವೆ ಸಲ್ಲಿಸುವ ಕೊರೊನಾ ಸೆಂಟರ್‌ನಲ್ಲಿ ರೋಗಿಗಳಿಗೆ ನೀರು, ವಿದ್ಯುತ್‌, ಶೌಚಾಲಯ, ಸ್ವತ್ಛತೆ, ಭದ್ರತೆ, ಉಪಹಾರ, ಊಟದ ವ್ಯವಸ್ಥೆ ನಡೆಯಲಿದೆ. ಈಗಾಗಲೇ ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ಕಂದಾಯ, ಆರೋಗ್ಯ ಇಲಾಖೆ, ನಗರಸಭೆ, ಪೊಲೀಸ್‌ ಮತ್ತು ಭಾರತೀಯ ವೈದ್ಯಕೀಯ ಸಂಸ್ಥೆಯ ಖಾಸಗಿ ಆಸ್ಪತ್ರೆಗಳ ವೈದ್ಯರ ಜಂಟಿ ಸಭೆ ನಡೆದಿದ್ದು, ಬಹುತೇಕ ಯಶಸ್ವಿಯಾಗಿದೆ. ತಾಲೂಕಿನ ಕೊರೊನಾ ಸೋಂಕಿತರಿಗೆ ಉತ್ತಮ ಸೇವೆ ಲಭ್ಯವಾಗಲಿದೆ.

ಕಂದಾಯ ಇಲಾಖೆ 100 ಹಾಸಿಗೆಯ ಸುಸಜ್ಜಿತ ಕಟ್ಟಡ ನೀಡಲಿದೆ. ಆರೋಗ್ಯ ಇಲಾಖೆ ಆಕ್ಸಿಜನ್‌, ರೋಗಿಗಳಿಗೆ ಪಿಪಿ ಕಿಟ್‌, ಔಷಧಿ  ಸಹಿತ ಇತರೇ ಪರಿಕರ ನೀಡಲಿದೆ. ಪೊಲೀಸ್‌ ಇಲಾಖೆ ಸುರಕ್ಷತೆ, ಭದ್ರತೆ ವ್ಯವಸ್ಥೆ ಮಾಡಲಿದೆ. ನಗರಸಭೆ ಕಾರ್ಮಿಕರು ಸ್ವತ್ಛತೆ ಕಾಪಾಡಲಿದೆ. ಖಾಸಗಿ ವೈದ್ಯರ ತಂಡ ದಿನದ 24 ಗಂಟೆ ರೋಗಿಗಳಿಗೆ ಚಿಕಿತ್ಸೆ ನೀಡಲಿದೆ.

ಟಾಪ್ ನ್ಯೂಸ್

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ತೆರಿಗೆ ಪಾವತಿ ಮಾಡುವವರಿಗೆ ಅಟಲ್‌ ಪಿಂಚಣಿ ಇಲ್ಲ

ತೆರಿಗೆ ಪಾವತಿ ಮಾಡುವವರಿಗೆ ಅಟಲ್‌ ಪಿಂಚಣಿ ಇಲ್ಲ

ತೇಜಸ್ವಿ ಸೂರ್ಯ ಭೇಟಿ ವೇಳೆ ಗಲಭೆ: ಎಫ್ಐಆರ್‌ ದಾಖಲು

ತೇಜಸ್ವಿ ಸೂರ್ಯ ಭೇಟಿ ವೇಳೆ ಗಲಭೆ: ಎಫ್ಐಆರ್‌ ದಾಖಲು

cm-bommai

ಎಸಿಬಿ ರದ್ದು; ಚರ್ಚೆಯ ನಂತರ ಮುಂದಿನ ತೀರ್ಮಾನ: ಸಿಎಂ ಬೊಮ್ಮಾಯಿ

ಆವಾಸ್‌ ಯೋಜನೆ 2024ರವರೆಗೆ ವಿಸ್ತರಣೆ

ಆವಾಸ್‌ ಯೋಜನೆ 2024ರವರೆಗೆ ವಿಸ್ತರಣೆ

ಕೋವಿಡ್‌: ರಾಜ್ಯದಲ್ಲಿ ಮರಣ ಪ್ರಮಾಣ ಏರಿಕೆ

ಕೋವಿಡ್‌: ರಾಜ್ಯದಲ್ಲಿ ಮರಣ ಪ್ರಮಾಣ ಏರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21-water

ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 10 ಸಾವಿರ ಕ್ಯೂಸೆಕ್ ನೀರು

7

17ರಂದು ಮಹಾಲಿಂಗಪುರ ಬಂದ್‌

thumb 4 news

ನೇಕಾರನ ಮಗನಿಗೆ ವಾರ್ಷಿಕ 21.35 ಲಕ್ಷ ಆಫರ್‌

1-sdsdasdada

ತಾಲೂಕು ಘೋಷಣೆಗೆ ಆ16 ರ ಗಡುವು: 17 ರಂದು ಮಹಾಲಿಂಗಪುರ ಬಂದ್

19-flood

ಉಕ್ಕಿ ಹರಿಯುತ್ತಿರುವ ಘಟಪ್ರಭೆ: ಮುಂದುವರೆದ ಪ್ರವಾಹ ಸ್ಥಿತಿ

MUST WATCH

udayavani youtube

ರಸ್ತೆ ಗುಂಡಿಯ ಕೊಳಚೆ ನೀರಿನಲ್ಲೇ ಯೋಗ, ಸ್ನಾನ ಮಾಡಿದ ವ್ಯಕ್ತಿ

udayavani youtube

ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ

udayavani youtube

ವರ್ಗಾವಣೆಗೊಂಡ ಚಿಕ್ಕಮಗಳೂರು ಎಸ್.ಪಿ ಗೆ ಹೂಮಳೆಗೈದು ಬೀಳ್ಕೊಟ್ಟ ಸಿಬ್ಬಂದಿ…

udayavani youtube

3 ವರ್ಷಗಳ ಬಳಿಕ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್

udayavani youtube

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

ಹೊಸ ಸೇರ್ಪಡೆ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

tdy-38

ಮೋಹನದಾಸ್‌ ಪೈ ಅವರಿಗೆ ನುಡಿನಮನ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

crime

ಕಲಬುರಗಿ: ತಾಯಿ, ಮೂವರು ಮಕ್ಕಳ ಶವ ಬಾವಿಯಲ್ಲಿ ಪತ್ತೆ

1-adadasd

ಮಹಾರಾಜ ಟಿ20 ಕೂಟ: ಮಂಗಳೂರಿಗೆ ಮೊದಲ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.