ಕರ್ಲಕೊಪ್ಪದಲ್ಲಿ 3ರ್ಡ್‌ ಕ್ಲಾಸ್‌ ತಂಡ ವಾಸ್ತವ್ಯ


Team Udayavani, Jan 21, 2020, 3:56 PM IST

bk-tdy-1

ಬಾಗಲಕೋಟೆ: ಕಳೆದ ಆಗಸ್ಟ್‌ನಲ್ಲಿ  ಉಂಟಾದ ಭೀಕರ ಪ್ರವಾಹದಿಂದ ಸಂಪೂರ್ಣ ಮುಳುಗಡೆಯಾಗಿದ್ದ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮದಲ್ಲಿ 3ರ್ಡ್‌ ಕ್ಲಾಸ್‌ ಚಿತ್ರ ತಂಡದ ನಾಯಕ-ನಾಯಕಿ ಹಾಗೂ ಸಹ ನಿರ್ಮಾಪಕರು ಸೇರಿದಂತೆ ಇಡೀ ಚಿತ್ರ ತಂಡದವರು ಗ್ರಾಮ ವಾಸ್ತವ್ಯ ಮಾಡಿ ಗಮನ ಸೆಳೆದರು.

ರವಿವಾರ ರಾತ್ರಿ ಗ್ರಾಮಕ್ಕೆ ತೆರಳಿದ 7 ಹಿಲ್ಸ್‌ ಸ್ಟುಡಿಯೋ ನಿರ್ಮಾಣದ 3ರ್ಡ್‌ ಕ್ಲಾಸ್‌ ಸಿನೆಮಾ ನಾಯಕ ನಮ್ಮ ಜಗದೀಶ, ನಟಿ ರೂಪಿಕಾ, ಸಹ ನಿರ್ಮಾಪಕ ನಂದನ್‌, ತಂಡದ ಕಿರಣ, ಮಣಿ ಮುಂತಾದವರನ್ನು ಇಡೀ ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿದರು. ಬಳಿಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ನೃತ್ಯ, ಹಾಡು ಹಾಡಿ ರಂಜಿಸಿದರು. ಸಂತ್ರಸ್ತರ ಮಕ್ಕಳಿಂದಲೂ ವಿವಿಧ ಹಾಡು, ನೃತ್ಯ ಮಾಡಿಸಿ ಮಕ್ಕಳ ಮೊಗದಲ್ಲಿ ಹರ್ಷ ಮೂಡಿಸಿದರು.

ಬಳಿಕ ನಟ ನಮ್ಮ ಜಗದೀಶ, ನಟಿ ರೂಪಿಕಾ, ಸಹ ನಿರ್ಮಾಪಕ ನಂದನ್‌ ಅವರೇ ಸ್ವತಃ ಮಕ್ಕಳು, ಗ್ರಾಮಸ್ಥರು ಹಾಗೂ ಚಿತ್ರ ತಂಡದವರಿಗೆ ಅಡುಗೆ (ಪಲಾವ್‌, ಶಾವಿಗೆ ಪಾಯಸ) ಸಿದ್ಧಪಡಿಸಿದರು. ಮಕ್ಕಳೊಂದಿಗೆ ಊಟ ಮಾಡಿ, ಶಾಲೆಯ ಕೊಠಡಿಯಲ್ಲೇ ವಾಸ್ತವ್ಯ ಮಾಡಿದರು.

ಸ್ವಾಮೀಜಿಗಳ ಶ್ಲಾಘನೆ :  ಪ್ರವಾಹ ಪೀಡಿತ ಗ್ರಾಮವನ್ನು ದತ್ತು ಪಡೆದು ಬಿದ್ದ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿರುವ 3ರ್ಡ್‌ ಕ್ಲಾಸ್‌ ಸಿನೆಮಾ ತಂಡದ ಕಾರ್ಯಕ್ಕೆ ಅವರಾದಿ ಫಲಹಾರೇಶ್ವರ ಮಠದ ಶ್ರೀ ಶಿವಮೂರ್ತಿ ಸ್ವಾಮೀಜಿ, ಬೈರನಟ್ಟಿಯ ಶ್ರೀ ಶಾಂತಲಿಂಗ ಸ್ವಾಮೀಜಿ ಸೇರಿದಂತೆ ಹಲವು ಶ್ಲಾಘನೆ ವ್ಯಕ್ತಪಡಿಸಿದರು.

ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ :  3ರ್ಡ್‌ ಕ್ಲಾಸ್‌ ಸಿನೆಮಾ ನಡೆ ಗ್ರಾಮದ ಕಡೆ ಎಂಬ ಪರಿಕಲ್ಪನೆಯೊಂದಿಗೆ ನಟ-ನಿರ್ಮಾಪಕರೂ ಆಗಿರುವ ನಮ್ಮ ಜಗದೀಶ, ನಟಿ ರೂಪಿಕಾ ಹಾಗೂ ನಂದನ್‌ ಅವರು, ಚಿತ್ರ ತಂಡದ ಮೂಲಕ ಕರ್ಲಕೊಪ್ಪ ಗ್ರಾಮ ದತ್ತು ಪಡೆದಿದ್ದು, ಆರಂಭಿಕವಾಗಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಗ್ರಾಮದ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 76 ಮಕ್ಕಳಿದ್ದು, ಆರು ಕೊಠಡಿಗಳಲ್ಲಿಎರಡು ಸಂಪೂರ್ಣ ಬಿದ್ದಿವೆ. ಆ ಕೊಠಡಿಗಳ ಪುನರ್‌ ನಿರ್ಮಾಣಕ್ಕೆ ಚಿತ್ರತಂಡ ಸೋಮವಾರ ಚಾಲನೆ ನೀಡಿತು. ಚಿತ್ರ ತಂಡದ ಪರವಾಗಿ ಕಾರ್ಗಿಲ್‌ ಯೋಧ ರಂಗಪ್ಪ ಆಲೂರ, ಗದಗ ಜಿಲ್ಲೆಯ ಹೊಳೆಆಲೂರಿನ ಜ್ಞಾನಸಿಂಧು ವಸತಿಯುತ ಅಂಧರ ಶಾಲೆಯ ಮಕ್ಕಳು ದೀಪ ಬೆಳಗಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.

ಹಣ ಗಳಿಸುವ ಉದ್ದೇಶದಿಂದ ಸಿನೆಮಾ ಮಾಡಿಲ್ಲ. ಜನರ ಹಣ ಜನರಿಗಾಗಿ ವ್ಯಯ ಮಾಡಲು ನಿರ್ಧರಿಸಿದ್ದೇವೆ. ಕರ್ಲಕೊಪ್ಪದಲ್ಲಿ ಎರಡು ತಿಂಗಳಲ್ಲಿ ಶಾಲಾ ಕೊಠಡಿ ನಿರ್ಮಿಸಿ ಕಲಿಕೆಗೆ ಒಪ್ಪಿಸಲಾಗುವುದು. ನಾನು ಹಳ್ಳಿಯಿಂದ ಬಂದಿದ್ದು, ಹಳ್ಳಿಗರ ಸಮಸ್ಯೆ ಅರಿವಿದೆ. ನಮ್ಮ ತಂಡದಿಂದ ಗ್ರಾಮ ದತ್ತು ಪಡೆಯಲಾಗಿದೆ. -ನಮ್ಮ ಜಗದೀಶ, ನಟ

ಸಿನೆಮಾದವರು ಅಂದರೆ ಬಂಡವಾಳ ಹಾಕಿ ಸಿನೆಮಾ ಮಾಡಿ, ಪುನಃ ಗಳಿಸುವವರೆಂಬ ಭಾವನೆ ಎಲ್ಲರಲ್ಲಿದೆ. ಆದರೆ, ಈ ತಂಡದವರು ಇಡೀ ಗ್ರಾಮ ದತ್ತು ಪಡೆದು ಸಮಗ್ರ ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಶಾಲಾ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿರುವ ಕಾರ್ಯ ಶ್ಲಾಘನೀಯ. ಶ್ರೀ ಶಾಂತಲಿಂಗ ಸ್ವಾಮೀಜಿ,ಬೈರನಟ್ಟಿ ವಿರಕ್ತಮಠ

ಟಾಪ್ ನ್ಯೂಸ್

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.