ಕೋವಿಡ್ ಗೆದ್ದ 80ರ ಗಟ್ಟಿಗಿತ್ತಿ!

23 ದಿನ ತಾಯಿಯಂಗ್‌ ನೋಡ್ಯಾರ್

Team Udayavani, May 31, 2020, 11:16 AM IST

ಕೋವಿಡ್  ಗೆದ್ದ 80ರ ಗಟ್ಟಿಗಿತ್ತಿ!

ಕೊರೊನಾ ಗೆದ್ದ 80ರ ಗಟ್ಟಿಗಿತ್ತಿ!

ಬಾಗಲಕೋಟೆ: ಸುಮ್ನ ಮನ್ಯಾಗ್‌ ಇದ್ವಿ. ಇದು ಎಲ್ಲಿಂದ ಬಂತೋ ಕೋವಿಡ್ ಅಂತ್‌ಯಪಾ. ನನ್ನ ಮಕ್ಳು, ಮೊಮ್ಮಕ್ಕಳು ಬಿಟ್ಟು ಒಂದ್‌ ದಿನಾನೂ ಎಲ್ಲಿ ಹೋಗಿಲ್ಲ. ಈಗ 23 ದಿನಾ ದವಾಖ್ಯಾನ್‌ ಇರಬೇಕಾಯ್ತು. ಇದೆಂತ ರೋಗ್‌ ಯಪ್ಪಾ. ದವಾಖ್ಯಾನ್ಯಾಗ್‌, ಎಲ್ಲಾರೂ ನನಗ್‌ ತಾಯಿಯಂಗ್‌ ನೋಡ್ಯಾರ್‌. ಎಲ್ಲಾರಿಗೂ ದೇವರು ಚಲೋ ಇಡ್ಲಿಯಪ್ಪಾ…

ಮಹಾಮಾರಿ ಕೋವಿಡ್ ವೈರಸ್‌ ತಗುಲಿದ ಜಿಲ್ಲೆಯ 77 ಜನ ಸೋಂಕಿತರಲ್ಲೇ ಹಿರಿಯ ಸೋಂಕಿತ ವೃದ್ಧೆ ಬಾದಾಮಿ ತಾಲೂಕಿನ ಢಾಣಕಶಿರೂರಿನ 80 ವರ್ಷದ ವೃದ್ಧೆ, ಈಗ ಕೊರೊನಾ ಗೆದ್ದು ಬಂದಿದ್ದಾರೆ. ಕಳೆದ ಮೇ 7ರಂದು ತಮ್ಮ ಮನೆಯ ಪಕ್ಕದಲ್ಲಿದ್ದ ಗರ್ಭಿಣಿಯಾಗಿದ್ದ ( ಪಿ-607) ಮಹಿಳೆಯಿಂದ ಸೋಂಕು ತಗುಲಿದ್ದ 80 ವರ್ಷದ ವೃದ್ಧೆ ಪಿ-703, ಶನಿವಾರ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ವೃದ್ಧೆ, ಕೋವಿಡ್ ವೈರಸ್‌ ಕುರಿತು ತನ್ನ ಭಾಷೆಯಲ್ಲೇ ಮಾತನಾಡಿದರು.

ಮನ್ಯಾಗ್‌ ಸುಮ್ನ ಇದ್ವಿ: ನನಗ್‌ 6 ಜನ ಮಕ್ಕಳು, 10 ಜನ ಮೊಮ್ಮಕ್ಕಳು. ಎಲ್ಲಾರು ಕೂಡಿ, ಮನ್ಯಾಗ್‌ ಸುಮ್ನ ಇದ್ವಿ. ನನಗ್‌ ನೆಗಡಿ, ಕೆಮ್ಮ, ಯಾವುದೂ ಇರ್ಲಿಯಪ್ಪಾ. ಆದ್ರ ರಾತ್ರಿ ಸ್ವಲ್ಪ ಜ್ವರಾ ಬಂದಾಂಗ್‌ ಆಗಿದ್ರು. ನಮ್ಮ ಬಾಜೂಕಿನ ಹೊಟ್ಟಿ ಇದ್ದ ಹೆಣ್ಣು ಮಗಳಿಗಿ, ಕೋವಿಡ್ ಬಂದಿತ್ತಂತ. ನಮ್ಮೂರಿಗಿ ಇಂತಾ ಜಡ್ಡ (ರೋಗ) ಎಂದೂ ಬಂದಿರಲಿಲ್ಲ. ಹೆಣ್ಣು ಮಗಳಿಗಿ ಬಂತಾಗೇ ನಾವೆಲ್ಲ ಗಾಬರಿ ಆದ್ವಿ. ನಮಗೆಲ್ಲ ಒಂದ್‌ ಸಾಲ್ಯಾಗ್‌ ಇಟ್ಟಿದ್ರು. ನಾಕ್‌ ದಿನಾ ಆದ್‌ ಮ್ಯಾಗ್‌, ಅಜ್ಜಿ ನಿನಗ್‌ ದವಾಖ್ಯಾನಿಗಿ ಕರ್ಕೋಂಡು ಹೋಗಬೇಕು ಬಾ ಅಂದ್ರು. ಯಾಕ್‌ ಯಪ್ಪಾ ಎಂದು ಕೇಳ್ದೆ. ನಿನಗ್‌ ಕೋವಿಡ್ ಬಂದೈತಿ. ಏನೂ ಆಗಲ್ಲ ಬಾ ಅಂದ್ರು. ಗುರುವಾರ (ಮೇ 7) ದವಾಖ್ಯಾನಿಗಿ ಕರ್ಕೂಂಡು ಬಂದು, ದಿನಾ ಗುಳಿಗ್‌ ಕೊಡತಿದ್ರು. ಈಗ್‌ ಆ ರೋಗ್‌ ಹೋಗ್ಯಾದಂತ. ಮನಿಗಿ ಹೋಗು ಅಂದ್ರು. 14 ದಿನಾ ಎಲ್ಲಿ ತಿರಗ್ಯಾಡ್‌ಬ್ಯಾಡ್‌ ಅಂದಾರ. 23 ದಿನ ದವಾಖ್ಯಾನ್ಯಾಗ್‌ ಎಲ್ಲಾರ್‌ ಚಂದ್‌ ನೋಡ್ಯಾರ್‌. ತಾಯಿಯಂಗ್‌ ಕಾಳಜಿ ಮ್ಯಾಡ್ಯಾರ್‌. ಅವರಿಗಿ ದೇವರ್‌ ಚಲೋ ಇಡ್ಲಿ ಎಂದು ವೃದ್ಧೆ ಧನ್ಯತೆ ವ್ಯಕ್ತಪಡಿಸಿದರು.

ಅತ್ಯಂತ ಹಿರಿಯ ಸೋಂಕಿತೆ: ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 77 ಜನರಿಗೆ ಕೋವಿಡ್ ಸೋಂಕು ಖಚಿತಪಟ್ಟಿದ್ದು, ಅದರಲ್ಲಿ ಗುರುವಾರ ಬಿಡುಗಡೆಗೊಂಡ 80 ವರ್ಷದ ವೃದ್ಧೆ ಸಹಿತ ಮೂವರು ಸೇರಿದಂತೆ ಒಟ್ಟು 66 ಜನರು ಬಿಡುಗಡೆಗೊಂಡಿದ್ದಾರೆ. ಓರ್ವ ವೃದ್ಧ ಮೃತಪಟ್ಟಿದ್ದು, ಇನ್ನುಳಿದ 10 ಜನರಿಗೆ ಚಿಕಿತ್ಸೆ ಮುಂದುವರಿದಿದೆ. ಒಟ್ಟು 77 ಜನರಲ್ಲಿ ಢಾಣಕಶಿರೂರಿನ ಈ ವೃದ್ಧೆ, ಸೋಂಕಿತರಲ್ಲಿ ಅತ್ಯಂತ ಹಿರಿಯರು. 80 ವರ್ಷ ದಾಟಿದ್ದರಿಂದ ವೃದ್ಧೆಯ ಚಿಕಿತ್ಸೆಗೆ ಆಸ್ಪತ್ರೆಯ ವೈದ್ಯರು ವಿಶೇಷ ಕಾಳಜಿ ವಹಿಸಿದ್ದರು.

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

“ದರ್ಶನ್‌ ಫ್ಯಾನ್ಸ್‌ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ..” ದಿವ್ಯಾ ತಾಯಿ ಕಣ್ಣೀರು

“ದರ್ಶನ್‌ ಫ್ಯಾನ್ಸ್‌ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ..” ದಿವ್ಯಾ ತಾಯಿ ಕಣ್ಣೀರು

Ronihala; ಜಮೀನಿಗೆ ನುಗ್ಗಿದ ಕಾಲುವೆ ನೀರು, ಬೆಳೆ ಹಾನಿ; ಪರಿಹಾರಕ್ಕೆ ರೈತರ ಆಗ್ರಹ

Ronihala; ಜಮೀನಿಗೆ ನುಗ್ಗಿದ ಕಾಲುವೆ ನೀರು, ಬೆಳೆ ಹಾನಿ; ಪರಿಹಾರಕ್ಕೆ ರೈತರ ಆಗ್ರಹ

4-chikkodi

Maharashtra ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ: ಕೃಷ್ಣಾ ನದಿಗೆ 1.05 ಲಕ್ಷ ಕ್ಯೂಸೆಕ್ ನೀರು

3-hosapete

Hosapete: ತುಂಗಭದ್ರಾ ಜಲಾಶಯ ಹೆಚ್ಚಿದ ಒಳ ಹರಿವು: ಯಾವುದೇ ಕ್ಷಣ ನದಿಗೆ ನೀರು

Rocks rolled down on Kedarnath trek route

Gauri Kund: ಕೇದಾರನಾಥ ಪಾದಯಾತ್ರೆಯ ಮಾರ್ಗದಲ್ಲಿ ಉರುಳಿದ ಬಂಡೆಗಳು; ಮೂವರು ಸಾವು

Hubli; ನಾಲ್ಕು ಗ್ಯಾರೇಜ್‌ ಗಳಲ್ಲಿ ಕಬ್ಬಿಣ ಕದ್ದಿದ್ದ ಮೂವರ ಬಂಧನ

Hubli; ನಾಲ್ಕು ಗ್ಯಾರೇಜ್‌ ಗಳಲ್ಲಿ ಕಬ್ಬಿಣ ಕದ್ದಿದ್ದ ಮೂವರ ಬಂಧನ

Renukaswamy Case: ದರ್ಶನ್‌ ಹಲ್ಲೆ ನಡೆಸುವ ವಿಡಿಯೋ ಲಭ್ಯ?

Renukaswamy Case: ದರ್ಶನ್‌ ಹಲ್ಲೆ ನಡೆಸುವ ವಿಡಿಯೋ ಲಭ್ಯ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SIddu-Savadhi

Government Doctor: ಆಸ್ಪತ್ರೆಯಲ್ಲಿ ರಾಜಕೀಯ ಮಾಡುವುದಾದ್ರೆ ಸರ್ಕಾರಿ ನೌಕರಿ ತ್ಯಜಿಸಿ

Rabkavi Banhatti ನವಜಾತ ಶಿಶುವಿಗೆ 12 ಕಾಲ್ಬೆರಳು, 13 ಕೈ ಬೆರಳುಗಳು..!

Rabkavi Banhatti ನವಜಾತ ಶಿಶುವಿಗೆ 12 ಕಾಲ್ಬೆರಳು, 13 ಕೈ ಬೆರಳುಗಳು..!

Mahalingapur: ತಾಯಿ ಮಗಳ ಸಜೀವ ದಹನ ಪ್ರಕರಣ… ಮೃತರ ಸಂಖ್ಯೆ ಮೂರಕ್ಕೆ ಏರಿಕೆ

Mahalingapur: ತಾಯಿ ಮಗಳ ಸಜೀವ ದಹನ ಪ್ರಕರಣ… ಮೃತರ ಸಂಖ್ಯೆ ಮೂರಕ್ಕೆ ಏರಿಕೆ

Road Mishap: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ… ಓರ್ವ ಬಾಲಕಿ ಸ್ಥಳದಲ್ಲಿಯೇ ಮೃತ್ಯು

Road Mishap: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ… ಓರ್ವ ಬಾಲಕಿ ಸ್ಥಳದಲ್ಲಿಯೇ ಮೃತ್ಯು

Muharram Celebrations ಸಂಭ್ರಮ ಸಡಗರದಿಂದ ನಡೆದ ಹಿಂದೂ-ಮುಸ್ಲಿಂ ಭಾವೈಕ್ಯದ ಮೊಹರಂ

Muharram Celebrations ಸಂಭ್ರಮ ಸಡಗರದಿಂದ ನಡೆದ ಹಿಂದೂ-ಮುಸ್ಲಿಂ ಭಾವೈಕ್ಯದ ಮೊಹರಂ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

“ದರ್ಶನ್‌ ಫ್ಯಾನ್ಸ್‌ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ..” ದಿವ್ಯಾ ತಾಯಿ ಕಣ್ಣೀರು

“ದರ್ಶನ್‌ ಫ್ಯಾನ್ಸ್‌ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ..” ದಿವ್ಯಾ ತಾಯಿ ಕಣ್ಣೀರು

Ronihala; ಜಮೀನಿಗೆ ನುಗ್ಗಿದ ಕಾಲುವೆ ನೀರು, ಬೆಳೆ ಹಾನಿ; ಪರಿಹಾರಕ್ಕೆ ರೈತರ ಆಗ್ರಹ

Ronihala; ಜಮೀನಿಗೆ ನುಗ್ಗಿದ ಕಾಲುವೆ ನೀರು, ಬೆಳೆ ಹಾನಿ; ಪರಿಹಾರಕ್ಕೆ ರೈತರ ಆಗ್ರಹ

4-chikkodi

Maharashtra ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ: ಕೃಷ್ಣಾ ನದಿಗೆ 1.05 ಲಕ್ಷ ಕ್ಯೂಸೆಕ್ ನೀರು

3-hosapete

Hosapete: ತುಂಗಭದ್ರಾ ಜಲಾಶಯ ಹೆಚ್ಚಿದ ಒಳ ಹರಿವು: ಯಾವುದೇ ಕ್ಷಣ ನದಿಗೆ ನೀರು

Rocks rolled down on Kedarnath trek route

Gauri Kund: ಕೇದಾರನಾಥ ಪಾದಯಾತ್ರೆಯ ಮಾರ್ಗದಲ್ಲಿ ಉರುಳಿದ ಬಂಡೆಗಳು; ಮೂವರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.