ಆಲಮಟ್ಟಿ: ಕುಡಿಯುವ ನೀರಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಧರಣಿ ನಿರತರು ಅಸ್ವಸ್ಥ


Team Udayavani, Apr 20, 2022, 4:47 PM IST

Untitled-1

ಆಲಮಟ್ಟಿ: ಜಿಲ್ಲೆಯ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ನಿರತರಾಗಿರುವ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ರೈತ ಮುಖಂಡ ವಿಠ್ಠಲ ಬಿರಾದಾರ್ ಅಸ್ವಸ್ಥರಾದ ಘಟನೆ ಬುಧವಾರ ಸಂಭವಿಸಿದೆ.

ಇಲ್ಲಿನ ಕೃಷ್ಣಾ ಭಾಗ್ಯ ಜಲ ನಿಗಮ ಮುಖ್ಯ ಅಭಿಯಂತರರ ಕಚೇರಿ ಆವರಣದಲ್ಲಿ ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಸ್ಪಂದಿಸದ ಸರ್ಕಾರದ ನಿಲುವನ್ನು ಖಂಡಿಸಿ ಸೋಮವಾರದಿಂದ ಆರಂಭಗೊಂಡ ಉಪವಾಸ ಧರಣಿ ಸತ್ಯಾಗ್ರಹದಲ್ಲಿ ಇಬ್ಬರು ನಾಯಕರು ಅಸ್ವಸ್ಥರಾಗಿ ರುವುದರಿಂದ ಧರಣಿ ಸ್ಥಳದಲ್ಲಿಯೇ ವೈದ್ಯರು ಪರೀಕ್ಷೆಗೊಳಪಡಿಸಿದರು.

ಭೇಟಿ: ಕೃಷ್ಣಾಕಾಡಾ ಮಾಜಿ ಅಧ್ಯಕ್ಷರಾಗಿರುವ ಬಸವರಾಜ ಕುಂಬಾರ ಭೇಟಿ ನೀಡಿ ನೈತಿಕ ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧರಣಿ ಹಾಗೂ ಹೋರಾಟಗಳು ಸರಕಾರದ ಗಮನಸೆಳೆಯುವ ಅಸ್ತ್ರ ಗಳಾಗಿವೆ ಆದರೆ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ನಡೆಯುತ್ತಿರುವ ಆಮರಣ ಉಪವಾಸ ಸತ್ಯಾಗ್ರಹ ಹಣ್ಣು ಕೈಬಿಟ್ಟು ಅನಿರ್ದಿಷ್ಟ ಧರಣಿಯನ್ನು ಮುಂದುವರೆಸಲು ವಿನಂತಿಸಿದರು.

ಅವಳಿ ಜಲಾಶಯಗಳ ನಿರ್ಮಾಣಕ್ಕಾಗಿ ಒಂದು 173 ಗ್ರಾಮಗಳು ಮುಳುಗಡೆ ಹೊಂದಿ ಲಕ್ಷಾಂತರ ಕುಟುಂಬಗಳು ಸಂತ್ರಸ್ತರಾಗಿದ್ದಾರೆ ರಾಷ್ಟ್ರದ ಹಿತಾಸಕ್ತಿಗಾಗಿ ತ್ಯಾಗ ಮಾಡಿದ ಸಂತ್ರಸ್ತ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಜಲಾಶಯ ನಿರ್ಮಾಣಕ್ಕೆ ತ್ಯಾಗ ಮಾಡಿದ ಜಿಲ್ಲೆಯ ಜನತೆಯ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸರ್ಕಾರ ಶಾಸ್ತ್ರಿ ಜಲಾಶಯದ ವ್ಯಾಪ್ತಿಯ ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಬೇಕು ಎಂದು ಹೇಳಿದರು.

ಶಾಸ್ತ್ರಿ ಜಲಾಶಯ ವ್ಯಾಪ್ತಿಯಲ್ಲಿ ಸುಮಾರು ಎರಡು 240 ಕೆರೆಗಳಿವೆ ಅವುಗಳನ್ನು ಅತಿಶೀಘ್ರವಾಗಿ ತುಂಬುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಮತ್ತು ಕೆರೆಗಳಿಂದ ಜನ ಜಾನುವಾರು ವನ್ಯಜೀವಿಗಳು ನೀರನ್ನು ಕುಡಿಯಲು ಅನುಕೂಲವಾಗುತ್ತದೆ ವಿಜಯಪುರ ಜಿಲ್ಲೆಯ 8.22ಲಕ್ಷ ಹೆಕ್ಟೇರ್ ಪ್ರದೇಶ ಸಾಗುವಳಿ ಭೂಮಿಯಾಗಿದೆ ಇದರಲ್ಲಿ ಈಗಾಗಲೇ ಎರಡು ಲಕ್ಷ ಹೆಕ್ಟೇರ್ ನೀರಾವರಿಗೆ ಒಳಪಟ್ಟಿದೆ ಎಂದು ಹೇಳಿದರು.

ಇದನ್ನೂ ಓದಿ: ಊರಿನ ಸಮಸ್ಯೆ ಹೇಳಲು ಬಂದ ಯುವಕನಿಗೆ ಶಾಸಕರಿಂದ ಕಪಾಳಮೋಕ್ಷ : ಶಾಸಕರ ನಡೆಗೆ ಭಾರೀ ಆಕ್ರೋಶ

ಉಪವಾಸ ನಿರತ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ ರಾಷ್ಟ್ರದ ಹಿತಕ್ಕಾಗಿ ಜಲಾಶಯ ನಿರ್ಮಾಣದ ತ್ಯಾಗ ಮಾಡಿದ ವಿಜಯಪುರ ಜಿಲ್ಲೆಯ ಜನತೆಯ ಕುಡಿಯುವ ನೀರಿಗಾಗಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವಂತೆ ಆಗಿರುವುದು ದುರ್ದೈವದ ಸಂಗತಿ ಜನಪ್ರತಿನಿಧಿಗಳು ತ್ಯಾಗ ಮಾಡಿದ ಜಿಲ್ಲೆಯ ಜನತೆಯ ನೀರಿನ ದಾಹ ನೀಗಿಸಲು ಪ್ರಯತ್ನಿಸದಿರುವುದು ಜಿಲ್ಲೆಯ ಜನರ ಬಗ್ಗೆ ಇರುವ ಕಾಳಜಿಯನ್ನು ಎತ್ತಿ ತೋರುತ್ತದೆ ಆದ್ದರಿಂದ ಜಿಲ್ಲೆಯ ಯುವಕರು ಪಕ್ಷ ಜಾತಿ ಆಮಿಷಗಳಿಗೆ ಮರುಳಾಗದೆ ರೈತರಿಗಾಗಿ ದುಡಿಯುವ ವ್ಯಕ್ತಿಗಳನ್ನು ಗುರುತಿಸಿ ಮತದಾನ ಮಾಡುವುದರಿಂದ ನಮ್ಮ ಹಕ್ಕನ್ನು ನಾವು ಪಡೆಯಬಹುದಾಗಿದೆ ಎಂದರು.

ನೀರಿಗಾಗಿ ನೆಲೆ ಕಳೆದುಕೊಂಡ ಜಿಲ್ಲೆಯ ಜನರು ತಮ್ಮ ಹಕ್ಕಾಗಿರುವ ಕುಡಿಯುವ ನೀರು ಪಡೆಯಲು ಹೋರಾಟ ಮಾಡುವಂತಾಗಿದೆ ಇದು ನಾಚಿಕೆಪಡುವ ಸಂಗತಿಯಾಗಿದೆ ಎಂದು ಹೇಳಿದರು.

ವಿಶೇಷವೆಂದರೆ 519.6 ಮೀಟರ್ ಎತ್ತರದಲ್ಲಿ 123 081 ಟಿಎಂಸಿ ನೀರು ಸಂಗ್ರಹ ಆಲಮಟ್ಟಿ ಜಲಾಶಯದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಾಗುತ್ತಿದ್ದರು ಆಲಮಟ್ಟಿ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಹಿಂಗಾರು ಮತ್ತು ಮುಂಗಾರು ಸೇರಿದಂತೆ ಒಟ್ಟು 15 ಟಿಎಂಸಿ ಎಷ್ಟು ನೀರನ್ನು ಅವಳಿ ಜಿಲ್ಲೆಯ ರೈತರ ಜಮೀನಿಗೆ ಕಾಲುವೆಗಳ ಮೂಲಕ ಹರಿಸಲಾಗುತ್ತದೆ ಇನ್ನುಳಿದಂತೆ ಸಹೋದರ ಜಲಾಶಯವಾಗಿರುವ ನಾರಾಯಣಪುರ ಜಲಾಶಯ ವ್ಯಾಪ್ತಿಯಲ್ಲಿ 132 ಟಿಎಂಸಿ ನೀರನ್ನು ಬಳಸಿಕೊಂಡು ಉಳಿದ ಜಿಲ್ಲೆಯ ರೈತರ ಜಮೀನಿಗೆ ನೀರುಣಿಸಲಾಗುತ್ತಿದೆ ಆದರೆ ಜಲಾಶಯಗಳ ನಿರ್ಮಾಣಕ್ಕೆ ತ್ಯಾಗ ಮಾಡಿದ ಅವಳಿ ಜಿಲ್ಲೆಗಳಿಗೆ ಕೇವಲ 15 ಟಿಎಂಸಿ ನೀರು ತ್ಯಾಗ ಮಾಡದೇ ಇರುವ ಜಿಲ್ಲೆಗಳಿಗೆ ಒಂದು 132 ಟಿಎಂಸಿ ನೀರು ಕೊಡಲಾಗುತ್ತದೆ ವಿಜಯಪುರ ಜಿಲ್ಲೆಯ ಜನ ಕಾಲುವೆಗಳ ಮೂಲಕ ನೀರು ಕೇಳಿದರೆ ಹಂತಗಳ ನೆಪ ಹೇಳಲಾಗುತ್ತದೆ ಇದರಿಂದ ಅವಳಿ ಜಿಲ್ಲೆಯ ರೈತರಿಗೆ ಮಹಾ ಮೋಸವಾಗುತ್ತದೆ ಈ ಕುರಿತು ರೈತರು ಜಾಗೃತರಾಗದಿದ್ದಲ್ಲಿ ನಮ್ಮ ಹಕ್ಕನ್ನು ಪಡೆಯಲು ಸಾಧ್ಯವಾಗುವುದಿಲ್ಲ ಚುನಾವಣೆಯ ಸಂದರ್ಭಗಳಲ್ಲಿ ರೈತಬಾಂಧವರು ಪಕ್ಷ ಜಾತಿ ಹಣದ ಆಮಿಷಗಳಿಗೆ ಒಳಗಾಗದೆ ರೈತಪರ ಕಾಳಜಿ ಇರುವ ವ್ಯಕ್ತಿಗಳನ್ನು ಬೆಂಬಲಿಸುವಂತೆ ಆಗಬೇಕು ಎಂದು ವಿನಂತಿಸಿದರು ಧರಣಿಯಲ್ಲಿ ವಿಠ್ಠಲ ಬಿರಾದಾರ್ ಸದಾಶಿವ ಬರಟಗಿ ಮಾಂತಯ್ಯ ಚಿಕ್ಕಮಠ ಸಂತೋಷ್ ಬಿರಾದಾರ್ ಮಾದೇವಪ್ಪ ಬಿರಾದಾರ್ ಸೇರಿದಂತೆ ಸುಮಾರು 50ಕ್ಕೂ ಅಧಿಕ ರೈತರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ದೇಶಪಾಂಡೆ ಸಾವು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ಕೆ.ಎಸ್‌. ದೇಶಪಾಂಡೆ ಸಾವು

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

4-bgl

Theft: ಅಮೀನಗಡದ ದೇವಸ್ಥಾನದಲ್ಲಿ ಕಳ್ಳತನ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.