ಅಂತಾರಾಜ್ಯ ಕಳ್ಳನ ಬಂಧಿಸಿದ ಬನಹಟ್ಟಿ ಪೊಲೀಸರು
6 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ
Team Udayavani, May 26, 2021, 7:43 PM IST
ಬನಹಟ್ಟಿ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯ ಬನಹಟ್ಟಿ, ನಾವಲಗಿ ಹಾಗೂ ಚಿಮ್ಮಡ ಗ್ರಾಮದಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ವಿಜಯಪುರ ಜಿಲ್ಲೆಯ ಹೊನ್ನಾಳಿ ಗ್ರಾಮದ ಸಂತೋಷ ನಂದಿಹಾಳ ಎಂಬುವನನ್ನು ಬನಹಟ್ಟಿಯ ಪೊಲೀಸರು ಬಂಧಿಸಿ ಅವನಿಂದ 6 ಲಕ್ಷ ಮೌಲ್ಯದ ಚಿನ್ನಾಭರಣ ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಸ್ಥಳೀಯ ಸಿಪಿಐ ಜಿ.ಕರುಣೇಶಗೌಡ ಮಾತನಾಡಿ, 2019ರಲ್ಲಿ ವರದಿಯಾಗಿದ್ದ ಪ್ರಕರಣದಲ್ಲಿ ದೊರೆತ ಸಿಸಿ ಟಿ.ವಿ ದೃಶ್ಯಾವಳಿಗಳ ಸುಳಿವನ್ನು ಆಧರಿಸಿ ಸದರಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿ ಸಲಾಗಿದೆ. ಸದರಿ ಕಳ್ಳನಿಂದ 3 ಪ್ರಕರಣಗಳಲ್ಲಿ ಕಳ್ಳತನವಾಗಿದ್ದ ಚಿನ್ನದ 4 ಸರಗಳು, 6 ಉಂಗುರಗಳು, 1 ನಕ್ಲೇಸ್ ಸರ್ ಸೇರಿದಂತೆ ಇತ್ಯಾದಿ ಸುಮಾರು 6 ಲಕ್ಷ ಮೊತ್ತದ 141 ಗ್ರಾಂ ತೂಕದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
1996ರಿಂದ ಇಲ್ಲಿಯವರೆಗೆ ಈತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 32 ಪ್ರಕರಣಗಳು ದಾಖಲಾಗಿವೆ. 2019ರಲ್ಲಿ ಈತನು ರಾಮದುರ್ಗ ಉಪ ಕಾರಾಗೃಹದಿಂದಲೂ ತಪ್ಪಿಸಿಕೊಂಡು ಹೋಗಿದ್ದನು. ಅಲ್ಲದೇ ಮುಧೋಳ, ಲೋಕಾಪುರ, ರಾಮದುರ್ಗ, ನಿಂಬರ್ಗಾ, ಮಧನ ಹಿಪ್ಪರಗಾ, ಇಳಕಲ್ಲ ಪೊಲೀಸ್ ಠಾಣೆಗಳ 16 ಪ್ರಕರಣಗಳಲ್ಲಿ ನ್ಯಾಯಾಲಯವು ಈತನ ಬಂಧನ ವಾರಂಟ್ ಹೊರಡಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಡಿವೈಎಸ್ಪಿ ಎಂ.ಪಾಂಡುರಂಗಯ್ಯ ಮಾರ್ಗದರ್ಶನದಲ್ಲಿ ಸ್ಥಳೀಯ ಸಿಪಿಐ ಎರಡು ವರ್ಷಗಳಷ್ಟು ಹಳೆಯದಾದ ಪ್ರಕರಣದ ತನಿಖೆಯನ್ನು ನಡೆಸಿ ಪಿಎಸ್‌ಐ ರವಿಕುಮಾರ ಧರ್ಮಟ್ಟಿ ಹಾಗೂ ಠಾಣೆಯ ಸಿಬ್ಬಂದಿ ವರ್ಗದವರು ಕೂಡಿಕೊಂಡು ಕಳ್ಳನನ್ನು ಬಂ ಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರೊಬೆಶನರಿ ಪಿಎಸ್‌ಐ ಮಲ್ಲಿಕಾರ್ಜುನ ತಳವಾರ, ವಿ.ಎಸ್. ಅಜ್ಜನಗೌಡರ, ಎ. ಎಂ. ಜಮಖಂಡಿ, ಎಸ್. ಆರ್. ಮುರಡಿ, ವಿಜಯ ತುಂಬದ, ಎಸ್.ಎಚ್.ನಾಟಿಕರ್, ಮಹೇಶ ಹನಗಂಡಿ, ಡಿ.ವೈ.ಗುರಿಕಾರ ಎಲ್.ಜಿ.ಕುಂಬಾರ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೌದು. ನಾನು ಲಕ್ಕಿಡಿಪ್ ಸಿಎಂ,ಏನೀಗ?: ಬಿಜೆಪಿ,ಕುಟುಂಬ ರಾಜಕಾರಣ ವಿರುದ್ಧ HDK ಸರಣಿ ಟ್ವೀಟ್
‘ಅಘಾಡಿ ಸರ್ಕಾರದಲ್ಲಿ ದಾವೂದ್, ಹಿಂದುತ್ವದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ’
ನೇತ್ರಾವತಿ ನೀರುಪಾಲಾದ ಯುವಕನ ಶವ ಕೋಟೆಪುರದಲ್ಲಿ ಪತ್ತೆ
ಕರಾವಳಿಯಲ್ಲಿ ಭಾರೀ ಮಳೆ: ಕಾಸರಗೋಡಿನ ಮಧೂರು ದೇಗುಲ ಜಲಾವೃತ
ಬಿಹಾರ: ಕುಡಿದು ಪತ್ನಿಯೊಂದಿಗೆ ಜಗಳ; ತಪ್ಪೇ ಮಾಡದ ಮೂರು ವರ್ಷದ ಮಗಳನ್ನೇ ಕೊಂದ ಪಾಪಿ ತಂದೆ