ಬಾಗಲಕೋಟೆ: ಬಾಲಕಿಯನ್ನು ಅತ್ಯಾಚಾರಗೈದು ಸುಟ್ಟು ಕೊಂದ ಕಾಮುಕ
Team Udayavani, Jan 12, 2017, 11:14 AM IST
ಬಾಗಲಕೋಟೆ: ಇಲ್ಲಿನ ಮುಧೋಳದ ಲಮಾಣಿ ತಾಂಡವೊಂದರಲ್ಲಿ ಕಾಮುಕನೊಬ್ಬ 16 ವರ್ಷದ ಬಾಲಕಿಯೊಬ್ಬಳನ್ನು ಅತ್ಯಾಚಾರಗೈದು ಬಳಿಕ ಸಿಮೇ ಎಣ್ಣೆ ಸುರಿದು ಸುಟ್ಟು ಬರ್ಬರವಾಗಿ ಹತ್ಯೆಗೈದ ಅಮಾನುಷ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಕೃತ್ಯ ಎಸಗಿದ ಲೋಕೇಶ್ ಎಂಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೋಕೇಶ್ ತಾಂಡದಲ್ಲಿರುವ ತನ್ನದೇ ಸಮುದಾಯದ ಬಾಲಕಿಯ ಮನೆಗೆ ನುಗ್ಗಿ ಹೇಯ ಕೃತ್ಯ ನಡೆಸಿ ಅಮಾನವೀಯವಾಗಿ ಸುಟ್ಟು ಕೊಲೆಗೈದಿದ್ದಾನೆ.
ಘಟನೆ ನಡೆಯುವ ವೇಳೆ ಮನೆಯಲ್ಲಿ ಬಾಲಕಿ ಮತ್ತು ಆಕೆಯ ತಂಗಿ ಇಬ್ಬರೆ ಇದ್ದರು ಎಂದು ಹೇಳಲಾಗಿದ್ದು, ಹೊಂಚು ಹಾಕಿ ಲೋಕೇಶ್ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.
ತಾಂಡಾದ ಜನರು ಘಟನೆಯಿಂದ ದಿಗ್ಭ್ರಾಂತರಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡಲು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಜನರ ರೋದನ ಮುಗಿಲು ಮುಟ್ಟಿದೆ.
ಲೋಕಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.