ಬಸವ ಬ್ಯಾಂಕ್‌ ಗ್ರಾಹಕರ ಜೀವನಾಡಿ: ಚರಂತಿಮಠ


Team Udayavani, May 26, 2019, 10:39 AM IST

bk-tdy-3..

ಬಾಗಲಕೋಟೆ: ಬಸವೇಶ್ವರ ಬ್ಯಾಂಕ್‌ನ ಅಡತ ಬಜಾರ್‌ ಶಾಖೆಯ ನವೀಕೃತ ಕಟ್ಟಡವನ್ನು ಶಾಸಕ ಡಾ| ವೀರಣ್ಣ ಚರಂತಿಮಠ ಉದ್ಘಾಟಿಸಿದರು.

ಬಾಗಲಕೋಟೆ: ಶತಮಾನ ಪೂರೈಸಿರುವ ಬಸವೇಶ್ವರ ಸಹಕಾರಿ ಬ್ಯಾಂಕ್‌ ಗ್ರಾಹಕರ ಜೀವನಾಡಿಯಾಗಿ ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ| ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಡತ ಬಜಾರ್‌ ಶಾಖೆಯ ನವೀಕೃತ ಕಟ್ಟಡ ಹಾಗೂ ನೂತನ ಎಟಿಎಂ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶತಮಾನದ ಇತಿಹಾಸ ಹೊಂದಿರುವ ಈ ಬ್ಯಾಂಕ್‌ ಗ್ರಾಹಕರ ವಿಶ್ವಾಸ ಉಳಿಸಿಕೊಂಡು, ಉತ್ತಮವಾಗಿ ಕೆಲಸ ಮಾಡುತ್ತಿದೆ. 100 ವರ್ಷಗಳ ಹಿಂದೆ ಅಡತ ಬಜಾರ್‌ ಶಾಖೆಯಲ್ಲಿ ಬಸವೇಶ್ವರ ಬ್ಯಾಂಕ್‌ ಸಣ್ಣಪುಟ್ಟ ವಹಿವಾಟಿನೊಂದಿಗೆ ಆರಂಭಗೊಂಡು ಇಂದು ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದೆ. ಗ್ರಾಹಕರು, ವರ್ತಕರ ಬಹು ದಿನಗಳ ಬೇಡಿಕೆಯಂತೆ ಎಟಿಎಂಗೆ ಚಾಲನೆ ನೀಡಿದ್ದು, ಶಾಖೆಯ ಹಳೇ ಕಟ್ಟಡಕ್ಕೆ ಹೊಸ ರೂಪ ನೀಡಿರುವುದು ಉತ್ತಮ ಕೆಲಸ ಎಂದರು.

ಚರಂತಿಮಠದ ಶ್ರೀ ಪ್ರಭು ಸ್ವಾಮೀಜಿ ಮಾತನಾಡಿ, ಬಸವೇಶ್ವರ ಬ್ಯಾಂಕ್‌ ನಗರ ಹಾಗೂ ಜಿಲ್ಲೆಯ ಜನ ಸಾಮಾನ್ಯರ ಆರ್ಥಿಕ ಬಲವರ್ಧನೆಗೆ ಶ್ರಮಿಸುತ್ತಿದೆ. ಇಂದಿನ ವೈಜ್ಞಾನಿಕ ಕಾಲಕ್ಕೆ ತಕ್ಕಂತೆ ಗ್ರಾಹಕರಿಗೆ ಅನುಕೂಲವಾಗುವ ಸೇವೆ ಒದಗಿಸಿ, ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬ್ಯಾಂಕ್‌ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತನ್ನ ಸೇವೆ ವಿಸ್ತರಿಸಿಕೊಳ್ಳಲಿ ಎಂದರು.

ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ಈ ಅಡತ ಬಜಾರ್‌ ಶಾಖೆಯಿಂದ ಶತಮಾನದ ಹಿಂದೆ ಬಸವೇಶ್ವರ ಬ್ಯಾಂಕ್‌ ವಹಿವಾಟು ಆರಂಭಿಸಿತ್ತು. ಇದೀಗ ಶತಮಾನದ ಕಟ್ಟಡವನ್ನು ನವೀಕರಣಗೊಳಿಸಲಾಗಿದೆ. ವರ್ತಕರು, ಗ್ರಾಹಕರ ಆಸೆಯಂತೆ ಎಟಿಎಂ ಸೇವೆ ಒದಗಿಸಲಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಎಲ್ಲ ರೀತಿಯ ಸೇವೆ ನೀಡುತ್ತಿದೆ. ಜನ, ಸಾಮಾನ್ಯರ ಆರ್ಥಿಕ ಪ್ರಗತಿಯಲ್ಲಿ ಮಹತ್ತರ ಕೊಡುಗೆ ನೀಡುವಲ್ಲಿ ಬ್ಯಾಂಕ್‌ ಶ್ರಮಿಸುತ್ತಿದೆ ಎಂದು ಹೇಳಿದರು.

ಬ್ಯಾಂಕಿನ ಉಪಾಧ್ಯಕ್ಷ ಎಂ.ಜಿ. ವಾಲಿ, ಜಿಪಂ ಸದಸ್ಯ ಹಾಗೂ ಬ್ಯಾಂಕ್‌ನ ನಿರ್ದೇಶಕ ಹೂವಪ್ಪ ರಾಠೊಡ, ನಿರ್ದೇಶಕರಾದ ಎಸ್‌.ಸಿ. ಆರಬ್ಬಿ, ಮನೋಹರ ಏಳಮ್ಮಿ, ರವಿ ಪಟ್ಟಣದ, ವೀರಪ್ಪ ಶಿರಗಣ್ಣವರ, ಮುತ್ತು ಜೋಳದ, ರಂಗನಗೌಡ ದಂಡನ್ನವರ, ಶ್ರೀನಿವಾಸ ಬಳ್ಳಾರಿ, ಸುನೀತಾ ಮುಳಗುಂದ, ಪ್ರಧಾನ ವ್ಯವಸ್ಥಾಪಕ ಬಿ.ಪಿ. ಬಣಗಾರ, ಶಾಖಾ ವ್ಯವಸ್ಥಾಪಕಿ ರಾಜೇಶ್ವರಿ ಶೆಟ್ಟರ, ಬ್ಯಾಂಕ್‌ನ ಅಧಿಕಾರಿ ಪಿ.ಎನ್‌.ಹಳ್ಳಿಕೇರಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

bhagavanth-kubha

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

Tesla’s market cap crosses $1 trillion

ಟೆಸ್ಲಾ ಮಾರುಕಟ್ಟೆ ಮೌಲ್ಯ 1ಲಕ್ಷ ಕೋಟಿ ರೂ. ದಾಟಿದೆ..!

111111111

ನವೆಂಬರ್ ನಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ ‘ಟಾಮ್ ಅಂಡ್ ಜೆರ್ರಿ’

siddaramaiah

ಜನತಾ ನ್ಯಾಯಾಲಯದ ಮುಂದೆ ಚರ್ಚೆಗೆ ಭಯವೇಕೆ : ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ

WS_Jazz 4

ಕನ್ನಡದಲ್ಲೇ ಮೊದಲ ಪ್ರಯೋಗ : ವಿಂಡೋಸೀಟ್ ನಲ್ಲಿ ಮೂಡಿ ಬಂತು ಜಾಝ್ ಸಾಂಗ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17sugarcane

ಬೈಪಾಸ್‌ ರಸ್ತೆ ನಿರ್ಮಾಣ: ಸುಗಮ ಸಂಚಾರಕ್ಕೆ ಕ್ಷಣಗಣನೆ

16school

ಫಲಿತಾಂಶ ಸುಧಾರಣೆಗೆ ಹೊಸ ಯೋಜನೆ

24problems

ದುಃಖಕ್ಕೆ ದುಶ್ಚಟಗಳು ಪರಿಹಾರವಲ್ಲ

23bus

ಸಂಚಾರಿ ವಾಹನದಲ್ಲಿ ಶಸ್ತ್ರ ಚಿಕಿತ್ಸೆ ತರಬೇತಿ!

20road

ಇಕ್ಕಟ್ಟಾದ ರಸ್ತೆಯಲ್ಲಿ ಕಗ್ಗಂಟಾದ ಸಂಚಾರ

MUST WATCH

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

ಹೊಸ ಸೇರ್ಪಡೆ

bhagavanth-kubha

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ಮೈಸೂರು ಆರ್ಟಿಸ್ಟ್‌ ಅಸೋಸಿಯೇಷನ್‌ನಿಂದ ಸಾಮೂಹಿಕ ನಾಡಗೀತೆ

ಅನಂತಸ್ವಾಮಿ ಗೀತೆಯನ್ನೇ ನಾಡಗೀತೆಯಾಗಿ ಘೋಷಿಸಿ

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

20lake

ಇನ್ನೂ ತುಂಬಿಲ್ಲ ನಿಡಶೇಸಿ ಕೆರೆಯಂಗಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.