
ಕುಳಗೇರಿ ಕ್ರಾಸ್: ಭಂಡಾರಮಯ ಬೀರದೇವರ ಜಾತ್ರೆ
Team Udayavani, Oct 28, 2022, 2:22 PM IST

ಕುಳಗೇರಿ ಕ್ರಾಸ್: ಎಲ್ಲಿ ನೋಡಿದರಲ್ಲಿ ಭಂಡಾರ… ಹಳದಿ ಬಣ್ಣದ ಚಿತ್ತಾರ… ಚಾಂಗಭಲ… ಚಾಂಗಭಲ… ಚಾಂಗಭಲ… ಎಂಬ ಘೋಷಣೆಯ ಹರ್ಷೋಧ್ಘಾರ. ಡೊಳ್ಳಿನ ಕೈಪೆಟ್ಟು… ಆರತಿ ಹಿಡಿದು ಹಾಡು ಹಾಡುತ್ತ ಸಾಗಿದ ಮಹಿಳೆಯರು… ತಾಳ-ಮದ್ದಳೆಗಳ ವಾದ್ಯದೊಂದಿಗೆ ಕುಳಗೇರಿ ಗ್ರಾಮ ಭಕ್ತರಿಂದ ತುಂಬಿ ತುಳಕಿತ್ತು.
ಹೌದು ಇದೆಲ್ಲ ಬಾದಾಮಿ ತಾಲೂಕಿನ ಕುಳಗೇರಿ ಗ್ರಾಮದ ಭಂಡಾರಮಯ ಬೀರದೇವರ ಜಾತ್ರೆಯಲ್ಲಿ ಕಂಡು ಬಂದ ದೃಷ್ಯ. ಈ ಬೀರೇಶನ ಜಾತ್ರೆಯಲ್ಲಿ ಹರಕೆ ಹೊತ್ತ ಭಕ್ತರು ಪ್ರತಿ ವರ್ಷವೂ ಬೇಡಿಕೊಂಡಷ್ಟು ಚೀಲಗಟ್ಟಲೇ ಭಂಡಾರ ತೂರಿ ದೇವರಿಗೆ ನಮಿಸುತ್ತಾರೆ. ಬೇಡಿಕೆ ಇಡೇರಯತ್ತೆ ಎಂಬ ನಂಬಿಕೆ ಇಟ್ಟ ಭಕ್ತರು ನೂರಾರು ಚೀಲ ಭಂಡಾರ ಎರಚುತ್ತಾರೆ. ಹಿಗೆ ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಉತ್ತತ್ತಿ, ಬಾಳೆ, ಭಂಡಾರ ಎರಚಿ ಭಕ್ತಿ ಭಾವದಿಂದ ಸಮಿರ್ಪಿಸಿದರು.
ಜಾತ್ರೆಯ ಅಂಗವಾಗಿ ಬರಮದೇವರ ಹಬ್ಬ. ಪಲ್ಲಕ್ಕಿ ಉತ್ಸವ, ವಾಹನೋತ್ಸವ ಹಾಗೂ ದೀಪೋತ್ಸವ, ರಾತ್ರಿ ಡೊಳ್ಳಿನ ಪದಗಳು, ಪುಷ್ಪಪೂಜಾ ಕಾರ್ಯಕ್ರಮ ನಡೆದವು. ಜಾತ್ರೆಗೆ ಬಂದ ಭಕ್ತರಿಗೆ ನಿರಂತರ ಅನ್ನ ಸಂತರ್ಪಣೆ ಸೇರಿ ಮನೋರಂಜನೆ ಕಾರ್ಯಕ್ರಮಗಳು ನಡೆದವು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಪ್ರತಿಭಾವಂತ ಕ್ರಿಕೆಟ್ ಪಟುಗಳ ತವರು ಕರ್ನಾಟಕ: ಕೆ.ವೈ.ವೆಂಕಟೇಶ್

ಎರಡು ಅದ್ಭುತ ಕ್ಯಾಚ್ ಗಳಿಂದ ಬೆರಗು ಮೂಡಿಸಿದ ಸೂರ್ಯಕುಮಾರ್; ವಿಡಿಯೋ ನೋಡಿ

ಲೋಕಸಭೆ ಕಲಾಪದಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪದ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು

ಮಂಗಳೂರು: ಪಾಲಿಕೆ ಆಯುಕ್ತ ವರ್ಗಾವಣೆ; ನೂತನ ಆಯುಕ್ತರಾಗಿ ಚನ್ನಬಸಪ್ಪ ಕೆ. ನೇಮಕ

ಮುದ್ದೇಬಿಹಾಳ: ಕಾಲುವೆಗೆ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಜಲ ಸಮಾಧಿ