Udayavni Special

ಸವದಿಯಿಂದ ನೇಕಾರರಿಗೆ ದ್ರೋಹ

ಮಾಜಿ ಸಚಿವೆ ಉಮಾಶ್ರೀ ವಿರುದ್ಧ ಏಕವಚನದ ಟೀಕೆಗೆ ಪ್ರತ್ಯುತ್ತರ | ನೇಕಾರರು ಮುಗ್ಧರು, ಮಳ್ಳರಲ್ಲ

Team Udayavani, Jun 7, 2021, 7:15 PM IST

6-mlp-1

ಮಹಾಲಿಂಗಪುರ: ಮಾಜಿ ಸಚಿವೆ, ಹಿರಿಯ ಕಲಾವಿದೆ ಉಮಾಶ್ರೀ ಅವರ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ತಾವು ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ ತಮ್ಮ ಮಾತನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಪಕ್ಷಬೇಧ ಮರೆತು ನೇಕಾರರು ಒಂದಾಗಿ ತಮ್ಮ ಮನೆಯ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ನೇಕಾರ ಯುವ ಮುಖಂಡ ರಾಜೇಂದ್ರ ಭದ್ರಣ್ಣವರ ಹೇಳಿದರು.

ಶಾಸಕ ಸಿದ್ದು ಸವದಿಯವರು ಉಮಾಶ್ರೀ ವಿರುದ್ಧ ಏಕವಚನ ಮತ್ತು ಏನೂ ಕೆಲಸ ಮಾಡಿಲ್ಲ ಎಂಬ ಆರೋಪ ಕುರಿತು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಕಾರರು ಮುಗ್ಧರು ಮಳ್ಳರಲ್ಲ. ನಾವು ಸುಮ್ಮನೆ ಕುಳಿತಿದ್ದೇವೆ ಎಂದರೆ ಕೈಗೆ ಬಳೆ ತೊಟ್ಟಿಲ್ಲ. ನೇಕಾರರು ಬಡವರಿರಬಹುದು ಆದರೆ ಸ್ವಾಭಿಮಾನಿಗಳು. ನೇಕಾರ ನಾಯಕಿಗೆ ಕೀಳು ಪದ ಬಳಸಿದರೆ ನಾವು ಸುಮ್ಮನಿರಲ್ಲ, ಬರುವ ಚುನಾವಣೆಯಲ್ಲಿ ನಾವು ಉಮಾಶ್ರೀಯವರ ಸಾಧನೆಗಳ ಬೋರ್ಡ್‌ ಹಾಕಿ ಚುನಾವಣೆ ಎದುರಿಸುತ್ತೇವೆ. ನಿಮಗೆ ಆ ತಾಕತ್‌ ಇದೆಯೇ ಎಂದು ಪ್ರಶ್ನಿಸಿದರು.

ಪಟ್ಟಣದ ನೇಕಾರ ಮುಖಂಡ ಮಲ್ಲಪ್ಪ ಭಾಂವಿಕಟ್ಟಿ ಮಾತನಾಡಿ, ಬಿಜೆಪಿ ಆಡಳಿತ ಅಚ್ಛೇ ದಿನ್‌ ಅಲ್ಲ ತುಚ್ಛೇ ದಿನ್‌. ಉಮಾಶ್ರೀಯವರ ಅ ಧಿಕಾರದಲ್ಲಿದ್ದಾಗ ಪವರ್ ಲೂಮ್‌ ಮಗ್ಗಗಳಿಗೆ ಸಬ್ಸಿಡಿ ವಿದ್ಯುತ್‌, ಸಾಲ ಮನ್ನಾ, ಸಹಕಾರಿ ನೂಲಿನ ಗಿರಣಿಗಳಿಗೆ ಸಹಾಯ ಧನ, ಜೇಡರ ದಾಸಿಮಯ್ಯ ಜಯಂತಿ 65 ಕೋಟಿ ಹಾಗೂ ಎರಡು ಎಕರೆ ಜಮೀನು ಹಾಗೂ ಸಮುದಾಯ ಭವನಗಳು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದರು.

ನಗರ ಘಟಕದ ಅಧ್ಯಕ್ಷ ಈಶ್ವರ ಚಮಕೇರಿ ಮಾತನಾಡಿ, ಉಮಾಶ್ರೀ ಅಧಿ ಕಾರದಲ್ಲಿದ್ದಾಗ ನೇಕಾರ ಅಭಿವೃದ್ಧಿ ನಿಗಮಕ್ಕೆ ನೇಕಾರ ಸಮಾಜದ ರವೀಂದ್ರ ಕಲಬುರ್ಗಿಯವರನ್ನು ನೇಮಕ ಮಾಡಿ ನೇಕಾರರ ಮೇಲಿನ ಕಾಳಜಿ ಮೆರೆದಿದ್ದರು. ಆದರೆ ಶಾಸಕ ಸಿದ್ದು ಸವದಿ ಅವರು ಅ ಧಿಕಾರದಾಸೆಯಿಂದ ತಾವೇ ನಿಗಮದ ಅಧ್ಯಕ್ಷರಾಗಿ ನೇಕಾರ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ ಎಂದರು.

ಸದಾಶಿವ ಗೋಲಕರ, ಶಂಕ್ರಪ್ಪ ಜಾಲಿಗಿಡದ, ನೀಲಕಂಠ ಮುತ್ತೂರ, ರಾಜೇಶ ಬಾವಿಗಿಡದ ಮಾತನಾಡಿದರು. ತೇರದಾಳ ಮತಕ್ಷೇತ್ರದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಡಾ.ಯು.ಎಸ್‌. ವನಹಳ್ಳಿ, ಮಹಾದೇವ ಬರಗಿ, ರಾಜು ಭಾವಿಕಟ್ಟಿ, ಬಸವರಾಜ ಗುಡೋಡಗಿ, ಹೊಳೆಪ್ಪ ಬಾಡಗಿ, ಶಂಕರ ಸೊನ್ನದ, ಶ್ರೀಧರ ಪಿಸೆ, ಕಿರಣ ಕರಲಟ್ಟಿ, ವಿನೋದ ಸಿಂಪಿ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಟಾಪ್ ನ್ಯೂಸ್

236

ಬಿಎಸ್ಸಿ ಅಗ್ರಿ ಸೀಟು ಮೀಸಲಾತಿ  50%ಕ್ಕೆ ಹೆಚ್ಚಳ : ಸಚಿವ ಬಸವರಾಜ್ ಬೊಮ್ಮಾಯಿ

ಕೋವಿಡ್ ಹಿನ್ನೆಲೆ ಈ ಬಾರಿಯೂ ಪವಿತ್ರ ಅಮರನಾಥ ಯಾತ್ರೆ ರದ್ದು: ದೇವಳದ ಆರತಿ ನೇರ ಪ್ರಸಾರ

ಕೋವಿಡ್ ಹಿನ್ನೆಲೆ ಈ ಬಾರಿಯೂ ಪವಿತ್ರ ಅಮರನಾಥ ಯಾತ್ರೆ ರದ್ದು: ದೇವಳದ ಆರತಿ ನೇರ ಪ್ರಸಾರ

ಡೀಸೆಲ್ ಗೆ ಪರ್ಯಾಯ: ಕೇರಳದಲ್ಲಿ ಪ್ರಥಮ LNG ಚಾಲಿತ ಬಸ್ ಗೆ ವಿಧ್ಯುಕ್ತ ಚಾಲನೆ… ಏನಿದು?

ಡೀಸೆಲ್ ಗೆ ಪರ್ಯಾಯ: ಕೇರಳದಲ್ಲಿ ಪ್ರಥಮ LNG ಚಾಲಿತ ಬಸ್ ಗೆ ವಿಧ್ಯುಕ್ತ ಚಾಲನೆ… ಏನಿದು?

Untitled-4

ಬಿಎಸ್‌ವೈ ಅಧಿಕಾರದಿಂದ ಬೇಗ ತೊಲಗಿದಷ್ಟು ರಾಜ್ಯಕ್ಕೆ ಅನುಕೂಲ: ಸಿದ್ದರಾಮಯ್ಯ

012

ನಿಮಗೆ ಸಿದ್ದರಾಮಯ್ಯರ ಭಯ ಕಾಡುತ್ತಿದೆಯೇ ? ಡಿಕೆಶಿ ವಿರುದ್ಧ ಬಿಜೆಪಿ ವಾಗ್ದಾಳಿ

ಅಂತಾರಾಜ್ಯ ಸಾರಿಗೆಗೆ ಗ್ರೀನ್ ಸಿಗ್ನಲ್: ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್  ಸಂಚಾರ ಆರಂಭ

ಅಂತಾರಾಜ್ಯ ಸಾರಿಗೆಗೆ ಗ್ರೀನ್ ಸಿಗ್ನಲ್: ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್  ಸಂಚಾರ ಆರಂಭ

ಪಂಜಾಬ್: ಸಿಖ್ ಸಮುದಾಯದ ವ್ಯಕ್ತಿಯೇ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ: ಕೇಜ್ರಿವಾಲ್

ಪಂಜಾಬ್: ಸಿಖ್ ಸಮುದಾಯದ ವ್ಯಕ್ತಿಯೇ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ: ಕೇಜ್ರಿವಾಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-jkd-1

ಪ್ರವಾಹ ಭೀತಿಯಲ್ಲಿ ನದಿ ತೀರದ ಗ್ರಾಮಸ್ಥರು

20hnd1

ಇಂದಿನಿಂದ ಬಸ್‌ ಸಂಚಾರ ಆರಂಭ

page

ಯೋಗ ಸಾಧಕರ ಯಶೋಗಾಥೆ

dav

ಬಾಲಾಜಿ ಮರಳು ಉತ್ಪಾದನೆ ಕಾರ್ಖಾನೆ ಆರಂಭಕ್ಕೆ ವಿರೋಧ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

MUST WATCH

udayavani youtube

ಲಡಾಖ್ ನಲ್ಲಿ ಬರೋಬ್ಬರಿ 18 ಸಾವಿರ ಅಡಿ ಎತ್ತರದ ಚಳಿಯ ನಡುವೆ ಯೋಗಾಭ್ಯಾಸ

udayavani youtube

LOCKDOWN ರಜೆಯ ಸದುಪಯೋಗ SSLC ವಿದ್ಯಾರ್ಥಿನಿಯಿಂದ ಯೋಗ ಪಾಠ

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

ಹೊಸ ಸೇರ್ಪಡೆ

236

ಬಿಎಸ್ಸಿ ಅಗ್ರಿ ಸೀಟು ಮೀಸಲಾತಿ  50%ಕ್ಕೆ ಹೆಚ್ಚಳ : ಸಚಿವ ಬಸವರಾಜ್ ಬೊಮ್ಮಾಯಿ

ಕೋವಿಡ್ ಹಿನ್ನೆಲೆ ಈ ಬಾರಿಯೂ ಪವಿತ್ರ ಅಮರನಾಥ ಯಾತ್ರೆ ರದ್ದು: ದೇವಳದ ಆರತಿ ನೇರ ಪ್ರಸಾರ

ಕೋವಿಡ್ ಹಿನ್ನೆಲೆ ಈ ಬಾರಿಯೂ ಪವಿತ್ರ ಅಮರನಾಥ ಯಾತ್ರೆ ರದ್ದು: ದೇವಳದ ಆರತಿ ನೇರ ಪ್ರಸಾರ

bangalore news

ಕನ್ನಡಾಭಿಮಾನವಿಲ್ಲದ 25 ಸಂಸದರು: ಆಕ್ರೋಶ

Vaccination campaign

ಇಂದಿನಿಂದ ವಿಶೇಷ ಲಸಿಕಾ ಅಭಿಯಾನ

ಅದೊಂದು  ಕಿರು ಪ್ರವಾಸ

ಅದೊಂದು  ಕಿರು ಪ್ರವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.