ಬಿಎಸ್‌ವೈ ಪೂರ್ಣಾವಧಿ ಸಿಎಂ: ಕಾರಜೋಳ

ಕೊರೊನಾ, ಪ್ರಕೃತಿ ವಿಕೋಪ ಸಮರ್ಥ ನಿರ್ವಹಣೆ ಮಾಡಿದ ಸರ್ಕಾರ ­ಟೀಕೆ-ಟಿಪ್ಪಣಿ ಬಿಟ್ಟು ಸಲಹೆ-ಸೂಚನೆ ನೀಡಲಿ

Team Udayavani, May 31, 2021, 6:49 PM IST

2222

ಬಾಗಲಕೋಟೆ: ಮುಖ್ಯಮಂತ್ರಿ ಬದಲಾವಣೆ ವಿಷಯ ಮಾಧ್ಯಮಗಳಲ್ಲಿ ಬಂದಿದ್ದು, ಇದಕ್ಕೆ ರೆಕ್ಕೆ-ಪುಕ್ಕ ಹಚ್ಚಲಾಗುತ್ತಿದೆ. ಯಡಿಯೂರಪ್ಪ ಅವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಬಗ್ಗೆ ಪದೆ ಪದೇ ಹೇಳುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಪೂರ್ಣಾವ ಧಿ ಮುಖ್ಯಮಂತ್ರಿ ಆಗಿರ್ತಾರೆ. ಅವರ ಬದಲಾವಣೆ ಗಾಳಿ ಸುದ್ದಿ. ಮಾಧ್ಯಮಗಳಿಂದ ಗಾಳಿ ಸುದ್ದಿಗೆ ರೆಕ್ಕೆ-ಪುಕ್ಕ ಹಚ್ಚುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಕೊರೊನಾ ಸಂಕಷ್ಟ, ಪ್ರಕೃತಿ ವಿಕೋಪದಲ್ಲಿ ಯಡಿಯೂರಪ್ಪ ಸರಕಾರ ಅತ್ಯುತ್ತಮ ಕೆಲಸ ಮಾಡಿದೆ. ಬೇರೆ ರಾಜ್ಯಗಳಿಗೆ ಹೋಲಿಸಿ ನೋಡಿ. ನಮ್ಮ ಮುಖ್ಯಮಂತ್ರಿಗಳು ಕೊರೊನಾ ಸಂಕಷ್ಟದಲ್ಲಿ ಅನೇಕ ನೆರವು ನೀಡಿದ್ದಾರೆ. ಸದ್ಯ ಆರ್ಥಿಕ ಸಂಕಷ್ಟದಲ್ಲೂ ನೆರವು ನೀಡುತ್ತಿದ್ದಾರೆ ಎಂದು ಹೇಳಿದರು.

ಪ್ರಧಾನಿ ಕಾಯಿಸಿದ್ದು ಖಂಡನೀಯ: ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಾರಜೋಳ, ಪ್ರಧಾನಿಗಳು ಪ್ರಕೃತಿ ವಿಕೋಪ ವೀಕ್ಷಣೆಗೆ ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಪ್ರಧಾನಿಗಳನ್ನು ಅರ್ಧ ಗಂಟೆ ಕಾಯಿಸಿದ್ದು ಖಂಡನೀಯ. ಮಮತಾ ಬ್ಯಾನರ್ಜಿಯವರಿಗೆ ಸಾಮಾನ್ಯ ಜ್ಞಾನ ಕೂಡ ಇಲ್ಲ. ದೇಶದ ಪ್ರೊಟೊಕಾಲ್‌ ಏನು?, ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳು, ಪ್ರಧಾನಿಗಳು ಬಂದಾಗ ಆಯಾ ರಾಜ್ಯದ ಸಿಎಂ ಅವರನ್ನು ಸ್ವಾಗತಿಸಬೇಕಾಗುತ್ತದೆ ಎಂದರು. ಬಿಜೆಪಿಯವರಿಗೆ ಸಿಎಂ ಬದಲಾವಣೆ ರೋಗ ಹತ್ತಿದೆ ಎಂಬ ಸಿದ್ದರಾಮಯ್ಯ ವ್ಯಂಗ್ಯ ಹೇಳಿಕೆಗೆ ಕಾರಜೋಳ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಅವರಿಗೆ ಪಾಪ ತುರ್ತಾಗಿ ಸಿಎಂ ಆಗಬೇಕಂತಾರೆ. ಆದರೆ, ಅವಕಾಶವಿಲ್ಲ. ಈ ದೇಶದಲ್ಲಿ ಕಾಂಗ್ರೆಸ್‌ ಅವಸಾನದ ಕಾಲದಲ್ಲಿದೆ. ಮೊನ್ನೆ ನಡೆದ ಐದು ರಾಜ್ಯಗಳ ಚುನಾವಣೆ ಕಳಪೆಯಾಗಿದೆ ಎಂದು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹೇಳಿದ್ದಾರೆ. ಸಿದ್ದರಾಮಯ್ಯ ವಿನಾಕಾರಣ ದೇಶದ ಪ್ರಧಾನಿಗಳನ್ನಾಗಲಿ, ರಾಜ್ಯದ ಸಿಎಂ ಅವರನ್ನಾಗಲಿ ಟೀಕೆ ಮಾಡಬಾರದು. ಟೀಕೆ ಮಾಡೋದನ್ನು ಬಿಟ್ಟು ಸಲಹೆ ಸೂಚನೆಗಳನ್ನು ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ಕೊಡಬೇಕು. ಅವರ ಸಲಹೆ ಸೂಚನೆ ಪಾಲಿಸುತ್ತೇವೆ ಎಂದು ತಿಳಿಸಿದರು. ವಿರೋಧ ಪಕ್ಷ ಎಂದಾಗ, ಬರಿ ಟೀಕೆ ಮಾಡೋದೆ ಗುರಿ. ಆದರೆ, ಟೀಕೆ ಮಾಡೋದಕ್ಕೆನೆ ವಿರೋಧ ಪಕ್ಷನಾ ಅಂತ ಪ್ರಶ್ನೆ ಮಾಡಬೇಕಾಗುತ್ತದೆ ಎಂದರು.

ಲಾಕ್‌ಡೌನ್‌ ಮುಂದೂಡಿಕೆ ವಿಚಾರ ಮಾಡಿಲ್ಲ : ಜೂನ್‌ 7ರ ನಂತರ ಲಾಕ್‌ ಡೌನ್‌ ಮುಂದುವರಿಕೆ ಕುರಿತು ಇನ್ನು ಆ ಬಗ್ಗೆ ಆಲೋಚನೆ ಮಾಡಿಲ್ಲ. ಜೂನ್‌ 7ರವರೆಗೂ ಲಾಕ್‌ ಡೌನ್‌ ಇದೆ. ನಂತರ ನೋಡೋಣ ಎಂದು ಹೇಳಿದರು.

ಹಕ್ಕುಚ್ಯುತಿ ಮಂಡಿಸುವ ಮುನ್ನ ಅ ಧಿಕಾರಿಗಳ ಜೊತೆ ರಿವ್ಯೂವ್‌ ಮಾಡೋಕೆ ಅವಕಾಶ ಕೊಡಲಿಲ್ಲ, ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಸರ್ಕಾರ ಇದ್ದಾಗ, ಸಿದ್ದರಾಮಯ್ಯ ಅವ್ರೇ ಸಿಎಂ ಇದ್ದ ಸಂದರ್ಭದಲ್ಲಿ ಯಾವ ಆದೇಶಗಳನ್ನು ನೀಡಿದ್ದಾರೆ ಎಂಬುದನ್ನು ಇನ್ನೊಂದು ಸಾರಿ ಓದಲಿ. ಅವರ ಪಕ್ಷದ ಉಪ ಮುಖ್ಯಮಂತ್ರಿ ಪರಮೇಶ್ವರ ಅವರು ರೀವಿವ್‌ ಮಾಡ್ತೀನಿ ಅಂದಾಗಲೇ ಅವಕಾಶ ಕೊಟ್ಟಿಲ್ಲ. ಯಡಿಯೂರಪ್ಪ, ನಾವು ವಿಪಕ್ಷದಲ್ಲಿ ಇದ್ದಾಗ ಬಾಗಲಕೋಟೆ ಡಿಸಿ ಆμàಸ್‌ ಮುಂಭಾಗ ಮಲಗಿದ್ವಿ. ಆಗ ನಮಗೆ ಒಂದೇ ಒಂದು ಮಾಹಿತಿ ಕೊಡಲಿಲ್ಲ. ಒಂದು ಪೀಸ್‌ ಪೇಪರು ಕೂಡಾ ಕೊಡಲಿಲ್ಲ. ಆ ರೀತಿಯ ನಡವಳಿಕೆ ಯಾವಾಗಲೂ ಕಾಂಗ್ರೆಸ್‌ ಸರ್ಕಾರದ್ದು. ಅವರಿಗೆ ಆ ಹುಚ್ಚು ಯಾಕೆ ಗೊತ್ತಿಲ್ಲ. ಎಲ್ಲ ಡಿಸಿಗಳ ಮೀಟಿಂಗ್‌ ತಗೊಂಡು ರಿವೀವ್‌ ಮಾಡ್ತೀನಿ ಅಂದ್ರೆ ಅದಕ್ಕೆ ಅವಕಾಶ ಇಲ್ಲ.ಮಾಹಿತಿ ತಗೊಳ್ಳಬಹುದು. ನಾವು ಒದಗಿಸೋದಕ್ಕೆ ಸೂಚನೆ ಕೊಡುತ್ತೇವೆ ಎಂದರು.

ಅನಾಥ ಮಕ್ಕಳಿಗೆ ಪಿಂಚಣಿ: ಕೊರೊನಾದಿಂದ ತಂದೆ-ತಾಯಿ ಮೃತರಾಗಿ ಮಕ್ಕಳ ಅನಾಥರಾಗಿದ್ದರೆ ರಾಜ್ಯ ಮತ್ತು ಕೇಂದ್ರದ ನೆರವಿಗೆ ಬರಲಿವೆ. ಈ ಕುರಿತು ಬಾಗಲಕೋಟೆ ಜಿಲ್ಲೆಯಲ್ಲಿ ಸರ್ವೇ ಮಾಡಲು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಸೂಚನೆ ನೀಡಲಾಗಿದೆ. ಎಲ್ಲ ಸಿಡಿಪಿಒಗಳಿಗೆ ಹೇಳಿದ್ದೇವೆ. ಯಾರಾದ್ರೂ ಅನಾಥ ಮಕ್ಕಳು ಇದ್ರೆ ಅಂತವರ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತೆ. ಸರ್ಕಾರದ ವ್ಯವಸ್ಥೆಯಲ್ಲಿ ಅವರನ್ನ ಜೋಪಾನ ಮಾಡ್ತೇವೆ. ಅವರಿಗೆ ಮೂರುವರೆ ಸಾವಿರ ರೂ. ಪೆನ್ಶನ್‌ ಕೊಡುತ್ತೇವೆ.

ಕೇಂದ್ರ ಸರ್ಕಾರ ಕೂಡ 10 ಲಕ್ಷ ರೂ. ವಿಮಾ ವ್ಯವಸ್ಥೆ ಮಾಡಿದೆ. 18 ವರ್ಷಗಳ ನಂತರ ಉನ್ನತ ಶಿಕ್ಷಣಕ್ಕೆ ಉಪಯೋಗಕ್ಕೆ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ನಮ್ಮ ಕೇಂದ್ರೀಯ ವಿದ್ಯಾಲಯ, ವಸತಿ ಶಾಲೆಗಳಲ್ಲಿ ಅವರಿಗೆ ವ್ಯವಸ್ಥೆ ಮಾಡಲಿದ್ದು, ಅಂತ ಮಕ್ಕಳು ಇದ್ರೆ, ಗುರುತಿಸಿ ನಮ್ಮ ಸರ್ಕಾರಕ್ಕೆ ಒಪ್ಪಿಸುವ ಕೆಲಸ ಮಾಡಲಿ ಎಂದು ಹೇಳಿದರು.

ಟಾಪ್ ನ್ಯೂಸ್

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ದೇಶಪಾಂಡೆ ಸಾವು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ಕೆ.ಎಸ್‌. ದೇಶಪಾಂಡೆ ಸಾವು

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

4-bgl

Theft: ಅಮೀನಗಡದ ದೇವಸ್ಥಾನದಲ್ಲಿ ಕಳ್ಳತನ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

32

Politics: ಟಿಕೆಟ್‌ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.