ಕಟ್ಟಡ ಕಾರ್ಮಿಕ ಸಂಘಟನೆ ಸದಸ್ಯರಿಗೆ ಪರಿಹಾರ ನೀಡಿ


Team Udayavani, Jul 7, 2020, 4:03 PM IST

ಕಟ್ಟಡ ಕಾರ್ಮಿಕ ಸಂಘಟನೆ ಸದಸ್ಯರಿಗೆ ಪರಿಹಾರ ನೀಡಿ

ಜಮಖಂಡಿ: ಕೋವಿಡ್‌-19 ಪರಿಹಾರ ಧನ ಜಮಾ ಆಗುವಲ್ಲಿ ವಿಳಂಬ, ತಾರತಮ್ಯ ನೀತಿ, ಕಟ್ಟಡ ಕಾರ್ಮಿಕರ ಮಕ್ಕಳ ಶಿಷ್ಯವೇತನ ಕಾಲಾವಕಾಶ ವಿಸ್ತರಿಸುವ ಹಿನ್ನೆಲೆಯಲ್ಲಿ ನಗರದ ಮಿನಿ ವಿಧಾನಸೌಧದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಜಮಖಂಡಿ ವೃತ್ತದ ಕಾರ್ಮಿಕ ನಿರೀಕ್ಷಕ ಮತ್ತು ಬೆಳಗಾವಿ ಸಹಾಯಕ ಕಾರ್ಮಿಕ ಆಯುಕ್ತರಿಗೆ ಉಪವಿಭಾಗಾಧಿಕಾರಿ ಡಾ| ಸಿದ್ದು ಹುಲ್ಲೊಳ್ಳಿ ಮೂಲಕ ಮನವಿ ಸಲ್ಲಿಸಿದರು.

ಉದ್ದೇಶಿತ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕಟ್ಟಡ  ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಅರ್ಜುನ ಬಂಡಿವಡ್ಡರ ಮಾತನಾಡಿ, ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಬಿಡುಗಡೆ ಮಾಡಿದ ಕೋವಿಡ್‌-19 ಪರಿಹಾರ ಧನ ಜಮಾ ಮಾಡುವಲ್ಲಿ ವಿಳಂಬ ಹಾಗೂ ತಾರತಮ್ಯ ನೀತಿ ಅನುಸರಿಸಲಾಗಿದೆ. ಕೆಲವು ಫಲಾನುಭವಿಗಳಿಗೆ ಕೇವಲ 1 ಸಾವಿರ ಜಮಾ ಆಗಿದ್ದರೆ ಮುಂದಿನ ಕಂತಿನ ಹಣ ಜಮಾ ಆಗಿಲ್ಲ. ಕೆಲವರಿಗೆ ಅರ್ಧ ಮಾತ್ರ ಜಮಾ ಆಗಿದೆ. ಇನ್ನೂ ಹಲವರಿಗೆ ಪೂರ್ಣ ಹಣ ಜಮಾ ಆಗಿಲ್ಲ. ಸರ್ಕಾರ ಹಂತಹಂತವಾಗಿ ಘೋಷಿಸಿದ ಪರಿಹಾರ ಧನ ಅನುಕ್ರಮವಾಗಿ 1 ಸಾವಿರ, 2 ಸಾವಿರದಂತೆ ಒಟ್ಟು 5 ಸಾವಿರ ಆಗುವವರೆಗೆ ಸಂಪೂರ್ಣ ಜಮಾ ಮಾಡಬೇಕು ಎಂದು ಆಗ್ರಹಿಸಿದರು.

ಬಿಡುಗಡೆಯಾದ ಮೀಸಲು ಹಣವನ್ನು ಅಧಿಕಾರಿಗಳು ಅಥವಾ ಮಂಡಳಿಯವರು ಕೂಲಂಕುಷವಾಗಿ ಪರಿಶೀಲಿಸಿ ಯಾರಿಗೂ ಅನ್ಯಾಯವಾಗದಂತೆ ಸಮಾನವಾಗಿ ಪರಿಹಾರ ಧನ ಜಮಾ ಆಗುವಂತೆ ಮಾಡಬೇಕು. ಅಧಿಕಾರಿಗಳ ಗೊಂದಲದಿಂದ ಫಲಾನುಭವಿಗಳು ಸಹಾಯಧನದಿಂದ ವಂಚಿತರಾಗುತ್ತಿದ್ದಾರೆ. ತಕ್ಷಣವೇ ಗೊಂದಲ ಸರಿಪಡಿಸುವ ಮೂಲಕ ಕಟ್ಟಡ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಂದರು.

ಕಟ್ಟಡ ಕಾರ್ಮಿಕರ ಮಕ್ಕಳ ಶಿಷ್ಯವೇತನಕ್ಕೆ ಅರ್ಜಿ ಕರೆಯಲಾಗಿದ್ದು, ಅರ್ಜಿ ಸ್ವಿಕರಿಸುವ ಕೊನೆ ದಿನಾಂಕ ಈಗಾಗಲೇ ಅಂತ್ಯಗೊಂಡಿದೆ. ಅರ್ಜಿ ಸಲ್ಲಿಸಲು ಕಾರ್ಮಿಕರ ಫಲಾನುಭವಿ ಗುರುತಿನ ಚೀಟಿ ಕಡ್ಡಾಯವಾಗಿದ್ದು, ಲೇಬರ್‌ ಕಾರ್ಡ್‌ ನವೀಕರಿಸದೇ ಫಲಾನುಭವಿ ಗುರುತಿನ ಚೀಟಿ ಸಿಗಲಾರದು. ಲಾಕ್‌ ಡೌನ್‌ನಿಂದ ಕಾರ್ಮಿಕ ಇಲಾಖೆ ಅಧಿಕಾರಿಗಳು ಕೋವಿಡ್ ಕರ್ತವ್ಯದಲ್ಲಿ ನಿರತರಾಗಿರುವುದರಿಂದ ಲೇಬರ್‌ಕಾರ್ಡ್‌ ನವೀಕರಿಸಲು ಸಾಧ್ಯ ವಾಗಲಿಲ್ಲ. ನಿಗದಿತ ಅವಧಿಯಲ್ಲಿ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಬಹತೇಕ ಫಲಾನುಭವಿಗಳ ಶಿಷ್ಯವೇತನ ಸೌಕರ್ಯದಿಂದ ವಂಚಿತರಾಗಿದ್ದಾರೆ. ಕಾರ್ಮಿಕ ಇಲಾಖೆ ಮಕ್ಕಳ ಶಿಷ್ಯವೇತನ ಅರ್ಜಿ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ವಿಸ್ತರಿಸಬೇಕು ಎಂದರು.

ಈ ಸಂದರ್ಭದಲ್ಲಿ ಶ್ರೀಶೈಲ ದೊಡಮನಿ, ಮಧು ಮಾವಿನಮರದ, ದಾನಪ್ಪ ಲಾಲಬುಡ್ಡಿ ಇತರರು ಇದ್ದರು.

ಟಾಪ್ ನ್ಯೂಸ್

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಮತ್ತೆ ಹಾರಲಿವೆ ಜೆಟ್‌ ಏರ್‌ವೇಸ್‌ ವಿಮಾನಗಳು!

ಮತ್ತೆ ಹಾರಲಿವೆ ಜೆಟ್‌ ಏರ್‌ವೇಸ್‌ ವಿಮಾನಗಳು!

ನೈಸರ್ಗಿಕ ವಿಪತ್ತುಗಳಿಂದ 87 ಬಿಲಿಯನ್‌ ಡಾಲರ್‌ ನಷ್ಟ

ನೈಸರ್ಗಿಕ ವಿಪತ್ತುಗಳಿಂದ 87 ಬಿಲಿಯನ್‌ ಡಾಲರ್‌ ನಷ್ಟ

ಅಡುಗೆ ಅನಿಲ ಕೊರತೆಯಿಂದ ಮಕ್ಕಳಿಗೆ “ಹಸಿಯೂಟ’!

ಅಡುಗೆ ಅನಿಲ ಕೊರತೆಯಿಂದ ಮಕ್ಕಳಿಗೆ “ಹಸಿಯೂಟ’!

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17sugarcane

ಬೈಪಾಸ್‌ ರಸ್ತೆ ನಿರ್ಮಾಣ: ಸುಗಮ ಸಂಚಾರಕ್ಕೆ ಕ್ಷಣಗಣನೆ

16school

ಫಲಿತಾಂಶ ಸುಧಾರಣೆಗೆ ಹೊಸ ಯೋಜನೆ

24problems

ದುಃಖಕ್ಕೆ ದುಶ್ಚಟಗಳು ಪರಿಹಾರವಲ್ಲ

23bus

ಸಂಚಾರಿ ವಾಹನದಲ್ಲಿ ಶಸ್ತ್ರ ಚಿಕಿತ್ಸೆ ತರಬೇತಿ!

20road

ಇಕ್ಕಟ್ಟಾದ ರಸ್ತೆಯಲ್ಲಿ ಕಗ್ಗಂಟಾದ ಸಂಚಾರ

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಉಪಚುನಾವಣೆ: ಬಹಿರಂಗ ಪ್ರಚಾರ ಅಂತ್ಯ

ಉಪಚುನಾವಣೆ: ಬಹಿರಂಗ ಪ್ರಚಾರ ಅಂತ್ಯ; ಅ. 30ರಂದು ಮತದಾನ

ಮತ್ತೆ ಹಾರಲಿವೆ ಜೆಟ್‌ ಏರ್‌ವೇಸ್‌ ವಿಮಾನಗಳು!

ಮತ್ತೆ ಹಾರಲಿವೆ ಜೆಟ್‌ ಏರ್‌ವೇಸ್‌ ವಿಮಾನಗಳು!

ನೈಸರ್ಗಿಕ ವಿಪತ್ತುಗಳಿಂದ 87 ಬಿಲಿಯನ್‌ ಡಾಲರ್‌ ನಷ್ಟ

ನೈಸರ್ಗಿಕ ವಿಪತ್ತುಗಳಿಂದ 87 ಬಿಲಿಯನ್‌ ಡಾಲರ್‌ ನಷ್ಟ

ರಾಜ್ಯೋತ್ಸವ ಪ್ರಶಸ್ತಿಗೆ ಲಾಬಿ ಒಂದೇ ಸಂಸ್ಥೆ  ಪರ ಸಾವಿರ ಶಿಫಾರಸು!

ರಾಜ್ಯೋತ್ಸವ ಪ್ರಶಸ್ತಿಗೆ ಲಾಬಿ ಒಂದೇ ಸಂಸ್ಥೆ  ಪರ ಸಾವಿರ ಶಿಫಾರಸು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.