ಮುಧೋಳದಲ್ಲಿ ಕಾಂಗ್ರೆಸ್‌ ಬೃಹತ್‌ ರೋಡ್‌ ಶೋ


Team Udayavani, Apr 20, 2019, 11:43 AM IST

hub-7

ಮುಧೋಳ: ಐದು ವರ್ಷದ ಅವಧಿ ಯಲ್ಲಿ ಬಿಜೆಪಿಯವರು ತಾವು ನೀಡಿದ ಪ್ರಣಾಳಿಕೆಯಂತೆ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ ಎಂಬುದನ್ನು ಜನರಿಗೆ ತಿಳಿಸಬೇಕು. ಸಾಧ್ಯವಾದರೆ 5 ವರ್ಷದ ಸಾಧನಾ ಪಟ್ಟಿ ಬಿಡುಗಡೆ ಮಾಡಲಿ ಎಂದು ಸಕ್ಕರೆ ಸಚಿವ ಆರ್‌.ಬಿ. ತಿಮ್ಮಾಪೂರ ಸವಾಲು ಹಾಕಿದರು.

ನಗರದ ಜಡಗಣ್ಣ ಬಾಲಣ್ಣ ವೃತ್ತದಿಂದ, ಗಾಂಧಿ ವೃತ್ತದ ಮೂಲಕ ಶಿವಾಜಿ ವೃತ್ತದವರೆಗೆ ಬೃಹತ್‌ ಮೆರವಣಿಗೆ ಮೂಲಕ ರೋಡ್‌ ಶೋ ನಡೆಸಿದ ನಂತರ ನಗರದ ಶಿವಾಜಿ ಸರ್ಕಲ್ನಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.

ಕೇವಲ ಜಾತಿ ಆಧಾರದ ಮೇಲೆ ರಾಜಕಾರಣ ನಡೆಸುತ್ತಿರುವ ಬಿಜೆಪಿಗೆ ಹೇಳಿಕೊಳ್ಳುವಂತಹ ಯಾವುದೇ ಸಾಧನೆಗಳಿಲ್ಲ. ದೇಶದಲ್ಲಿ ಧರ್ಮ ಮತ್ತು ಅಧರ್ಮದ ನಡುವೆ ಚುನಾವಣೆ ನಡೆಯುತ್ತಿದೆ. ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನೂ ಮಾಡದ ಬಿಜೆಪಿ ಜನರಿಗೆ ಕೇವಲ ಸುಳ್ಳು ಹೇಳುತ್ತಿದೆ. ಬಿಜೆಪಿ ಬಡವರಿಗೆ, ರೈತರಿಗೆ, ಹಿಂದುಳಿದ ವರ್ಗಗಳಿಗೆ ಏನು ಮಾಡಿದ್ದಾರೆ ಎಂದು ಹರಿಹಾಯ್ದರು. ಕರ್ನಾಟಕದಲ್ಲಿ ಬಡವರ, ಹಿಂದುಳಿದ ವರ್ಗಗಳ ಪರ ಭಾಗ್ಯಗಳನ್ನು ನೀಡಿದ್ದರೆ ಅದು ನಮ್ಮ ಕಾಂಗ್ರೆಸ್‌ ಪಕ್ಷದ ಸಿದ್ದರಾಮಯ್ಯನವರು ಮಾತ್ರ ಎಂದು ಹೇಳಿದರು.

ಲೋಕಸಭೆ ಚುನಾವಣಾ ಅಭ್ಯರ್ಥಿ ವೀಣಾ ಕಾಶಪ್ಪನವರ ಮಾತನಾಡಿ, ನಾನು ನಿಮ್ಮ ಮನೆಯ ಮಗಳು. ಮಗಳು ಮನೆಗೆ ಬಂದಾಗ ಉಡಿ ತುಂಬುವ ಸಂಪ್ರದಾಯದಂತೆ ಇಂದು ನಿಮ್ಮ ಮನೆಗೆ ಬಂದಿರುವ ನನಗೆ ವೋಟ್ ಮುಖಾಂತರ ಉಡಿ ತುಂಬಿ ಕಳುಹಿಸಬೇಕು. ನಿಮ್ಮೆಲ್ಲರ ಧ್ವನಿಯಾಗಿ ಲೋಕಸಭೆಯಲ್ಲಿ ಕಾರ್ಯ ನಿರ್ವಹಿಸುತ್ತೇನೆ. ಜಿಲ್ಲೆಯ ಸಮಸ್ಯೆಗಳ ನಿವಾರಣೆಗಾಗಿ ಕಂಕಣ ತೊಟ್ಟು ಕಾರ್ಯ ನಿರ್ವಹಿಸುತ್ತೇನೆಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ ಅವರಿಗೆ ಮತ ನೀಡ ಬೇಕೆಂದು ವಿನಂತಿಸಿದರು. ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಸಂಜಯ ನಾಯಕ, ಕೆಪಿಸಿಸಿ ಕಾರ್ಯದರ್ಶಿ ದಯಾನಂದ ಪಾಟೀಲ, ಸತೀಶ ಬಂಡಿವಡ್ಡರ, ಪ್ರಮುಖರಾದ ಬಸವಂತ ಕಾಟೆ, ಎಚ್.ಎ.ಕಡಪಟ್ಟಿ, ಕೆ.ಆರ್‌. ಪಾಟೀಲ, ದಾನೇಶ ತಡಸಲೂರ, ಶಿವಾನಂದ ಕತ್ತಿ, ಅಂಬಿ, ಮಹಾನಿಂಗ ಕುರಿ, ಸತೀಶ ಗಾಡಿ, ಕಲ್ಮೇಶ ಸಾರವಾಡ, ಹನಮಂತ ಸಾವಂತ್ರಿ, ಹನಮಂತ ನಬಾಬ, ಸಂಗಪ್ಪ ನಾಗರಡ್ಡಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಎಚ್‌ಐವಿ ನಿವಾರಣೆಗೆ “ಭರ್ಜರಿ ಬೇಟೆ’ ತಂತ್ರ!

ಎಚ್‌ಐವಿ ನಿವಾರಣೆಗೆ “ಭರ್ಜರಿ ಬೇಟೆ’ ತಂತ್ರ!

ಏಕದಿನ ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

ಏಕದಿನ ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

ಪಿಯು ಪರೀಕ್ಷೆ ಸಿದ್ಧತೆಗೆ 10 ನಿಮಿಷದ ವೀಡಿಯೋ

ಪಿಯು ಪರೀಕ್ಷೆ ಸಿದ್ಧತೆಗೆ 10 ನಿಮಿಷದ ವೀಡಿಯೋ

ಭಾರತದಲ್ಲಿ ಹೂಡಿಕೆ ಮಾಡಿ: ದಾವೋಸ್‌ ಶೃಂಗ ಸಭೆಯಲ್ಲಿ ಉದ್ಯಮಿಗಳಿಗೆ ಪ್ರಧಾನಿ ಆಹ್ವಾನ

ಭಾರತದಲ್ಲಿ ಹೂಡಿಕೆ ಮಾಡಿ: ದಾವೋಸ್‌ ಶೃಂಗ ಸಭೆಯಲ್ಲಿ ಉದ್ಯಮಿಗಳಿಗೆ ಪ್ರಧಾನಿ ಆಹ್ವಾನ

ಜಾಗತಿಕ ಸಮಸ್ಯೆಗೆ ಪರಿಹಾರವೇ ಶ್ರದ್ಧಾಂಜಲಿ

ಜಾಗತಿಕ ಸಮಸ್ಯೆಗೆ ಪರಿಹಾರವೇ ಶ್ರದ್ಧಾಂಜಲಿ

ಹಾಟ್‌ ಆಗ್ತಿದೆ ಕುವೈತ್‌: ಜೀವಿಸಲು ಯೋಗ್ಯವಲ್ಲದ ದೇಶವಾಗುವತ್ತ ದಾಪುಗಾಲು

ಹಾಟ್‌ ಆಗ್ತಿದೆ ಕುವೈತ್‌: ಜೀವಿಸಲು ಯೋಗ್ಯವಲ್ಲದ ದೇಶವಾಗುವತ್ತ ದಾಪುಗಾಲು

ಶಿರಾಡಿ ಘಾಟಿ ಬಂದ್‌: ಜ. 20ರಂದು ನಿರ್ಧಾರ

ಶಿರಾಡಿ ಘಾಟಿ ಬಂದ್‌: ಜ. 20ರಂದು ನಿರ್ಧಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರತಯುಇಒಕಜಹ

ಮನುಷ್ಯನಿಗೆ ಆರೋಗ್ಯ ಸಂಪತ್ತು ಮುಖ್ಯ: ಪಾಟೀಲ

ರತಯುಹಗ್ಷಱ

ಕಾರಜೋಳ-ಪಾಟೀಲ ವಾಕ್ಸಮರ ; ಜಾತಿ ಬಣ್ಣ ಬೇಡ

ಎರತಯುಹಗ

ಬನಶಂಕರಿ ದರ್ಶನ ಬಂದ್‌: ಪಾದಯಾತ್ರಿಗಳಿಗೆ ನಿರಾಸೆ

ದುಕಮನಬವಚಷ

ಜಮಖಂಡಿಯಲ್ಲಿ ವೀಕೆಂಡ್‌ ಕರ್ಫ್ಯೂ ಯಶಸ್ವಿ

ಮಕ್ಕಳ ಸ್ಪರ್ಧಾತ್ಮಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯ: ಶಾಸಕ ಸಿದ್ದು ಸವದಿ

ಮಕ್ಕಳ ಸ್ಪರ್ಧಾತ್ಮಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯ: ಶಾಸಕ ಸಿದ್ದು ಸವದಿ

MUST WATCH

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

udayavani youtube

ವಾಹನ ನಿಲುಗಡೆ ಜಗಳ ತರಕಾರಿ ಮಾರುತ್ತಿದ್ದ ಮಹಿಳೆಗೆ ‘ ಡಾಕ್ಟರ್’ ನಿಂದ ಥಳಿತ

udayavani youtube

ಜನರ ಕಲ್ಯಾಣವಾಗಬೇಕು, ಉಪದ್ರವವಾಗಬಾರದು :ಕೃಷ್ಣಾಪುರ ಮಠದ ಶ್ರೀಪಾದರ ಸಂದೇಶ

ಹೊಸ ಸೇರ್ಪಡೆ

ಎಚ್‌ಐವಿ ನಿವಾರಣೆಗೆ “ಭರ್ಜರಿ ಬೇಟೆ’ ತಂತ್ರ!

ಎಚ್‌ಐವಿ ನಿವಾರಣೆಗೆ “ಭರ್ಜರಿ ಬೇಟೆ’ ತಂತ್ರ!

ಏಕದಿನ ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

ಏಕದಿನ ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

ಪಿಯು ಪರೀಕ್ಷೆ ಸಿದ್ಧತೆಗೆ 10 ನಿಮಿಷದ ವೀಡಿಯೋ

ಪಿಯು ಪರೀಕ್ಷೆ ಸಿದ್ಧತೆಗೆ 10 ನಿಮಿಷದ ವೀಡಿಯೋ

ಭಾರತದಲ್ಲಿ ಹೂಡಿಕೆ ಮಾಡಿ: ದಾವೋಸ್‌ ಶೃಂಗ ಸಭೆಯಲ್ಲಿ ಉದ್ಯಮಿಗಳಿಗೆ ಪ್ರಧಾನಿ ಆಹ್ವಾನ

ಭಾರತದಲ್ಲಿ ಹೂಡಿಕೆ ಮಾಡಿ: ದಾವೋಸ್‌ ಶೃಂಗ ಸಭೆಯಲ್ಲಿ ಉದ್ಯಮಿಗಳಿಗೆ ಪ್ರಧಾನಿ ಆಹ್ವಾನ

ಜಾಗತಿಕ ಸಮಸ್ಯೆಗೆ ಪರಿಹಾರವೇ ಶ್ರದ್ಧಾಂಜಲಿ

ಜಾಗತಿಕ ಸಮಸ್ಯೆಗೆ ಪರಿಹಾರವೇ ಶ್ರದ್ಧಾಂಜಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.