ಕೋವಿಡ್ ಮಹಾಮಾರಿಗೆ ಬಾಗಲಕೋಟೆ ಜಿಲ್ಲೆಯಲ್ಲಿ 5ನೇ ಬಲಿ: ಇನ್ನೂ ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ


Team Udayavani, Jun 28, 2020, 12:44 PM IST

ಕೋವಿಡ್ ಮಾಹಾಮರಿ ಬಾಗಲಕೋಟೆ ಜಿಲ್ಲೆಯಲ್ಲಿ 5ನೇ ಬಲಿ: ಇನ್ನೂ ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ

ಬಾಗಲಕೋಟೆ: ಮಹಾಮಾರಿ ಕೋವಿಡ್-19 ವೈರಸ್ ಗೆ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದು,  ಜಿಲ್ಲೆಯಲ್ಲಿ ಸೋಂಕಿನ ಕಾರಣದಿಂದ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಬಾಗಲಕೋಟೆ ತಾಲೂಕಿನ ಮುಡಪಲಜೀವಿ ಗ್ರಾಮದ 55 ವರ್ಷದ (ಪಿ 10642) ವ್ಯಕ್ತಿ ರವಿವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ತೀವ್ರ ಉಸಿರಾಟದ ತೊಂದರೆಯಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ತಿಳಿಸಿದ್ದಾರೆ.

ಮೃತಪಟ್ಟ ವ್ಯಕ್ತಿಗೆ ಕಳೆದ ಜೂನ್ 26 ರಂದು ಕೋವಿಡ್-19 ಸೋಂಕು ಇರುವುದು ದೃಡಪಟ್ಟಿತ್ತು. ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯ ಸಂಸ್ಕಾರ ನಡೆಯಲಿದೆ.

ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ -19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಬಾಗಲಕೋಟೆ ನಗರದ 76 ವರ್ಷದ ವೃದ್ಧ (ಪಿ125) ಕಳೆದ ಏಪ್ರಿಲ್ 3ರಂದು ಮೃತಪಟ್ಟಿದ್ದ. ಇದಾದ ಬಳಿಕ ಜೂ. 23ರಂದು ಬಾಗಲಕೋಟೆ ತಾಲೂಕಿನ ಚಿಕ್ಕಮ್ಯಾಗೇರಿಯ 57 ವರ್ಷದ (ಪಿ 10173) ರೈಲ್ವೆ ಟಿಕೆಟ್ ಕಲೆಕ್ಟರ್ ಮೃತಪಟ್ಟಿದ್ದ.

ಇನ್ನು ಬಾಗಲಕೋಟೆ ತಾಲೂಕಿನ ಕಲಾದಗಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಲೀವರ್ ಸಮಸ್ಯೆಯ ಚಿಕಿತ್ಸೆಗೆಂದು ಬೆಂಗಳೂರಿಗೆ ಪೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಮೃತಪಟ್ಟಿದ್ದಾರೆ. ಅವರ ಗಂಟಲು ದ್ರವ ಮಾದರಿಯನ್ನೂ ಪರೀಕ್ಷೆ ಮಾಡಿದ್ದು, ಮೃತಪಟ್ಟ ಬಳಿಕ ಕೋವಿಡ್-19 ದೃಢಪಟ್ಟಿದೆ. ಶನಿವಾರ ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನವನಗರದ ಸೆಕ್ಟರ್ ನಂ. 57ರ 50 ವರ್ಷದ ವ್ಯಕ್ತಿ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಈ ಸೋಂಕಿಗೆ ಏಪ್ರಿಲ್ ನಲ್ಲಿ ಓರ್ವ ಮೃತ ಪಟ್ಟಿದ್ದರೆ, ಜೂನ್ ಕೊನೆ ವಾರದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಭೀತಿ ದಿನೇ ದಿನೇ ಹೆಚ್ಚುತ್ತಲೇ ಇದೆ.

ಜಿಲ್ಲಾಡಳಿತ ನಿರ್ಲಕ್ಷ್ಯ: ಜಿಲ್ಲೆಯಲ್ಲಿ ಕೋವಿಡ್ ಕೇಕೆ ಹೆಚ್ವುತ್ತಿದ್ದರೂ ಜಿಲ್ಲಾಡಳಿತ ಎಚ್ಚೆತ್ತು ಕೊಳ್ಳುತ್ತಿಲ್ಲ. ಶನಿವಾರ ಕೋವಿಡ್ ಗೆ ಬಲಿಯಾದ ನವನಗರದ ಸೆಕ್ಟರ್ ನಂ.57ರ ವ್ಯಕ್ತಿಯ ಮನೆ ಸುತ್ತಲಿನ ಪ್ರದೇಶ ಸೀಲಡೌನ್ ಮಾಡಿಲ್ಲ. ಇಂದು ಅದೇ ಪ್ರದೇಶದಲ್ಲಿ ಒಟ್ಟು ಮೂರು ಮದುವೆಗಳು ಮನೆಯ ಮುಂದೆ ನಡೆದಿವೆ. ಈ ವಿಷಯ ಗೊತ್ತಿದ್ದರೂ ಜಿಲ್ಲಾಡಳಿತ ಮುಂಜಾಗೃತ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಟಾಪ್ ನ್ಯೂಸ್

ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಮನ್‌ಪ್ರೀತ್‌ ಸಿಂಗ್‌ ಸಾರಥ್ಯ

ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಮನ್‌ಪ್ರೀತ್‌ ಸಿಂಗ್‌ ಸಾರಥ್ಯ

ವಿದೇಶ ನಿರ್ಗಮಿತರಿಗೆ ಕಡ್ಡಾಯ ಪರೀಕ್ಷೆ

ವಿದೇಶ ನಿರ್ಗಮಿತರಿಗೆ ಕಡ್ಡಾಯ ಪರೀಕ್ಷೆ

ಇಂಡೋನೇಶ್ಯ ಓಪನ್‌ ಸೂಪರ್‌: ಸೆಮಿಫೈನಲ್‌ ತಲುಪಿದ ಸಿಂಧು

ಇಂಡೋನೇಶ್ಯ ಓಪನ್‌ ಸೂಪರ್‌: ಸೆಮಿಫೈನಲ್‌ ತಲುಪಿದ ಸಿಂಧು

https://www.udayavani.com/news-section/national-news/colonial-mindset-disrupting-indias-development-journey

ಅಸ್ಪೃಶ್ಯತೆ ನಿವಾರಣೆಗೆ ಕಾರ್ಯಕ್ರಮ: ಕೋಟ

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಅತಂತ್ರ

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಅತಂತ್ರ

ಮಾದಕ ಚಟ ನಿರ್ಮೂಲನೆಗೆ ಹೊಸ ಕಾರ್ಯಕ್ರಮ

ಮಾದಕ ಚಟ ನಿರ್ಮೂಲನೆಗೆ ಹೊಸ ಕಾರ್ಯಕ್ರಮ

ಇಬ್ಬಗೆ ನೀತಿ ಬಿಡಿ; ಕಿಡಿಗೇಡಿಗಳ ಶಿಕ್ಷಿಸಿ; ಪಾಕಿಸ್ತಾನ ವಿರುದ್ಧ ಕೇಂದ್ರದ ತರಾಟೆ

ಇಬ್ಬಗೆ ನೀತಿ ಬಿಡಿ; ಕಿಡಿಗೇಡಿಗಳ ಶಿಕ್ಷಿಸಿ; ಪಾಕಿಸ್ತಾನ ವಿರುದ್ಧ ಕೇಂದ್ರದ ತರಾಟೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತರ ಕಂಗೆಡಿಸಿದ ಕೀಟಬಾಧೆ

ರೈತರ ಕಂಗೆಡಿಸಿದ ಕೀಟಬಾಧೆ

ಅಕಾಲಿಕ ಮಳೆಗೆ ದ್ರಾಕ್ಷಿಗೆ ಡೌನಿ-ಕೊಳೆ-ಬೂದಿ ರೋಗ

ಅಕಾಲಿಕ ಮಳೆಗೆ ದ್ರಾಕ್ಷಿಗೆ ಡೌನಿ-ಕೊಳೆ-ಬೂದಿ ರೋಗ

ಹೊನ್ನರಹಳ್ಳಿ ಶಾಲೆಗೆ ಬಿಇಒ ಬೆಳ್ಳಣ್ಣವರ ಭೇಟಿ

ಹೊನ್ನರಹಳ್ಳಿ ಶಾಲೆಗೆ ಬಿಇಒ ಬೆಳ್ಳಣ್ಣವರ ಭೇಟಿ

ಸಮಗಾರ ಹರಳಯ್ಯ ಸಂಘದಿಂದ ಪ್ರತಿಭಟನೆ

ಸಮಗಾರ ಹರಳಯ್ಯ ಸಂಘದಿಂದ ಪ್ರತಿಭಟನೆ

ಭಕ್ತರ ಏಳ್ಗೆಗೆ ದಣಿವರಿಯದೇ ಸೇವೆಗೈದ ಶ್ರೀ

ಭಕ್ತರ ಏಳ್ಗೆಗೆ ದಣಿವರಿಯದೇ ಸೇವೆಗೈದ ಶ್ರೀ

MUST WATCH

udayavani youtube

ಯುವಕ ಮತ್ತು ಮಹಿಳೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ

udayavani youtube

ಇಡೀ ವರ್ಷದ ಪಾಠ ಕೇವಲ 199 ರೂಪಾಯಿಗಳಿಗೆ !

udayavani youtube

ಕೃಷಿ ಬಿಕ್ಕಟ್ಟನ್ನು ಹೇಗೆ ಎದುರಿಸಬೇಕು ?

udayavani youtube

ಕಂಗನಾಗೆ ದೆಹಲಿ ವಿಧಾನಸಭೆ ಸಮಿತಿ ಸಮನ್ಸ್‌

udayavani youtube

ಮಾಜಿ ಶಾಸಕರ ಕಾಂಪ್ಲೆಕ್ಸ್ ನಲ್ಲಿ ಲಕ್ಷಾಂತರ ರೂ. ಕಳ್ಳತನ: ಸಿಸಿ ಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

dharmasthala,

ವಿಪತ್ತಿನ ಆಪತ್ಭಾಂಧವನೇ ಶೌರ್ಯ: ಡಾ| ಹೆಗ್ಗಡೆ

ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಮನ್‌ಪ್ರೀತ್‌ ಸಿಂಗ್‌ ಸಾರಥ್ಯ

ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಮನ್‌ಪ್ರೀತ್‌ ಸಿಂಗ್‌ ಸಾರಥ್ಯ

ವಿದೇಶ ನಿರ್ಗಮಿತರಿಗೆ ಕಡ್ಡಾಯ ಪರೀಕ್ಷೆ

ವಿದೇಶ ನಿರ್ಗಮಿತರಿಗೆ ಕಡ್ಡಾಯ ಪರೀಕ್ಷೆ

ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ಗೆ “ಮಾಧ್ಯಮ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’

ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ಗೆ “ಮಾಧ್ಯಮ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’

ವಿಶ್ವ ಕೊಂಕಣಿ ಕೇಂದ್ರ: ಅಧ್ಯಕ್ಷರಾಗಿ ನಂದಗೋಪಾಲ ಶೆಣೈ

ವಿಶ್ವ ಕೊಂಕಣಿ ಕೇಂದ್ರ: ಅಧ್ಯಕ್ಷರಾಗಿ ನಂದಗೋಪಾಲ ಶೆಣೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.