ಸಂಕಷ್ಟ ನಿವಾರಣೆಗೆ ಪಕ್ಷಾತೀತ ಸಹಕಾರ

ಜನರ ಆರೋಗ್ಯಕ್ಕೆ ಶಾಸಕ ಸವದಿ ಅವಿರತ ಶ್ರಮ! ­ಅಂತ್ಯಸಂಸ್ಕಾರ ನಡೆಸುವ ಮುಸ್ಲಿಂ ಯುವಕರು 

Team Udayavani, May 22, 2021, 9:23 PM IST

Udayavani Kannada Newspaper

ಕಿರಣ ಶ್ರೀಶೈಲ ಆಳಗಿ

ಬನಹಟ್ಟಿ: ಜಿಲ್ಲೆಯಲ್ಲಿಯೇ ವಿಶೇಷತೆ ಹೊಂದಿರುವ ತೇರದಾಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಾಮಾರಿ ಕೊರೊನಾ ನಿಯಂತ್ರಣ ಹಾಗೂ ಸಂಕಷ್ಟದಲ್ಲಿರುವ ಜನರಿಗಾಗಿ ಪಕ್ಷಾತೀತವಾಗಿ ಹಲವರು ಶ್ರಮಿಸುತ್ತಿದ್ದಾರೆ. ಕ್ಷೇತ್ರದ ಶಾಸಕ ಸಿದ್ದು ಸವದಿ ಕ್ಷೇತ್ರದಲ್ಲಿದ್ದರೇ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರತಿದಿನ ಪ್ರತಿಯೊಂದು ಗ್ರಾಮ, ಪಟ್ಟಣ ಸೇರಿದಂತೆ ಎಲ್ಲಡೆ ತೆರಳಿ ಕೋವಿಡ್‌ ಪರಸ್ಥಿತಿ ನಿಭಾಯಿಸಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಜೊತೆಗೆ ನೂತನ ರಬಕವಿ-ಬನಹಟ್ಟಿ ತಾಲೂಕಿಗೆ ಬರಬೇಕಾದ ಎಲ್ಲ ಸೌಲಭ್ಯಕ್ಕಾಗಿ ಅಧಿಕಾರಿಗಳ ಜತೆ ಮಾತನಾಡಿ ಕೋವಿಡ್‌ ನಿಯಂತ್ರಣಕ್ಕೆ ಅವಿರತ ಪ್ರಯತ್ನ ಮಾಡುತ್ತಿದ್ದಾರೆ.

ತೇರದಾಳ ವಿಧಾನಸಭಾ ಕ್ಷೇತ್ರ ಜಿಲ್ಲೆಯಲ್ಲಿ ಒಂದಿ ಲ್ಲೊಂದು ವಿಷಯಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಪ್ರಚಲಿತದಲ್ಲಿರುವ ಕ್ಷೇತ್ರ ತೇರದಾಳ ಮತಕ್ಷೇತ್ರ. ಅಖಂಡ ಜಮಖಂಡಿ ಕ್ಷೇತ್ರದಿಂದ ಬೇರ್ಪಟ್ಟು, ಮುಧೋಳ ಕ್ಷೇತ್ರದ ಕೆಲವೊಂದು ಗ್ರಾಮಗಳನ್ನು ತೆಗೆದುಕೊಂಡು ಹೊಸ ಕ್ಷೇತ್ರವಾಗಿರವ ತೇರದಾಳ ಮತಕ್ಷೇತ್ರ ಜವಳಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಅದರಲ್ಲೂ ರಬಕವಿ-ಬನಹಟ್ಟಿ ಜವಳಿ ಕ್ಷೇತ್ರದ ಮ್ಯಾಂಚೆಸ್ಟರ್‌ ನಗರಗಳೆಂದೇ ಖ್ಯಾತವಾಗಿವೆ. ಶಾಸಕ ಸಿದ್ದು ಸವದಿ ಕೋವಿಡ್‌ ನಿಯಂತ್ರಿಸಲು ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಅಲ್ಲಿ ಅಧಿಕಾರಿಗಳ ಸಭೆ ನಡೆಸಿ ಸದ್ಯ ಯಾವ ರೀತಿ ಪರಿಸ್ಥಿತಿ ಇದ್ದು, ಅದನ್ನು ಯಾವ ರೀತಿ ತಡೆಗಟ್ಟಬೇಕು. ಮುಂಜಾಗ್ರತಾ ಕ್ರಮಗಳನ್ನು ಯಾವ ರೀತಿ ಕೈಗೊಳ್ಳಬೇಕು ಎಂಬುದರ ಕುರಿತು ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.

ತಾಲೂಕಿನಲ್ಲಿ ರಬಕವಿ-ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರ 30ಬೆಡ್‌ಗಳ ಅತಿ ದೊಡ್ಡ ಆಸ್ಪತ್ರೆಯಾಗಿದ್ದು ಅದು ತಾಲೂಕಿನ ಎಲ್ಲ ಆಸ್ಪತ್ರೆಗಳಿಗೆ ದೊಡ್ಡಣ್ಣನಂತೆ ಕೆಲಸ ನಿರ್ವಹಿಸುತ್ತಿದೆ. ಕೋವಿಡ್‌ ನಂತಹ ತುರ್ತು ಪರಿಸ್ಥಿತಿಯಲ್ಲಿ ಆಕ್ಸಿಜನ್‌ ಸಲುವಾಗಿ ಇಲ್ಲಿ 10 ಬೆಡ್‌ಗಳ ಆಸ್ಪತ್ರೆಯನ್ನು ತೆರೆಯಲಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅದು ಯಶಸ್ವಿಯಾಗಲು ಶಾಸಕ ಸಿದ್ದು ಸವದಿಯವರ ಪ್ರಯತ್ನ ಬಹಳಷ್ಟಿದೆ. ನಿತ್ಯ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಗಮನಿಸಿ ಅಲ್ಲಿ ಏನು ಬೇಕು ಏನು ಇಲ್ಲ ಎಂಬುದನ್ನು ಮನಗಂಡು ಸ್ಥಳದಲ್ಲಿಯೇ ಮೇಲಿನ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿ ವ್ಯವಸ್ಥೆ ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.

ಕೋವಿಡ್‌ ಕೇರ್‌ ಸೆಂಟರ್‌ ಪ್ರಾರಂಭ: ತಾಲೂಕಿನ ರಬಕವಿಯ ಎ1 ಪಾರ್ಕ್‌ ಹತ್ತಿರವಿರುವ ಬಿಸಿಎಂ ಹಾಸ್ಟೆಲ್‌ನಲ್ಲಿ 100 ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌ ಪ್ರಾರಂಭಿಸಲಾಗಿದ್ದು, ಇಲ್ಲಿ ಸೋಂಕಿತರನ್ನು ಕರೆ ತಂದು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ. ಔಷಧಿ ಕಿಟ್‌ ವಿತರಣೆ: ವ್ಯಾಪಕವಾಗಿ ಹಬ್ಬುತ್ತಿದ್ದ ಕೋವಿಡ್‌ ತಡೆಗಟ್ಟುವ ನಿಟ್ಟಿನಲ್ಲಿ ಶಾಸಕ ಸಿದ್ದು ಸವದಿ ತಕ್ಷಣ ಕಾರ್ಯಪ್ರವೃತರಾಗಿ ತಾಲೂಕಿನ ಎಲ್ಲ ಗ್ರಾಮ ಪಟ್ಟಣಗಳಿಗೆ ತಾಲೂಕು ಅಧಿ ಕಾರಿಗಳ ತಂಡದೊಂದಿಗೆ ತೆರಳಿ ಅಲ್ಲಿಯೇ ಆಶಾ, ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಭೆ ನಡೆಸುತ್ತಿದ್ದಾರೆ.

ಪ್ರತಿಯೊಬ್ಬ ಆಶಾ ಮತ್ತು ಅಂಗನವಾಡಿ ಕಾರ್ಯರ್ತೆಯರು ಗ್ರಾಮ ಹಾಗೂ ಪಟ್ಟಣದ ಪ್ರತಿಯೊಂದು ಮನೆಗಳ ಸರ್ವೇ ಮಾಡಿಸಿ ಅಲ್ಲಿ ಯಾರಾದರೂ ಕೆಮ್ಮ, ಶೀತ, ಜ್ವರದಿಂದ ಬಳಲುತ್ತಿದ್ದರೆ ಅಂತಹವರನ್ನು ಗುರುತಿಸಿ ಅವರಿಗೆ ಮುಂಜಾಗ್ರತಾ ಕ್ರಮವಾಗಿ ಸರಕಾರದ ಕೋವಿಡ್‌ ಔಷಧಿ ಕಿಟ್‌ ನೀಡಿ ಕೋವಿಡ್‌ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಕೈಗೊಂಡಿದ್ದಾರೆ. ಈ ಪ್ರಯತ್ನ ಕ್ಷೇತ್ರದಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿದ್ದು, ಸದ್ಯ ತಾಲೂಕಿನಲ್ಲಿ ಕೋವಿಡ್‌ ಪ್ರಮಾಣ ಇಳಿಕೆಯತ್ತ ಸಾಗಿದೆ. ಒಟ್ಟಾರೆ ಶಾಸಕ ಸಿದ್ದು ಸವದಿ ಕ್ಷೇತ್ರದ ಜನತೆಯ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿದ್ದಾರೆ.

ವ್ಯಾಕ್ಸಿನ್‌ ಬಗ್ಗೆ ಜಾಗೃತಿ: ಕೇಂದ್ರ ಸರಕಾರದ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕರು ಹಾಗೂ ಸ್ಥಳೀಯ ಆಸ್ಪತ್ರೆ ಮತ್ತು ವೈದ್ಯಾಧಿಕಾರಿಗಳು ಸಾಕಷ್ಟು ಜಾಗೃತಿ ಮೂಡಿಸುವುದರ ಮೂಲಕ ಲಸಿಕಾ ಅಭಯಾನಕ್ಕೆ ಹೆಚ್ಚಿನ ಮಹತ್ವ ಬರುವಂತೆ ಮಾಡಿದ್ದು, ಜನರು ಜಾಗೃತರಾಗಿ ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಬರುತ್ತಿದ್ದಾರೆ. ಉಚಿತ ಆಂಬ್ಯುಲೆನ್ಸ್‌ ಸೇವೆ: ಕೋವಿಡ್‌ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಿರಲೆಂದು ಇನ್ನೇರಡು ದಿನಗಳಲ್ಲಿ ಉಚಿತ ಆಂಬ್ಯುಲೆನ್ಸ್‌ ಸೇವೆ ಆರಂಭಿಸುತ್ತಿದ್ದು, ಒಟ್ಟು ಮೂರು ಆಂಬ್ಯೂಲೆನ್ಸ್‌ ಸೇವೆ ಪ್ರಾರಂಭಗೊಳ್ಳಲಿದೆ. ಅದರಲ್ಲಿ ಎರಡು ಆಕ್ಸಿಜನ್‌ ಸಹಿತ ಇದ್ದು, ಒಂದು ವಾಹನ ಶವ ಸಂಸ್ಕಾರಕ್ಕೆ ಬಳಸಿಕೊಳ್ಳಲಾಗುವುದು ಎನ್ನುತ್ತಾರೆ ಶಾಸಕ ಸವದಿ.

ಅಭಿಮಾನಿ ಬಳಗದಿಂದ ಹಸಿದವರಿಗೆ ಅನ್ನ: ಕೋವಿಡ್‌ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಆ ಹಿನ್ನೆಲೆಯಲ್ಲಿ ವ್ಯಾಪಾರ, ವಾಣಿಜ್ಯ ವಹಿವಾಟುಗಳು, ಸಣ್ಣ ಪುಟ್ಟ ಕೆಲಸಗಳು, ಕೂಲಿಗಳು ನಿಂತು ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅವರ ಕಷ್ಟಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಸಿದವರಿಗೆ ಅನ್ನವಾಗಿರೋಣ ಸುರಕ್ಷಿತವಾಗಿರೋಣ ಎಂಬ ಘೋಷದೊಂದಿಗೆ ಬನಹಟ್ಟಿಯ ಸಿದ್ದು ಸವದಿ ಅಭಿಮಾನಿ ಬಳಗ ಪ್ರತಿ ದಿನ ಭಿಕ್ಷುಕರು, ವೃದ್ಧರು, ಅನಾಥರು, ನಿರಾಶ್ರಿತರು ಹಾಗೂ ರೋಗಿಗಳಿಗೆ ಅನ್ನ ನೀಡುತ್ತಾ ಸೇವಾ ಕಾರ್ಯ ಮಾಡುತ್ತಿದೆ.

ಕಳೆದ ಹದಿನೈದು ದಿನಗಳಿಂದ ಈ ಕಾರ್ಯ ಮಾಡುತ್ತಿದ್ದು ಕೋವಿಡ್‌ನಿಂದಾಗಿ ಕೆಲಸವಿಲ್ಲದೇ ಕಂಗಾಲಾಗಿರುವ ವ್ಯಕ್ತಿಗಳನ್ನು ಗುರುತಿಸಿ ಅವರು ಇದ್ದಲ್ಲಿಗೆ ತೆರಳಿ ಸಿದ್ದು ಸವದಿ ಅಭಿಮಾನಿ ಬಳಗದ ಸದಸ್ಯರು ಆಹಾರದ ಪೊಟ್ಟಣ ನೀಡುತ್ತಾ ಅವರ ಬದುಕಿಗೆ ಆಶಾಕಿರಣವಾಗಿದ್ದಾರೆ. ಹಸಿವು ಎನ್ನುವ ಮನಸ್ಸುಗಳಿಗೆ ಆಹಾರ ನೀಡಿ ಅವರನ್ನು ಸಂತೈಸುವ ಕೆಲಸವನ್ನು ಅಭಿಮಾನಿ ಬಳಗದ ಯುವಕರು ಮಾಡುತ್ತಿರುವುದು ಶ್ಲಾಘನೀಯ. ಕೇವಲ ರಬಕವಿ- ಬನಹಟ್ಟಿ ನಗರಕ್ಕೆ ಸೀಮಿತವಾಗಿದ್ದ ಇದು ಕೇತ್ರದ ಪ್ರತಿ ನಗರಕ್ಕೂ ನೀಡುವ ವ್ಯವಸ್ಥೆ ಮಾಡಿಕೊಂಡಿದೆ. ಸಿದ್ದು ಸವದಿ ಅಭಿಮಾನಿ ಬಳಗದವರು ಪಕ್ಕದ ರಾಜ್ಯ ಮಹಾರಾಷ್ಟ್ರದ ಮೀರಜ್‌ನಲ್ಲಿ ಲಾಕ್‌ಡೌನ್‌ ಇರುವುದರಿಂದ ಈ ಭಾಗದಲ್ಲಿ ಅವಶ್ಯವಿರುವ ಔಷಧಿ ತರಿಸಿಕೊಡುವ ಕಾರ್ಯವನ್ನು ಮಾಡುತ್ತಿದೆ.

ಟಾಪ್ ನ್ಯೂಸ್

ಭಾರತದಲ್ಲಿ 24ಗಂಟೆಯಲ್ಲಿ 13,086 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ ಹೆಚ್ಚಳ

ಭಾರತದಲ್ಲಿ 24ಗಂಟೆಯಲ್ಲಿ 13,086 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ ಹೆಚ್ಚಳ

ಚಿಕ್ಕಮಗಳೂರಿನಲ್ಲಿ ಭಾರೀ ಮಳೆ; ಕೊಚ್ಚಿ ಹೋದ ಬಾಲಕಿ: 3 ತಾಲೂಕಿನಲ್ಲಿ ರಜೆ ಘೋಷಣೆ

ಚಿಕ್ಕಮಗಳೂರಿನಲ್ಲಿ ಭಾರೀ ಮಳೆ; ಕೊಚ್ಚಿ ಹೋದ ಬಾಲಕಿ: 3 ತಾಲೂಕಿನಲ್ಲಿ ರಜೆ ಘೋಷಣೆ

3road-band

ವಿಟ್ಲ: ಸಾರಡ್ಕ ಬಳಿ ಗುಡ್ಡ ಕುಸಿತ: ಕರ್ನಾಟಕ-ಕೇರಳ ಸಂಚಾರ ಬಂದ್

ವಿರೋಧದ ನಡುವೆ ಪ್ರೇಮ ವಿವಾಹ: ಗ್ರಾ,.ಪಂ ಸದಸ್ಯನ ಬರ್ಬರ ಕೊಲೆ

ವಿರೋಧದ ನಡುವೆ ಪ್ರೇಮ ವಿವಾಹ: ಗ್ರಾ,.ಪಂ ಸದಸ್ಯನ ಬರ್ಬರ ಕೊಲೆ

2murder

ಬೆಳ್ತಂಗಡಿ: ಪತ್ನಿಯಿಂದಲೇ ಪತಿಯ ಕೊಲೆ!

runda

ಬೆಳಗಾವಿಯಲ್ಲಿ ರುಂಡ ಇಲ್ಲದ ದೇಹ ಪತ್ತೆ: ಆತಂಕಗೊಂಡ ಜನ

1rain

ಮಂಗಳೂರು: ತಡೆಗೋಡೆ ಕುಸಿದು ಮೂವರಿಗೆ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-25

ರಬಕವಿ-ಬನಹಟ್ಟಿ : ಸಂಸ್ಕೃತಿಯ ಸಂಕೇತ ಹೆಣ್ಣು ಮಕ್ಕಳ “ಗುಳ್ಳವನ” ಹಬ್ಬ

25

6ರಂದು ಜವಳಿ ಸಚಿವರ ಮನೆಗೆ ಮುತ್ತಿಗೆ

22

ಮಳೆಯಾದ್ರೆ ಈ ರಸ್ತೆ ಜಲಾವೃತ!

ಸರ್ಕಾರ ನೇಕಾರರನ್ನು ಕಡೆಗಣಿಸುತ್ತಿದೆ : ಶಿವಲಿಂಗ ಟಿರಕಿ

ಸರ್ಕಾರ ನೇಕಾರರನ್ನು ಕಡೆಗಣಿಸುತ್ತಿದೆ : ಶಿವಲಿಂಗ ಟಿರಕಿ

1-fdsf-dsf

ರಬಕವಿ-ಬನಹಟ್ಟಿ:ಕಾಣೆಯಾದ ವಕೀಲ ಶವವಾಗಿ ಪತ್ತೆ

MUST WATCH

udayavani youtube

ಸಿಧು ಮೂಸೆವಾಲಾ ಹಂತಕರು ಕಾರಿನಲ್ಲಿ ಗನ್ ಹಿಡಿದು ಸಂಭ್ರಮಿಸಿದ ವೀಡಿಯೋ ವೈರಲ್

udayavani youtube

ಚಾರ್ಮಾಡಿ : ರಸ್ತೆ ಮಧ್ಯೆಯೇ ಮೋಜು ಮಸ್ತಿ, ಪ್ರವಾಸಿಗರ ಪುಂಡಾಟಕ್ಕೆ ವಾಹನ ಸವಾರರು ಸುಸ್ತು

udayavani youtube

ಭಾರಿ ಮಳೆಗೆ ಹೆಬ್ಬಾಳ ಸೇತುವೆ ಮುಳುಗಡೆ : ಕಳಸ – ಹೊರನಾಡು ಸಂಪರ್ಕ ಕಡಿತ

udayavani youtube

ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು

udayavani youtube

ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!

ಹೊಸ ಸೇರ್ಪಡೆ

ಭಾರತದಲ್ಲಿ 24ಗಂಟೆಯಲ್ಲಿ 13,086 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ ಹೆಚ್ಚಳ

ಭಾರತದಲ್ಲಿ 24ಗಂಟೆಯಲ್ಲಿ 13,086 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ ಹೆಚ್ಚಳ

5

ಅಂಡಾರು: ಈಡೇರಬೇಕಾದ ಬೇಡಿಕೆಗಳು ಹಲವಾರು

ಚಿಕ್ಕಮಗಳೂರಿನಲ್ಲಿ ಭಾರೀ ಮಳೆ; ಕೊಚ್ಚಿ ಹೋದ ಬಾಲಕಿ: 3 ತಾಲೂಕಿನಲ್ಲಿ ರಜೆ ಘೋಷಣೆ

ಚಿಕ್ಕಮಗಳೂರಿನಲ್ಲಿ ಭಾರೀ ಮಳೆ; ಕೊಚ್ಚಿ ಹೋದ ಬಾಲಕಿ: 3 ತಾಲೂಕಿನಲ್ಲಿ ರಜೆ ಘೋಷಣೆ

3road-band

ವಿಟ್ಲ: ಸಾರಡ್ಕ ಬಳಿ ಗುಡ್ಡ ಕುಸಿತ: ಕರ್ನಾಟಕ-ಕೇರಳ ಸಂಚಾರ ಬಂದ್

4

ಮೂಲಸೌಕರ್ಯ ಅಭಿವೃದ್ಧಿಗಾಗಿ ಕಾಯುತ್ತಿದೆ ಕುಪ್ಪೆಪದವು ರಿಕ್ಷಾ ಪಾರ್ಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.