ಕೋವಿಡ್; ಶಾಮಿಯಾನಗಾರರ ಬದುಕು ದುಸ್ತರ

ಶಾಮಿಯಾನ ಕುಟುಂಬಗಳಿಗೂ ಸಹಾಯ ನೀಡಲು ಆಗ್ರಹ | ಕೊರೊನಾ ಕರ್ಫ್ಯೂದಿಂದ ಉದ್ಯೋಗಕ್ಕೆ ಕತ್ತರಿ

Team Udayavani, Jun 1, 2021, 7:03 PM IST

3456shirur 30-1

ಶಿರೂರ: ಕೊರೊನಾ ಕರ್ಫ್ಯೂದಿಂದ ವ್ಯಾಪಾರಸ್ಥರ, ಕುಲಕಸುಬುದಾರರ ಬದುಕು ಮೂರಾಬಟ್ಟೆಯಾಗಿದೆ. ಶಾಮಿಯಾನ್‌ ಕೆಲಸ ನಂಬಿ ಜೀವನ ನಡೆಸುತ್ತಿದ್ದ ಗ್ರಾಮದಲ್ಲಿನ ಕುಟುಂಬಗಳ ಬದುಕು ದುಸ್ತರವಾಗಿದೆ.

ಸತತ ಎರಡನೇ ವರ್ಷವೂ ಶಾಮಿಯಾನ ನಿರ್ವಹಿಸುವ ಕುಟುಂಬಗಳಿಗೆ ಬದುಕು ಕಠಿಣವಾಗಿದೆ. ಇತ್ತೀಚೆಗೆ ಶಾಮಿಯಾನ ಒಂದು ಅಗತ್ಯ ಸೇವೆಯಾಗಿ ಆ ಕುಟುಂಬಗಳಿಗೆ ದೊಡ್ಡ ಆಸರೆಯಾಗಿತ್ತು. ಸಮಾಜದ ಎಲ್ಲ ವರ್ಗದ ಜನರ ಸಂದರ್ಭಕ್ಕೆ ಅನುಸಾರವಾಗಿ ಇದು ಅಗತ್ಯವಾಗುತ್ತಿತ್ತು. ಮದುವೆ, ಶುಭ-ಸಮಾರಂಭ, ಸಭೆ-ಸಮಾರಂಭಗಳಿಗೆ ಸರಕಾರದ ಕಾರ್ಯಕ್ರಮಗಳಿಗೆ ಹೀಗೆ ಅನೇಕ ವೇದಿಕೆಗಳನ್ನು ಸಿದ್ಧತೆ ಮಾಡುತ್ತಿದ್ದ ಗ್ರಾಮೀಣ ಭಾಗದ ಶಿರೂರು, ಬೆನಕಟ್ಟಿ, ನೀಲಾನಗರ, ಮಲ್ಲಾಪುರ ಗ್ರಾಮಗಳಲ್ಲಿನ ಕುಟುಂಬಗಳು ಈಗ ಕೊರೊನಾ ತಂದೊಡ್ಡಿದ ದುಃ ಸ್ಥಿತಿ ಎದುರಿಸಬೇಕಾಗಿದೆ.

ಕೊರೊನಾ ಕರ್ಫ್ಯೂದಿಂದ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಮದುವೆಗಳನ್ನು ನಿರ್ಬಂ  ಧಿಸಿದ್ದಾರೆ. ಎಲ್ಲ ಸರಿ ಇದ್ದಿದ್ದರೆ ಜನಪ್ರತಿನಿಧಿ ಗಳು, ಸಂಘ-ಸಂಸ್ಥೆಗಳು ಏರ್ಪಡಿಸುತ್ತಿದ್ದ ಸಾಮೂಹಿಕ ವಿವಾಹಗಳಲ್ಲಿ ಬೃಹತ್‌ ಪ್ರಮಾಣದ ಶಾಮಿಯಾನ ಹಾಕಿ ಧ್ವನಿ-ಬೆಳಕು ಅಳವಡಿಸಿ ಆ ಮೂಲಕ ಜೀವನ ಸಾಗಿಸುತ್ತಿದ್ದರು. ಕಳೆದ ವರ್ಷವೇ ಅಪಾರ ನಷ್ಟ ಅನುಭವಿಸಿದ್ದರು. ಈ ವರ್ಷವಾದರೂ ಪರಿಸ್ಥಿತಿ ಸರಿ ಹೋಗಬಹುದು ಎನ್ನುವ ನೀರಿಕ್ಷೆಯಲ್ಲಿರುವಾಗಲೇ ಎರಡನೇ ಅಲೆ ಅಪ್ಪಳಿಸಿದ್ದರಿಂದ ಲಕ್ಷಾಂತರ ರೂಪಾಯಿ ಬಂಡವಾಳ ತೊಡಗಿಸಿ ತಂದ ಹೊಸ ಸಾಮಗ್ರಿಗಳು ಬಳಸಲಾಗದೇ ಮನೆಯ ಮುಂದೆ ತುಕ್ಕು ಹಿಡಿಯುತ್ತಿವೆ ಎಂಬುದು ಶಾಮಿಯಾನ್‌ ಮಾಲೀಕ ಈರಣ್ಣ ಹೊಳಿ ಮಾತು.

ಮುಂದಿನ ದಿನಗಳಲ್ಲಿಯೂ ಶುಭ ಸಮಾರಂಭಗಳು ನಡೆಯದೇ ಇರುವುದರಿಂದ ನಮಗೆ ವರ್ಷಕ್ಕೆ 4ರಿಂದ 5 ಲಕ್ಷ ರೂಪಾಯಿ ನಷ್ಟದ ಹೊರೆ ಬಂದಿದೆ. ಸರಕಾರ ಅನೇಕ ಕುಲಕಸುಬುದಾರರಿಗೆ ಆರ್ಥಿಕ ಸಹಾಯ ನೀಡಿದೆ. ಶಾಮಿಯಾನ್‌ ಕುಟುಂಬಗಳಿಗೂ ಸಹಾಯ ನೀಡಲಿ ಎಂದು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

1-adada

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಶ್ಚಿತ ಪಿಂಚಣಿ ಯೋಜನೆ ಜಾರಿ: ಶಾಮನೂರು ಶಿವಶಂಕರಪ್ಪ

ಗುತ್ತಿಗೆದಾರನಿಗೆ ಹಣ ನೀಡದೆ ವಂಚನೆ ಪ್ರಕರಣ: ದೂರು ದಾಖಲು

ಗುತ್ತಿಗೆದಾರನಿಗೆ ಹಣ ನೀಡದೆ ವಂಚನೆ ಪ್ರಕರಣ: ದೂರು ದಾಖಲು

ಬಸ್‌ ಢಿಕ್ಕಿಯಾಗಿ ಮಹಿಳೆ ಸಾವು ಪ್ರಕರಣ: ಚಾಲಕನ ಬಂಧನ

ಬಸ್‌ ಢಿಕ್ಕಿಯಾಗಿ ಮಹಿಳೆ ಸಾವು ಪ್ರಕರಣ: ಚಾಲಕನ ಬಂಧನ

ಕಾಪು: ಬಸ್ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು

ಕಾಪು: ಬಸ್ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು

ಶ್ರೀನಿವಾಸ ಮೂರ್ತಿ ನೇತೃತ್ವದ ಸಮಿತಿ ಅವಧಿ ಮುಂದುವರಿಕೆ: ಸರಕಾರ ಆದೇಶ

ಶ್ರೀನಿವಾಸ ಮೂರ್ತಿ ನೇತೃತ್ವದ ಸಮಿತಿ ಅವಧಿ ಮುಂದುವರಿಕೆ: ಸರಕಾರ ಆದೇಶ

ಡಿ.ಕೆ.ಶಿವಕುಮಾರ್‌ ಭೇಟಿ ಮಾಡಿದ ಎಚ್‌.ವಿಶ್ವನಾಥ್‌

ಡಿ.ಕೆ.ಶಿವಕುಮಾರ್‌ ಭೇಟಿ ಮಾಡಿದ ಎಚ್‌.ವಿಶ್ವನಾಥ್‌

ಗೆಲ್ಲುವ ಅಭ್ಯರ್ಥಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿ: ಸತೀಶ ಜಾರಕಿಹೊಳಿ

ಗೆಲ್ಲುವ ಅಭ್ಯರ್ಥಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿ: ಸತೀಶ ಜಾರಕಿಹೊಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1dsdsadas

ಬನಹಟ್ಟಿ: ಸಂಭ್ರಮದ ವೀರಭದ್ರೇಶ್ವರ ಕಾರ್ತಿಕೋತ್ಸವ

1sadasdad

ತೇರದಾಳವನ್ನು ಮಾದರಿ ಕ್ಷೇತ್ರವನ್ನಾಗಿಸುವ ಪ್ರಾಮಾಣಿಕ ಪ್ರಯತ್ನ:ಸವದಿ

1-asdsa

ಸುಕ್ಷೇತ್ರ ಬನಶಂಕರಿ ದೇವಿ ಜಾತ್ರಾ ಮಹೋತ್ಸವ: ಡಿ.30 ರಿಂದ ಆರಂಭ

2

ಪ್ರತಿಷ್ಠೆ ರಾಜಕೀಯಕ್ಕೆ ಕಾರಣವಾಯ್ತಾ ಕಬ್ಬು ಹೋರಾಟ

16

ಮಕ್ಕಳು ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಿ

MUST WATCH

udayavani youtube

ಬೆಂಗಳೂರಿನಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಶಾಖೆಗೆ ಮಸಿ ಬಳಿಯಲು ಯತ್ನ, ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ

udayavani youtube

ಅಘೋರಿಗಳ ವಿಭಿನ್ನ ಜೀವನ ಹೇಗಿದೆ ನೋಡಿ !

udayavani youtube

ಬೆಳ್ತಂಗಡಿ… ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ… ಕಾರ್ಮಿಕ ಸಾವು

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

ಹೊಸ ಸೇರ್ಪಡೆ

1dsdsadas

ಬನಹಟ್ಟಿ: ಸಂಭ್ರಮದ ವೀರಭದ್ರೇಶ್ವರ ಕಾರ್ತಿಕೋತ್ಸವ

1ddsadad

ಅರೋಗ್ಯ ಕೇಂದ್ರದ ಸಮಸ್ಯೆ; ಉದಯವಾಣಿ ಫಲಶ್ರುತಿ : ವರದಿಗೆ ಎಚ್ಚತ್ತ ಅಧಿಕಾರಿಗಳು.!

1-sadadada

ವಿಜಯಪುರ: 8 ತಿಂಗಳ ಸಂಬಳಕ್ಕೆ ಆಗ್ರಹಿಸಿ ಟೋಲ್‍ನಾಕಾ ಸಿಬಂದಿ ಪ್ರತಿಭಟನೆ

1-adada

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಶ್ಚಿತ ಪಿಂಚಣಿ ಯೋಜನೆ ಜಾರಿ: ಶಾಮನೂರು ಶಿವಶಂಕರಪ್ಪ

ಗುತ್ತಿಗೆದಾರನಿಗೆ ಹಣ ನೀಡದೆ ವಂಚನೆ ಪ್ರಕರಣ: ದೂರು ದಾಖಲು

ಗುತ್ತಿಗೆದಾರನಿಗೆ ಹಣ ನೀಡದೆ ವಂಚನೆ ಪ್ರಕರಣ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.