Udayavni Special

ಸತತ ಮಳೆಯಿಂದ ಬೆಳೆ ಹಾಳು

ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ರೈತ

Team Udayavani, Oct 31, 2020, 12:42 PM IST

bk-tdy-2

ಕುಳಗೇರಿ ಕ್ರಾಸ್‌: ಸತತ ಮಳೆಯಿಂದ ಕುಳಗೇರಿ ಹೋಬಳಿಯ ಸಾವಿರಾರು ಹೆಕ್ಟೆರ್‌ ಪ್ರದೇಶದಲ್ಲಿನ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾಳಾಗಿ ರೈತರು ಕಂಗಾಲಾಗಿದ್ದಾರೆ. ಗೋವಿನಜೋಳ, ಈರುಳ್ಳಿ, ಹೆಸರು, ಸಜ್ಜಿ, ಜೋಳ ಹೀಗೆ ಎಲ್ಲ ಬೆಳೆಗಳನ್ನ ಕಳೆದುಕೊಂಡು ರೈತರು ಕಣ್ಣೀರಿಡುವಂತಾಗಿದೆ.

ಕಳೆದ ವರ್ಷ ಮಳೆ ಸುರಿದು ಪ್ರವಾಹ ಬಂದು ನಮ್ಮ ಹೊಲ ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದೆವೆ. ನಾಲ್ಕೈದು ಬಾರಿ ಪ್ರವಾಹ ಬಂದು ಬೆಳೆಗಳು ಹಾಳಾಗಿವೆ.ಆದರೆ ಇನ್ನೂ ಕೂಡಾ ಪರಿಹಾರ ಬಂದಿಲ್ಲ. ಬೆಳೆ ವೀಕ್ಷಣೆಗೆ ಪ್ರತಿ ವರ್ಷ ಕೇಂದ್ರ ತಂಡ, ರಾಜ್ಯ ತಂಡದವರು ಬಂದು ನೋಡಿ ಹೋಗ್ತಾರೆ, ಪರಿಹಾರ ಮಾತ್ರ ಕೊಡುತ್ತಿಲ್ಲ ಎಂದು ರೈತರು ಆರೋಪ ಮಾಡುತ್ತಿದ್ದಾರೆ.

ರೈತನ ಗೋಳು: ದನ-ಕರ ಅಷ್ಟ ಅಲ್ರಿ ನಾವೂ ಸಹ ಕೂಳಗೇಡಿ ಆದಿವ್ರಿ. ಹೊಲದಾಗ ಕೆಲಸರ ರಗಡ ಇತ್ತು, ಏನ್‌ ಮಾಡೋದ್‌ ಮಳೆರಾಯ ಎಲ್ಲ ಹಾಳ ಮಾಡಿ ಹೋದ. ಮೊಣಕಾಲುದ್ದ ಕಸ ಬೆಳದೈತಿ ನಮಗಂತೂ ಸಾಕಾಗಿ ಹೋಗೈತಿ ನೋಡ್ರಿ ಯಾರ ಮುಂದ ಹೇಳ್ಳೋದ್ರಿನಮ್ಮ ಗೋಳ ಅಂತಾ ಗೋವಿನಕೊಪ್ಪ ಗ್ರಾಮದ ರೈತ ಸಿದ್ದಪ್ಪ ದ್ಯಾವಪ್ಪ ಸಿರಗುಂಪಿ ಪತ್ರಿಕೆ ಎದುರು ಗೋಳು ತೋಡಿಕೊಂಡಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಉತ್ತಮ ಬೆಳೆ ಬೆಳೆದರೂ ಸಹ ನಮ್ಮ ಕೈ ಸೇರಿಲ್ಲ, ನೀರಿಗೆ ಕೊಚ್ಚಿ ಹೋಗಿ ಹೊಟ್ಟೆಗೆ ಹಿಟ್ಟು ಸಹ ಇಲ್ಲದಂಗ ಆಗೈತಿ. ಈ ಬಾರಿ ಸುಮಾರು 25 ಕ್ವಿಂಟಲ್‌ ಹತ್ತಿ ಬೆಳೆದಿದ್ದೆ. ಬೆಳೆ ಕೈ ಸೇರುವ ಸಮಯದಲ್ಲೇ ಬಿಟ್ಟು ಬಿಡದೆ ಸುರಿದ ಮಳೆಗೆ ಪಡ್ಲ ಒಡೆದ ಹತ್ತಿ ಕೊಳೆತು ಹೋತ. ಒಂದು ಹತ್ತಿ ಗಿಡದಾಗ 15 ರಿಂದ 20 ಕಾಯಿಗಳು ಕೊಳೆತು ಕಪ್ಪಾಗಿ ಹೋಗೈತಿ. ಪ್ರತಿ ವರ್ಷ ಸಾಲಾ ಮಾಡಿ ಸಾವಿರಾರು ರೂ. ಖರ್ಚ ಮಾಡ್ತೇನಿ, ಒಂದ ಬಾರಿನೂ ಬೆಳೆ ಕೈ ಸೇರಿಲ್ಲ ಎಂದು ರೈತ ಸಿದ್ದಪ್ಪ ನೋವು ತೋಡಿಕೊಂಡಿದ್ದಾನೆ.

ಹತ್ತಿ, ಸಜ್ಜಿ, ಈರುಳ್ಳಿ, ಕಬ್ಬು ಹಾಳಾಗಿವೆ.ಗೋವಿನಜೋಳ ಮಾತ್ರ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದೆ. ಕೆಲ ರೈತರಿಗೆ ಕಳೆದ ಬಾರಿ ಬೆಳೆ ಹಾನಿ ಪರಿಹಾರ ಬಂದಿಲ್ಲ. ಈ ಬಾರಿಯಾದರೂ ಸರ್ಕಾರ ಬೇಗ ಪರಿಹಾರ ಕೊಟ್ಟು ಅನುಕೂಲ ಮಾಡಬೇಕು  -ಕರಿಗೌಡ ಮುಷ್ಟಿಗೇರಿ, ಬೀರನೂರ ರೈತ

-ಸಿದ್ದಯ್ಯ ಹಿರೇಮಠ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೇರಳ ಟಿ20 ಮೂಲಕ ಶ್ರೀಶಾಂತ್‌ ಮತ್ತೆ ಕ್ರಿಕೆಟ್‌ಗೆ

ಕೇರಳ ಟಿ20 ಮೂಲಕ ಶ್ರೀಶಾಂತ್‌ ಮತ್ತೆ ಕ್ರಿಕೆಟ್‌ಗೆ

34ನೇ ಜನ್ಮದಿನಕ್ಕೆ 34 ಸರಕಾರಿ ಶಾಲೆಗಳ ಅಭಿವೃದ್ಧಿ: ಸುರೇಶ್‌ ರೈನಾ ಸಂಕಲ್ಪ

34ನೇ ಜನ್ಮದಿನಕ್ಕೆ 34 ಸರಕಾರಿ ಶಾಲೆಗಳ ಅಭಿವೃದ್ಧಿ: ಸುರೇಶ್‌ ರೈನಾ ಸಂಕಲ್ಪ

ಬಳ್ಳಾರಿ: ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅಧಿಕಾರ ವಹಿಸಿದ ಹತ್ತೇ ದಿನದಲ್ಲಿ ವರ್ಗಾವಣೆ

ಬಳ್ಳಾರಿ: ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅಧಿಕಾರ ವಹಿಸಿದ ಹತ್ತೇ ದಿನದಲ್ಲಿ ವರ್ಗಾವಣೆ

ಬೈಡೆನ್‌ ಒಬ್ಬ ದುರ್ಬಲ ಅಧ್ಯಕ್ಷ: ಚೀನಾ ವ್ಯಾಖ್ಯಾನ

ಬೈಡೆನ್‌ ಒಬ್ಬ ದುರ್ಬಲ ಅಧ್ಯಕ್ಷರಾಗುವ ಸಾಧ್ಯತೆ ಇದೆ : ಚೀನಾ ವ್ಯಾಖ್ಯಾನ

ಬೆಳ್ತಂಗಡಿ : 2 ತಲೆ, 7 ಕಾಲು ಹೊಂದಿದ ವಿಸ್ಮಯಕಾರಿ ಕರುವಿನ ಜನನ !

ಪ್ರಕೃತಿ ವಿಸ್ಮಯ: ಬೆಳ್ತಂಗಡಿಯಲ್ಲಿ 2 ತಲೆ, 7 ಕಾಲು ಹೊಂದಿದ ಕರುವಿನ ಜನನ !

ಯುಎಇ: ಉದ್ಯಮ ಸ್ಥಾಪನೆ, ಹೂಡಿಕೆ ನಿಯಮದಲ್ಲಿ ಸಡಿಲಿಕೆ

ಯುಎಇ: ಉದ್ಯಮ ಸ್ಥಾಪನೆ, ಹೂಡಿಕೆ ನಿಯಮದಲ್ಲಿ ಸಡಿಲಿಕೆ

ಚುನಾವಣೆಯಲ್ಲಿ ಒವೈಸಿಗೆ ನೀಡುವ ಪ್ರತಿ ಮತವೂ ಭಾರತ ವಿರೋಧಿ ಮತವಾಗಿರುತ್ತದೆ : ತೇಜಸ್ವಿ

ಚುನಾವಣೆಯಲ್ಲಿ ಒವೈಸಿಗೆ ನೀಡುವ ಪ್ರತಿ ಮತವೂ ಭಾರತ ವಿರೋಧಿ ಮತವಾಗಿರಲಿದೆ : ತೇಜಸ್ವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಾಯಿಯ ಸಾವಿಗೆ ಕಾರಣವಾಯ್ತು ಮಗನ ವಿಡಿಯೋ ಕಾಲ್ !

ತಾಯಿಯ ಸಾವಿಗೆ ಕಾರಣವಾಯ್ತು ಮಗನ ವಿಡಿಯೋ ಕಾಲ್ !

denige

ಅಮೀನಗಡ: ಕಾಂಗ್ರೆಸ್ ಭವನಕ್ಕಾಗಿ ಜೋಳಿಗೆ ಹಿಡಿದ ಜಿಲ್ಲಾಧ್ಯಕ್ಷ !

ಬಾರದ ವರದಿ; ಕಾಲೇಜಿಗೆ ಬರ್ತಿಲ್ಲ ವಿದ್ಯಾರ್ಥಿಗಳು

ಬಾರದ ವರದಿ; ಕಾಲೇಜಿಗೆ ಬರ್ತಿಲ್ಲ ವಿದ್ಯಾರ್ಥಿಗಳು

bk-tdy-1

ಪಕ್ಷದ ಕಚೇರಿ ಕಟ್ಟಡಕ್ಕೆ ಜೋಳಿಗೆ ಹಾಕಿದ ಜಿಲ್ಲಾಧ್ಯಕ್ಷ!

ಬಲ ತುಂಬುತ್ತಿದೆ ಕೂಲಿಗಾಗಿ ಕಾಳು ಯೋಜನೆ

ಬಲ ತುಂಬುತ್ತಿದೆ ಕೂಲಿಗಾಗಿ ಕಾಳು ಯೋಜನೆ

MUST WATCH

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

udayavani youtube

ಸುರತ್ಕಲ್ ನ ಪ್ರಥಮ ರಿಕ್ಷಾ ಚಾಲಕಿ

udayavani youtube

ಭೂಲೋಕದ ಅಮೃತ ವಾದ ತುಪ್ಪವನ್ನು ಸರಿಯಾಗಿ ಬಳಸುವುದು ಹೇಗೆ ?

udayavani youtube

Nittur Swarna rice Brand ಶಾಲೆಯ ಮಕ್ಕಳು ಸಿದ್ಧಪಡಿಸಿದ ನಿಟ್ಟೂರು ಸ್ವರ್ಣ ಅಕ್ಕಿ ಬ್ರಾಂಡ್

ಹೊಸ ಸೇರ್ಪಡೆ

ಆಸೀಸ್‌ ಸರಣಿಗೆ ಸೂರ್ಯ ಕುಮಾರ್ ಬೇಕಿತ್ತು: ಬ್ರಿಯಾನ್‌ ಲಾರ

ಆಸೀಸ್‌ ಸರಣಿಗೆ ಸೂರ್ಯ ಕುಮಾರ್ ಬೇಕಿತ್ತು: ಬ್ರಿಯಾನ್‌ ಲಾರ

ಕೇರಳ ಟಿ20 ಮೂಲಕ ಶ್ರೀಶಾಂತ್‌ ಮತ್ತೆ ಕ್ರಿಕೆಟ್‌ಗೆ

ಕೇರಳ ಟಿ20 ಮೂಲಕ ಶ್ರೀಶಾಂತ್‌ ಮತ್ತೆ ಕ್ರಿಕೆಟ್‌ಗೆ

34ನೇ ಜನ್ಮದಿನಕ್ಕೆ 34 ಸರಕಾರಿ ಶಾಲೆಗಳ ಅಭಿವೃದ್ಧಿ: ಸುರೇಶ್‌ ರೈನಾ ಸಂಕಲ್ಪ

34ನೇ ಜನ್ಮದಿನಕ್ಕೆ 34 ಸರಕಾರಿ ಶಾಲೆಗಳ ಅಭಿವೃದ್ಧಿ: ಸುರೇಶ್‌ ರೈನಾ ಸಂಕಲ್ಪ

ಬಳ್ಳಾರಿ: ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅಧಿಕಾರ ವಹಿಸಿದ ಹತ್ತೇ ದಿನದಲ್ಲಿ ವರ್ಗಾವಣೆ

ಬಳ್ಳಾರಿ: ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅಧಿಕಾರ ವಹಿಸಿದ ಹತ್ತೇ ದಿನದಲ್ಲಿ ವರ್ಗಾವಣೆ

ಬೈಡೆನ್‌ ಒಬ್ಬ ದುರ್ಬಲ ಅಧ್ಯಕ್ಷ: ಚೀನಾ ವ್ಯಾಖ್ಯಾನ

ಬೈಡೆನ್‌ ಒಬ್ಬ ದುರ್ಬಲ ಅಧ್ಯಕ್ಷರಾಗುವ ಸಾಧ್ಯತೆ ಇದೆ : ಚೀನಾ ವ್ಯಾಖ್ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.