Udayavni Special

ಸುದ್ದಿ ಓರೆಗೆ ಹಚ್ಚುವ ಕೆಲಸ ಮಾಡಿ

•ಪತ್ರಕರ್ತರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಅಂತರಂಗದ ಸ್ವಾತಂತ್ರ್ಯ ಮುಖ್ಯ

Team Udayavani, Jul 30, 2019, 10:08 AM IST

bk-tdy-2

ಮಹಾಲಿಂಗಪುರ: ಎಸ್‌ಸಿಪಿ ಪದವಿ ಕಾಲೇಜಿನಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ಡಾ| ಟಿ.ಪಿ. ಗಿರಡ್ಡಿ ಮಾತನಾಡಿದರು.

ಮಹಾಲಿಂಗಪುರ: ಪತ್ರಕರ್ತರು ಸುದ್ದಿಯನ್ನು ಪ್ರಾಮಾಣಿಕತೆಯಿಂದ ಬರೆದು, ಯಾರಿಗೂ ಭಯಪಡದೇ ಅದನ್ನು ಓರೆಗೆ ಹಚ್ಚುವ ಕೆಲಸ ಮಾಡಬೇಕು. ಅಂದಾಗ ಮಾತ್ರ ಪತ್ರಿಕೋದ್ಯಮಕ್ಕೆ ಬೆಲೆ ಎಂದು ಜಮಖಂಡಿಯ ಹಿರಿಯ ಪತ್ರಕರ್ತ ಡಾ| ಟಿ.ಪಿ. ಗಿರಡ್ಡಿ ಹೇಳಿದರು.

ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್‌ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ 2019ನೇ ಸಾಲಿನ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪತ್ರಕರ್ತರು ಯಾವುದೇ ಭೇದ ಭಾವವಿಲ್ಲದೆ ಸಾಮಾಜಿಕ ಸಮಸ್ಯೆಗಳನ್ನು ಜನರ ಮುಂದಿಡುವ ಕಾರ್ಯ ಮಾಡಬೇಕು ಎಂದರು.

ಪತ್ರಕರ್ತರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಅಂತರಂಗದ ಸ್ವಾತಂತ್ರ್ಯ ಮುಖ್ಯವಾಗಿದೆ. ಸಮಾಜದ ಹಿತಕ್ಕಾಗಿ ಯಾವುದೇ ಸುದ್ದಿಯನ್ನು ಅಂತರಂಗದಿಂದ ಗ್ರಹಿಸಬೇಕು. ಅಂತರಂಗದ ಸ್ವಾತಂತ್ರ್ಯ ಕಳೆದುಕೊಂಡರೆ ವೃತ್ತಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ. ಪತ್ರಕರ್ತರು ವರದಿ ಮಾಡಲು ಒಳ ಮತ್ತು ಹೊರ ಜಗತ್ತು ತಿಳಿದಿರಬೇಕು. ಮುಂದಾಲೋಚನೆ, ಸುದ್ದಿ ಮೌಲ್ಯ, ಮಹತ್ವ ತಿಳಿದಿರಬೇಕು. ಅಂದಾಗ ಮಾತ್ರ ಯಶಸ್ವಿ ಪತ್ರಕರ್ತರಾಗಿ ಹೊರಹೊಮ್ಮಲು ಸಾಧ್ಯ ಎಂದರು. ಸ್ಥಳೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ, ಪತ್ರಕರ್ತ ವೃತ್ತಿಯು ಹಣಗಳಿಕೆಯ ವೃತ್ತಿಯಲ್ಲ. ಇದೊಂದು ಸಮಾಜ ಸೇವಾ ವೃತ್ತಿ. ಈ ವೃತ್ತಿಗೆ ಸೇರ ಬಯಸುವವರಿಗೆ ಸಮಾಜದ ಬಗ್ಗೆ ಕಳಕಳಿ ಗೌರವ, ಸಮಸ್ಯೆಗಳ ಕುರಿತು ಅರಿವಿರಬೇಕು. ಹಾಗೆಯೇ ಭಾಷಾ ಜ್ಞಾನವೂ ಅಗತ್ಯ ಎಂದರು.

ಪ್ರಾಚಾರ್ಯ ಡಾ| ಬಿ.ಎಂ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿನಿಯರಾದ ತ್ರಿವೇಣಿ ನಾಯಕ, ದೀಕ್ಷಾ ಮುಚಂಡಿ ಪತ್ರಿಕೋದ್ಯಮ ಬೆಳೆದು ಬಂದ ದಾರಿಯ ಕುರಿತು ಮಾತನಾಡಿದರು. ಕಾಲೇಜಿನ ಪಾಕ್ಷಿಕ ಪತ್ರಿಕೆ ಚನ್ನಗಿರಿ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಪತ್ರಿಕಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ಚರ್ಚಾ ಸ್ಪರ್ಧೆ ಮತ್ತು ಸುದ್ದಿವಾಚಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾಲೇಜಿನ ಆಯ್‌ಕ್ಯೂಎಸಿ ಸಂಯೋಜಕ ಡಾ| ಕೆ.ಎಂ.ಅವರಾದಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪೂಜಾ ಕಲ್ಯಾಣಶೆಟ್ಟಿ, ಉಪನ್ಯಾಸಕರಾದ ಅಶೋಕ ನರೋಡೆ, ಆಶಾರಾಣಿ ಚಿನಗುಂಡಿ, ವಿರೂಪಾಕ್ಷ ಅಡಹಳ್ಳಿ ಸೇರಿದಂತೆ ಹಲವರು ಇದ್ದರು.

ಐಶ್ವರ್ಯ ಹುದ್ದಾರ ಪ್ರಾರ್ಥಿಸಿದರು. ಜಯಶ್ರೀ ದೇಶನೂರ ಸ್ವಾಗತಿಸಿದರು. ಲಕ್ಷಿ ್ಮೕ ಘಂಟಿ ಪರಿಚಯಿಸಿದರು. ಮಾನಿಂಗ ಲಮಾಣಿ, ಮಹಾನಂದಾ ಬಿಜಾಪುರ ನಿರೂಪಿಸಿದರು. ರಾಜೇಂದ್ರ ನಾವಿ ವಂದಿಸಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

siddaramiha

ಪ್ರಧಾನಿ ಮೋದಿಯವರು ತಮ್ಮ ಕರ್ತವ್ಯಪಾಲನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ: ಸಿದ್ದರಾಮಯ್ಯ

mandya

ಅಂತರ್ಜಾತಿ ಮದುವೆಯಾದ ಯುವತಿ ನಿಗೂಢ ನಾಪತ್ತೆ: 5 ವರ್ಷದ ಬಳಿಕ ಪೋಷಕರಿಂದ ದೂರು ದಾಖಲು

vijayapura-agriculture

ವಿಜಯಪುರ: ರೈತರ ಸಾವು ಪ್ರಕರಣ: 34 ಕುಟುಂಬಗಳಿಗೆ 1.27 ಕೋಟಿ ರೂ. ಪರಿಹಾರ

thunder

ವಿಜಯಪುರದಲ್ಲಿ ಮಳೆಯ ಅಬ್ಬರ: ಸಿಡಿಲು ಬಡಿದು ರೈತ ಸಾವು

punjab

ಪಂಜಾಬ್-ಡೆಲ್ಲಿ ಫೈಟ್: ಟಾಸ್ ಗೆದ್ದ ಶ್ರೇಯಸ್ ಪಡೆ ಬ್ಯಾಟಿಂಗ್ ಆಯ್ಕೆ: ತಂಡ ಇಂತಿದೆ…

puneeth-rajkumar

ಉದಯವಾಣಿ ವರದಿಗೆ ಸ್ಪಂದನೆ: ಅಂಧ ಸಹೋದರಿಯರನ್ನು ಕರೆಸಿ ಕುಶಲೋಪರಿ ವಿಚಾರಿಸಿದ‌ ಪವರ್ ಸ್ಟಾರ್

ಕೋವಿಡ್ 19: ಮೈಮರೆಯಬೇಡಿ…ಲಾಕ್ ಡೌನ್ ತೆರವುಗೊಂಡಿದೆ, ವೈರಸ್ ಇನ್ನೂ ಇದೆ: ಮೋದಿ

ಕೋವಿಡ್ 19: ಮೈಮರೆಯಬೇಡಿ…ಲಾಕ್ ಡೌನ್ ತೆರವುಗೊಂಡಿದೆ, ವೈರಸ್ ಇನ್ನೂ ಇದೆ: ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಂತರಿಕ ಕಚ್ಚಾಟದಿಂದ ಸರ್ಕಾರ ಬಿದ್ದರೆ ನಾವು ಚುನಾವಣೆ ಎದುರಿಸಲು ಸಿದ್ಧ : ಸಿದ್ದರಾಮಯ್ಯ

ಆಂತರಿಕ ಕಚ್ಚಾಟದಿಂದ ಸರ್ಕಾರ ಬಿದ್ದರೆ ನಾವು ಚುನಾವಣೆ ಎದುರಿಸಲು ಸಿದ್ಧ : ಸಿದ್ದರಾಮಯ್ಯ

ಹನಮಂತನ ವಿರುದ್ಧ “ಕೈ”ಗೆ ಸಿಗುತ್ತಿಲ್ಲ ಅಭ್ಯರ್ಥಿ! ಬಹುತೇಕ ಅವಿರೋಧ ಸಾಧ್ಯತೆ

ಹನಮಂತನ ವಿರುದ್ಧ “ಕೈ”ಗೆ ಸಿಗುತ್ತಿಲ್ಲ ಅಭ್ಯರ್ಥಿ! ಬಹುತೇಕ ಅವಿರೋಧ ಸಾಧ್ಯತೆ

parking

ನೋ ಪಾರ್ಕಿಂಗ್‌ ನಲ್ಲಿ ಬೈಕ್‌ ನಿಲ್ಲಿಸಿದಕ್ಕೆ ಗಲಾಟೆ! ಮಹಿಳೆಯಿಂದ ಪೊಲೀಸ್ ಗೆ ಕಪಾಳ ಮೋಕ್ಷ

“ರಕ್ಷಿಸೋಣ ಬನ್ನಿ ಕೂಡಲಸಂಗಮ’ ಅಭಿಯಾನ

“ರಕ್ಷಿಸೋಣ ಬನ್ನಿ ಕೂಡಲಸಂಗಮ’ ಅಭಿಯಾನ

ಮನೆ ಹಾನಿ ಸಮೀಕ್ಷೆ ಅಧಿಕಾರಿಗಳ ನಿರ್ಲಕ್ಷ್ಯ! ಬಿದ್ದ ಮನೆಗಳ ಬಗ್ಗೆ ಅವಗಣನೆ, ಗ್ರಾಮಸ್ಥರ ಆರೋಪ

ಮನೆ ಹಾನಿ ಸಮೀಕ್ಷೆ ಅಧಿಕಾರಿಗಳ ನಿರ್ಲಕ್ಷ್ಯ! ಬಿದ್ದ ಮನೆಗಳ ಬಗ್ಗೆ ಅವಗಣನೆ, ಗ್ರಾಮಸ್ಥರ ಆರೋಪ

MUST WATCH

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್

udayavani youtube

ನವರಾತ್ರಿ – Navratri ಹಬ್ಬದ ವೈಶಿಷ್ಟ್ಯವೇನು? | Udayavani

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavaniಹೊಸ ಸೇರ್ಪಡೆ

siddaramiha

ಪ್ರಧಾನಿ ಮೋದಿಯವರು ತಮ್ಮ ಕರ್ತವ್ಯಪಾಲನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ: ಸಿದ್ದರಾಮಯ್ಯ

mandya

ಅಂತರ್ಜಾತಿ ಮದುವೆಯಾದ ಯುವತಿ ನಿಗೂಢ ನಾಪತ್ತೆ: 5 ವರ್ಷದ ಬಳಿಕ ಪೋಷಕರಿಂದ ದೂರು ದಾಖಲು

josh-tdy-4

ನೆನಪುಗಳ ನೆರಳು ಜೊತೆಗೇ ಇರ್ತದೆ!

josh-tdy-3

ಬ್ಯಾಚುಲರ್‌ ಬದುಕಿನ ಆಸ್ತಿ ಹಂಚಿಕೆ

josh-tdy-2

ಆದರ್ಶ ಪ್ರಪಂಚ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.