ಕುಡಿಯುವ ನೀರಿಗೆ ಪರದಾಟ
Team Udayavani, Apr 29, 2020, 4:16 PM IST
ಕಲಾದಗಿ: ಮಹಾಮಾರಿ ಕೋವಿಡ್ 19 ತಡೆಗೆ ಲಾಕ್‌ಡೌನ್ ಆಗಿದೆ. ಜನರು ಮನೆಯಲ್ಲಿಯೇ ಇರದಂತೆ ಸ್ಥಿತಿ ಗ್ರಾಮದಲ್ಲಿ ಉಂಟಾಗಿದೆ. ಕಾರಣ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಬಂದ್ ಆಗಿದೆ. ಲಾಕ್‌ಡೌನ್ ಇದ್ದರೂ ಅನಿವಾರ್ಯವಾಗಿ ಪಕ್ಕದ ಗ್ರಾಮಗಳಿಗೆ ತೆರಳಿ ನೀರು ತರಬೇಕಾದ ಪರಿಸ್ಥಿತಿ ಬಂದೋದಗಿದೆ.
ಶಾರದಾಳ ಗ್ರಾಮದ ಗ್ರಾಮಸ್ಥರು ನೀರಿಗಾಗಿ ಪರದಾಟ ನಡೆಸುವಂತಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಪರಸ್ಥಳ ಪರ ಗ್ರಾಮಕ್ಕೆ ತೆರಳುವುದು ಸೂಕ್ತವಲ್ಲ. ಆದರೂ ಕುಡಿಯುವ ಶುದ್ಧ ನೀರಿಗಾಗಿ ಅನಿವಾರ್ಯವಾಗಿ ಪಕ್ಕದ ಗ್ರಾಮಗಳಿಗೆ ತೆರಳಿ ನೀರು ತರಬೇಕಾಗಿದೆ, ಶಾರದಾಳ ಗ್ರಾಮದಲ್ಲಿ ಐದು ದಿನದಿಂದ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿದೆ. ಜನರು ನೀರಿಗಾಗಿ ನಿತ್ಯ ಅಲೆದಾಡುವಂತೆ ಮಾಡಿದೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ದೂರದ ಗ್ರಾಮಕ್ಕೆ: ಶಾರದಾಳ ಗ್ರಾಮದಿಂದ ಐದಾರು ಕಿಲೋ ಮೀಟರ ದೂರವಿರುವ ಅಂಕಲಗಿ, ಕಲಾದಗಿ ಗ್ರಾಮಕ್ಕೆ ಇಲ್ಲವೇ 2 ಕಿಲೋ ಮೀಟರ್ ಉದಗಟ್ಟಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಹೋಗಿ ನೀರು ತುಂಬಿಕೊಂಡು ಬರುವ ಪರಿಸ್ಥಿತಿ ಉಂಟಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿದೆ. ದೂರದ ಊರಿಗೆ ಹೋಗಿ ನೀರು ತರುವಂತಾಗಿದೆ. ಇದರಿಂದ ಹೆಚ್ಚಿನ ಹಣದ ಜತೆಗೆ ಸಮಯವೂ ವ್ಯರ್ಥವಾಗುತ್ತಿದೆ. ಲಾಕ್ ಡೌನ್ ಇರುವುದರಿಂದ ತೊಂದರೆಯಾಗಿದೆ. ಆನಂದ ಅರಕೇರಿ, ಶಾರದಾಳ ಗ್ರಾಮಸ್ಥ
ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ದುರಸ್ತಿಯಲ್ಲಿರುವುದು ನನ್ನ ಗಮನಕ್ಕೆ ಬಂದಿದೆ. ಘಟಕಗಳ ನಿರ್ವಹಣೆ ಖಾಸಗಿ ಏಜೆನ್ಸಿಯವರಿಗೆ ಇರುವುದರಿಂದ ಅವರಿಗೆ ಶೀಘ್ರ ದುರಸ್ತಿ ಮಾಡಲು ಸೂಚಿಸಲಾಗುವುದು. –ಎಸ್.ಬಿ.ಅಂಕೋಲೆ, ಖಜ್ಜಿಡೋಣಿ ಗ್ರಾಪಂ ಪಿಡಿಒ
-ಚಂದ್ರಶೇಖರ ಶಾರದಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಮನಗರದಲ್ಲಿ ಕುಮಾರಸ್ವಾಮಿ ಆಪರೇಷನ್! ಡಿಕೆ ಬ್ರದರ್ಸ್ ಗೆ ಟಕ್ಕರ್ ಕೊಡುತ್ತಾರಾ ಎಚ್ ಡಿಕೆ?
ಯುಜಿಡಿ ಪೈಪ್ ಲೈನ್ ಗೆ ಖಾಸಗಿ ಲೇಔಟ್ ನ ಪೈಪ್ ಲೈನ್ ಜೋಡಣೆ : ಅಧಿಕಾರಿಗಳಿಂದ ತಡೆ
ಜಿಲ್ಲೆಯಲ್ಲಿ ಆತ್ಮಹತ್ಯೆ ಹೆಚ್ಚಳ
ಕೋವಿಡ್ 19: ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದ ಸೌದಿ ಅರೇಬಿಯಾ
ರೋಹಿತ್ ಶರ್ಮಾಗೆ ಬ್ರೇಕ್ ಕೊಟ್ಟಿದ್ಯಾಕೆ? ಇದು ಅನಗತ್ಯ: ರವಿ ಶಾಸ್ತ್ರಿ