Udayavni Special

ವಾರದೊಳಗೆ ಬೀಳಗಿ ಕೆರೆಗೆ ನೀರು

•ಜು.27ರಿಂದ ಕಾಲುವೆಗೆ ನೀರು ಬೀಡಲು ಸೂಚನೆ •60 ದಿನದಲ್ಲಿ ಕೆರೆ ಪೂರ್ತಿ

Team Udayavani, Jul 23, 2019, 9:56 AM IST

bk-tdy-2

ಬೀಳಗಿ: ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಸೋಮವಾರ ನೀರಾವರಿ ಇಲಾಖಾಧಿಕಾರಿಗಳ ಸಭೆ ನಡೆಯಿತು.

ಬೀಳಗಿ: ನಗರದ ಕೆರೆ ತುಂಬುವ ಕೊಳವೆ ಮಾರ್ಗದಲ್ಲಿ ಕೆಲವಡೆ ಸೋರಿಕೆ ಕಂಡು ಬಂದಿದೆ. ಈಗಾಗಲೆ ಕೊಳವೆ ಮಾರ್ಗ ಸೋರಿಕೆಯ ರಿಪೇರಿ ಕಾಮಗಾರಿ ಭರದಿಂದ ಸಾಗಿದ್ದು, ಒಂದು ವಾರದಲ್ಲಿ ಬೀಳಗಿ ನಗರದ ಕೆರೆ ತುಂಬುವ ಕೆಲಸ ಆರಂಭವಾಗಲಿದೆ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ಎಚ್.ಡಿ. ಆಲೂರ ಭರವಸೆ ನಿಡಿದರು.

ಶಾಸ್ವತ ನೀರಾವರಿ ಯೋಜನೆಗೆ ಹಾಗೂ ತಾಲೂಕಿನ ವಿವಿಧ ಕೆರೆ ತುಂಬಲು ಆಗ್ರಹಿಸಿ ಸ್ಥಳೀಯ ರೈತರು ಇತ್ತೀಚೆಗೆ ಪ್ರತಿಭಟಿಸುವ ಮೂಲಕ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ನೀರಾವರಿಗೆ ಸಂಬಂಧಿಸಿದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾಲೂಕಿನ ಸೊನ್ನ ಗ್ರಾಮದ ಬಳಿ ಕೃಷ್ಣಾ ನದಿಯಿಂದ ಕೆರೆಗೆ ನೀರು ತುಂಬುವ ಯೋಜನೆ ಇದಾಗಿದೆ. 2011-12ನೇ ಸಾಲಿನಲ್ಲಿ ಯೋಜನೆ ಆರಂಭವಾಗಿದ್ದು, ಅಂದಾಜು 1.80 ಕೋಟಿ ರೂ. ವೆಚ್ಚ ತಗುಲಿದೆ. ಜಾಕವೆಲ್, ಪಂಪ್‌, ಮೋಟಾರ್‌ ಹಾಗೂ ವಿದ್ಯುತ್‌ ಸರಬರಾಜು ಸೇರಿದಂತೆ ನೀರು ಸರಬರಾಜಿಗೆ ಬೇಕಾದ ಎಲ್ಲ ಅಗತ್ಯ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಒಂದು ವಾರದೊಳಗೆ ಕೆರೆಯ ಅಂಗಳಕ್ಕೆ ನೀರು ಬಿಡಲಾಗುವುದು. 400 ಎಂಎಂ ವ್ಯಾಸದ ಕೊಳವೆ ಮಾರ್ಗ ಇದ್ದು, ಪ್ರತಿ ಸೆಕೆಂಡ್‌ಗೆ 4 ಕ್ಯೂಸೆಕ್‌ ನೀರು ಹರಿದು ಬರಲಿದೆ. ಒಟ್ಟು 60 ದಿನದಲ್ಲಿ ಕೆರೆ ಪೂರ್ತಿಯಾಗಿ ತುಂಬಲಿದೆ ಎಂದರು.

ಕೆಬಿಜೆಎನ್‌ಎಲ್ ಎಇ ನವೀನ ಮಾತನಾಡಿ, ಹೆರಕಲ್ ಉತ್ತರ ಕಾಲುವೆ ವ್ಯಾಪ್ತಿಗೆ 3242 ಹೆಕ್ಟೇರ್‌ ಭೂಮಿಯಿದೆ. ಇದರಲ್ಲಿ ಜಿಎಲ್ಬಿಸಿ ಕಾಲುವೆ ವ್ಯಾಪ್ತಿಗೆ 1710 ಹೆಕ್ಟೇರ್‌ ಜಮೀನು ಒಳಪಡಲಿದೆ. ಜಾಕ್‌ವೆಲ್, ಪೈಪ್‌ಲೈನ್‌, ವಿತರಣಾ ತೊಟ್ಟಿ ಕಾಮಗಾರಿ ಪೂರ್ತಿಯಾಗಿಲ್ಲ. ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕಾಲುವೆ ನಿರ್ಮಾಣಕ್ಕೆ ರೈತರ ಸಹಕಾರ ಬೇಕಿದೆ. ಹೆರಕಲ್ ಉತ್ತರ ಕಾಲುವೆಯಿಂದ ತಾಲೂಕಿನ ಜಾನಮಟ್ಟಿ ಕೆರೆ ತುಂಬಲು ಸಾಧ್ಯವಿದೆ. ನೀರು ದುರ್ಬಳಕೆಯಾಗದಂತೆ ಈ ಕುರಿತು ರೈತರ ಸಭೆ ಕರೆದು ಸೂಕ್ತ ತಿಳಿವಳಿಕೆ ನೀಡುವ ಕೆಲಸ ನಡೆಯಬೇಕಿದೆ. ಕೆಬಿಜೆಎನ್‌ಎಲ್ ನೀರಾವರಿ ಸಲಹಾ ಸಮಿತಿ ಜು.27ರಿಂದ ಕಾಲುವೆಗೆ ನೀರು ಬಿಡಲು ಸೂಚಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ಉದಯ ಕುಂಬಾರ ಮಾತನಾಡಿ, ತಾಲೂಕಿನ ಸುನಗ, ಜಾನಮಟ್ಟಿ ಕೆರೆ ತುಂಬುವ ಕುರಿತು ಜು.24ರಂದು ಬೆಳಗ್ಗೆ 10ಕ್ಕೆ ತಾಲೂಕಿನ ಸುನಗ ಗ್ರಾಮದ ದೈತಪ್ಪನ ಗುಡಿಯಲ್ಲಿ ರೈತರ ಸಭೆ ಕರೆಯಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಬೇಕು ಎಂದು ಮನವಿ ಮಾಡಿದರು.

ಮುಖಂಡ ಪ್ರಕಾಶ ಅಂತರಗೊಂಡ ಹಾಗೂ ವಿ.ಜಿ. ರೇವಡಿಗಾರ ಮಾತನಾಡಿ, ರೈತರ ಬೇಡಿಕೆಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುವ ಹಿನ್ನೆಲೆಯಲ್ಲಿ 23ರಂದು ಪಟ್ಟಣದಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ಹಿಂಪಡೆಯಲಾಗಿದೆ ಎಂದರು. ಸಣ್ಣ ನೀರಾವರಿ ಇಲಾಖೆಯ ಎಇ ಎಸ್‌.ಎಂ. ಬಾಟಿ, ಕಸಾಪ ಅಧ್ಯಕ್ಷ ಕಿರಣ ಬಾಳಾಗೋಳ, ಶಿವಾನಂದ ಹಿರೇಮಠ, ರಮೇಶ ಬಗಲಿ ಇತರರಿದ್ದರು.

ಟಾಪ್ ನ್ಯೂಸ್

ಇಲ್ಲಿ ಪ್ರತಿಯೊಂದು ಕೂಡ ಬಹಳ ಮುಖ್ಯ

ಇಲ್ಲಿ ಪ್ರತಿಯೊಂದು ಕೂಡ ಬಹಳ ಮುಖ್ಯ

ಮ್ಯಾಡ್ರಿಡ್‌ ಓಪನ್‌ ಟೆನಿಸ್‌: ಬಾರ್ಟಿಗೆ ಸೋಲು : ಸಬಲೆಂಕಾ ಚಾಂಪಿಯನ್‌

ಮ್ಯಾಡ್ರಿಡ್‌ ಓಪನ್‌ ಟೆನಿಸ್‌: ಬಾರ್ಟಿಗೆ ಸೋಲು : ಸಬಲೆಂಕಾ ಚಾಂಪಿಯನ್‌

ಮಾಲ್ಡೀವ್ಸ್‌ ನಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿದ ಬೆಂಗಳೂರು ಎಫ್ಸಿ

ಮಾಲ್ಡೀವ್ಸ್‌ ನಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿದ ಬೆಂಗಳೂರು ಎಫ್ಸಿ

ಬೆಲೆ ನಿಯಂತ್ರಣಕ್ಕೆ ತೆರಿಗೆ ವಿಧಿಸಿದ್ದೇವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಬೆಲೆ ನಿಯಂತ್ರಣಕ್ಕೆ ತೆರಿಗೆ ವಿಧಿಸಿದ್ದೇವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ರಕ್ಷಣಾ ಇಲಾಖೆ, ಬ್ಯಾಂಕುಗಳಲ್ಲಿ ಶೇ.50 ರಷ್ಟು ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅವಕಾಶ

ರಕ್ಷಣಾ ಇಲಾಖೆ, ಬ್ಯಾಂಕುಗಳಲ್ಲಿ ಶೇ.50 ರಷ್ಟು ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅವಕಾಶ

ಅನಾರೋಗ್ಯದಿಂದ ದೆಹಲಿಯ ಉದ್ಯಾನವನದಲ್ಲಿದ್ದ 7 ವರ್ಷದ ಸಿಂಹ ಸಾವು

ಅನಾರೋಗ್ಯದಿಂದ ದೆಹಲಿಯ ಉದ್ಯಾನವನದಲ್ಲಿದ್ದ 7 ವರ್ಷದ ಸಿಂಹ ಸಾವು

ಪಂಜಾಬ್ ನಲ್ಲಿ ಕಾಂಗ್ರೆಸ್ ಬದಲಾಗಿ ಬಾದಲ್ ರಿಂದ ಆಡಳಿತ : ನವಜೋತ್‌ ಸಿಂಗ್‌ ಸಿಧು ಆರೋಪ

ಪಂಜಾಬ್ ನಲ್ಲಿ ಕಾಂಗ್ರೆಸ್ ಬದಲಾಗಿ ಬಾದಲ್ ರಿಂದ ಆಡಳಿತ : ನವಜೋತ್‌ ಸಿಂಗ್‌ ಸಿಧು ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jgyyuyt

ನೀವು ಉಳಿಯುತ್ತಿರೋ ಇಲ್ಲವೋ ನಾನಂತೂ ಉಳಿಯಬೇಕು: ಸಚಿವ ಉಮೇಶ್ ಕತ್ತಿ

klkjkjlj

ನಾಳೆಯಿಂದ ಕಠಿಣ ನಿರ್ಬಂಧ ಜಾರಿ

jhjgyty

ನೀರು-ಆಹಾರಕ್ಕಾಗಿ ಕುರಿಗಾಹಿಗಳ ಅಲೆದಾಟ

ಬನಹಟ್ಟಿ ಪೋಲೀಸರ ಕಾರ್ಯಾಚರಣೆ : ಅಂತರ್‌ಜಿಲ್ಲಾ ಬೈಕ್ ಕಳ್ಳರ ಬಂಧನ, 5 ಬೈಕ್ ವಶಕ್ಕೆ

ಬನಹಟ್ಟಿ ಪೊಲೀಸರ ಕಾರ್ಯಾಚರಣೆ : ಅಂತರ್‌ ಜಿಲ್ಲಾ ಬೈಕ್ ಕಳ್ಳರ ಬಂಧನ, 5 ಬೈಕ್ ವಶಕ್ಕೆ

ಬನಹಟ್ಟಿ : ಕಾರ್ಮಿಕ ಮುಖಂಡ ಕಾಮ್ರೇಡ್ ಮಲ್ಲಪ್ಪ ಜುಮನಾಳ ಕೋವಿಡ್‌ಗೆ ಬಲಿ

ಬನಹಟ್ಟಿ : ಕಾರ್ಮಿಕ ಮುಖಂಡ, ಕಾಮ್ರೇಡ್ ಮಲ್ಲಪ್ಪ ಜುಮನಾಳ ಕೋವಿಡ್‌ಗೆ ಬಲಿ

MUST WATCH

udayavani youtube

ಬಾಕಿ ಉಳಿದ ಐಪಿಎಲ್ ಪಂದ್ಯಗಳ ಗತಿ ಏನು ?

udayavani youtube

ಕೋವಿಡ್ ಬಗ್ಗೆ ಭಯ ಬೇಡ. ಆದರೆ ಎಚ್ಚರಿಕೆ ಇರಲಿ

udayavani youtube

ಮೂಡಿಗೆರೆ ಆಸ್ಪತ್ರೆಯಲ್ಲಿ ಊಟ-ತಿಂಡಿ ಸರಿಯಿಲ್ಲ

udayavani youtube

ಅಂಗಡಿ ಬಾಗಿಲು ಮುಚ್ಚಿ ಬಟ್ಟೆ ವ್ಯಾಪಾರ: ವಿಟ್ಲದಲ್ಲಿ ಪೊಲೀಸರಿಂದ ದಾಳಿಯ

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

ಹೊಸ ಸೇರ್ಪಡೆ

ಇಲ್ಲಿ ಪ್ರತಿಯೊಂದು ಕೂಡ ಬಹಳ ಮುಖ್ಯ

ಇಲ್ಲಿ ಪ್ರತಿಯೊಂದು ಕೂಡ ಬಹಳ ಮುಖ್ಯ

ಮ್ಯಾಡ್ರಿಡ್‌ ಓಪನ್‌ ಟೆನಿಸ್‌: ಬಾರ್ಟಿಗೆ ಸೋಲು : ಸಬಲೆಂಕಾ ಚಾಂಪಿಯನ್‌

ಮ್ಯಾಡ್ರಿಡ್‌ ಓಪನ್‌ ಟೆನಿಸ್‌: ಬಾರ್ಟಿಗೆ ಸೋಲು : ಸಬಲೆಂಕಾ ಚಾಂಪಿಯನ್‌

ಮಾಲ್ಡೀವ್ಸ್‌ ನಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿದ ಬೆಂಗಳೂರು ಎಫ್ಸಿ

ಮಾಲ್ಡೀವ್ಸ್‌ ನಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿದ ಬೆಂಗಳೂರು ಎಫ್ಸಿ

ಬೆಲೆ ನಿಯಂತ್ರಣಕ್ಕೆ ತೆರಿಗೆ ವಿಧಿಸಿದ್ದೇವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಬೆಲೆ ನಿಯಂತ್ರಣಕ್ಕೆ ತೆರಿಗೆ ವಿಧಿಸಿದ್ದೇವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ರಕ್ಷಣಾ ಇಲಾಖೆ, ಬ್ಯಾಂಕುಗಳಲ್ಲಿ ಶೇ.50 ರಷ್ಟು ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅವಕಾಶ

ರಕ್ಷಣಾ ಇಲಾಖೆ, ಬ್ಯಾಂಕುಗಳಲ್ಲಿ ಶೇ.50 ರಷ್ಟು ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.