ಬಾಗಲಕೋಟೆ: ಕೋವಿಡ್ ಸೋಂಕಿಗೆ ಸಹೋದರರಿಬ್ಬರು ಸೇರಿ ನಾಲ್ವರು ಬಲಿ


Team Udayavani, Jul 17, 2020, 6:25 PM IST

ಬಾಗಲಕೋಟೆ: ಕೋವಿಡ್ ಸೋಂಕಿಗೆ ಸಹೋದರರಿಬ್ಬರು ಸೇರಿ ನಾಲ್ವರು ಬಲಿ

ಬಾಗಲಕೋಟೆ: ಕೋವಿಡ್ 19 ಸೋಂಕಿನಿಂದ ಶುಕ್ರವಾರ ಸಹೋದರರು ಸೇರಿ ಮತ್ತೆ ನಾಲ್ವರು ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ಬಾಗಲಕೋಟೆ ತಾಲೂಕಿನ ಕೇಸನೂರ ಗ್ರಾಮದ 60 ವರ್ಷದ ಮಹಿಳೆ ತೀವ್ರ ಉಸಿರಾಟ ತೊಂದರೆ, ಜ್ವರ, ಭೇದಿಯಿಂದ ಜಿಲ್ಲಾ ಜು.15ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ರ್‍ಯಾಪಿಡ್ ಕಿಟ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ಟ್ರುನೆಟ್ ಕೋವಿಡ್19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಉಸಿರಾಟದ ತೀವ್ರ ತೊಂದರೆಯಾದಾಗ, ವೆಂಟಿಲೇಟರ್ ಅಳವಡಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.

ಬಾಗಲಕೋಟೆ ಹಳಪೇಡ ಮಡುವಿನ 62 ವರ್ಷದ ವ್ಯಕ್ತಿ ಎಚ್‌ಎಸ್‌ಕೆ ಖಾಸಗಿ ಆಸ್ಪತ್ರೆಯಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಬಂದಿದ್ದರು. ವೆಂಟಿಲೇಟರ್ ಮೇಲೆಯೇ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿದ ವೇಳೆ ಉಸಿರಾಟದ ತೊಂದರೆಯಿಂದ ಉಳಲುತ್ತಿದ್ದರು. ಸ್ಥಳೀಯ ಲ್ಯಾಬ್‌ನಲ್ಲಿ ಅವರಿಗೆ ಕೋವಿಡ್ ಪಾಜಿಟಿವ್ ಬಂದಿದ್ದು, ಬೆಂಗಳೂರಿನ ವರದಿ ಬರಬೇಕಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ನಸುಕಿನ 1.30ಕ್ಕೆ ಮೃತಪಟ್ಟಿದ್ದಾರೆ.

ಸಹೋದರರು ಬಲಿ:  ಬಾಗಲಕೋಟೆ ನಗರದ ಇಬ್ಬರು ಸಹೋದರರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯಿಮದ ಬಳುತ್ತಿದ್ದ 42 ವರ್ಷದ ಪುರುಷನಿಗೆ ಕೋವಿಡ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಬೆಳಗ್ಗೆ 9ಕ್ಕೆ ಮೃತಪಟ್ಟಿದ್ದಾರೆ. ಇವರಿಗೆ ರ್‍ಯಾಪಿಟ್  ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ಬೆಂಗಳೂರಿನ ಆರ್‌ಟಿಪಿಸಿಆರ್ ಪರೀಕ್ಷೆಯ ವರದಿ ಬರಬೇಕಿದೆ. ಮುಂಜಾಗೃತವಾಗಿ ಅವರ ಅಂತ್ಯಕ್ರಿಯೆಯನ್ನು ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ.

ಇನ್ನು 42 ವರ್ಷದ ಮೃತ ವ್ಯಕ್ತಿಯ ಸಹೋದರ 39 ವರ್ಷದ ಪುರುಷ ಕೂಡ ಗುರುವಾರ ಬೆಳಗ್ಗೆ 11ಕ್ಕೆ ಬಲಿಯಾಗಿದ್ದಾರೆ. ಇವರಿಗೂ ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆ ಇತ್ತು. ಜುಲೈ 13ರಂದು ಜಿಲ್ಲಾ ಆಸ್ಪತ್ರೆಗೆ ಅತ್ಯಂತ ಗಂಭೀರ ಆರೋಗ್ಯ ಸ್ಥಿತಿಯಲ್ಲಿ ದಾಖಲಾಗಿದ್ದರು. ವೆಂಟಿಲೇಟರ್ ಸಹಿತ ಚಿಕಿತ್ಸೆ ಕಲ್ಪಿಸಿದರೂ, ಸ್ಪಂದಿಸದೇ ಮೃತಪಟ್ಟಿದ್ದಾರೆ. ಬೆಂಗಳೂರಿಗೆ ಕಳುಹಿಸಿದ ಇವರ ವರದಿಯೂ ಬರಬೇಕಿದೆ.

ಕಳೆದ 24 ಗಂಟೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನಾಲ್ವರು ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ಸೋಂಕಿನಿಂದ 29 ಜನರು ಸಾವನ್ನಪ್ಪಿದ್ದಾರೆ.

ಟಾಪ್ ನ್ಯೂಸ್

1-sadsa

ಮೆಕ್ಸಿಕೋ: ಡ್ರಗ್ಸ್ ಕಳ್ಳಸಾಗಣೆ ತಂಡಗಳ ಭಾರಿ ಗುಂಡಿನ ಚಕಮಕಿ; 8 ಸಾವು

covid 19

ದೇಶದಲ್ಲಿ ಮತ್ತೆ ಹೆಚ್ಚಿದ ಕೋವಿಡ್ 19 ಹೊಸ ಪ್ರಕರಣಗಳ ಸಂಖ್ಯೆ!

rashid khan

16 ಕೋಟಿ ರೂ.ಗಾಗಿ ಪಟ್ಟು ಹಿಡಿದ ರಶೀದ್ ಖಾನ್: ಇಕ್ಕಟ್ಟಲ್ಲಿ ಸಿಲುಕಿದ ಸನ್ ರೈಸರ್ಸ್ !

3clean

ದಾಂಡೇಲಿ: ಗಬ್ಬು ನಾರುತ್ತಿರುವ ಸಂಡೆ ಮಾರ್ಕೆಟ್ ಹೊರ ಆವರಣ

baba-ramdev

ಮೋದಿಯವರ ಉದ್ದೇಶ ಒಳ್ಳೆಯದು: ರೈತರಿಗೆ ಬಾಬಾ ರಾಮ್ ದೇವ್

ಅಂಪೈರ್‌ ನಿತಿನ್‌ ಮೆನನ್‌- ಅಶ್ವಿ‌ನ್‌ ನಡವೆ ಮಾತಿನ ಚಕಮಕಿ

ಅಂಪೈರ್‌ ನಿತಿನ್‌ ಮೆನನ್‌- ಅಶ್ವಿ‌ನ್‌ ನಡವೆ ಮಾತಿನ ಚಕಮಕಿ

2drugs

ಮೂಡಿಗೆರೆ: ಒಣ ಗಾಂಜಾ ಸಹಿತ ಆರೋಪಿ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sr

ಯಾಕೆ ಹೀಗಾಯಿತೋ ಗೊತ್ತಿಲ್ಲ: ಟಿಕೆಟ್ ‘ಕೈ’ ತಪ್ಪಿದ ನೋವಿನಲ್ಲಿ ಎಸ್.ಆರ್. ಪಾಟೀಲ್

ಬಾಗಲಕೋಟೆ: 30 ವರ್ಷಗಳ ಬಳಿಕ ಜಾತ್ರೆ

ಬಾಗಲಕೋಟೆ: 30 ವರ್ಷಗಳ ಬಳಿಕ ಜಾತ್ರೆ

ಹುಸಿಯಾದ ಅವಿರೋಧ ಆಯ್ಕೆಯ ನಿರೀಕ್ಷೆ

ಹುಸಿಯಾದ ಅವಿರೋಧ ಆಯ್ಕೆಯ ನಿರೀಕ್ಷೆ

ಥಿಯೇಟರನಲ್ಲಿ ಲಕ್ಷ್ಯ ಚಲನಚಿತ್ರ ವೀಕ್ಷಿಸಿದ ಆಹಾರ ನಿಗಮದ ಅಧ್ಯಕ್ಷ ಶಾಸಕ ನಡಹಳ್ಳಿ

ಥಿಯೇಟರನಲ್ಲಿ ಲಕ್ಷ್ಯ ಚಲನಚಿತ್ರ ವೀಕ್ಷಿಸಿದ ಆಹಾರ ನಿಗಮದ ಅಧ್ಯಕ್ಷ ಶಾಸಕ ನಡಹಳ್ಳಿ

ರೈತರ ಕಂಗೆಡಿಸಿದ ಕೀಟಬಾಧೆ

ರೈತರ ಕಂಗೆಡಿಸಿದ ಕೀಟಬಾಧೆ

MUST WATCH

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

udayavani youtube

ಮೈಮೇಲೆ ದೇವರು ಬಂದಿದ್ದಾರೆ ಎಂದು ಲಸಿಕೆ ಹಾಕಲು ಬಂದವರನ್ನೇ ಯಾಮಾರಿಸಿದ ವ್ಯಕ್ತಿ

udayavani youtube

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಹೊಸ ಸೇರ್ಪಡೆ

1-sadsa

ಮೆಕ್ಸಿಕೋ: ಡ್ರಗ್ಸ್ ಕಳ್ಳಸಾಗಣೆ ತಂಡಗಳ ಭಾರಿ ಗುಂಡಿನ ಚಕಮಕಿ; 8 ಸಾವು

covid 19

ದೇಶದಲ್ಲಿ ಮತ್ತೆ ಹೆಚ್ಚಿದ ಕೋವಿಡ್ 19 ಹೊಸ ಪ್ರಕರಣಗಳ ಸಂಖ್ಯೆ!

rashid khan

16 ಕೋಟಿ ರೂ.ಗಾಗಿ ಪಟ್ಟು ಹಿಡಿದ ರಶೀದ್ ಖಾನ್: ಇಕ್ಕಟ್ಟಲ್ಲಿ ಸಿಲುಕಿದ ಸನ್ ರೈಸರ್ಸ್ !

3clean

ದಾಂಡೇಲಿ: ಗಬ್ಬು ನಾರುತ್ತಿರುವ ಸಂಡೆ ಮಾರ್ಕೆಟ್ ಹೊರ ಆವರಣ

baba-ramdev

ಮೋದಿಯವರ ಉದ್ದೇಶ ಒಳ್ಳೆಯದು: ರೈತರಿಗೆ ಬಾಬಾ ರಾಮ್ ದೇವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.