ವಿಡಿಯೋಕಾಲ್ನಿಂದ ಮಗುವಿನ ನಾಮಕರಣ
Team Udayavani, Apr 17, 2020, 3:17 PM IST
ತೇರದಾಳ: ಕೋವಿಡ್ 19 ಭೀತಿಯಿಂದ ಮಗುವಿನ ನಾಮಕರಣಕ್ಕೆ ಹೋಗದೆ ಮೊಬೈಲ್ ವಿಡಿಯೋ ಕಾಲ್ ಮೂಲಕ ನಾಮಕರಣ ಮಾಡಿದ ಪ್ರಸಂಗ ಗುರುವಾರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಸಿದ್ಧೇಶ್ವರ ಗಲ್ಲಿಯ ಸಾಗರ ಹಂಜಿ ಪತ್ನಿ ಸಂಗೀತಾ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿನ ತವರು ಮನೆಯಲ್ಲಿದ್ದಾರೆ. ಅಲ್ಲಿ ಮಗಳಿಗೆ ನಾಮಕರಣದ ಸರಳ ಸಮಾರಂಭ ಏರ್ಪಡಿಸಲಾಗಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ಇಲ್ಲಿನ ಹಂಜಿ ಕುಟುಂಬದವರು ಹೋಗಲು ಸಾಧ್ಯವಾಗಿಲ್ಲ. ಮೊಬೈಲ್ ಮೂಲಕ ವಿಡಿಯೋ ಕಾಲ್ ಮಾಡಿ, ನಾಮಕರಣ ಮಾಡಿದ್ದಾರೆ.