ರಬಕವಿ-ಬನಹಟ್ಟಿ: ಜೂಜಾಟ; ಮೂವರ ಬಂಧನ, ಇಬ್ಬರು ಪರಾರಿ
Team Udayavani, Jan 9, 2022, 12:09 PM IST
ಸಾಂದರ್ಭಿಕ ಚಿತ್ರ
ರಬಕವಿ-ಬನಹಟ್ಟಿ : ಬನಹಟ್ಟಿ ಪೊಲೀಸ್ ತಂಡವು ಲಕ್ಷ್ಮೀ ನಗರದ ಅರಣ್ಯ ಪ್ರದೇಶದ ಸಾರ್ವಜನಿಕ ಪ್ರದೇಶದಲ್ಲಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿ ಜೂಜಾಟದಲ್ಲಿ 71 ಸಾವಿರ ರೂ. ಹಾಗು 52 ಇಸ್ಪೀಟ್ ಎಲೆಗಳೊಂದಿಗೆ ಮೂವರನ್ನು ಬಂಧಿಸಿದ್ದು, ಇಬ್ಬರು ಸ್ಥಳದಿಂದ ಪರಾರಿಯಾದ ಘಟನೆ ನಡೆದಿದೆ.
ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮೀ ನಗರದ ಅರಣ್ಯ ಇಲಾಖೆಯ ಸಾರ್ವಜನಿಕ ಜಾಗದಲ್ಲಿ ಅಕ್ರಮವಾಗಿ ಜೂಜಾಟದಲ್ಲಿದ್ದ ಐವರ ಬಗ್ಗೆ ಮಾಹಿತಿ ಪಡೆದ ಪಿಎಸ್‌ಐ ಸುರೇಶ ಮಂಟೂರ ನೇತೃತ್ವದ ಪೊಲೀಸ್ ತಂಡ ಸ್ಥಳದಲ್ಲಿ ದಾಳಿ ನಡೆಸಿ ಆರೋಪಿತರಾದ ಬಸಪ್ಪ ಮಹಾಲಿಂಗಪ್ಪ ಹೊಸೂರ, ಪ್ರಕಾಶ ಶಂಕರ ಪಟ್ಟಣ, ಬಸವರಾಜ ಪರಸಪ್ಪ ಗೊಲಬಾಂವಿಯವರನ್ನು ಬಂಧಿಸಿದ್ದು, ಮಲ್ಲಪ್ಪ ಮೇಲಪ್ಪ ಮುಗತಿ ಹಾಗು ಶಿವಪ್ಪ ಶಂಕರ ಮನಗೂಳಿ ಪರಾರಿಯಾಗಿದ್ದಾರೆ.
ಆರೋಪಿತರೆಲ್ಲರು ಬನಹಟ್ಟಿ ಹಾಗು ಚಿಮ್ಮಡ ಗ್ರಾಮದವರಾಗಿದ್ದಾರೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.