6 ಗ್ರಾಪಂಗಳಿಗೆ ಗಾಂಧಿ ಗ್ರಾಮ ಪುರಸ್ಕಾರ

ಕೋಟೆಕಲ್‌ ಗ್ರಾಪಂಗೆ ಮೂರನೇ ಬಾರಿ ಪುರಸ್ಕಾರ

Team Udayavani, Oct 1, 2019, 12:31 PM IST

ಗುಳೇದಗುಡ್ಡ: ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿರುವ ಗ್ರಾಮ ಪಂಚಾಯತ್‌ ಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಕೊಡಮಾಡುವ ಗಾಂಧಿ ಗ್ರಾಮ ಪುರಸ್ಕಾರ ಕೋಟೆಕಲ್‌ ಗ್ರಾಮ ಪಂಚಾಯತ್‌ಗೆ ಮೂರನೇ ಬಾರಿ ಲಭಿಸಿದೆ.

ಜಿಲ್ಲೆಯಲ್ಲಿ ಒಟ್ಟು ಆರು ಪಂಚಾಯತ್‌ ಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಕೋಟೆಕಲ್‌ ಗ್ರಾಮ ಪಂಚಾಯತ್‌ಗೆ ಈ ಬಾರಿಯೂ ಪುರಸ್ಕಾರ ಲಭಿಸಿದ್ದು, ಇದರಿಂದ ಗ್ರಾಪಂಗೆ ಪ್ರಶಸ್ತಿ ಒಟ್ಟು ಮೂರು ಬಾರಿ ಲಭಿಸಿದಂತಾಗಿದೆ. ನರೇಗಾ ಸಾಧನೆ, ಸ್ವಚ್ಛತೆ 14ನೇ ಹಣಕಾಸು ಆಯೋಗದ ಅನುದಾನ ವಿನಿಯೋಗ, ಕಂದಾಯ ವಸೂಲಿ ಸೇರಿದಂತೆ 35 ಮಾನದಂಡಗಳಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಸರಕಾರ ಕೋಟೆಕಲ್‌ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿದೆ.

ಸತತ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವ ಗ್ರಾಮದಲ್ಲಿಯೇ ಸ್ವಚ್ಛತೆ ಇಲ್ಲ. ಗ್ರಾಮದಲ್ಲಿ ಹಲವುಕಡೆಗಳಲ್ಲಿ ಕಸ, ಕೊಳಚೆ ನೀರು ನಿಂತು ಮಲೀನಗೊಂಡಿದೆ. ಓಣಿಗಳಲ್ಲಿನ ಕೊಳಚೆ ನೀರು ಹರಿದು ಮುಂದೆ ಹೋಗದೇಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಗ್ರಾಮದ ಶುದ್ಧ ಕುಡಿವ ನೀರಿನ ಘಟಕದ ಎದುರೇ ಕಸ ಬಿದ್ದು, ನೀರು ನಿಂತು ಗಲೀಜು ಪ್ರದೇಶದಂತಾಗಿದೆ. ಊರ ದ್ವಾರಬಾಗಿಲ ಮೂಲಕ ಗ್ರಾಮ ಪ್ರವೇಶಿಸುವ ರಸ್ತೆಯಲ್ಲಿ ನೀರು ಮುಂದೆ ಹರಿದು ಹೋಗದೇ ಅಲ್ಲಿಯೇ ನಿಂತು ಜನರಿಗೆ ಅಡಚಣೆ ಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ