ಗ್ರಾಪಂ ಚುನಾವಣೆಗೆ ದಿನಗಣನೆ ಆರಂಭ

ರಂಗೇರುತ್ತಿದೆ ಕಣ

Team Udayavani, Dec 7, 2020, 3:37 PM IST

ಗ್ರಾಪಂ ಚುನಾವಣೆಗೆ ದಿನಗಣನೆ ಆರಂಭ

ಮುಧೋಳ: ಗ್ರಾಮ ಪಂಚಾಯತ್‌ ಫೈಟ್‌ ತಾಲೂಕಿನಾದ್ಯಂತ ಬಿಸಿಯೇರುತ್ತಿದ್ದು, ಚುನಾವಣಾ ಕಲಿಗಳು ಅ ಧಿಕಾರ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ತಾಲೂಕಿನ ಒಟ್ಟು 22 ಗ್ರಾಮ ಪಂಚಾಯತಗಳ 396 ಸ್ಥಾನಗಳಿಗೆಡಿ.22ರಂದು ಮೊದಲ ಹಂತದಲ್ಲಿಯೇ ಚುನಾವಣೆ ನಡೆಯಲಿದೆ. 9 ತಿಂಗಳ ಹಿಂದೆಯೇ ನಡೆಯಬೇಕಿದ್ದ ಗ್ರಾಮ ಪಂಚಾಯತ ಚುನಾವಣೆ ಪ್ರಕ್ರಿಯೆ ಕೊರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ಇದೀಗ ಆರಂಭಗೊಂಡಿದೆ.

ಚುರುಕುಗೊಂಡಿರುವ ರಾಜಕೀಯ ಪಕ್ಷಗಳು: ರಾಜ್ಯದ ಪ್ರಭಾವಿ ರಾಜಕಾರಣಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರವಾಗಿರುವ ಮುಧೋಳ ಮತಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಕಣ ಹೆಚ್ಚು ರಂಗೇರಿದೆ. ಈಗಾಗಲೇ ಬಿಜೆಪಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮದ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬಿದೆ. ಅದೇ ಮಾರ್ಗದಲ್ಲಿರುವ ಕಾಂಗ್ರೆಸ್‌ ಪಕ್ಷ ಸತೀಶ ಬಂಡಿವಡ್ಡರನೇತೃತ್ವದಲ್ಲಿ ಒಂದು ಸುತ್ತಿನ ಚುನಾವಣೆ ಪೂರ್ವ  ಭಾವಿ ಸಭೆ ನಡೆಸಿ ಕಾರ್ಯಕರ್ತರನ್ನು ಚುನಾವಣೆಗೆ ಅಣಿಗೊಳಿಸಿದೆ. ಆರ್‌.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನಡೆಯಲ್ಲಿರುವ ಕಾಂಗ್ರೆಸ್‌ ಪಕ್ಷದ ಮತ್ತೂಂದು ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಪಕ್ಷದ ಶಕ್ತಿ ಅನಾವರಣಕ್ಕೆ ವೇದಿಕೆ ಸಜ್ಜುಗೊಳಿಸಲಾಗಿದೆ.

ಇನ್ನು ಕ್ಷೇತ್ರದಲ್ಲಿ ಚುನಾವಣೆ ಆರಂಭಗೊಂಡಿರುವ ಹಿನ್ನೆಲೆ ಜೆಡಿಎಸ್‌ ಪಕ್ಷ ನೂತನ ಕಚೇರಿ ತೆರೆಯುವ ಮೂಲಕ ನಾವು ಸಹ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದೇವೆ ಎಂಬ ಮುನ್ಸೂಚನೆಯನ್ನು ರಾಷ್ಟ್ರೀಯ ಪಕ್ಷಗಳಿಗೆ ನೀಡಿದೆ. ಅದೇ ರೀತಿ ರೈತ ಸಂಘದ ಸದಸ್ಯರು ತಮ್ಮ ಪ್ರಭಾವದ ಮೂಲಕ ಚುನಾವಣೆಗೆ ಧುಮುಕಲು ಅಣಿಯಾಗಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಿಗೂ

ಕೊರತೆ ಇಲ್ಲ: ರಾಜಕೀಯ ಹಿನ್ನೆಲೆಯುಳ್ಳವರು ಪಕ್ಷಗಳ ಬೆಂಬಲದೊಂದಿಗೆ ಸ್ಪರ್ಧೆಗೆ ಧುಮುಕಲು ಮುಂದಾಗಿದ್ದರೆ, ಹಲವಾರು ಗ್ರಾಮಗಳಲ್ಲಿ ಯುವಕರು ಹಾಗೂ ರಾಜಕೀಯ ಹಿತಾಸಕ್ತಿಯುಳ್ಳವರು ಸ್ವತಂತ್ರವಾಗಿ ಸ್ಪ ರ್ಧಿಸುವ ಅಭಿಲಾಷೆ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷ ರಹಿತವಾಗಿರುವ ಗ್ರಾಮ ಪಂಚಾಯತ ಚುನಾವಣೆಯಲ್ಲಿ ವ್ಯಕ್ತಿಗತ ವರ್ಚಸ್ಸು ಕೈಹಿಡಿಯಲಿದೆ ಎಂಬುದು ಹಲವಾರು ಅಭ್ಯರ್ಥಿಗಳ ಅಭಿಪ್ರಾಯವಾಗಿದೆ.

ಹಳ್ಳಿಕಟ್ಟೆಯಲ್ಲಿ ಫೈಟಿಂಗ್‌ ಟಾಕ್‌: ದಿನಬೆಳಗಾದರೆ ಉಭಯ ಕುಶಲೋಪರಿ ಕೃಷಿ ಚಟುವಟಿಕೆ ಸೇರಿದಂತೆ ಇನ್ನುಳಿದ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿದ್ದ ಹಳ್ಳಿಕಟ್ಟೆಗಳು ಇದೀಗ ಸಂಪೂರ್ಣ ಬದಲಾಗಿವೆ. ಚುನಾವಣೆ ಮಾತು ಅಭ್ಯರ್ಥಿ, ಮತಸೆಳೆಯಲು ರಣತಂತ್ರ, ಚುನಾವಣೆಗೆ ಬೇಕಾದ ಕಾಗದ ಪತ್ರಗಳ ತಯಾರಿಕೆ ಕ್ರಮ ಸೇರಿದಂತೆ ಅನೇಕ ವಿಷಯಗಳು ಮುನ್ನೆಲೆಗೆ ಬರುತ್ತಿವೆ. ತಡರಾತ್ರಿವರೆಗೆ ಹಳ್ಳಿಕಟ್ಟೆಗಳು ಚುನಾವಣೆಗೆ ಮಾತಿಗೆ ಮೀಸಲಾಗಿವೆ.

ಕಡೆಗಣೆನೆಯೂ ಇದೆ: ಚುನಾವಣೆ ದುಡ್ಡು ಇದ್ದವರಿಗೆ, ನಮ್ಮಂತ ಬಡವರಿಗಲ್ಲ ಯಾರು ಆರಿಸಿ ಬಂದರೂ ನಾವು ದುಡಿದು ತಿನ್ನುವುದು ಮಾತ್ರ ತಪ್ಪುವುದಿಲ್ಲ ಎಂಬ ಮನೋಭಾವ ಉಳ್ಳ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು ಯಾವುದೇ ಗೋಜು ಗದ್ದಲಿಗೆ ಸಿಗದೆ ತಾವಾಯಿತು ತಮ್ಮ ಕೆಲಸವಾಯಿತು ಮಾತಿನಂತಿದ್ದಾರೆ. ಅವರಲ್ಲಿ ಚುನಾವಣೆ ಬಗ್ಗೆ ಪ್ರಶ್ನಿಸಿದರೆ ನಮಗ್ಯಾಕೆ ಅದರ ಉಸಾಬರಿ ಎಂಬ ಉತ್ತರ ನೀಡುತ್ತಾರೆ.

ಕಬ್ಬು ಪ್ರಧಾನ ಬೆಳೆಯಾಗಿರುವ ತಾಲೂಕಿನಲ್ಲಿ ಇದೀಗ ಕಬ್ಬು ಕಟಾವು ಪ್ರಕ್ರಿಯೆಯಲ್ಲಿದೆ. ಕೃಷಿಕರು ತಮ್ಮ ಜಮೀನಿನಲ್ಲಿರುವ ಕಬ್ಬು ಕಟಾವಿನ ಬಗ್ಗೆ ಗಮನಹರಿಸಿದ್ದರೆ. ಲೋಕಲ್‌ ಕಬ್ಬು ಕಟಾವು ಮಾಡುವ ಗ್ಯಾಂಗ್‌ ಕಾರ್ಮಿಕರು ಬೆಳಗ್ಗೆ 5ಗಂಟೆಗೆ ಮನೆಬಿಟ್ಟರೆ ಮರಳಿ ಮನೆಗೆ ವಾಪಸ್ಸಾಗುವುದು ಸೂರ್ಯಾಸ್ತದ ಬಳಿಕವೇ ಅಂತವರು ಮಾತ್ರ ಚುನಾವಣೆ ಎಂದರೆ ಮಾರುದ್ದ ಸರಿದುಹೋಗುತ್ತಿದ್ದಾರೆ.

ತಾಲೂಕು ಆಡಳಿತ ಸಕ್ರಿಯ: ತಾಲೂಕಿನ 22 ಗ್ರಾಮ ಪಂಚಾಯತಗೆ ನಡೆಯುವ ಚುನಾವಣೆಗೆ ತಾಲೂಕು ಆಡಳಿತ ಸನ್ನದ್ಧವಾಗಿದ್ದು, ಚುನಾವಣೆ ಕಾರ್ಯವನ್ನು ಚುರುಕಿನಿಂದ ನಿರ್ವಹಿಸುತ್ತಿದೆ. ಈಗಾಗಲೇ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಸಹಾಯಕ ಚುನಾವಣಾಕಾರಿಗಳ ನೇಮಕ ಮಾಡಲಾಗಿದ್ದು, ಶಾಂತಿ ಹಾಗೂ ಸುವಸ್ತಸ್ಥಿತ ಮತದಾನ ಪ್ರಕ್ರಿಯೆಗೆ ಶ್ರಮಿಸುತ್ತಿದ್ದಾರೆ. ಇನ್ನೊಂದೆಡೆ ಚುನಾವಣಾಕಾಂಕ್ಷಿಗಳು ಕಾಗದಪತ್ರ ಹಾಗೂ ಇನ್ನಿತರ ಮಾಹಿತಿಗಾಗಿ ತಹಶೀಲ್ದಾರ್‌ ಕಚೇರಿಗೆ ನಿತ್ಯ ಅಲೆದಾಡುತ್ತಿರುವುದರಿಂದ ತಹಶೀಲ್ದಾರ್‌ ಕಚೇರಿಯೂ ಜನಜಂಗುಳಿಯಿಂದ ಕೂಡಿದೆ.

ತಾಲೂಕಿನಲ್ಲಿ ಬಿಜೆಪಿ ಪರ ಅಲೆಯಿದ್ದು, ಬಹುತೇಕ ಎಲ್ಲ ಪಂಚಾಯಿತಿಗಳಲ್ಲಿ ನಮ್ಮ ಪಕ್ಷ ಬೆಂಬಲಿತ ಕಾರ್ಯಕರ್ತರೆ ಅಧಿ ಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ನಮ್ಮ ಕಾರ್ಯಕರ್ತ ಪಡೆ ಆತ್ಮವಿಶ್ವಾಸದಿಂದ ಚುನಾವಣೆಗೆ ಸನ್ನದ್ಧಗೊಂಡಿದ್ದು, ಎಲ್ಲ ಪಂಚಾಯತತಿಗಳಲ್ಲೂ ಗೆಲುವು ಸಾ ಧಿಸಲಿದ್ದೇವೆ.

 ಹನಮಂತ ತುಳಸಿಗೇರಿ, ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ

ಗೋವಿಂದಪ್ಪ ತಳವಾರ

ಟಾಪ್ ನ್ಯೂಸ್

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.