ಗುಳೇದಗುಡ್ಡ ಖಣಕ್ಕೆ ಬೇಕು ಮಾರುಕಟ್ಟೆ ಸೌಲಭ್ಯ

ಕೋವಿಡ್‌ನಿಂದ ನೇಕಾರಿಕೆಗೆ ಮತ್ತೆ ಹೊಡೆತ ಬಿದ್ದಿದೆ.

Team Udayavani, Jan 21, 2022, 6:11 PM IST

ಗುಳೇದಗುಡ್ಡ ಖಣಕ್ಕೆ ಬೇಕು ಮಾರುಕಟ್ಟೆ ಸೌಲಭ್ಯ

ಗುಳೇದಗುಡ್ಡ: ದೇಶ-ವಿದೇಶಗಳಲ್ಲಿ ಪ್ರಸಿದ್ಧಿಯಾಗಿ ರುವ ಗುಳೇದಗುಡ್ಡ ಖಣ ಜ. 26ರಂದು ನಡೆಯುವ ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಪ್ರದರ್ಶನಗಳಲ್ಲಿ ರಾಜ್ಯದ ಕರಕುಶಲ ವಸ್ತುಗಳಲ್ಲಿ ಒಂದಾಗಿ ಆಯ್ಕೆಯಾಗಿರುವುದು ಸಂತಸದ ವಿಚಾರ. ಆದರೆ, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಬೇಸರದ ಸಂಗತಿ. ಕೋವಿಡ್‌ನಿಂದ ಒಂದು ತಿಂಗಳಲ್ಲಿ 5-6 ಕೋಟಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.

ಗುಳೇದಗುಡ್ಡ ಖಣಕ್ಕೆ ತನ್ನದೆಯಾದ ಇತಿಹಾಸವಿದ್ದು, ಕಳೆದ 3-4 ವರ್ಷಗಳಲ್ಲಿ ಮತ್ತೇ ತನ್ನ ವೈಭವ ಪಡೆದುಕೊಂಡು ನೇಕಾರಿಕೆ ಹೆಚ್ಚಾಗಿತ್ತು. ಮಹಾರಾಷ್ಟ್ರದಿಂದ ಸದ್ಯ ಬೇಡಿಕೆಯಿದೆ. ಆದರೆ, ಕೋವಿಡ್‌ನಿಂದ ನೇಕಾರಿಕೆಗೆ ಮತ್ತೆ ಹೊಡೆತ ಬಿದ್ದಿದೆ. ಗುಳೇದಗುಡ್ಡ ಖಣವು ಈಗ ನಾನಾ ತರಹದ ವಿನ್ಯಾಸದಲ್ಲಿ ಮೂಡಿಬರುತ್ತಿದ್ದು, ಆಕಾಶ ಬುಟ್ಟಿ, ಚೂಡಿದಾರ, ಸೀರೆ, ತಲೆದಿಂಬು ಕವರ್‌, ಬಾಗಿಲು ತೋರಣ ಹೀಗೆ ನಾನಾ ತರಹದ ವಿನ್ಯಾಸಗಳಲ್ಲಿ ಬರುತ್ತಿದೆ. ಆದರೆ, ಇದಕ್ಕೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ.

ಕೋವಿಡ್‌ನಿಂದ 5-6ಕೋಟಿ ರೂ. ವಹಿವಾಟು ಸ್ಥಗಿತ: ಗುಳೇದಗುಡ್ಡ ಖಣಕ್ಕೆ ಮಹಾರಾಷ್ಟ್ರವೇ ಶೇ.75ರಷ್ಟು ಮಾರುಕಟ್ಟೆ ಪ್ರದೇಶವಾಗಿದೆ. ಇನ್ನೂ 25ರಷ್ಟು ರಾಜ್ಯ ಸೇರಿ ಇನ್ನಿತರ ಕಡೆ ಮಾರುಕಟ್ಟೆಯಿದೆ. ಎರಡು ಅಲೆಯಲ್ಲಿ ಕೋಟ್ಯಂತರ ರೂ. ವ್ಯಾಪಾರ ವಹಿವಾಟು ನಿಂತಿತ್ತು. ಈಗ ಮತ್ತೇ ಮೂರನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ಡಿಸೆಂಬರ್‌ 15ರಿಂದ ಇಲ್ಲಿಯವರೆಗೆ ಅಂದರೆ ಒಂದು ತಿಂಗಳಲ್ಲಿ ಅಂದಾಜು 5-6 ಕೋಟಿಯಷ್ಟು ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ವ್ಯಾಪಾರ ವಹಿವಾಟು ಕಡಿಮೆಯಾಗುತ್ತಿರುವುದರಿಂದ ಮಾಲೀಕರು ನೇಕಾರರಿಗೆ ಕಡಿಮೆ ಪ್ರಮಾದಲ್ಲಿ ಮಗ್ಗ ನೇಯುವಂತೆ ಸೂಚಿಸಿದ್ದಾರೆ.

ಖುಷಿಯ ವಿಚಾರ: ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ರಾಜ್ಯದಿಂದ ಸ್ತಬ್ದಚಿತ್ರ ಪ್ರದರ್ಶನ ಸಮಯದಲ್ಲಿ ಕರಕುಶಲ ಕಲೆಗಳಲ್ಲಿ ಗುಳೇದಗುಡ್ಡ ಖಣಕ್ಕೂ ಪ್ರಾಶಸ್ತ್ಯ ನೀಡಲಾಗಿದೆ. ನಮಗೆ ಕೋವಿಡ್‌ ಬಂದಿರಲಿಲ್ಲ ಎಂದಿದ್ದರೇ ಈಗ 5-7 ಕೋಟಿಯಷ್ಟು ವ್ಯಾಪಾರ ವಹಿವಾಟುವಾಗುತ್ತಿತ್ತು. ನಮಗೆ ಮಹಾರಾ ಷ್ಟ್ರವೇ ಮುಖ್ಯ ಕೇಂದ್ರವಾಗಿದೆ. ಅಲ್ಲಿಯೇ ಕೋವಿಡ್‌ನಿಂದಾಗಿ ಲಾಕ್‌ಡೌನ್‌ ಇದ್ದು, ಹೀಗಾಗಿ ನಮ್ಮ ವ್ಯಾಪಾರ ಸ್ಥಗಿತಗೊಂಡಿದೆ ಎಂಬುದು ವ್ಯಾಪಾರಸ್ಥರ ಮಾತು.

ಬೇಕಿದೆ‌ ಮಾರುಕಟ್ಟೆ ಸೌಲಭ್ಯ: ರೈತರಿಗೆ ಹೇಗೆ ಅವರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಎಪಿಎಂಸಿ ವ್ಯವಸ್ಥೆ ಇದೆಯೋ ಅದೇ ರೀತಿ ನೇಕಾರರು ತಯಾರಿಸಿದ ಬಟ್ಟೆಗಳನ್ನು ಮಾರಾಟ ಮಾಡಲು ಸರಿಯಾದ ಮಾರುಕಟ್ಟೆ ವ್ಯವಸ್ಥೆ ಬೇಕಿದೆ. ಕೇಂದ್ರ ಸರಕಾರ ಚನ್ನಪಟ್ಟಣ ಹಾಗೂ ಕಿನ್ನಾಳ ಗೊಂಬೆಗಳಿಗೆ ನೀಡಿದ ಪ್ರೋತ್ಸಾಹದಂತೆ ಗುಳೇದಗುಡ್ಡ ಖಣಕ್ಕೂ ನೀಡಿದರೆ, 2-3 ವರ್ಷಗಳಲ್ಲಿ ಮತ್ತೇ ನೇಕಾರಿಕೆ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಸದ್ಯ ಗುಳೇದಗುಡ್ಡ ಖಣಕ್ಕೆ ಮಹಾರಾಷ್ಟ್ರ ಹೊರತುಪಡಿಸಿದರೆ ಇನ್ನಿತರ ಕಡೆಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಸರಕಾರ ಆ ನಿಟ್ಟಿನಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಅವಶ್ಯವಿದೆ.

ಹೊರೆಯಾದ ಕಚ್ಚಾಮಾಲು: ನೇಕಾರಿಕೆಗೆ ಬೇಕಾದ ಕಚ್ಚಾಮಾಲಿನ ಬೆಲೆ ಹೆಚ್ಚಾಗಿರುವುದು ನೇಕಾರರಿಗೆ ಹಾಗೂ ಮಾಲೀಕರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ. 5 ಕೆಜಿ ಮಸರಾಯಿ 700 ರೂ. ಗಳಿಂದ 1200ರೂ. ಏರಿಕೆಯಾಗಿದೆ. ಇನ್ನೂ ರೇಷ್ಮೆ 4000 ರಿಂದ 6000 ರೂ.ಗೆ ಏರಿಕೆಯಾಗಿದೆ. ಪಾಲಿಸ್ಟರ್‌ ಯಾರ್ನ್ ಶೇ. 30 ರಷ್ಟು ಹೆಚ್ಚಳವಾಗಿದೆ.

ಕಳೆದ 3-4 ವರ್ಷಗಳಿಂದ ನೇಕಾರಿಕೆ ಚೆನ್ನಾಗಿ ನಡೆಯುತ್ತಿದೆ. ಆದರೆ, ಕೊರೊನಾದಿಂದ ಹೊಡೆತ ಬಿದ್ದಿದೆ. ಕಚ್ಚಾಮಾಲು ಬೆಲೆ ಏರಿಕೆಯಾಗಿದೆ. ಸರಕಾರ ನೇಕಾರಿಕೆ ಪ್ರೋತ್ಸಾಹ ನೀಡಬೇಕು. ಕೊರೊನಾದಿಂದ ಕಳೆದ ಒಂದು ತಿಂಗಳಿಂದ ವ್ಯಾಪಾರ ವಹಿವಾಟು ಇಳಿಮುಖವಾಗಿದೆ.
ಸಂಪತ್‌ಕುಮಾರ ರಾಠಿ, ಖಣಗಳ
ವ್ಯಾಪಾರಸ್ಥರು, ಗುಳೇದಗುಡ್ಡ

ನೇಕಾರಿಕೆಗೆ ಮಹಾರಾಷ್ಟ್ರವೇ ಮಾರುಕಟ್ಟೆ. ಅಲ್ಲಿಯೇ ಕೋವಿಡ್‌ನಿಂದ ಬಂದಾಗಿದ್ದು, ಹೀಗಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಸುಮಾರು 5-6ಕೋಟಿಯಷ್ಟು ವಹಿವಾಟು ಬಂದ್‌ ಆಗಿದೆ. ಸರಕಾರ ನೇಕಾರಿಕೆಗೆ ಸಬ್ಸಿಡಿ ನೀಡಬೇಕು. ಆರ್ಥಿಕವಾಗಿ ಬೆಂಬಲ ನೀಡಬೇಕು. ಕಚ್ಚಾಮಾಲಿನ ಬೆಲೆ ಕಡಿಮೆ ಮಾಡಬೇಕು.
ರಾಜೇಂದ್ರ ತೋತಲಾ, ಖಣಗಳ
ವ್ಯಾಪಾರಸ್ಥರು, ಗುಳೇದಗುಡ್ಡ

*ಮಲ್ಲಿಕಾರ್ಜುನ ಕಲಕೇರಿ

ಟಾಪ್ ನ್ಯೂಸ್

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.