ರಬಕವಿ-ಬನಹಟ್ಟಿಯಲ್ಲಿ ದಾಖಲೆಯ 10 ಸೆಂ.ಮೀ ಮಳೆ : 21 ಮನೆಗಳಿಗೆ ಹಾನಿ
ಸತತ 24 ಗಂಟೆಗಳಿಂದಲೂ ಸುರಿಯುತ್ತಿರುವ ಮಳೆ
Team Udayavani, May 20, 2022, 6:23 PM IST
ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿಯಲ್ಲಿ ಗುರುವಾರ ಸಂಜೆಯಿಂದ ಬೆಳಗಿನವರೆಗೆ ದಾಖಲೆಯ 10 ಸೆಂ.ಮೀ ಮಳೆಯಾದ ವರದಿಯಾಗಿದೆ ಎಂದು ರಬಕವಿಯ ಮಳೆ ಮಾಪನ ಕೇಂದ್ರದ ಗುಣಕಿ ಪತ್ರಿಕೆಗೆ ತಿಳಿಸಿದರು.
ಗುರುವಾರ ಸಂಜೆ 5 ಕ್ಕೆ ಆರಂಭಗೊಂಡ ಮಳೆ ಬೆಳಗಿನ ಜಾವದ ನಿರಂತರವಾಗಿ ಸುರಿಯಿತು. ಭಾರಿ ಪ್ರಮಾಣದ ಮಳೆ ಸುರಿದಿದ್ದರಿಂದ ರೈತರು ತೋಟ ಮತ್ತು ಹೊಲಗಳಲ್ಲಿ ಕಾಲಿಡಲು ಸಾಧ್ಯವಾಗದಂತಾಗಿದೆ. ಅಪಾರ ಪ್ರಮಾಣದ ಮಳೆಯಿಂದಾಗಿ ನಗರದ ಪ್ರಮುಖ ಚರಂಡಿ, ರಸ್ತೆಗಳು ಸ್ವಚ್ಛವಾಗಿವೆ.
ಸತತವಾಗಿ 24 ಗಂಟೆಗಳಿಂದ ಮಳೆ ಸುರಿಯುತ್ತಿರುವುದರಿಂದ ಅವಳಿ ನಗರದಲ್ಲಿ ತಂಪು ವಾತಾವರಣ ನಿರ್ಮಾಣಗೊಂಡಿದೆ. ಸ್ಥಳೀಯ ಎಸ್‌ಆರ್‌ಎ ಮೈದಾನ ಮಳೆ ನೀರಿನಿಂದಾಗಿ ಬೃಹತ್ ಕೆರೆಯಂತೆ ಕಂಡು ಬರುತ್ತಿದೆ. ಮಳೆಯಿಂದಾಗಿ ಸ್ಥಳೀಯ ತರಕಾರಿ ಮತ್ತು ಮಂಗಳವಾರ ಪೇಟೆಯ ಕಿರಾಣಿ ಅಂಗಡಿಗಳಲ್ಲಿ ಗ್ರಾಹಕರೇ ಕಂಡು ಬರಲಿಲ್ಲ.
ಕಾರ್ಯಕ್ರಮಗಳಿಗೆ ತೆರಳಲು ಪರದಾಡಿದ ಜನತೆ : ಇಂದು ನಗರದಲ್ಲಿ ಮದುವೆ, ಮನೆಶಾಂತಿ ಹೀಗೆ ಹಲವಾರು ಕಾರ್ಯಕ್ರಮಗಳು ಇದಿದ್ದರಿಂದ ಅವುಗಳಿಗೆ ತೆರಳಲು ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಪರದಾಡುವಂತಾಯಿತು. ಒಟ್ಟಾರೆ ಇದು ಮಲೆನಾಡಿನ ಪರಸ್ಥಿತಿಯಂತಾಗಿತ್ತು. ಮೋಡದಲ್ಲಿರುವ ಸೂರ್ಯ ಉದಯಿಸಲೇ ಇಲ್ಲ. ಇದರಿಂದ ಸಾರ್ವಜನಿಕರ ಸಾಕಷ್ಟು ತೊಂದರೆಗಳನ್ನು ಅನುಭವಿಸಿದರು.
ಬಾರದ ವಿದ್ಯಾರ್ಥಿಗಳು: ಬಿಡುವಿಲ್ಲದೆ ಮಳೆ ಸುರಿಯುತ್ತಿರುವುದರಿಂದ ನಗರದ ಪ್ರಮುಖ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಲ್ಲಿ ಮಾತ್ರ ಇತ್ತು. ಶುಕ್ರವಾರ ಸಂಜೆಯವರೆಗೂ ಸತತವಾಗಿ ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ತಾಲೂಕಿನಲ್ಲಿ ಒಟ್ಟು 21 ಮನೆಗಳಿಗೆ ಭಾಗಶಃ ಹಾನಿಯಾದ ವರದಿಯಾಗಿದ್ದು ಮಳೆಯವಾತಾವರಣ ನೋಡಿದರೆ ಇನ್ನೂ ಹೆಚ್ಚು ಹಾನಿಯಾಗುವ ಸಂಭವವಿದೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ ಸಮಗ್ರ ಅಭಿವೃದ್ಧಿಗೆ ಒತ್ತು; ಸಚಿವ ಡಾ.ಕೆ.ಸುಧಾಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭ್ರಷ್ಟಾಚಾರ ಆರೋಪಿಸಿ ಕಾರವಾರ ಪೌರಾಯುಕ್ತರ ಕೊಠಡಿಯಲ್ಲಿ ಮಾಜಿ ಶಾಸಕ ಸೈಲ್ ಧರಣಿ
ಸಾಗರ : 6 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕ ಭವನ ನಿರ್ಮಾಣ : ಹಾಲಪ್ಪ
ಅನಧಿಕೃತ ಸಮಿತಿಯಿಂದ ಮಾರಿಕಾಂಬಾ ದೇವಸ್ಥಾನ ನಿರ್ವಹಣೆ ; ಎಂ.ನಾಗರಾಜ್ ಆರೋಪ
ಆಲೂರು: ಪೊಲೀಸರ ದಾಳಿ; ಶೆಡ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 25 ಜಾನುವಾರುಗಳ ರಕ್ಷಣೆ
ರಾಷ್ಟ್ರಪತಿ ಚುನಾವಣೆ; ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್ ಬೆಂಬಲ
MUST WATCH
ಹೊಸ ಸೇರ್ಪಡೆ
ಕುಂಬಳೆ : ಅಪರಿಚಿತರಿಂದ ವಿದ್ಯಾರ್ಥಿನಿಯ ಅಪಹರಣ: ವ್ಯಾನ್ನಿಂದ ಜಿಗಿದು ತಪ್ಪಿಸಿಕೊಂಡ ಬಾಲಕಿ
ಕುಣಿಗಲ್: ಕೆಂಪೇಗೌಡ ಜಯಂತೋತ್ಸವ ಮೆರವಣಿಗೆ ವೇಳೆ ಲೋಪ: ತಹಶೀಲ್ದಾರ್ ಮಹಬಲೇಶ್ವರ್ ಕ್ಷಮೆ
ತೆಲಂಗಾಣದಲ್ಲೂ ಬಿಜೆಪಿ ಅಧಿಕಾರ ಖಚಿತ : ಸಚಿವ ಅನುರಾಗ್ ಠಾಕೂರ್
ಗೋವಾದಲ್ಲಿ ಶಿವಸೇನೆ ಬಂಡಾಯ ಶಾಸಕರು : ಗಡಿ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ
ಭ್ರಷ್ಟಾಚಾರ ಆರೋಪಿಸಿ ಕಾರವಾರ ಪೌರಾಯುಕ್ತರ ಕೊಠಡಿಯಲ್ಲಿ ಮಾಜಿ ಶಾಸಕ ಸೈಲ್ ಧರಣಿ