Udayavni Special

ನಿರಾಶ್ರಿತರಿಗೆ ಸರ್ಕಾರದಿಂದಲೇ ಮನೆ

•ನಂದಗಾವ ಸಂಪೂರ್ಣ ಸ್ಥಳಾಂತರ: ಸಿಎಂ ಭರವಸೆ•ಹಾನಿಗೊಳಗಾದ ಮನೆ, ಬೆಳೆಗೆ ಸೂಕ್ತ ಪರಿಹಾರ

Team Udayavani, Aug 9, 2019, 11:25 AM IST

bk-tdy-2

ಬಾಗಲಕೋಟೆ: ಮುಧೋಳ ತಾಲೂಕಿನ ನಂದಗಾಂವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ನಿರಾಶ್ರಿತರ ಸಮಸ್ಯೆ ಆಲಿಸಿದರು.

ಬಾಗಲಕೋಟೆ: ಘಟಪ್ರಭಾ ನದಿ ಪ್ರವಾಹದಿಂದ ಸಂಪೂರ್ಣ ಮುಳುಗಡೆ ಆಗಿರುವ ಮುಧೋಳ ತಾಲೂಕಿನ ನಂದಗಾಂವದ ನಿರಾಶ್ರಿತರಿಗೆ ಸರ್ಕಾರದಿಂದ ಸ್ವಂತ ಮನೆ ನಿರ್ಮಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

ಗುರುವಾರ ಸಂಜೆ ಮುಧೋಳ ತಾಲೂಕು ನಂದಗಾವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಅವರು, ನಿರಾಶ್ರೀತರ ಮನವಿ ಆಲಿಸಿದರು. ಬಳಿಕ ಮಾತನಾಡಿದ ಅವರು, ನಂದಗಾಂವ ಪ್ರತಿ ಬಾರಿ ಘಟಪ್ರಭಾ ನದಿ ತುಂಬಿ ಹರಿದರೆ ಸಮಸ್ಯೆ ಅನುಭವಿಸುತ್ತಿದೆ ಎಂದು ಇಲ್ಲಿನ ಶಾಸಕರು ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಗ್ರಾಮವನ್ನು ಶಾಶ್ವತವಾಗಿ ಸ್ಥಳಾಂತರಿಸಲಾಗುವುದು ಎಂದರು.

ನಂದಗಾಂವ ಗ್ರಾಮದ ನಿರಾಶ್ರಿತರಿಗೆ ಸರ್ಕಾರದಿಂದಲೇ ಸ್ವಂತ ಮನೆ ಕಟ್ಟಿಕೊಡಲಾಗುವುದು. ಅಲ್ಲದೇ ಈಗಾಗಲೇ ಸಾಲ ಮನ್ನಾ ಯೋಜನೆಯಡಿ ಅರ್ಧಮರ್ಧ ಸಾಲ ಮನ್ನಾ ಆಗಿದ್ದಲ್ಲಿ, ಅವರ ಸಾಲವನ್ನು ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು. ಆದರೆ, ಖಾಸಗಿ ಸಾಲ ಮನ್ನಾ ಮಾಡಲು ನಿಯಮಾವಳಿ ಪ್ರಕಾರ ಅವಕಾಶವಿಲ್ಲ ಎಂದು ತಿಳಿಸಿದರು.

ಸ್ಥಳಾಂತರಗೊಂಡರೆ ಮಾತ್ರ: ಗ್ರಾಮಸ್ಥರು ಸಂಪೂರ್ಣವಾಗಿ ಸ್ಥಳಾಂತರಗೊಳ್ಳಬೇಕು. ಈಗ ಪ್ರವಾಹದಿಂದ ಹಾನಿಗೊಳಗಾದ ಮನೆ, ಬೆಳೆಗೆ ಸೂಕ್ತ ಪರಿಹಾರ ನೀಡಲಾಗುವುದು. ಸ್ಥಳಾಂತರಗೊಳ್ಳಲು ಸಿದ್ಧರಿಲ್ಲದಿದ್ದರೆ ಸರ್ಕಾರದಿಂದ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಬೇರೆಡೆ ಸ್ಥಳಾಂತರಕ್ಕೆ ಸಿದ್ಧರಾಗಬೇಕು ಎಂದು ತಿಳಿಸಿದರು.

ಸಮೀಕ್ಷೆಗೆ ಸೂಚನೆ: ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ನದಿಗಳ ಪ್ರವಾಹದಿಂದ ಎಷ್ಟು ಮನೆ, ಬೆಳೆ ಹಾಗೂ ಆಸ್ತಿ-ಪಾಸ್ತಿ ಹಾನಿಯಾಗಿದೆ ಎಂಬುದರ ಸಮೀಕ್ಷೆ ಮಾಡಿ, ತಕ್ಷಣ ವರದಿ ಕಲ್ಪಿಸಬೇಕು. ಆಸ್ತಿ ಹಾಗೂ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ವಿವಿಧ ಪರಿಹಾರ ಕೇಂದ್ರಕ್ಕೆ ಭೇಟಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಜಲವಾವೃತಗೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ನಂದಗಾಂವ, ಮಳಲಿ, ಮುಧೋಳ ನಗರದ ಪರಿಹಾರ ಕೇಂದ್ರಗಳಲ್ಲಿ ಭೇಟಿ ನೀಡಿ, ಸಮಸ್ಯೆ ಆಲಿಸಿದರು. ನಿರಾಶ್ರಿತರಿಗೆ ನೀಡುತ್ತಿರುವ ಊಟ, ಉಪಹಾರ ಹಾಗೂ ಸೌಲಭ್ಯಗಳ ಕುರಿತು ನೇರವಾಗಿ ನಿರಾಶ್ರಿತರಿಗೆ ಮಾತನಾಡಿಸಿ, ಮಾಹಿತಿ ಪಡೆದರು.

ಶಾಸಕರಾದ ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ವಿಧಾನಪರಿಷತ್‌ ಸದಸ್ಯರಾದ ರವಿಕುಮಾರ, ಹನಮಂತ ನಿರಾಣಿ ಮುಂತಾದವರು ಉಪಸ್ಥಿತರಿದ್ದರು.

ಯುಕೆಪಿ ಮಾದರಿ ಪರಿಹಾರ ಕೊಡಿ:

ನಾವು ಪ್ರವಾಹದಿಂದ ಮನೆ ಮುಳುಗಡೆ ಆಗಿದೆ. ಇದು ನದಿಗೆ ನೀರು ಬಂದಾಗೊಮ್ಮೆ ಸಮಸ್ಯೆ ಆಗುತ್ತಿದೆ. ನಮ್ಮ ಮನೆಗಳನ್ನು ಮುಳುಗಡೆ ಎಂದು ಘೋಷಿಸಿ, ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆ ಮನೆಗೆ ನೀಡಿದ ಪರಿಹಾರದ ಮಾದರಿಯಲ್ಲಿ ನಮಗೂ ಪರಿಹಾರ ನೀಡಬೇಕು. ಸರ್ಕಾರದಿಂದ ಸೂಕ್ತ ಪರಿಹಾರ ನೀಡುವ ಜತೆಗೆ ಈಗ ಬೆಳೆ ಹಾನಿಗೂ ಪರಿಹಾರ ಕೊಡಬೇಕು ಎಂದು ನಿರಾಶ್ರಿತರು ಸಿಎಂಗೆ ಮನವಿ ಮಾಡಿದರು. ಯುಕೆಪಿ ಮಾದರಿ ಪರಿಹಾರ ಕೊಡುವ ಕುರಿತು ಸಿಎಂ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಿಡ್ನ್ಯಾಪ್ ಮಾಡಿ ಮುಖಕ್ಕೆ ಸ್ಪ್ರೇ ಹೊಡೆದರು: ಗಂಗಾವತಿ ನಗರಸಭೆ ಸದಸ್ಯನ‌ ಹೇಳಿಕೆ

”ಕಿಡ್ನ್ಯಾಪ್ ಮಾಡಿ ಮುಖಕ್ಕೆ ಸ್ಪ್ರೇ ಹೊಡೆದರು”: ಗಂಗಾವತಿ ನಗರಸಭೆ ಸದಸ್ಯನ‌ ಹೇಳಿಕೆ

surendra

ಸುರೇಂದ್ರ ಬಂಟ್ವಾಳ್ ಹತ್ಯೆ: ಎನ್ ಕೌಂಟರ್ ಆತಂಕದಿಂದ ನ್ಯಾಯಾಧೀಶರಿಗೆ ಪತ್ರ?

ಮಲ್ಪೆ ಕಡಲ ಕಿನಾರೆ ಬಳಿ ಸಿದ್ದವಾಗುತ್ತಿದೆ ಸುಂದರ ಉದ್ಯಾನವನ, ಬಯಲು ರಂಗ ಮಂದಿರ

ಮಲ್ಪೆ ಕಡಲ ಕಿನಾರೆ ಬಳಿ ಸಿದ್ದವಾಗುತ್ತಿದೆ ಸುಂದರ ಉದ್ಯಾನವನ, ಬಯಲು ರಂಗ ಮಂದಿರ

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಭಿವೃದ್ದಿ ಸಮಿತಿ ಆಯ್ಕೆ

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಭಿವೃದ್ದಿ ಸಮಿತಿ ಆಯ್ಕೆ

ಬೆಳಪು: ಬ್ಯಾಟರಿ ಕಳವು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮೀಣ ಕಾರ್ಯಪಡೆ

ಬೆಳಪು: ಬ್ಯಾಟರಿ ಕಳವು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮೀಣ ಕಾರ್ಯಪಡೆ

ಬಾಬು ಜಗಜೀವನ್ ರಾಮ್ ವೃತ್ತದ ಗೇಟ್ ಧ್ವಂಸ: ಆಕ್ರೋಶ

ಬಾಬು ಜಗಜೀವನ್ ರಾಮ್ ವೃತ್ತದ ಗೇಟ್ ಧ್ವಂಸ: ಆಕ್ರೋಶ

ಚುನಾವಣೆ ಹಿನ್ನಲೆಯಲ್ಲಿ ಗಂಗಾವತಿ ಕೈ ಸದಸ್ಯನ ಕಿಡ್ನಾಪ್ ಕೇಸ್: ಕಾರವಾರದಲ್ಲಿ ಆರೋಪಿಗಳ ಬಂಧನ

ಚುನಾವಣೆ ಹಿನ್ನಲೆಯಲ್ಲಿ ಗಂಗಾವತಿ ಕೈ ಸದಸ್ಯನ ಕಿಡ್ನಾಪ್ ಕೇಸ್: ಕಾರವಾರದಲ್ಲಿ ಆರೋಪಿಗಳ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಬ್ಬು ಹೇರಲು ಯಂತ್ರ ತಯಾರಿಸಿದ ರೈತ! ಕೂಲಿಯಾಳು ಸಮಸ್ಯೆಗೆ ಸಿಕ್ಕಿತು ಪರಿಹಾರ

ಕಬ್ಬು ಹೇರಲು ಯಂತ್ರ ತಯಾರಿಸಿದ ರೈತ! ಕೂಲಿಯಾಳು ಸಮಸ್ಯೆಗೆ ಸಿಕ್ಕಿತು ಪರಿಹಾರ

ಶಾಸಕರು-ಮಾಜಿ ಸಚಿವರ ಸ್ಪರ್ಧೆ ತಂದ ಕುತೂಹಲ!

ಶಾಸಕರು-ಮಾಜಿ ಸಚಿವರ ಸ್ಪರ್ಧೆ ತಂದ ಕುತೂಹಲ!

bk-tdy-1

ಸಂಕಷ್ಟದಲ್ಲಿ ರೈತ; ಡಿಸಿ ಕಚೇರಿಗೆ ಮುತ್ತಿಗೆ ಯತ್ನ

bk-tdy-1

ಬೀಳಗಿ ಪಪಂಗೆ ಸಿದ್ಲಿಂಗೇಶ ಅಧ್ಯಕ್ಷ

bk-tdy-1

ವರುಣನ ಆರ್ಭಟಕ್ಕೆ ರೈತ ತತ್ತರ

MUST WATCH

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

ಹೊಸ ಸೇರ್ಪಡೆ

ಗ್ರ್ಯಾಂಡ್‌ ಲಾಂಚ್‌ಗೆ ಧೀರೇನ್‌ ರೆಡಿ : ಡಾ.ರಾಜ್‌ ಮೊಮ್ಮಗ ಹೇಳಿದ ಶಿವ ಕಥೆ

ಗ್ರ್ಯಾಂಡ್‌ ಲಾಂಚ್‌ಗೆ ಧೀರೇನ್‌ ರೆಡಿ : ಡಾ.ರಾಜ್‌ ಮೊಮ್ಮಗ ಹೇಳಿದ ಶಿವ ಕಥೆ

ಕಿಡ್ನ್ಯಾಪ್ ಮಾಡಿ ಮುಖಕ್ಕೆ ಸ್ಪ್ರೇ ಹೊಡೆದರು: ಗಂಗಾವತಿ ನಗರಸಭೆ ಸದಸ್ಯನ‌ ಹೇಳಿಕೆ

”ಕಿಡ್ನ್ಯಾಪ್ ಮಾಡಿ ಮುಖಕ್ಕೆ ಸ್ಪ್ರೇ ಹೊಡೆದರು”: ಗಂಗಾವತಿ ನಗರಸಭೆ ಸದಸ್ಯನ‌ ಹೇಳಿಕೆ

surendra

ಸುರೇಂದ್ರ ಬಂಟ್ವಾಳ್ ಹತ್ಯೆ: ಎನ್ ಕೌಂಟರ್ ಆತಂಕದಿಂದ ನ್ಯಾಯಾಧೀಶರಿಗೆ ಪತ್ರ?

ಕಣ್ಣೀರ ಮೇಲೆ ರಾಜಕಾರಣದ ಅಗತ್ಯವಿಲ್ಲ: ಮುನಿರತ್ನ

ಕಣ್ಣೀರ ಮೇಲೆ ರಾಜಕಾರಣದ ಅಗತ್ಯವಿಲ್ಲ: ಮುನಿರತ್ನ

bng-tdy3

ಅಂಜನಾಪುರ ಮೆಟ್ರೋ ಮಾರ್ಗ ತುಸು ವಿಳಂಬ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.